ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಯಮಹಾ ಕಂಪನಿಯು ತನ್ನ ಬಹುನೀರಿಕ್ಷಿತ ಹೊಸ ಎಫ್‍ಝಡ್ 25 ಮತ್ತು ಎಫ್‍ಝಡ್ಎಸ್ 25 ಬೈಕುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಯಮಹಾ ಕಂಪನಿಯು ಈ ಎರಡು ಬೈಕುಗಳ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಲಾಗಿದೆ.

ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಯಮಹಾ ಕಂಪನಿಯು ಹೊಸ ಎಫ್‍ಝಡ್ 25 ಮತ್ತು ಎಫ್‍ಝಡ್ಎಸ್ 25 ಬೈಕುಗಳನ್ನು ಈ ತಿಂಗಳಲ್ಲಿ ಬಿಡುಗಡೆಗೊಳಿಸಬೇಕಾಗಿತ್ತು. ಆದರೆ ಕರೋನಾ ವೈರಸ್ ನಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಆಗಿದೆ. ಇದರಿಂದ ಯಮಹಾ ಬೈಕುಗಳ ಬಿಡುಗಡೆಯನ್ನು ಮುಂದೂಡಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಯಮಹಾ ಎಫ್‍ಝಡ್ 25 ಮತ್ತು ಎಫ್‍ಝಡ್ಎಸ್ 25 ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಬಿಎಸ್-6 ಯಮಹಾ ಎಫ್‍ಝಡ್ 25 ಬೈಕಿನ ಸ್ಟೈಲಿಂಗ್ ಅನ್ನು ಹಳೆಯ ಮಾದರಿಗಿಂತ ಸ್ವಲ್ಪ ನವೀಕರಿಸಲಾಗಿದೆ. ಬೈ-ಫಂಕ್ಷನಲ್ ಎಲ್ಇಡಿ ಯುನಿಟ್ ನೊಂದಿಗೆ ಹೆ‍ಡ್ ಲ್ಯಾಂಪ್ ಕ್ಲಸ್ಟರ್, ಇನ್ಸ್ ಟ್ರೂಮೆಂಟ್ ಕನ್ಸೋಲ್‌ಗಾಗಿ ಎಲ್‌ಸಿಡಿ ಡಿಸ್‍ಪ್ಲೇ, ಇದರಲ್ಲಿ ಅಂಡರ್‌ಬೆಲ್ಲಿ ಕೌಲ್ ಮತ್ತು ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸೇರಿವೆ. ಎಫ್‍ಝಡ್ 25 ಬೈಕ್ ಮೆಟಾಲಿಕ್ ಬ್ಲ್ಯಾಕ್ ಮತ್ತು ರೇಸಿಂಗ್ ಬ್ಲೂ ಎರಡೂ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಹೊಸ ಎಫ್‍ಝಡ್ 25 ಬೈಕಿನ ಸ್ಟೈಲಿಂಗ್ ಅನ್ನು ಹಳೆಯ ಮಾದರಿಗಿಂತ ಕೆಲವು ನವೀಕರಣಗಳನ್ನು ಮಾಡಲಾಗಿದೆ. ಎಫ್‍ಝಡ್ 25 ಬೈಕ್ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಎಫ್‍ಝಡ್ 25 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಈ ಬೈಕಿನ ವಿನ್ಯಾಸದಲ್ಲಿ ಬದಲಾವಣೆಗಳನ್ನು ಹೊರತುಪಡಿಸಿ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲವೆಂದು ನಿರೀಕ್ಷಿಸುತ್ತೇವೆ. ಹೊಸ ಯಮಹಾ ಎಫ್‍ಝಡ್ 25 ಮತ್ತು ಎಫ್‍ಝಡ್ಎಸ್ 25 ಬೈಕಿನಲ್ಲಿ 249 ಸಿಸಿ ಸಿಂಗಲ್ ಸಿಲಿಂಡರ್, ಫ್ಯೂಯಲ್-ಇಂಜೆಕ್ಟ್ ಎಂಜಿನ್ ಅನ್ನು ಅಳವಡಿಸಲಿದೆ.

ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಯಮಹಾ ಎಫ್‍ಝಡ್ 25 ಮತ್ತು ಎಫ್‍ಝಡ್ಎಸ್ 25 ಬೈಕಿನಲ್ಲಿರುವ ಬಿಎಸ್-4, 249 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 20.6 ಬಿಹೆಚ್‌ಪಿ ಪವರ್ ಮತ್ತು 20.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಟ್ರಾನ್ಸ್‌ಮಿಷನ್‌ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಬೈಕ್ ಮುಂಭಾಗದಲ್ಲಿ ಟಿ‍‍ಲಿ‍ಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಅನ್ನು ಅಳವಡಿಸಲಾಗಿದೆ. ಸುರಕ್ಷತೆಗಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದ್ದಾರೆ. ಸ್ಟ್ಯಾಂಡರ್ಡ್ ಡ್ಯುಯಲ್ ಚಾನೆಲ್ ಎ‍ಬಿಎಸ್ ಅನ್ನು ಅನ್ನು ಅಳವಡಿಸಿದ್ದಾರೆ.

ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಹೊಸ ಎಫ್‍ಝಡ್ 25 ಮತ್ತು ಎಫ್‍ಝಡ್ಎಸ್ 25 ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 250, ಸುಜುಕಿ ಜಿಕ್ಸರ್ 250, ಹಸ್ಕವರ್ನಾ ಸಾವರ್ಟ್‌ಪಿಲೆನ್ ಮತ್ತು ಇತ್ತೀಚೆಗೆ ಬಿಡುಗಡೆಯಾದ ಬಜಾಜ್ ಡೊಮಿನಾರ್ 250 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಹೊಸ ಯಮಹಾ ಎಫ್‍ಝಡ್ 25 ಮತ್ತು ಎಫ್‍ಝಡ್ಎಸ್ 25 ಬೈಕುಗಳ ಬೆಲೆಯು ಹಿಂದಿನ ಮಾದರಿಗಳಿಗಿಂತ ತುಸು ಹೆಚ್ಚಾಗಿರಲಿದೆ ಎಂದು ನಿರೀಕ್ಷಿಸುತ್ತೇವೆ. ಈ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ.

Article Published On: Tuesday, April 7, 2020, 17:54 [IST]
English summary
Yamaha FZ 25 & FZS-25 BS6 Teased Ahead Of India Launch. Read in kannada.
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+