ಗಮನ ಸೆಳೆದ ಮಾಡಿಫೈ ಬಜಾಜ್ ಡೋಮಿನಾರ್ 400 ಹೊಸ ಲುಕ್

Written By:

ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ಬಜಾಜ್ ಡೋಮಿನಾರ್ 400, ಸಾಹಸಿ ಬೈಕ್ ಪ್ರಿಯರ ಮನಗೆದ್ದಿತ್ತು. ಆದ್ರೆ ಈ ಬಾರಿ ಹೊಸ ಲುಕ್‌ ಪಡೆದಿರುವ ಅದೇ ಬೈಕ್, ಮೆಟಾಲಿಕ್ ಬ್ಲೂ ಬಣ್ಣದಲ್ಲಿ ಮಿಂಚುತ್ತಿದೆ. ಡೋಮಿನಾರ್ 400 ಮಾಡಿಫೈ ಮಾಡಲಾಗಿದ್ದು, ವಿನೂತನ ವೈಶಿಷ್ಟ್ಯತೆಗಳು ಕುತೂಹಲ ಮೂಡಿಸಿವೆ.

To Follow DriveSpark On Facebook, Click The Like Button
ಗಮನ ಸೆಳೆದ ಮಾಡಿಫೈ ಬಜಾಜ್ ಡೋಮಿನಾರ್ 400 ಹೊಸ ಲುಕ್

ಈ ಹಿಂದೆ ಹತ್ತಾರು ಹೊಸ ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ಡೋಮಿನಾರ್ 400, ಈ ಬಾರಿ ವಿನೂತನ ರೀತಿಯಲ್ಲಿ ಮಾಡಿಫೈಗೊಂಡಿದೆ.ಇದರ ಜೊತೆಗೆ ಹಳೆಯ ಮಾದರಿಯ ಕೆಲವು ವೈಶಿಷ್ಟ್ಯತೆಗಳನ್ನು ಮುಂದುವರಿಸಲಾಗಿದೆ.

ಗಮನ ಸೆಳೆದ ಮಾಡಿಫೈ ಬಜಾಜ್ ಡೋಮಿನಾರ್ 400 ಹೊಸ ಲುಕ್

ಸದ್ಯ ಮಾಡಿಫೈ ವಿನ್ಯಾಸ ಸಂಪೂರ್ಣಗೊಂಡಿದ್ದು, ಮೆಟಾಲಿಕ್ ಬ್ಲೂ ಬಣ್ಣವು ಡೋಮಿನಾರ್ 400 ಹೊರ ವಿನ್ಯಾಸದ ಅಂದವನ್ನು ಹೆಚ್ಚಿಸಿವೆ.

ಗಮನ ಸೆಳೆದ ಮಾಡಿಫೈ ಬಜಾಜ್ ಡೋಮಿನಾರ್ 400 ಹೊಸ ಲುಕ್

ಮಾಡಿಫೈಗೊಂಡಿರುವ ಬಜಾಜ್ ಡೋಮಿನಾರ್ 400 ಬೈಕ್, ಕೇವಲ ಹೊರ ವಿನ್ಯಾಸದಲ್ಲಿ ಮಾತ್ರ ಬದಲಾವಣೆಗೊಂಡಿದೆ. ಮೂಲ ಆವೃತ್ತಿಯ ಹೊಲಿಕೆಯನ್ನೇ ಮುಂದುವರಿಸಲಾಗಿದ್ದು, ಬಣ್ಣದಲ್ಲಿ ಕೆಲವು ಮಹತ್ತರ ಬದಲಾವಣೆ ತರಲಾಗಿದೆ.

ಗಮನ ಸೆಳೆದ ಮಾಡಿಫೈ ಬಜಾಜ್ ಡೋಮಿನಾರ್ 400 ಹೊಸ ಲುಕ್

ಕಸ್ಟಮೈಸ್ ಮೂಲಕ ಬದಲಾವಣೆ ಪಡೆದಿರುವ ಡೋಮಿನಾರ್ 400, ಟ್ಯಾನ್ ಶೆಡ್ ಪಡೆದುಕೊಂಡಿದೆ. ಹೆಡ್‌ಲ್ಯಾಂಪ್ ವಿನ್ಯಾಸದಲ್ಲಿ ಕೆಲವು ಬದಲಾವಣೆ ತರಲಾಗಿದ್ದು, ಗ್ಲಾಸ್ ಕಾರ್ಬನ್ ಫೈಬರ್‌ನಿಂದ ಸಿದ್ಧಗೊಳಿಸಲಾಗಿದೆ. ಇದರ ಜೊತೆಗೆ ಬ್ರೇಕ್ ಕಾಲಿಪರ್ಸ್‌ಗಳಿಗೆ ಕೆಂಪು ಮಿಶ್ರಿತ ಶೆಡ್ ನೀಡಲಾಗಿದ್ದು, ಟೈಲ್ ಲ್ಯಾಂಪ್ ಬದಲಾವಣೆ ಬೈಕ್ ಲುಕ್ ಹೆಚ್ಚಿಸಿದೆ.

ಗಮನ ಸೆಳೆದ ಮಾಡಿಫೈ ಬಜಾಜ್ ಡೋಮಿನಾರ್ 400 ಹೊಸ ಲುಕ್

ಸಾಹಸಿ ಬೈಕ್ ಪ್ರಿಯರಿಗೆ ಹೇಳಿ ಮಾಡಿಸಿದಂತಿರುವ ಡೋಮಿನಾರ್ 400, 373ಸಿಸಿ ಸಿಂಗಲ್ ಸಿಲಿಂಡರ್ ಸಾಮರ್ಥ್ಯ ಹೊಂದಿದೆ. ಜೊತೆಗೆ ಲಿಕ್ವಿಡ್ ಕೂಲ್ಡ್ ಎಂಜಿನ್ ಪಂಪಿಂಗ್ ವ್ಯವಸ್ಥೆ ಹೊಂದಿದ್ದು, 35ಬಿಎಚ್‌ಪಿ ಮತ್ತು 35ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೀಗಾಗಿ ಬೈಕ್ ಪ್ರಿಯರಿಗೆ ಇದು ಸಹಜವಾಗಿ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವ ಬೈಕ್ ಎಂಬ ಹೆಗ್ಗಳಿಕೆ ಪಡೆದಿದೆ.

ಗಮನ ಸೆಳೆದ ಮಾಡಿಫೈ ಬಜಾಜ್ ಡೋಮಿನಾರ್ 400 ಹೊಸ ಲುಕ್

ಒಂದು ವೇಳೆ ನಿಮಗೆ ಮಾಡಿಫೈ ಬಜಾಜ್ ಡೋಮಿನಾರ್ 400 ಇಷ್ಟವಾಗದೇ ಹೊದ್ರೆ ಅದರ ಮೂಲ ವಿನ್ಯಾಸವನ್ನು ವೀಕ್ಷಣೆ ಮಾಡಲು ಕೆಳಗಿನ ಫೋಟೋ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಬಜಾಜ್ bajaj
English summary
This modified Dominar 400 is wrapped in new blue metallic colour scheme, which looks stunning on the motorcycle. The seats, headlamp assembly and brake calipers also get new shades.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark