ಇಲ್ಲಿದೆ ನೋಡಿ ನಾಟಿಲಸ್ — ಹೊಸ ರೂಪ ಪಡೆದ ರಾಯಲ್ ಎನ್‌ಫೀಲ್ಡ್

Written By:

ಭಾರತದಲ್ಲಿ ತನ್ನದೇ ಹೆಸರು ಗಳಿಸಿರುವ ರಾಯಲ್ ಎನ್‌ಫೀಲ್ಡ್, ಬೈಕ್ ಪ್ರಿಯರ ಕನಸಿನ ವಾಹನವೆಂದೇ ಖ್ಯಾತಿ. ಆದರೆ ಕೆಲವು ಹವ್ಯಾಸಿ ಬೈಕ್ ಪ್ರಿಯರು ರಾಯಲ್ ಎನ್‌ಫೀಲ್ಡ್‌ಗೆ ಹೊಸ ರೂಪ ನೀಡಿದ್ದಾರೆ. ಗ್ಲ್ಯಾಮರ್ ಲುಕ್ ಹೊಂದಿರುವ ಮಾಡಿಫೈ ಬೈಕ್‌ಗೆ 'ನಾಟಿಲಸ್' ಎಂದು ನಾಮಕರಣ ಮಾಡಲಾಗಿದ್ದು, ಸಾಹಸಿ ಬೈಕ್ ಪ್ರಿಯರ ಮನಸೆಳೆಯುತ್ತಿದೆ.

ಬೆಂಗಳೂರು ಮೂಲದ 'ಬುಲೆಟಿಯರ್ ಕಸ್ಟಮ್ಸ್' ಎಂಬ ಸಾಹಸಿ ಬೈಕ್ ಯುವಕರ ತಂಡವೊಂದು ರಾಯಲ್ ಎನ್‌ಫೀಲ್ಡ್‌ಗೆ ಹೊಸ ಲುಕ್ ನೀಡಿದ್ದಾರೆ. ವಿನೂತನ ರೀತಿಯಲ್ಲಿ ಸಿದ್ಧಗೊಂಡಿರುವ ರಾಯಲ್ ಎನ್‌ಫೀಲ್ಡ್ ವಿ-ಟ್ವಿನ್ ಮಾದರಿಯಲ್ಲಿ ಬೈಕ್ ಸಿದ್ದಗೊಳಿಸಲಾಗಿದ್ದು, 500 ಸಿಸಿ ಸಾಮರ್ಥ್ಯ ಎಂಜಿನ್ ಹೊಂದಿದೆ.

ಒಟ್ಟಾರೆ ಹೊಸ ಬೈಕ್ ನೋಡಲು ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿದ್ದು, ದೊಡ್ಡ ಇಂಧನ ಟ್ಯಾಂಕ್, ಅಗಲವಾದ ಸೀಟು, ಆಕರ್ಷಕ ಹ್ಯಾಂಡಲ್, ದೊಡ್ಡದಾದ್ ಹೆಡ್ ಲೈಟ್ ಹೊಸ ರೂಪದ ಬೈಕ್ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ಮಿಶ್ರಲೋಹದೊಂದಿಗೆ ಮಾಡಿಪೈ ಬೈಕ್ ತಯಾರಿ ಮಾಡಲಾಗಿದ್ದು, ಡೀಪ್ ಸಿ ಬ್ಲೂ ಬಣ್ಣ ನೀಡಲಾಗಿದೆ. ಸಾಕಷ್ಟು ತಯಾರಿಯೊಂದಿಗೆ ಹೊಸ ರೂಪ ನೀಡಿರುವ ಬುಲೆಟಿಯರ್ ಕಸ್ಟಮ್ಸ್ ಟೀಂ, ನಾಟಿಲಸ್ ನಿರ್ಮಿಸಿ ಅಭಿನಂದನೆಗೆ ಪಾತ್ರವಾಗಿದೆ.

ಇನ್ನು ಈ ಹೊಸ ಬೈಕ್ ತಯಾರಿ ಹಿಂದೆ ಹಲವು ರೋಚಕ ಕಥೆಗಳಿವೆ. ಕ್ಯಾಪಟನ್ ನೆಮೋ ಸಬ್‌ ಮೆರಿನ್ ನೆನಪಿಗಾಗಿ ಬೈಕ್ ತಯಾರಿ ಮಾಡಲಾಗಿದ್ದು, ಬುಲೆಟಿಯರ್ ತಂಡದ ಸಾಧನೆ ಅಪಾರ. 

ಕೇವಲ ರಾಯಲ್ ಎನ್‌ಫೀಲ್ಡ್ ಅಷ್ಟೇ ಅಲ್ಲ ಇಂತಹ ಹತ್ತು ಹಲವು ಬೈಕ್‌ಗಳಿಗೆ ಹೊಸ ರೂಪ ನೀಡಿರುವ ಬುಲೆಟಿಯರ್ ಕಸ್ಟಮ್ ಟೀಂ, ಸಾಹಸಿ ಬೈಕ್ ಪ್ರಿಯರನ್ನು ಸೆಳೆಯುತ್ತಿದೆ.

ಟ್ರಯಂಫ್ ಕಂಪನಿಯ ಬೊನ್‌ವಿಲ್ಲೆ ಬೊಬರ್ ಬೈಕಿನ ಚಿತ್ರಗಳನ್ನು ವೀಕ್ಷಿಸಿಲು ಕೆಳಗಿನ ಗ್ಯಾಲರಿ ಕ್ಲಿಕ್ ಮಾಡಿ.

English summary
Bulleteer Customs has built a custom Royal Enfield called the Nautilus, as a tribute to Captain Nemo’s submarine.
Story first published: Saturday, February 11, 2017, 17:57 [IST]
Please Wait while comments are loading...

Latest Photos