ಜಿಎಸ್‌ಟಿಗೆ ವಿರುದ್ಧವಾಗಿ ಬೈಕ್ ಬೆಲೆ ಹೆಚ್ಚಳ ಮಾಡಿದ ಕೆಟಿಎಂ

ಜುಲೈ 1 ರಿಂದ ದೇಶಾದ್ಯಂತ ಜಿಎಸ್‌ಟಿ ಜಾರಿಗೊಂಡಿದ್ದು, ಹೊಸ ತೆರಿಗೆ ನೀತಿಗೆ ವಿರುದ್ಧವಾಗಿ ಕೆಟಿಎಂ ತನ್ನ ಬೈಕ್ ಬೆಲೆಗಳನ್ನು ಹೆಚ್ಚಳಮಾಡಿ ಗ್ರಾಹಕರಿಗೆ ಶಾಕ್ ನೀಡಿದೆ.

By Praveen

ಜುಲೈ 1 ರಿಂದ ದೇಶಾದ್ಯಂತ ಜಿಎಸ್‌ಟಿ ಜಾರಿಗೊಂಡಿದ್ದು, ಹೊಸ ತೆರಿಗೆ ನೀತಿಗೆ ವಿರುದ್ಧವಾಗಿ ಕೆಟಿಎಂ ತನ್ನ ಬೈಕ್ ಬೆಲೆಗಳನ್ನು ಹೆಚ್ಚಳಮಾಡಿ ಗ್ರಾಹಕರಿಗೆ ಶಾಕ್ ನೀಡಿದೆ.

 ಜಿಎಸ್‌ಟಿಗೆ ವಿರುದ್ಧವಾಗಿ ಬೈಕ್ ಬೆಲೆ ಹೆಚ್ಚಳ ಮಾಡಿದ ಕೆಟಿಎಂ

ತೆರಿಗೆ ಮತ್ತು ಸರಕು ಸೇವಾ ನೀತಿ ಅಡಿಯಲ್ಲಿ 350 ಸಿಸಿ ಗಿಂತ ಮೇಲ್ಪಟ್ಟ ಬೈಕ್‌ಗಳ ಬೆಲೆ ಹೆಚ್ಚಿಸಲಾಗಿದ್ದು, ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಯಾದ ಕೆಟಿಎಂ ಕೂಡಾ ತನ್ನ ಪ್ರಮುಖ ಬೈಕ್ ಮಾದರಿಗಳ ಮೇಲಿನ ದರಗಳನ್ನ ಹೆಚ್ಚಿಸಿದೆ.

 ಜಿಎಸ್‌ಟಿಗೆ ವಿರುದ್ಧವಾಗಿ ಬೈಕ್ ಬೆಲೆ ಹೆಚ್ಚಳ ಮಾಡಿದ ಕೆಟಿಎಂ

ಆದ್ರೆ ಪ್ರಮುಖ ವಿಚಾರವಾಗಿ ಮಾತನಾಡುವುದಾದರೇ ಕೆಟಿಎಂ 350 ಸಿಸಿಗಿಂತ ಕಡಿಮೆ ಎಂಜಿನ್ ಬೈಕ್‌ಗಳ ಬೆಲೆ ಇಳಿಕೆಯಾಗಬೇಕಿತ್ತು. ಆದ್ರೆ ಜಿಎಸ್‌ಟಿ ಹೊಸ ನೀತಿಗೆ ವಿರುದ್ಧವಾಗಿ ಆರ್‌ಸಿ 200, ಡ್ಯೂಕ್ 200, ಡ್ಯೂಕ್ 250 ಬೈಕ್‌ಗಳ ಬೆಲೆ ಕೂಡಾ ಹೆಚ್ಚಳಗೊಂಡಿವೆ.

 ಜಿಎಸ್‌ಟಿಗೆ ವಿರುದ್ಧವಾಗಿ ಬೈಕ್ ಬೆಲೆ ಹೆಚ್ಚಳ ಮಾಡಿದ ಕೆಟಿಎಂ

ಎಲ್ಲಾ ಬೈಕ್ ಮಾದರಿಗಳ ಮೇಲಿನ ಬೆಲೆಯನ್ನು ಶೇ.2ಕ್ಕೆ ಹೆಚ್ಚಳ ಮಾಡಿರುವ ಕೆಟಿಎಂ, ಕನಿಷ್ಠ ರೂ. 628 ರಿಂದ ರೂ.5,797 ರವರೆಗೆ ಬೆಲೆ ಹೆಚ್ಚಳ ಮಾಡಿದೆ.

