ರೆಟ್ರೊ ಶೈಲಿಯ ಎಸ್ಟ್ರೆಲಾ 175 ಬೈಕ್ ಬಿಡುಗಡೆ ಮಾಡಲಿದೆ ಕವಾಸಕಿ

Written By:

ಸದ್ಯ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳುತ್ತಿರುವ ಕವಾಸಕಿ ಹೊಸ ಬೈಕ್ ಮಾದರಿಯಾದ ಎಸ್ಟ್ರೆಲಾ 175 ಆವೃತ್ತಿಯು ಅಕ್ಟೋಬರ್ ಅಂತ್ಯಕ್ಕೆ ಭಾರತದಲ್ಲೂ ಬಿಡುಗಡೆಯಾಗಲಿದ್ದು, ಈ ಹಿನ್ನೆಲೆ ತಾಂತ್ರಿಕ ಅಂಶಗಳು ಮತ್ತು ಬೆಲೆ ಕುರಿತಾದ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ರೆಟ್ರೊ ಶೈಲಿಯ ಎಸ್ಟ್ರೆಲಾ 175 ಬೈಕ್ ಬಿಡುಗಡೆ ಮಾಡಲಿದೆ ಕವಾಸಕಿ

ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಹೊಂದಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮಾದರಿಗೆ ತೀವ್ರ ಸ್ಪರ್ಧೆ ನೀಡುವ ಉದ್ದೇಶದೊಂದಿಗೆ ಭಾರತದಲ್ಲಿ ಎಸ್ಟ್ರೆಲಾ 175 ಬೈಕ್ ಬಿಡುಗಡೆ ಮಾಡುತ್ತಿರುವ ಕವಾಸಕಿಯು ಕ್ಲಾಸಿಕ್ ಬೈಕ್ ವಿಭಾಗದಲ್ಲಿ ಹೊಸ ಅಧ್ಯಾಯ ಶುರುಮಾಡುತ್ತಿದೆ.

ರೆಟ್ರೊ ಶೈಲಿಯ ಎಸ್ಟ್ರೆಲಾ 175 ಬೈಕ್ ಬಿಡುಗಡೆ ಮಾಡಲಿದೆ ಕವಾಸಕಿ

ಈಗಾಗಲೇ ಹೊಸ ಬೈಕ್ ಮಾದರಿಗಳನ್ನು ಇಂಡೋನೇಷ್ಯಾ ರಸ್ತೆಗಳಲ್ಲಿ ಸ್ಟಾಟ್ ಟೆಸ್ಟಿಂಗ್ ನಡೆಸಿರುವ ಕವಾಸಕಿ, ಕ್ಲಾಸಿಕ್ ಬೈಕ್ ಪ್ರಿಯರು ಅರಾಮದಾಯಕವಾಗಿ ಪ್ರಯಾಣ ಮಾಡಬಹುದಾದ ಸವಲತ್ತುಗಳನ್ನು ಒದಗಿಸುತ್ತಿದೆ.

Recommended Video
TVS Jupiter Classic Launched In India | In Kannada - DriveSpark ಕನ್ನಡ
ರೆಟ್ರೊ ಶೈಲಿಯ ಎಸ್ಟ್ರೆಲಾ 175 ಬೈಕ್ ಬಿಡುಗಡೆ ಮಾಡಲಿದೆ ಕವಾಸಕಿ

ಮೆಲ್ನೋಟಕ್ಕೆ ಟ್ರಯಂಫ್ ಬೊನೆವಿಲ್ಲೆ ಆಕಾರವನ್ನೇ ಹೊಂದಿರುವ ಎಸ್ಟ್ರೆಲಾ ಮಾದರಿಯು ರೆಟ್ರೊ ಲುಕ್‌ನಿಂದಾಗಿ ಗಮನಸೆಳೆಯುತ್ತಿದ್ದು, ಕ್ಲಾಸಿಕ್ ಎಕ್ಸಾಸ್ಟ್ ಪೈಪ್, ರೌಂಡ್ ಹೆಡ್‌ಲ್ಯಾಂಪ್, ಸ್ಪೋಕ್ ವೀಲ್ಹ್ಸ್, ಸಿಂಗಲ್ ಪೀಸ್ ಬೆಂಚ್ ಸೀಟುಗಳು ಮತ್ತು ವ್ಯೂವ್ ಮಿರರ್‌ಗಳನ್ನು ಹೊಂದಿರಲಿದೆ.

ರೆಟ್ರೊ ಶೈಲಿಯ ಎಸ್ಟ್ರೆಲಾ 175 ಬೈಕ್ ಬಿಡುಗಡೆ ಮಾಡಲಿದೆ ಕವಾಸಕಿ

ಎಂಜಿನ್

ಎಸ್ಟ್ರೆಲಾ 175 ಬೈಕ್ ಮಾದರಿಯೂ 175 ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಲ್ ಇನ್ಜೆಕ್ಡ್ ಎಂಜಿನ್ ಹೊಂದಿದ್ದು, ಕೆಲವು ಮೂಲಗಳ ಪ್ರಕಾರ ಭಾರತೀಯ ಮಾರುಕಟ್ಟೆಗಾಗಿ 250 ಸಿಸಿ ಎಂಜಿನ್ ಪರಿಚಯಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ರೆಟ್ರೊ ಶೈಲಿಯ ಎಸ್ಟ್ರೆಲಾ 175 ಬೈಕ್ ಬಿಡುಗಡೆ ಮಾಡಲಿದೆ ಕವಾಸಕಿ

ಸದ್ಯದ ಎಂಜಿನ್ ಮಾದರಿಯಲ್ಲಿ 17-ಬಿಎಚ್‌ಪಿ ಮತ್ತು 18-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿರುವ ಎಸ್ಟ್ರೆಲಾ 175 ಮಾದರಿಯೂ ಸುರಕ್ಷತೆಯಲ್ಲೂ ಉತ್ತಮ ಎನಿಸಲಿದೆ. ಇದಕ್ಕೆ ಕಾರಣ ಹೊಸ ಬೈಕಿನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದ ಚಕ್ರಗಳಲ್ಲಿ ಡ್ರಮ್ ಬ್ರೇಕ್ ವ್ಯವಸ್ಥೆಯಿದ್ದು, ಎಬಿಎಸ್ ತಂತ್ರಜ್ಞಾನವನ್ನು ಕೂಡಾ ಪರಿಚಯಿಸುವ ಸಾಧ್ಯತೆಗಳಿವೆ.

ರೆಟ್ರೊ ಶೈಲಿಯ ಎಸ್ಟ್ರೆಲಾ 175 ಬೈಕ್ ಬಿಡುಗಡೆ ಮಾಡಲಿದೆ ಕವಾಸಕಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಇದೇ ತಿಂಗಳು ಕೊನೆಯಲ್ಲಿ ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗುತ್ತಿರುವ ಕವಾಸಕಿ ಎಸ್ಟ್ರೆಲಾ 175 ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಭಾರತದಲ್ಲಿ ಬಿಡುಗಡೆಯಾಗಿರುವ ಎಸ್ಟ್ರೆಲಾ ಮಾದರಿಯ ಬೆಲೆಯೂ 1.20 ಲಕ್ಷದಿಂದ 1.50 ಲಕ್ಷ ಇರಬಹುದೆಂದು ನೀರಿಕ್ಷೆಸಲಾಗಿದೆ.

English summary
Read in Kannada about Kawasaki To Launch Retro Style Estrella 175.
Story first published: Wednesday, September 20, 2017, 14:33 [IST]
Please Wait while comments are loading...

Latest Photos