ಅಗುಸ್ಟಾ ಸಂಸ್ಥೆಯ ಷೇರುಗಳನ್ನು ಮಾರಾಟ ಮಾಡಿದ ಮರ್ಸಿಡಿಸ್

Written By:

MV ಅಗುಸ್ಟಾ ಸಂಸ್ಥೆಯ ಶೇಕಡಾ 25 % ರಷ್ಟು ಷೇರುಗಳನ್ನು ಜರ್ಮನ್ ವಾಹನ ತಯಾರಕ ಸಂಸ್ಥೆ ಮರ್ಸಿಡಿಸ್ ಮಾರಾಟ ಮಾಡಿದೆ.

ಅಗುಸ್ಟಾ ಸಂಸ್ಥೆಯ ಷೇರುಗಳನ್ನು ಮಾರಾಟ ಮಾಡಿದ ಮರ್ಸಿಡಿಸ್

ಇಟಾಲಿಯನ್ ಸೈಕಲ್ ತಯಾರಕ MV ಅಗುಸ್ಟಾ ಸಂಸ್ಥೆಯ ಶೇಕಡಾ 25 % ರಷ್ಟು ಪಾಲನ್ನು ಬ್ಲಾಕ್ ಓಷನ್ ಗ್ರೂಪ್ ಕಂಪೆನಿಯ ಭಾಗವಾದ ಕಂಸಾರ್ ಇನ್ವೆಸ್ಟ್‌ಗೆ ಮರ್ಸಿಡಿಸ್ ಬೆಂಝ್ ಬಿಕರಿ ಮಾಡಿದ್ದು, ಇತ್ತೀಚಿಗೆ ಈ ಮಾಹಿತಿ ಹೊರಬಿದ್ದಿದ್ದು, ಎಲ್ಲೆಡೆ ಹೆಚ್ಚು ಸುದ್ದಿ ಮಾಡಿದೆ.

ಅಗುಸ್ಟಾ ಸಂಸ್ಥೆಯ ಷೇರುಗಳನ್ನು ಮಾರಾಟ ಮಾಡಿದ ಮರ್ಸಿಡಿಸ್

ಈ ನಡೆಯಿಂದ 2014ರ ಒಪ್ಪಂದದಂತೆ, ಎರಡು ಕಂಪನಿಗಳ ನಡುವೆ ಇದ್ದ ಮಾರಾಟ ಮತ್ತು ಮಾರುಕಟ್ಟೆ ಪಾಲುದಾರಿಕೆ ಕೊನೆಗೊಂಡಿದ್ದು, ಮಾರಾಟ ಮೌಲ್ಯವನ್ನು ಎರಡು ಕಂಪನಿಗಳೂ ಬಹಿರಂಗಪಡಿಸಿಲ್ಲ.

ಅಗುಸ್ಟಾ ಸಂಸ್ಥೆಯ ಷೇರುಗಳನ್ನು ಮಾರಾಟ ಮಾಡಿದ ಮರ್ಸಿಡಿಸ್

ಮರುರಚನೆಯಿಂದಾಗಿ ಇತ್ತೀಚಿನ ಕಂಪೆನಿಯ ಆರ್ಥಿಕ ಪರಿಸ್ಥಿತಿ ಸುಧಾರಣೆಗೊಂಡಿದೆ ಎಂದು MV ಅಗುಸ್ಟಾ ಕಂಪೆನಿಯ ಅಧ್ಯಕ್ಷ ಮತ್ತು ಮಾಲೀಕರಾದ ಜಿಯೊವನೀ ಕ್ಯಾಸ್ಟಿಗ್ಲಿಯಾನಿ ತಿಳಿಸಿದ್ದಾರೆ.

ಅಗುಸ್ಟಾ ಸಂಸ್ಥೆಯ ಷೇರುಗಳನ್ನು ಮಾರಾಟ ಮಾಡಿದ ಮರ್ಸಿಡಿಸ್

ವರದಿಗಳ ಪ್ರಕಾರ, MV ಅಗುಸ್ಟಾ ಬಂಡವಾಳ ಈ ಒಪ್ಪಂದದಿಂದಾಗಿ ಏರಿಕೆಯಾಗಿದ್ದು, ಅತ್ಯಾಧುನಿಕ ಮೋಟಾರ್ ಸೈಕಲ್ ತಯಾರಿಕೆ ಮಾಡಲು ಹೆಚ್ಚು ಉಪಯೋಗವಾಗಲಿದೆ. ಮರ್ಸಿಡಿಸ್ ಸಂಸ್ಥೆ 30 ಮಿಲಿಯನ್ ಯುರೊ ನೀಡಿ 2014ರಲ್ಲಿ MV ಅಗುಸ್ಟಾ ಕಂಪೆನಿಯ ಷೇರುಗಳನ್ನು ಖರೀದಿಸಿತ್ತು.

ಅಗುಸ್ಟಾ ಸಂಸ್ಥೆಯ ಷೇರುಗಳನ್ನು ಮಾರಾಟ ಮಾಡಿದ ಮರ್ಸಿಡಿಸ್

ಆದರೆ ಇತ್ತೀಚೆಗೆ ನೆಡೆದಿರುವ ಈ ಮಾರಾಟ ಪ್ರಕ್ರಿಯೆ ದೊಡ್ಡ ಮೌಲ್ಯ ಹೊಂದಿದೆ ಎಂಬ ಮಾತುಗಳು ಕೇಳಿ ಬಂದಿವೆ. ಇನ್ನಷ್ಟು ಬಂಡವಾಳ ಹೂಡಿಕೆಯಿಂದಾಗಿ ಮೋಟಾರ್‌ಸೈಕಲ್ ತಯಾರಕರು ಹೆಚ್ಚು ಅಭಿವೃದ್ಧಿ ಹೊಂದಿದ ತಂತ್ರಜ್ಞಾನದ ಬೈಕುಗಳನ್ನು ಗ್ರಾಹಕರಿಗೆ ಪೂರೈಕೆ ಮಾಡಬಹುದಾಗಿದೆ.

English summary
German carmaker Mercedes AMG owned 25 percent stake in MV Agusta, the Italian motorcycle manufacturer.
Story first published: Wednesday, July 26, 2017, 14:33 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark