ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಸುಜುಕಿ ಜಿಕ್ಸರ್ 250 ಬೈಕುಗಳು

ಜಪಾನ್ ಮೂಲದ ಬೈಕ್ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್ ತನ್ನ ಹೊಸ ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‍ಎಫ್ 250 ಬೈಕುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇದರಲ್ಲಿ ಜಿಕ್ಸರ್ 250 ಬೈಕಿನ ಬೆಲೆಯ ರೂ.1.63 ಲಕ್ಷಗಳಾದರೆ ಜಿಕ್ಸರ್ ಎಸ್‍ಎಫ್ 250 ಬೈಕಿನ ಬೆಲೆ ರೂ.1.75 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಸುಜುಕಿ ಜಿಕ್ಸರ್ 250 ಬೈಕುಗಳು

ಈ ಮೇಲಿನ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ. 2020ರ ಆಟೋ ಎಕ್ಸ್ ಪೋದಲ್ಲಿ ಹೊಸ ಸುಜುಕಿ ಜಿಕ್ಸರ್ 250 ಟ್ವಿನ್ ಬೈಕುಗಳನ್ನು ಪ್ರದರ್ಶಿಸಿದರು. ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದ ಸಮಯದಲ್ಲಿ ಸುಜುಕಿ ಜಿಕ್ಸರ್ ಟ್ವಿನ್ ಬೈಕುಗಳ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿತ್ತು. ಕಳೆದ ತಿಂಗಳಲ್ಲಿ ಸುಜುಕಿ ಕಂಪನಿಯು ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‍ಎಫ್ 250 ಬೈಕುಗಳನ್ನು ಜಪಾನಿನ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಸುಜುಕಿ ಮೋಟಾರ್‌ಸೈಕಲ್ ಈ ಎರಡು ಬೈಕುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಸುಜುಕಿ ಜಿಕ್ಸರ್ 250 ಬೈಕುಗಳು

ಹೊಸ ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‍ಎಫ್ 250 ಬೈಕುಗಳಲ್ಲಿ 249 ಸಿಸಿ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 26.1 ಬಿಹೆಚ್‌ಪಿ ಪವರ್ ಮತ್ತು 22.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಬಿಎಸ್-6 ಕವಾಸಕಿ ಝಡ್650 ಬೈಕ್

ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಸುಜುಕಿ ಜಿಕ್ಸರ್ 250 ಬೈಕುಗಳು

ಜಿಕ್ಸರ್ 250 ಟ್ವಿನ್ ಬೈಕುಗಳ ಹಿಂದಿನ ಮಾದರಿಗೆ ಹೋಲಿಸಿದರೆ 0.4 ಬಿಹೆಚ್‌ಪಿ ಪವರ್ ಮತ್ತು 0.4 ರಷ್ಟು ಎನ್ಎಂ ಟಾರ್ಕ್ ಕೂಡ ಕಡಿಮೆಯಾಗಿದೆ. ಹೊಸ ಸುಜುಕಿ ಜಿಕ್ಸರ್ ಬೈಕುಗಳಲ್ಲಿ ಎಂಜಿನ್ ನವೀಕರಣ ಹೊರತುಪಡಿಸಿ ಬೇರೆ ಯಾವುದೇ ಬದಲಾವಣೆಗಳು ಕಂಡುಬಂಡಿಲ್ಲ.

ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಸುಜುಕಿ ಜಿಕ್ಸರ್ 250 ಬೈಕುಗಳು

ಈ ಬೈಕ್ ಪ್ರಸ್ತುತ ಮಾದರಿಯ ವಿನ್ಯಾಸ ಮತ್ತು ಫೀಚರ್ ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಸುಜುಕಿ ಜಿಕ್ಸರ್ 250 ನೇಕೆಡ್ ಸ್ಟ್ರೀಟ್‍‍‍ಫೈಟರ್ ಆಗಿದ್ದರೆ, ಎಸ್‍ಎಫ್ 250 ಬೈಕ್ ಫೇರ್ಡ್ ಆವೃತ್ತಿಯಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಸುಜುಕಿ ಜಿಕ್ಸರ್ 250 ಬೈಕುಗಳು

