ಅನಾವರಣವಾಯ್ತು ಐಷಾರಾಮಿ 2021ರ ಎಂವಿ ಅಗಸ್ಟಾ ಬ್ರೂಟೇಲ್ 1000 ಆರ್‌ಆರ್‌ ಬೈಕ್

ಇಟಲಿಯ ಸೂಪರ್‌ಬೈಕ್ ತಯಾರಕ ಕಂಪನಿಯಾದ ಎಂವಿ ಅಗಸ್ಟಾ ತನ್ನ ಹೊಸ ಬ್ರೂಟೇಲ್ ಆರ್‌ಆರ್‌ ಸೂಪರ್ ನೇಕೆಡ್ ಬೈಕನ್ನು ಅನಾವರಣಗೊಳಿಸಿದೆ. ಈ ಹೊಸ ಎಂವಿ ಅಗಸ್ಟಾ ಬ್ರೂಟೇಲ್ 1000 ಆರ್‌ಆರ್‌ ಬೈಕನ್ನು ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಅನಾವರಣವಾಯ್ತು ಐಷಾರಾಮಿ 2021ರ ಎಂವಿ ಅಗಸ್ಟಾ ಬ್ರೂಟೇಲ್ 1000 ಆರ್‌ಆರ್‌ ಬೈಕ್

ಹೊಸ ಎಂವಿ ಅಗಸ್ಟಾ ಬ್ರೂಟೇಲ್ 1000 ಆರ್‌ಆರ್‌ ಬೈಕಿನಲ್ಲಿ 998 ಸಿಸಿ, 16-ವಾಲ್ವ್, ಇನ್ಲೈನ್ ನಾಲ್ಕು-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಸಿಂಟರ್ಡ್ ವಾಲ್ವ್ ಗೈಡ್ಸ್ ಮತ್ತು ಡಿಎಲ್ಸಿ ಲೇಪಿತ ಟ್ಯಾಪೆಟ್‌ಗಳೊಂದಿಗೆ ಸಜ್ಜುಗೊಂಡಿದೆ. ಇದರ ಎಕ್ಸಾಸ್ಟ್ ಅನ್ನು ಸಹ ಮರು ವಿನ್ಯಾಸಗೊಳಿಸಲಾಗಿದೆ, ಆದ್ದರಿಂದ ಕ್ಲೀನರ್ ಆಗಿದ್ದರೂ ಸಹ ಎಂಜಿನ್ ಇನ್ನು 13,000 ಆರ್‌ಪಿಎಂನಲ್ಲಿ 205 ಬಿಹೆಚ್‌ಪಿ ಅನ್ನು 11,000 ಆರ್‌ಪಿಎಂನಲ್ಲಿ 116.5 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಐಷಾರಾಮಿ 2021ರ ಎಂವಿ ಅಗಸ್ಟಾ ಬ್ರೂಟೇಲ್ 1000 ಆರ್‌ಆರ್‌ ಬೈಕ್

ಈ ಹೊಸ ಎಂವಿ ಅಗಸ್ಟಾ ಬ್ರೂಟೇಲ್ 1000 ಆರ್‌ಆರ್‌ ಬೈಕ್ 300 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ. ಹೊಸ ಬ್ರೂಟೇಲ್ ಕಾಂಟಿನೆಂಟಲ್ ಕಾರ್ನರಿಂಗ್ ಎಬಿಎಸ್ ಸಿಸ್ಟಂ ಅನ್ನು ಪಡೆಯುತ್ತದೆ, ಇದು ಹಿಂದಿನ ಮಾದರಿಯ ಬಾಷ್ ಬದಲಾಯಿಸುತ್ತದೆ.

ಅನಾವರಣವಾಯ್ತು ಐಷಾರಾಮಿ 2021ರ ಎಂವಿ ಅಗಸ್ಟಾ ಬ್ರೂಟೇಲ್ 1000 ಆರ್‌ಆರ್‌ ಬೈಕ್

ಇದರ ಬದಲಾಗಿ ಹೊಸ ಐಎಂಯು ಯುನಿಟ್ ಅನ್ನು ಪಡೆಯುತ್ತದೆ. ಇನ್ನು ಈ ಹೊಸ ಬೈಕಿನಲ್ಲಿ ವ್ಹೀಲಿ ಕಂಟ್ರೋಲ್ ಮತ್ತು ಸ್ಟ್ಯಾಂಡರ್ಡ್ ಎಲೆಕ್ಟ್ರಾನಿಕ್ ಅಸಿಸ್ಟ್ ಅಪ್ ಮತ್ತು ಡೌನ್ ಕ್ವಿಕ್‌ಶಿಫ್ಟರ್ ಜೊತೆಗೆ ಬದಲಾಯಿಸಬಹುದಾದ ಎಂಟು-ಹಂತದ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ.

ಅನಾವರಣವಾಯ್ತು ಐಷಾರಾಮಿ 2021ರ ಎಂವಿ ಅಗಸ್ಟಾ ಬ್ರೂಟೇಲ್ 1000 ಆರ್‌ಆರ್‌ ಬೈಕ್

ಹೊಸ ಐಎಂಯು ಜೊತೆಗೆ ಬ್ರೂಟೇಲ್ 1000 ಆರ್‌ಆರ್‌ ಬೈಕ್ ಹೊಸ 5 ಇಂಚಿನ ಟಿಎಫ್‌ಟಿ ಡಿಸ್ ಪ್ಲೇಯನ್ನು ಹೊಂದಿದೆ. ಇದರಲ್ಲಿ ಸಂಯೋಜಿತ ಜಿಪಿಎಸ್ ನ್ಯಾವಿಗೇಷನ್ ಸೇರಿದೆ. ಇನ್ನು ಮೊಬಿಸ್ಟಾಟ್ ಟ್ರ್ಯಾಕರ್ ಸಹ ಬರುತ್ತದೆ.

