ಮುಂದಿನ ವರ್ಷ ಹೊಸ ಬಣ್ಣಗಳಲ್ಲಿ ಕವಾಸಕಿ ಮೋಟಾರ್‌ಸೈಕಲ್‌ಗಳು ಬಿಡುಗಡೆಯಾಗಲಿವೆ

Written By:

ಕವಾಸಕಿ ಸಂಸ್ಥೆಯು ತನ್ನ ಮೋಟಾರ್‌ಸೈಕಲ್ ಸರಣಿಯಲ್ಲಿ ಹೊಸ ಬಣ್ಣದ ಆಯ್ಕೆಯನ್ನು ಹೊರ ತಂದಿದ್ದು, ಈ ಮೂಲಕ ಮತ್ತಷ್ಟು ಯುವ ಮನಸ್ಸುಗಳನ್ನು ತನ್ನತ್ತ ಸೆಳೆಯುವಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದೆ.

ಮುಂದಿನ ವರ್ಷ ಹೊಸ ಬಣ್ಣಗಳಲ್ಲಿ ಕವಾಸಕಿ ಮೋಟಾರ್‌ಸೈಕಲ್‌ಗಳು ಬಿಡುಗಡೆಯಾಗಲಿವೆ

ಹೊಸ ಬಣ್ಣ ಆಯ್ಕೆಯಲ್ಲಿ ಹಸಿರು, ಕಪ್ಪು ಮತ್ತು ಬೂದು ಬಣ್ಣ ಒಳಗೊಂಡಿರಲಿದ್ದು, ಕವಾಸಾಕಿ ರೇಸಿಂಗ್ ತಂಡದ(KRT) ಪ್ರತಿಕೃತಿ ಝೆಡ್‌ಎಕ್ಸ್- 10ಆರ್ ಮತ್ತು ನಿಂಜಾ 650 ಕೆಆರ್‌ಟಿ ಆವೃತ್ತಿಗಳಲ್ಲಿ ಹೊಸ ಗ್ರಾಫಿಕ್ಸ್ ಮತ್ತು ಹಸಿರು ಮತ್ತು ಕಪ್ಪು ರೂಪಾಂತರ ಹೊಂದಾಣಿಕೆಯೊಂದಿಗೆ ಬಿಡುಗಡೆಯಾಗಲಿವೆ.

ಮುಂದಿನ ವರ್ಷ ಹೊಸ ಬಣ್ಣಗಳಲ್ಲಿ ಕವಾಸಕಿ ಮೋಟಾರ್‌ಸೈಕಲ್‌ಗಳು ಬಿಡುಗಡೆಯಾಗಲಿವೆ

ಹೊಸ ಗ್ಲಾಸ್-ಲೇಪಿತ ಸ್ಪಾರ್ಕ್ ಕಪ್ಪು ಮತ್ತು ಮ್ಯಾಟ್ ಸ್ಪಾರ್ಕ್ ಕಪ್ಪು ಬಣ್ಣದ ಯೋಜನೆಗಳಲ್ಲಿ 2018ರ ಕವಾಸಾಕಿ ನಿಂಜಾ ಎಚ್2 ಕಾರ್ಬನ್ ಮೋಟಾರ್ ವಾಹನ ಅನಾವರಣಗೊಳ್ಳಲಿದೆ.

ಮುಂದಿನ ವರ್ಷ ಹೊಸ ಬಣ್ಣಗಳಲ್ಲಿ ಕವಾಸಕಿ ಮೋಟಾರ್‌ಸೈಕಲ್‌ಗಳು ಬಿಡುಗಡೆಯಾಗಲಿವೆ

ಝೆಡ್‌ಝೆಡ್‌ಆರ್ 1400 ಮತ್ತು ಝೆಡ್‌ಝೆಡ್‌ಆರ್ 1400 ಪರ್ಫಾರ್ಮೆನ್ಸ್ ಸ್ಪೋರ್ಟ್ ಮೋಟಾರ್‌ಸೈಕಲ್‌ಗಳು ಮೆಟಾಲಿಕ್ ಕಾರ್ಬನ್ ಗ್ರೇ ಮತ್ತು ಎಮರಾಲ್ಡ್ ಬ್ಲಾಝೆಡ್ ಬಣ್ಣದ ಆಯ್ಕೆಗಳನ್ನು ಪಡೆಯುತ್ತದೆ.

