ಸದ್ಯದಲ್ಲೇ ಮತ್ತಷ್ಟು ಹೊಸ ಬೈಕ್ ಬಿಡುಗಡೆ ಬಗ್ಗೆ ಸುಳಿವು ನೀಡಿದ ಹೋಂಡಾ..!

Written By:

ಭಾರತೀಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೋಂಡಾ ಸಂಸ್ಥೆಯು ಸದ್ಯದಲ್ಲೇ ಸುಧಾರಿತ ತಂತ್ರಜ್ಞಾನ ಹೊಂದಿರುವ ಮತ್ತಷ್ಟು ದ್ವಿಚಕ್ರ ವಾಹನಗಳನ್ನು ಪರಿಚಯಿಸಲು ಸಜ್ಜುಗೊಳ್ಳುತ್ತಿದೆ.

ಮಧ್ಯಮ ವರ್ಗಗಳನ್ನು ಸೆಳೆಯಲು ಮುಂದಾಗಿರುವ ಹೋಂಡಾ, ಸದ್ಯದಲ್ಲೇ ಮತ್ತಷ್ಟು ಹೊಸ ಮಾದರಿಯ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ.

ಈ ಬಗ್ಗೆ ಸುಳಿವು ನೀಡಿರುವ ಹೋಂಡಾ ಸಂಸ್ಥೆಯು, ಈ ಹಿಂದಿನ ಬೈಕ್ ಮಾದರಿಗಳಿಂತಲೂ ಅಗ್ಗದ ದರದಲ್ಲಿ ಹೊಸ ಬೈಕ್‌ಗಳು ಲಭ್ಯವಿರಲಿವೆ ಎಂಬ ಮಹತ್ವದ ಮಾಹಿತಿಯನ್ನು ಹೊರಹಾಕಿದೆ.

ಕಳೆದ ತಿಂಗಳ ಹಿಂದಷ್ಟೇ ಬಜಾಜ್ ಆಟೋ ಮಾರಾಟ ದಾಖಲೆಯನ್ನು ಹಿಂದಿಕ್ಕಿರುವ ಹೋಂಡಾ, ಈ ಬಾರಿ ಹೊಸ ಹೊಸ ಬೈಕ್ ಮತ್ತು ಸ್ಕೂಟರ್ ಬಿಡುಗಡೆ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸುವ ತವಕದಲ್ಲಿದೆ.

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಬೈಕ್‌ಗಳು ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಹೋಂಡಾ ಮಹತ್ವದ ನಿರ್ಧಾರದ ಬಗ್ಗೆ ಆಟೋ ಉದ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Read more on ಹೋಂಡಾ honda
English summary
Read in Kannada about Honda To Launch Its Most Affordable Two-Wheeler In India.
Story first published: Monday, June 19, 2017, 19:23 [IST]
Please Wait while comments are loading...

Latest Photos