ಅನಾವರಣವಾಯ್ತು ಐಷಾರಾಮಿ 2021ರ ಎಂವಿ ಅಗಸ್ಟಾ ಬ್ರೂಟೇಲ್ 1000 ಆರ್‌ಆರ್‌ ಬೈಕ್

ಹೊಸ ಎಂವಿ ಅಗಸ್ಟಾ ಬ್ರೂಟೇಲ್ 1000 ಆರ್‌ಆರ್‌ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಓಹ್ಲಿನ್ಸ್ 43 ಎಂಎಂ ಫೋರ್ಕ್ ಮತ್ತು ಹಿಂಭಾಗದಲ್ಲಿ ಓಹ್ಲಿನ್ಸ್ ಇಸಿ ಟಿಟಿಎಕ್ಸ್ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ. ಇದು ಎಲ್ಕ್ಟ್ರಿಕ್ ಕಂಟ್ರೋಲ್ ನೊಂದಿಗ್ ಬೌಂಡ್ ಡ್ಯಾಂಪಿಂಗ್ ಮತ್ತು ಸ್ಪ್ರಿಂಗ್ ಪ್ರಿಲೋಡ್‌ನೊಂದಿಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗುತ್ತದೆ.

ಅನಾವರಣವಾಯ್ತು ಐಷಾರಾಮಿ 2021ರ ಎಂವಿ ಅಗಸ್ಟಾ ಬ್ರೂಟೇಲ್ 1000 ಆರ್‌ಆರ್‌ ಬೈಕ್

ಹೊಸ ಎಂವಿ ಅಗಸ್ಟಾ ಬ್ರೂಟೇಲ್ 1000 ಆರ್‌ಆರ್‌ ಬೈಕ್ 186 ಕೆಜಿ ತೂಕವನ್ನು ಹೊಂದಿದೆ. ಇನ್ನು ಇತ್ತೀಚೆಗೆ ಎಂವಿ ಅಗಸ್ಟಾ ತನ್ನ ಮಿಡಲ್ ವೇಟ್ ಸೂಪರ್‌ಸ್ಪೋರ್ಟ್ ಎಫ್3 ರೊಸ್ಸೊ ಬೈಕನ್ನು ಅನಾವರಣಗೊಳಿಸಿತು. 2021ರ ಎಂವಿ ಅಗಸ್ಟಾ ಎಫ್3 ರೊಸ್ಸೊ ಸೂಪರ್‌ಸ್ಪೋರ್ಟ್ ಬೈಕ್ ಕೆಲವು ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

ಅನಾವರಣವಾಯ್ತು ಐಷಾರಾಮಿ 2021ರ ಎಂವಿ ಅಗಸ್ಟಾ ಬ್ರೂಟೇಲ್ 1000 ಆರ್‌ಆರ್‌ ಬೈಕ್

ಈ ಎಂವಿ ಅಗಸ್ಟಾ ಎಫ್3 ರೊಸ್ಸೊ ಸೂಪರ್‌ಸ್ಪೋರ್ಟ್ ಬೈಕಿನಲ್ಲಿ ಅತಿದೊಡ್ಡ ಅಪ್‌ಗ್ರೇಡ್ ಅಂದರೆ ಇದರ ಎಂಜಿನ್ ಅನ್ನು ಯುರೋ5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಈ ಹೊಸ ಸೂಪರ್‌ಸ್ಪೋರ್ಟ್ ಬೈಕಿನಲ್ಲಿ ಎಲೆಕ್ಟ್ರಾನಿಕ್ ರೈಡರ್ ಏಡ್ಸ್ ಅನ್ನು ಹೊಂದಿದೆ. ಇನ್ನು ಎಬಿಎಸ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಕೂಡ ಒಳಗೊಂಡಿದೆ.

ಅನಾವರಣವಾಯ್ತು ಐಷಾರಾಮಿ 2021ರ ಎಂವಿ ಅಗಸ್ಟಾ ಬ್ರೂಟೇಲ್ 1000 ಆರ್‌ಆರ್‌ ಬೈಕ್

ಎಂವಿ ಅಗಸ್ಟಾ ಭಾರತೀಯ ಮಾರುಕಟ್ಟೆಯನ್ನು ನಿರ್ಗಮಿಸಿದ ನಂತರ ಇಲ್ಲಿಗೆ ಮರು ಪ್ರವೇಶ ಮಾಡಿಲ್ಲ. ಇನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಎಂವಿ ಅಗಸ್ಟಾ ಜಾಗತಿಕ ಹೆಜ್ಜೆಗುರುತು ವಿಸ್ತರಣೆ ಮತ್ತು ಉತ್ಪನ್ನ ಅಭಿವೃದ್ಧಿಗೆ ಸಾಕಷ್ಟು ಹೂಡಿಕೆ ಮಾಡುತ್ತಿದೆ. ಇನ್ನು ಈ ಬ್ರ್ಯಾಂಡ್ ಭಾರತದಲ್ಲಿ ಕಾರ್ಯಾಚರಣೆಯನ್ನು ಮರು-ಪ್ರಾರಂಭಿಸುವ ಸಾಧ್ಯತೆಗಳಿದೆ.

More from DriveSpark

Article Published On: Thursday, June 10, 2021, 20:25 [IST]
English summary
2021 MV Agusta Brutale 1000 RR Unveiled. Read In Kananda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+