ಜಿಎಸ್‌ಟಿ ಜಾರಿ ನಂತರ ಇಂಡಿಯನ್ ಮೋಟಾರ್ ಸೈಕಲ್ ಬೆಲೆಗಳಲ್ಲಿ ಭಾರೀ ಇಳಿಕೆ
ಜುಲೈ 1ರಿಂದ ಜಾರಿಯಾದ ಜಿಎಸ್‌ಟಿಯಿಂದಾಗಿ ಇಂಡಿಯನ್ ಮೋಟಾರ್ ಸೈಕಲ್ ಬೆಲೆಗಳಲ್ಲಿ ಭಾರೀ ಇಳಿಕೆಯಾಗಿದ್ದು, ಇಂದಿನಿಂದಲೇ ಹೊಸ ದರಗಳು ಅನ್ವಯ ಹೊಸ ದರ ಪಟ್ಟಿ ಬಿಡುಗಡೆಗೊಳಿಸಲಾಗಿದೆ.
ಜುಲೈ 1ರಿಂದ ಜಾರಿಯಾದ ಜಿಎಸ್‌ಟಿಯಿಂದಾಗಿ ಇಂಡಿಯನ್ ಮೋಟಾರ್ ಸೈಕಲ್ ಬೆಲೆಗಳಲ್ಲಿ ಭಾರೀ ಇಳಿಕೆಯಾಗಿದ್ದು, ಇಂದಿನಿಂದಲೇ ಹೊಸ ದರಗಳು ಅನ್ವಯ ಹೊಸ ದರ ಪಟ್ಟಿ ಬಿಡುಗಡೆಗೊಳಿಸಲಾಗಿದೆ.

ಇಂಡಿಯನ್ ಮೋಟಾರ್ ಸೈಕಲ್ ಪ್ರಮುಖ ಬೈಕ್ ಮಾದರಿಗಳಾದ ಇಂಡಿಯನ್ ಸ್ಕೌಟ್, ಇಂಡಿಯನ್ ಡಾರ್ಕ್ ಹಾರ್ಸ್ ಮತ್ತು ಇಂಡಿಯನ್ ಚೀಫ್ ಕ್ಲಾಸಿಕ್ ಬೆಲೆಗಳಲ್ಲಿ ಭಾರೀ ಇಳಿಕೆಯಾಗಿದ್ದು, ಪ್ರತಿ ಬೈಕ್ ಮೇಲೆ 1.76 ಲಕ್ಷದಿಂದ 2.21 ಲಕ್ಷ ಬೆಲೆ ಇಳಿಕೆಯಾಗಿವೆ.

ಇಂಡಿಯನ್ ಬೈಕ್‌ಗಳ ಹೊಸ ದರ ಪಟ್ಟಿ(ಜಿಎಸ್‌ಟಿ ಜಾರಿ ನಂತರ)
| ಬೈಕ್ ಮಾದರಿ | ಹಳೆಯ ದರಗಳು | ಹೊಸ ದರಗಳು | ರಿಯಾಯ್ತಿ ಮೊತ್ತ |
| ಇಂಡಿಯನ್ ಸ್ಕೌಟ್ | ರೂ.14.75
ಲಕ್ಷ | ರೂ.12.99
ಲಕ್ಷ | ರೂ.1.76
ಲಕ್ಷ |
| ಇಂಡಿಯನ್ ಡಾರ್ಕ್ ಹಾರ್ಸ್ | ರೂ.23.4 ಲಕ್ಷ | ರೂ.21.25
ಲಕ್ಷ | ರೂ.2.15
ಲಕ್ಷ |
| ಇಂಡಿಯನ್ ಚೀಫ್ ಕ್ಲಾಸಿಕ್ | ರೂ.24.2 ಲಕ್ಷ | ರೂ.21.99
ಲಕ್ಷ | ರೂ. 2.21
ಲಕ್ಷ |

ಐಷಾರಾಮಿ ಬೈಕ್ ಮಾದರಿಗಳಲ್ಲೇ ಅತ್ಯಂತ ದುಬಾರಿಯಾಗಿರುವ ಇಂಡಿಯನ್ ಸೈಕಲ್ ಸಂಸ್ಥೆಯು, ಭಾರತೀಯ ಮಾರುಕಟ್ಟೆಯ ಬೇಡಿಕೆಗೆ ಅನುಗಣವಾಗಿ ವಿವಿಧ ಬೈಕ್ ಮಾದರಿಗಳನ್ನು ಪರಿಚಯಿಸುತ್ತಿದ್ದು, ಕೆಲ ದಿನಗಳ ಹಿಂದಷ್ಟೇ ಇಂಡಿಯನ್ ಸ್ಕೌಟ್ 60 ಬಿಡುಗಡೆಗೊಳಿಸಿತ್ತು.

ಇದೀಗ ಜಿಎಸ್‌ಟಿ ಜಾರಿಗೊಂಡ ಹಿನ್ನೆಲೆ ಇಂಡಿಯನ್ ಬೈಕ್‌ಗಳ ಬೆಲೆಗಳು ಇಳಿಕೆಯಾಗಿದ್ದು, ಹೊಸ ನೀತಿಯ ಪ್ರಕಾರ ಐಷಾರಾಮಿ ಬೈಕ್ ಉತ್ಪಾದನೆ ಮತ್ತು ಮಾರಾಟ ಮೇಲಿನ ತೆರಿಗೆಗಳನ್ನು ಇಳಿಕೆ ಮಾಡಿದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.


Click it and Unblock the Notifications








