ಅನಾವರಣವಾಯ್ತು ಹೊಸ ಎಂವಿ ಅಗಸ್ಟಾ ಎಫ್3 ರೊಸ್ಸೊ ಸೂಪರ್‌ಸ್ಪೋರ್ಟ್ ಬೈಕ್

ಇಟಲಿ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ಎಂವಿ ಅಗಸ್ಟಾ ತನ್ನ ಮಿಡಲ್ ವೇಟ್ ಸೂಪರ್‌ಸ್ಪೋರ್ಟ್ ಎಫ್3 ರೊಸ್ಸೊ ಬೈಕನ್ನು ಅನಾವರಣಗೊಳಿಸಿದೆ. 2021ರ ಎಂವಿ ಅಗಸ್ಟಾ ಎಫ್3 ರೊಸ್ಸೊ ಸೂಪರ್‌ಸ್ಪೋರ್ಟ್ ಬೈಕ್ ಕೆಲವು ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

ಅನಾವರಣವಾಯ್ತು ಹೊಸ ಎಂವಿ ಅಗಸ್ಟಾ ಎಫ್3 ರೊಸ್ಸೊ ಸೂಪರ್‌ಸ್ಪೋರ್ಟ್ ಬೈಕ್

2021ರ ಎಂವಿ ಅಗಸ್ಟಾ ಎಫ್3 ರೊಸ್ಸೊ ಸೂಪರ್‌ಸ್ಪೋರ್ಟ್ ಬೈಕಿನಲ್ಲಿ ಅತಿದೊಡ್ಡ ಅಪ್‌ಗ್ರೇಡ್ ಅಂದರೆ ಇದರ ಎಂಜಿನ್ ಅನ್ನು ಯುರೋ5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಈ ಬೈಕಿನಲ್ಲಿ 798 ಸಿಸಿ, ಇನ್ಲೈನ್ ಮೂರು-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಸೆಟಪ್ ಅನ್ನು ಹೊಂದಿದೆ. ಈ ಎಂಜಿನ್ 13,000 ಆರ್‌ಪಿಎಂನಲ್ಲಿ 145 ಬಿಹೆಚ್‌ಪಿ ಪವರ್ ಮತ್ತು 10,100 ಆರ್‌ಪಿಎಂನಲ್ಲಿ 87 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಹೊಸ ಎಂವಿ ಅಗಸ್ಟಾ ಎಫ್3 ರೊಸ್ಸೊ ಸೂಪರ್‌ಸ್ಪೋರ್ಟ್ ಬೈಕ್

ಇನ್ನು ಹಿಂದಿನ ಎಂವಿ ಅಗಸ್ಟಾ ಎಫ್3 ರೊಸ್ಸೊ ಬೈಕಿನಲ್ಲಿ ಇರುವ ಎಂಜಿನ್ 13,000 ಆರ್‌ಪಿಎಂನಲ್ಲಿ 146 ಬಿಹೆಚ್ಪಿ ಮತ್ತು 10,600 ಆರ್‌ಪಿಎಂನಲ್ಲಿ 88 ಎನ್ಎಂ ಅನ್ನು ಉತ್ಪಾದಿಸುತ್ತದೆ. ಇನ್ನು ಎಂಜಿನ್ ನೊಂದಿಗೆ 6-ಸ್ಫೀಡ್ ಗೇರ್ ಬಾಕ್ಸ್ ಕ್ವಿಕ್-ಶಿಫ್ಟ್ ಇಎಎಸ್ 3.0 ಬೈ-ಡೈರಕ್ಷನಲ್ ಕ್ವಿಕ್‌ಶಿಫ್ಟರ್ ಅನ್ನು ಜೋಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಯ್ತು ಹೊಸ ಎಂವಿ ಅಗಸ್ಟಾ ಎಫ್3 ರೊಸ್ಸೊ ಸೂಪರ್‌ಸ್ಪೋರ್ಟ್ ಬೈಕ್

ಈ ಹೊಸ ಸೂಪರ್‌ಸ್ಪೋರ್ಟ್ ಬೈಕಿನಲ್ಲಿ ಎಲೆಕ್ಟ್ರಾನಿಕ್ ರೈಡರ್ ಏಡ್ಸ್ ಅನ್ನು ಹೊಂದಿದೆ. ಇನ್ನು ಎಬಿಎಸ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಕೂಡ ಒಳಗೊಂಡಿದೆ. ಇನ್ನು ಕಾಕ್‌ಪಿಟ್‌ನಲ್ಲಿ ಬ್ಲೂಟೂತ್-ಕನೆಕ್ಟಿವಿಟಿ ಹೊಂದಿರುವ 5.5-ಇಂಚಿನ ಟಿಎಫ್‌ಟಿ ಡಿಸ್ ಪ್ಲೇಯನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಎಂವಿ ಅಗಸ್ಟಾ ಎಫ್3 ರೊಸ್ಸೊ ಸೂಪರ್‌ಸ್ಪೋರ್ಟ್ ಬೈಕ್

