ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಎಂವಿ ಅಗಸ್ಟಾ ಎಫ್3 800 ಬೈಕ್

ಎಂವಿ ಅಗಸ್ಟಾ ತನ್ನ ಹೊಸ ಎಫ್3 800 ಬೈಕನ್ನು ಹಲವು ನವೀಕರಣಗಳನ್ನು ನಡೆಸಿ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಎಂವಿ ಅಗಸ್ಟಾ ಎಫ್3 800 ಬೈಕನ್ನು ಮುಂದಿನ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಎಂವಿ ಅಗಸ್ಟಾ ಎಫ್3 800 ಬೈಕ್

ಎಂವಿ ಅಗಸ್ಟಾ ಕಂಪನಿಯ ಸಿಇಒ ತೈಮೂರ್ ಸರ್ದರೋವ್ ಅವರು ಬ್ರ್ಯಾಂಡ್‌ನ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಎಫ್3 800 ಬೈಕಿನ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಹೊಸ ಎಂವಿ ಅಗಸ್ಟಾ ಎಫ್3 800 ಬೈಕ್ ಭಾರತದಲ್ಲಿ ಬಿಡುಗಡೆಗೊಳಿಸುವುದನ್ನು ಖಚಿತಪಡಿಸಿದೆ. ಈ ಹೊಸ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲ. ಹೊಸ ಎಂವಿ ಅಗಸ್ಟಾ ಎಫ್3 800 ಬೈಕ್ ಭಾರತದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಎಂವಿ ಅಗಸ್ಟಾ ಎಫ್3 800 ಬೈಕ್

ಎಂವಿ ಅಗಸ್ಟಾ ಎಫ್3 800 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಕಳೆದ ವರ್ಷದ ಜೂನ್ ತಿಂಗಳಲ್ಲಿ ಬಿಡುಗಡೆಗೊಳಿಸಿದ್ದರು. ಈ ಸೂಪರ್‌ಸ್ಪೋರ್ಟ್ ಬೈಕ್ ದೇಶದ ಅತ್ಯುತ್ತಮ ಮಾದರಿಗಳಲ್ಲಿ ಒಂದಾಗಿದೆ. ಎಂವಿ ಅಗಸ್ಟಾ ಎಫ್3 800 ಬೈಕಿಗೆ ನೇರ ಪ್ರತಿಸ್ಪರ್ಥಿಯಾಗಿ ಸಧ್ಯಕ್ಕೆ ಯಾವುದೇ ಮಾದರಿಗಳಿಲ್ಲ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಎಂವಿ ಅಗಸ್ಟಾ ಎಫ್3 800 ಬೈಕ್

ಎಂವಿ ಅಗಸ್ಟಾ ಎಫ್3 800 ಬೈಕಿನಲ್ಲಿ ಹಲವು ನವೀಕರಣಗಳನ್ನು ಮಾಡಲಾಗುತ್ತದೆ. ಆದರೆ ಬೈಕಿನ ಸಿಲೂಯೆಟ್ ಹೆಚ್ಚಾಗಿ ಬದಲಾಗದೆ ಉಳಿಯುತ್ತದೆ ಎಂದು ನಿರೀಕ್ಷಿಸುತ್ತೇವೆ. ಎಂವಿ ಅಗಸ್ಟಾ ಎಫ್3 800 ಬೈಕ್ ಹಲವಾರು ಆಧುನಿಕ ಎಲೆಕ್ಟ್ರಾನಿಕ್ಸ್ ಜೊತೆಗೆ ಹಲವಾರು ಫೀಚರುಗಳನ್ನು ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಎಂವಿ ಅಗಸ್ಟಾ ಎಫ್3 800 ಬೈಕ್

