Just In
- 9 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 10 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 11 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 11 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್
ಟ್ರಯಂಫ್ ಇಂಡಿಯಾ ಕಂಪನಿಯು ಮಿಡಲ್ ವೇಟ್ ಸ್ಪೋರ್ಟ್ ನೇಕೆಡ್ ಬೈಕ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಮುಂದಿನ ಜೂನ್ ತಿಂಗಳಲ್ಲಿ ಈ ಹೊಸ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್ ಬಿಡುಗಡೆಯಾಗಲಿದೆ ಎಂದು ಟ್ರಯಂಫ್ ಕಂಪನಿಯು ಖಚಿತಪಡಿಸಿದೆ.
2020ರ ಸ್ಟ್ರೀಟ್ ಟ್ರಿಪಲ್ ಆರ್ಎಸ್ ಬೈಕಿಗಿಂತ ಮೊದಲು ಸ್ಪೋರ್ಟ್ ನೇಕೆಡ್ ಬೈಕ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕನ್ನು ಬಿಡುಗಡೆಗೊಳಿಸಬೇಕಾಗಿತ್ತು. ಆದರೆ ಕರೋನಾ ವೈರಸ್ ಭೀತಿಯಿಂದಾಗಿ ಸ್ಟ್ರೀಟ್ ಟ್ರಿಪಲ್ ಆರ್ ಬೈಕಿನ ಬಿಡುಗಡೆಯನ್ನು ಮುಂದೂಡಲಾಗಿದೆ. ಇದೀಗ ಕಂಪನಿಯು ಮಿಡ್-ಸ್ಪೆಕ್ ರೂಪಾಂತರವಾದ ಸ್ಟ್ರೀಟ್ ಟ್ರಿಪಲ್ ಆರ್ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ವರ್ಷದ ಜೂನ್ ತಿಂಗಳಲ್ಲಿ ಭಾರತದಲ್ಲಿ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್ ಬಿಡುಗಡೆಯಾಗಲಿದೆ ಎಂದು ಟ್ರಯಂಫ್ ಮೋಟಾರ್ಸೈಕಲ್ಸ್ ಇಂಡಿಯಾದ ಬ್ಯುಸಿನೆಸ್ ಹೆಡ್, ಶೂಯೆಬ್ ಫಾರೂಕ್ ಮಾಧ್ಯಮವೊಂದರ ಸಂದರ್ಶನದ ವೇಳೆ ಇವರು ಹೇಳಿದ್ದಾರೆ.
ಈ ಮಿಡಲ್ ವೇಟ್ ನೇಕೆಡ್ ಬೈಕ್ ಇತ್ತೀಚೆಗೆ ಬಿಡುಗಡೆಗೊಳಿಸಲಾದ ಆರ್ಎಸ್ ಆವೃತ್ತಿಗಿಂತ ಕೆಳಗಿನ ಸ್ಥಾನದಲ್ಲಿರುತ್ತದೆ. ಮುಂಬರುವ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್ ಅನಲಾಗ್ ಟ್ಯಾಕೋಮೀಟರ್ನೊಂದಿಗೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರಲಿದೆ.
MOST READ: ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಸುಜುಕಿ ಜಿಕ್ಸರ್ 250 ಬೈಕುಗಳು
ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕಿನ ಮುಂಭಾಗದಲ್ಲಿ 41 ಎಂಎಂ ಶೋವಾ ಅಪ್ಸೈಡ್ ಸಸ್ಪೆಂಷನ್ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಅನ್ನು ಅಳವಡಿಸಲಾಗಿದೆ.
ಇನ್ನು ಈ ಹೊಸ ಸ್ಟ್ರೀಟ್ ಟ್ರಿಪಲ್ ಆರ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ ಮುಂಭಾಗದಲ್ಲಿ ಟ್ವಿನ್ 310 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ಜೋಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್
ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕಿನಲ್ಲಿ 765 ಸಿಸಿ, 3-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 12,000 ಆರ್ಪಿಎಂನಲ್ಲಿ 116 ಬಿಹೆಚ್ಪಿ ಪವರ್ ಮತ್ತು 9,400 ಆರ್ಪಿಎಂನಲ್ಲಿ 77 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಸ್ಲಿಪ್-ಅಸಿಸ್ಟ್ ಕ್ಲಚ್ ಮೂಲಕ 6-ಸ್ಪೀಡ್ ಗೇರ್ಬಾಕ್ಸ್ಗೆ ಜೋಡಿಸಲಾಗಿದೆ. ಈ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕಿನಲ್ಲಿ ಮೂರು ರೈಡಿಂಗ್ ಮೋಡ್ಗಳನ್ನು ಸಹ ಹೊಂದಿರುತ್ತದೆ.
ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್ ರಗಡ್ ಲುಕ್ ಅನ್ನು ಹೊಂದಿದೆ. 2020ರ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್, ಇಂಟಿಗ್ರೇಟೆಡ್ ಟ್ವಿನ್ ಎಲ್ಇಡಿ ಹೆಡ್ಲ್ಯಾಂಪ್ ಹಾಗೂ ಇಂಟಿಗ್ರೇಟೆಡ್ ಡಿಆರ್ಎಲ್ಗಳನ್ನು ಹೊಂದಿದೆ.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ
ಇತ್ತೀಚೆಗೆ ಬಿಡುಗಡೆಗೊಳಿಸಲಾದ 2020ರ ಸ್ಟ್ರೀಟ್ ಟ್ರಿಪಲ್ ಆರ್ಎಸ್ ಬೈಕಿನಲ್ಲಿ 765 ಸಿಸಿಯ ಇನ್ಲೈನ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 121 ಬಿಹೆಚ್ಪಿ ಪವರ್ ಹಾಗೂ 79 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಟ್ರಯಂಫ್ ಎಂಜಿನಿಯರ್ಗಳು ಈ ಬೈಕಿನಲ್ಲಿರುವ ರಿಸೆಷನ್ ಸೈಕಲ್ ಅನ್ನು 7%ನಷ್ಟು ಕಡಿಮೆಗೊಳಿಸಿದ್ದಾರೆ.
ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕೆಟಿಎಂ 790 ಡ್ಯೂಕ್ ಬೈಕಿಗೆ ಪೈಪೋಟಿ ನೀಡುತ್ತದೆ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಮಿಡಲ್ ವೇಟ್ ಸೆಗ್ಮೆಂಟ್ ನ ಬೈಕುಗಳಿಗೆ ಬೇಡಿಕೆ ಇರುವುದರಿಂದ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕನ್ನು ಬಿಡುಗಡೆಗೊಳಿಸಲು ಟ್ರಯಂಫ್ ಮುಂದಾಗಿದೆ.