 ಜಿಎಸ್‌ಟಿಗೆ ವಿರುದ್ಧವಾಗಿ ಬೈಕ್ ಬೆಲೆ ಹೆಚ್ಚಳ ಮಾಡಿದ ಕೆಟಿಎಂ

ಕೆಟಿಎಂ 200 ಡ್ಯೂಕ್ ಮೇಲೆ ರೂ.4,063 ಹೆಚ್ಚಳ ಮಾಡಲಾಗಿದ್ದು, ಅದೇ ರೀತಿಯಾಗಿ 250 ಡ್ಯೂಕ್ ಮೇಲೆ ರೂ.3,924, 390 ಡ್ಯೂಕ್ ಮೇಲೆ ರೂ.628, ಆರ್‌ಸಿ 200 ಮೇಲೆ ರೂ.4,787 ಮತ್ತು ಆರ್‌ಸಿ 390 ಮೇಲೆ ರೂ.5797 ಹೆಚ್ಚಳ ಮಾಡಲಾಗಿದೆ.

ಜಿಎಸ್‌ಟಿ ಜಾರಿ ಹಿನ್ನೆಲೆ ಬೈಕ್‌ಗಳ ಬೆಲೆಗಳಲ್ಲಿ ಭಾರೀ ಏರಿಳಿತ

Ex-Showroom Price (Delhi)

ಬೈಕ್ ಮಾದರಿಗಳು ಜಿಎಸ್‌ಟಿ ಪೂರ್ವ ದರಗಳು ಜಿಎಸ್‌ಟಿ ಜಾರಿ ನಂತರದ ದರಗಳು ಹೆಚ್ಚಳಗೊಂಡ ದರಗಳು
ಕೆಟಿಎಂ 200 ಡ್ಯೂಕ್ ರೂ.1,43,500 ರೂ.1,47,563 ರೂ.4,063
ಕೆಟಿಎಂ 250 ಡ್ಯೂಕ್ ರೂ.1,73,500 ರೂ. 1,77,424 ರೂ.3,924
ಕೆಟಿಎಂ 390 ಡ್ಯೂಕ್ ರೂ.2,25,730 ರೂ.2,26,358 ರೂ.628
ಕೆಟಿಎಂ ಆರ್‌ಸಿ 200 ರೂ.1,71,740 ರೂ.1,76,527 ರೂ.4,787
ಕೆಟಿಎಂ ಆರ್‌ಸಿ 390 ರೂ.2,25,300 ರೂ.2,31,097 ರೂ.5,797
 ಜಿಎಸ್‌ಟಿಗೆ ವಿರುದ್ಧವಾಗಿ ಬೈಕ್ ಬೆಲೆ ಹೆಚ್ಚಳ ಮಾಡಿದ ಕೆಟಿಎಂ

ಈ ಹಿನ್ನೆಲೆ ಕೆಟಿಎಂ ನಡೆ ಬಗ್ಗೆ ಆಟೋ ಉದ್ಯಮ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, 350 ಸಿಸಿಗಿಂತ ಕಡಿಮೆ ಬೈಕ್‌ಗಳ ಬೆಲೆಗಳನ್ನು ಹೆಚ್ಚಳ ಮಾಡಿರುವ ಬಗ್ಗೆ ಕೆಟಿಎಂ ಯಾವುದೇ ಸ್ಪಷ್ಟನೆ ಕೂಡಾ ನೀಡಿಲ್ಲ.

 ಜಿಎಸ್‌ಟಿಗೆ ವಿರುದ್ಧವಾಗಿ ಬೈಕ್ ಬೆಲೆ ಹೆಚ್ಚಳ ಮಾಡಿದ ಕೆಟಿಎಂ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಜುಲೈ 1ರಿಂದಲೇ ಜಾರಿಗೆ ಬರುವಂತೆ ಎಲ್ಲ ಆಟೋ ಉತ್ಪಾದಕರು 350 ಸಿಸಿ ಕೆಳ ಮಟ್ಟದ ಬೈಕ್ ಬೆಲೆಗಳನ್ನು ಕಡಿಮೆ ಮಾಡಿದ್ದರು ಕೆಟಿಎಂ ಮಾತ್ರ ಬೆಲೆ ಹೆಚ್ಚಳ ಮಾಡಿದೆ. ಆದ್ರೆ ಈ ಬಗ್ಗೆ ಸ್ಪಷ್ಟನೆ ನೀಡದ ಕೆಟಿಎಂ ಮಾತ್ರ ಗ್ರಾಹಕರಿಗೆ ಬೆಲೆ ಬರೆ ನೀಡುತ್ತಿರುವುದು ಅನುಮಾನಕ್ಕೆ ಎಡೆಮಾಡಿದೆ.

More from DriveSpark

Article Published On: Monday, July 3, 2017, 16:51 [IST]
English summary
Read in Kannada about KTM Motorcycles Prices Increase After GST.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+