ಈ ಹೊಸ ಎಂವಿ ಅಗಸ್ಟಾ ಎಫ್3 800 ಬೈಕಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್‌ಲೈಟ್, ಎಲ್‌ಇಡಿ ಟರ್ನ್ ಇಂಡಿಕೇಟರ್ಸ್, ಫುಲ್-ಕಲರ್ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್ ಕನೆಕ್ಟ್ ಮಾಡುವ ಫೀಚರ್ ಗಳನ್ನು ಅಳವಡಿಸಬಹುದು.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಎಂವಿ ಅಗಸ್ಟಾ ಎಫ್3 800 ಬೈಕ್

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಂವಿ ಅಗಸ್ಟಾ ಎಫ್3 800 ಮಾದರಿಯಲ್ಲಿ 798ಸಿಸಿಯ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 145 ಬಿಹೆಚ್‍ಪಿ ಪವರ್ ಮತ್ತು 88 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕಿನಲ್ಲಿ ಹಲವಾರು ಬಗೆಯ ಎಲೆಕ್ಟ್ರಾನಿಕ್ ಅಂಶಗಳನ್ನು ಅಳವಡಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಎಂವಿ ಅಗಸ್ಟಾ ಎಫ್3 800 ಬೈಕ್

ಈ ಬೈಕಿನಲ್ಲಿ ರೈಡ್ ಬೈ ವೈರ್, ಫೋರ್ ರೈಡರ್ ಮೋಡ್, 8 ಲೆವೆಲ್‍‍ನ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ರೇಸ್ ಮೋಡ್ ಸೆಟ್ಟಿಂಗ್ ಹೊಂದಿರುವ ಬಾಷ್ ಎ‍‍ಬಿ‍ಎಸ್ ಹಾಗೂ ರೇರ್ ವ್ಹೀಲ್ ಲಿಫ್ಟ್ ಅಪ್ ಮಿಟಿಗೇಷನ್‍‍ಗಳನ್ನು ಅಳವಡಿಸಲಾಗಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಎಂವಿ ಅಗಸ್ಟಾ ಎಫ್3 800 ಬೈಕ್

ಈ ಬೈಕಿನ ಸಸ್ಪೆಂಷನ್ ಮತ್ತು ಬ್ರೇಕಿಂಗ್ ಸಿಸ್ಟಂಗಳು ಫುಲಿ ಅಡ್ಜಸ್ಟಬಲ್ 43 ಎಂಎಂ ಮಾರ್ಜೊಕಿ ಯು‍ಎಸ್‍‍ಡಿ ಫೋರ್ಕ್, ಫುಲಿ ಅಡ್ಜಸ್ಟಬಲ್ ಸಾಚ್ಸ್ ಮೊನೊಶಾಕ್ ಸಿಂಗಲ್ ಸೈಡೆಡ್ ಸ್ವಿಂಗ್ ಆರ್ಮ್ ಆಗಿದ್ದು, ಬೈಕಿನ ಮುಂಭಾಗದಲ್ಲಿ ಬ್ರೆಂಬೊ ಮೊನೊಬ್ಲಾಕ್ ಕ್ಯಾಲಿಪರ್‍‍ಗಳು ಹಾಗೂ ಹಾಗೂ ಹಿಂಭಾಗದಲ್ಲಿ ಟೂ ಪಿಸ್ಟನ್ ಕ್ಯಾಲಿಪರ್‍‍ಗಳಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಎಂವಿ ಅಗಸ್ಟಾ ಎಫ್3 800 ಬೈಕ್

ಎಂವಿ ಅಗಸ್ಟಾ ಕಂಪನಿಯು ಎಫ್3 800 ಬೈಕನ್ನು ಹಲವಾರು ನವೀಕರಣಗಳಿಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಂವಿ ಅಗಸ್ಟಾ ಎಫ್3 800 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.18 ಲಕ್ಷಗಳಾಗಿದೆ.

More from DriveSpark

Article Published On: Wednesday, June 24, 2020, 15:36 [IST]
English summary
2021 MV Agusta F3 800 India Launch Timeline Confirmed. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+