ಈ ಎರಡೂ ಬೈಕ್‍‍ಗಳು ಎಲ್‍ಇ‍ಡಿ ಹೆಡ್‍‍ಲ್ಯಾಂಪ್‍‍ಗಳು, ಎಲ್‍ಇಡಿ ಟೈಲ್‍‍ಲೈಟ್‍ಗಳು, ಎಲ್‍‍ಸಿಡಿ ಡಿಜಿ‍ಟಲ್ ಎನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿದೆ.

ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಸುಜುಕಿ ಜಿಕ್ಸರ್ 250 ಬೈಕುಗಳು

ಪ್ರಸ್ತುತ ನೇಕೆಡ್ ಆವೃತ್ತಿಯ ಸುಜುಕಿ ಜಿಕ್ಸರ್ 250 ಹೊಸದಾಗಿ ವಿನ್ಯಾಸಗೊಳಿಸಲಾದ ಟ್ಯಾಂಕಿನ ಮೇಲೆ ವಿಶಿಷ್ಟವಾದ ಬಾಡಿ ಗ್ರಾಫಿಕ್ಸ್ ಗಳಿದ್ದು, ಇದರ ಜೊತೆಗೆ ಒವಲ್ ಶೇಪಿನ ಎಲ್ಇಡಿ ಹೆಡ್‌ಲ್ಯಾಂಪ್ ಯೂನಿಟ್‍‍ಗಳಿವೆ. ಜಿಕ್ಸರ್ 250 ಬೈಕಿನಲ್ಲಿ ಟಯರ್ ಹಗ್ಗರ್, ಸ್ಪ್ಲಿಟ್ ಸೀಟ್, ಕಪ್ಪು ಬಣ್ಣದ ಅಲಾಯ್ ವ್ಹೀಲ್ ಹಾಗೂ ಕ್ರೋಮ್ ಅಂಶಗಳನ್ನು ಹೊಂದಿರುವ ಡ್ಯುಯಲ್ ಮಫ್ಲರ್ ಅಂಶಗಳಿವೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಸುಜುಕಿ ಜಿಕ್ಸರ್ 250 ಬೈಕುಗಳು

ಹೊಸ ಸುಜುಕಿ ಜಿಕ್ಸರ್ 250 ಮತ್ತು ಎಸ್‍ಎಫ್ 250 ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‍‍ಗಳು ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಷನ್ ಅನ್ನು ಹೊಂದಿದೆ. ಬ್ರೈಕಿಂಗ್ ಸಿಸ್ಟಂ ಉತ್ತಮವಾಗಿದ್ದು, ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಿದ್ದಾರೆ. ಸ್ಟ್ಯಾಂಡರ್ಡ್ ಡ್ಯುಯಲ್ ಚಾನೆಲ್ ಎ‍ಬಿಎಸ್ ಸಿಸ್ಟಂ ಅನ್ನು ಅಳವಡಿಸಿದ್ದಾರೆ.

ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಸುಜುಕಿ ಜಿಕ್ಸರ್ 250 ಬೈಕುಗಳು

ಹೊಸ ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‍ಎಫ್ 250 ಬೈಕ್‍‍ಗಳು ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 250, ಬಜಾಜ್ ಪಲ್ಸರ್ ಆರ್‍ಎಸ್ 200 ಮತ್ತು ಟಿ‍ವಿಎಸ್ ಅಪಾಚೆ ಆರ್‍ಆರ್ 310 ಬೈ‍‍ಕ್‍‍ಗಳಿಗೆ ಪೈಪೋಟಿ‍ಯನ್ನು ನೀಡುತ್ತದೆ.

More from DriveSpark

Article Published On: Thursday, May 28, 2020, 19:42 [IST]
English summary
BS6 Suzuki Gixxer 250, SF 250 launched from Rs 1.63 lakh. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+