ಮುಂದಿನ ವರ್ಷ ಹೊಸ ಬಣ್ಣಗಳಲ್ಲಿ ಕವಾಸಕಿ ಮೋಟಾರ್‌ಸೈಕಲ್‌ಗಳು ಬಿಡುಗಡೆಯಾಗಲಿವೆ

ನೇಕೆಡ್ ಮೋಟಾರು ಸೈಕಲ್ ಗಳ ಬಗ್ಗೆ ಹೇಳುವುದಾದರೆ, ಝೆಡ್1000 ಆರ್ ಆವೃತ್ತಿಯು ಹೊಸ ಇಂಡಿಕೇಟರ್ ಮತ್ತು ಮೆಟಾಲಿಕ್ ಮ್ಯಾಟ್ ಬೂದು ಮತ್ತು ಸ್ಪಾರ್ಕ್ ಕಪ್ಪು ಬಣ್ಣವನ್ನು ಹೊಂದಲಿದೆ. ಮೂರು ರೂಪಾಂತರಗಳೂ ಸಹ ನವೀಕರಿಸಿದ ಬಣ್ಣ ಆಯ್ಕೆಗಳನ್ನು ಒಳಗೊಂಡಿರಲಿವೆ.

ಮುಂದಿನ ವರ್ಷ ಹೊಸ ಬಣ್ಣಗಳಲ್ಲಿ ಕವಾಸಕಿ ಮೋಟಾರ್‌ಸೈಕಲ್‌ಗಳು ಬಿಡುಗಡೆಯಾಗಲಿವೆ

ಈ ಹಿಂದೆ, ಕವಾಸಾಕಿ ಸಂಸ್ಥೆಯು, ಲೋಹೀಯ ಸ್ಪಾರ್ಕ್ ಕಪ್ಪು ಬಣ್ಣದೊಂದಿಗೆ ಹೊಸ ಕ್ಯಾಂಡಿ ಪರ್ಸಿಮನ್ ಕೆಂಪು ಬಣ್ಣದ ಆಯ್ಕೆಯಲ್ಲಿ ತನ್ನ ಝೆಡ್900 ಮೋಟಾರ್ ಸೈಕಲ್ ಪರಿಚಯಿಸಿತ್ತು. ಆದರೆ ಈ ನವೀಕರಿಸಿದ ಬಣ್ಣ ಪಡೆದ ಮೋಟಾರ್ ಸೈಕಲ್ ಕೇವಲ ಯುರೋಪಿಯನ್ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿದೆ ಎನ್ನುವುದು ದುಃಖದ ವಿಚಾರ.

ಮುಂದಿನ ವರ್ಷ ಹೊಸ ಬಣ್ಣಗಳಲ್ಲಿ ಕವಾಸಕಿ ಮೋಟಾರ್‌ಸೈಕಲ್‌ಗಳು ಬಿಡುಗಡೆಯಾಗಲಿವೆ

ಹೊಸ ಬಣ್ಣ ಆಯ್ಕೆಗಳನ್ನು ಹೊರತುಪಡಿಸಿ, 2018ರ ಶ್ರೇಣಿಯ ಮೋಟಾರ್‌ಸೈಕಲ್‌ಗಳು ನವೀಕರಿಸಿದ ಗ್ರಾಫಿಕ್ಸ್ ಸಹ ಪಡೆಯಲಿದ್ದು, ನವೀಕರಿಸಿದ ಮಾದರಿಗಳು 2017ರ ಅಂತ್ಯದ ವೇಳೆಗೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಮಾರಾಟವಾಗಲಿವೆ.

English summary
Kawasaki has introduced an update for the 2018 motorcycle range in the form of new colour options.
Story first published: Saturday, September 2, 2017, 14:55 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark