ಟ್ರಾಫಿಕ್ ಪೊಲೀಸರಿಗೂ ಡೊಂಟ್‌ ಕೇರ್- ಸಂಚಾರಿ ನಿಯಮ ಉಲ್ಲಂಘಿಸಿದ ಶಾಸಕ ಜಮೀರ್ ಅಹ್ಮದ್

ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ವಿರುದ್ಧ ಸಂಚಾರಿ ನಿಯಮ ಉಲ್ಲಂಘಿಸಿದ ಆರೋಪ ಕೇಳಿಬಂದಿದ್ದು, ಹಲ್ಮೆಟ್ ಇಲ್ಲದೆಯೇ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

By Praveen

ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ವಿರುದ್ಧ ಸಂಚಾರಿ ನಿಯಮ ಉಲ್ಲಂಘಿಸಿದ ಆರೋಪ ಕೇಳಿಬಂದಿದ್ದು, ಹಲ್ಮೆಟ್ ಇಲ್ಲದೆಯೇ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಪೊಲೀಸರ ಮುಂದೆಯೇ ಸಂಚಾರಿ ನಿಯಮ ಉಲ್ಲಂಘಿಸಿದ ಶಾಸಕ ಜಮೀರ್ ಅಹ್ಮದ್

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಚುನಾವಣಾ ಪ್ರಚಾರಕ್ಕಾಗಿ ಜಮೀರ್ ಅಹ್ಮದ್ ಓಡಾಡುತ್ತಿದ್ದು, ಬೈಕ್ ನಲ್ಲಿ ಹೆಲ್ಮೆಟ್ ಹಾಕದೇ ಹಿಂಬದಿಯಲ್ಲಿ ಕಾರ್ಯಕರ್ತನನ್ನು ಕೂರಿಸಿ ಸಿಗ್ನಲ್ ಜಂಪ್ ಮಾಡಿ ಮನಸೋ ಇಚ್ಛೆ ಸ್ಕೂಟರ್ ಚಲಾಯಿಸಿದ್ದಾರೆ.

ಪೊಲೀಸರ ಮುಂದೆಯೇ ಸಂಚಾರಿ ನಿಯಮ ಉಲ್ಲಂಘಿಸಿದ ಶಾಸಕ ಜಮೀರ್ ಅಹ್ಮದ್

ಆದ್ರೆ ಶಾಸಕ ಜಮೀರ್ ಅಹಮದ್ ಅವರು ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸಿದರೂ ಮೂಕ ಪ್ರೇಕ್ಷಕ ನಂತೆ ನಿಂತಿದ್ದ ಪೊಲೀಸರು, ಯಾವುದೇ ಕ್ರಮ ಕೈಗೊಳ್ಳದೇ ಸಮ್ಮನೆ ನಿಂತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

Recommended Video

[Kannada] Triumph Street Triple RS Launched In India - DriveSpark
ಪೊಲೀಸರ ಮುಂದೆಯೇ ಸಂಚಾರಿ ನಿಯಮ ಉಲ್ಲಂಘಿಸಿದ ಶಾಸಕ ಜಮೀರ್ ಅಹ್ಮದ್

ಇದಲ್ಲದೇ ಟ್ರಾಫಿಕ್ ಇರುವ ರಸ್ತೆಯಲ್ಲಿ ಹಾಗೂ ಒನ್ ವೇ ರಸ್ತೆಯಲ್ಲೂ ಜಮೀರ್ ಅಹ್ಮದ್ ಅವರು ಬೈಕ್ ಚಾಲನೆ ಮಾಡಿದ್ದು, ಇಷ್ಟೇಲ್ಲಾ ಆದ್ರು ಇದುವರೆಗೂ ಯಾವುದೇ ಕೇಸ್ ದಾಖಲಾಗಿಲ್ಲ ಎನ್ನುವುದು ಗಮನಹರಿಸಬೇಕಾದ ವಿಚಾರ.

ಪೊಲೀಸರ ಮುಂದೆಯೇ ಸಂಚಾರಿ ನಿಯಮ ಉಲ್ಲಂಘಿಸಿದ ಶಾಸಕ ಜಮೀರ್ ಅಹ್ಮದ್

ಅದೇ ಒಬ್ಬ ಸಾಮಾನ್ಯ ವ್ಯಕ್ತಿ ಹೀಗೆ ಮಾಡಿದ್ದರೇ ಇರೋ ಬರೋ ಕೇಸ್‌ಗಳನ್ನು ದಾಖಲು ಮಾಡುತ್ತಿದ್ದ ಟ್ರಾಫಿಕ್ ಪೊಲೀಸರು, ಜನಪ್ರತಿನಿಧಿಗಳ ಕೈಗೊಂಬೆ ಎಂಬುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಓದಿರಿ - ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಶಾಸಕ ಜಮೀರ್ ಅವರು ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದ್ದು, ಜನಪ್ರತಿನಿಧಿಯಾದವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ವಿಡಿಯೋ ಕೃಪೆ- ಪಬ್ಲಿಕ್ ಟಿವಿ

ಪೊಲೀಸರ ಮುಂದೆಯೇ ಸಂಚಾರಿ ನಿಯಮ ಉಲ್ಲಂಘಿಸಿದ ಶಾಸಕ ಜಮೀರ್ ಅಹ್ಮದ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಾನೂನಿನ ಮುಂದೆ ಎಲ್ಲರೂ ಒಂದೇ ಎನ್ನುವಾಗ ಟ್ರಾಫಿಕ್ ಪೊಲೀಸರು ಜನಪ್ರತಿನಿಧಿಗಳು ಮಾಡುವ ಸಂಚಾರಿ ನಿಯಮ ಉಲ್ಲಂಘನೆಗಳನ್ನು ಕಂಡು ಕಾಣದಂತೆ ಸುಮ್ಮನಿರುವುದು ಸರಿಯಲ್ಲ. ಯಾರೇ ಆಗಲಿ ತಪ್ಪು ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಒಳಿತು.

Trending On DriveSpark Kannada:

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

660 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಆಲ್ಟೋ

More from DriveSpark

Article Published On: Saturday, October 28, 2017, 11:56 [IST]
English summary
Read in Kannada about Chamrajpet JDS Rebel MLA Zameer Ahmed Bike Ride Without Helmet in Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+