ಇದು ಎಂವಿ ರೈಡ್ ಅಪ್ಲಿಕೇಶನ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇನ್ನು ಹೊಸ ಎಂವಿ ಅಗಸ್ಟಾ ಎಫ್3 ರೊಸ್ಸೊ ಸೂಪರ್‌ಸ್ಪೋರ್ಟ್ ಬೈಕಿನ ಸ್ಟೈಲಿಂಗ್ ಹಳೆಯ ಮಾದರಿಗೆ ಹೋಲುತ್ತದೆ. ಸ್ಟೈಲಿಂಗ್ ವಿಷಯದಲ್ಲಿ ಯಾವುದೇ ನವೀಕರಣಗಳನ್ನು ನಡೆಸಲಾಗಿಲ್ಲ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು ಹೊಸ ಎಂವಿ ಅಗಸ್ಟಾ ಎಫ್3 ರೊಸ್ಸೊ ಸೂಪರ್‌ಸ್ಪೋರ್ಟ್ ಬೈಕ್

ಈ ಬೈಕಿನಲ್ಲಿ ಸಿಂಗಲ್-ಪಾಡ್ ಹೆಡ್‌ಲೈಟ್, ರಿಯರ್-ವ್ಯೂ ಮಿರರ್ ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್, ಫುಲ್-ಫೇರಿಂಗ್ ವಿನ್ಯಾಸ, ಸ್ಪ್ಲಿಟ್-ಸ್ಟೈಲ್ ಸೀಟುಗಳು, ಟ್ರಿಪಲ್-ಔಟ್ ಲೆಟ್ ಎಕ್ಸಾಸ್ಟ್ ಕ್ಯಾನಿಸ್ಟರ್‌ಗಳು ಮತ್ತು ಸಿಂಗಲ್-ಸೈಡ್ ಸ್ವಿಂಗಾರ್ಮ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಎಂವಿ ಅಗಸ್ಟಾ ಎಫ್3 ರೊಸ್ಸೊ ಸೂಪರ್‌ಸ್ಪೋರ್ಟ್ ಬೈಕ್

ಇನ್ನು ಹೊಸ ಎಂವಿ ಅಗಸ್ಟಾ ಎಫ್3 ರೊಸ್ಸೊ ಸೂಪರ್‌ಸ್ಪೋರ್ಟ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಮಾರ್ಜೋಚಿ ಅಪ್ ಸೈಡ್ಫೋರ್ಕ್ ಮತ್ತು ಹಿಂಭಾಗದಲ್ಲಿ ಸ್ಯಾಚ್ಸ್ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಅನಾವರಣವಾಯ್ತು ಹೊಸ ಎಂವಿ ಅಗಸ್ಟಾ ಎಫ್3 ರೊಸ್ಸೊ ಸೂಪರ್‌ಸ್ಪೋರ್ಟ್ ಬೈಕ್

ಇನ್ನು ಸುರಕ್ಷತಾ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟ್ವಿನ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಒಂದೇ ರೋಟರ್ ಮತ್ತು ಬ್ರೆಂಬೊ ಮೂಲದ ಕ್ಯಾಲಿಪರ್‌ಗಳು ಸೇರಿವೆ.

ಅನಾವರಣವಾಯ್ತು ಹೊಸ ಎಂವಿ ಅಗಸ್ಟಾ ಎಫ್3 ರೊಸ್ಸೊ ಸೂಪರ್‌ಸ್ಪೋರ್ಟ್ ಬೈಕ್

ಹೊಸ ಎಂವಿ ಅಗಸ್ಟಾ ಎಫ್3 ರೊಸ್ಸೊ ಸೂಪರ್‌ಸ್ಪೋರ್ಟ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಇನ್ನು ಮಾಹಿತಿಗಳು ಬಹಿರಂಗವಾಗಿಲ್ಲ, ಇನ್ನು ಈ ಹೊಸ ಸೂಪರ್‌ಸ್ಪೋರ್ಟ್ ಬೈಕ್ ಶೀಘ್ರದಲ್ಲೇ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.

More from DriveSpark

Article Published On: Saturday, May 29, 2021, 19:03 [IST]
English summary
2021 MV Agusta F3 Rosso Revealed. Read In Kananda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+