ರೂ.7.52 ಲಕ್ಷಕ್ಕೆ ಬಿಡುಗಡೆಯಾದ 2018ರ ಕವಾಸಕಿ ಕೆಎಕ್ಸ್250ಎಫ್ ಮೋಟಾರ್ ಸೈಕಲ್

Written By:

ಮೋಟಾರ್ ರೇಸ್ ವಿಭಾಗದಲ್ಲಿ ಭಾರೀ ಬೇಡಿಕೆ ಹೊಂದಿರುವ ಕವಾಸಕಿ ಕೆಎಕ್ಸ್250ಎಫ್ 2018ರ ಹೊಸ ಆವೃತ್ತಿಯು ಬಿಡುಗಡೆಯಾಗಿದ್ದು, ಬೈಕ್ ಎಂಜಿನ್ ಮತ್ತು ವೈಶಿಷ್ಟ್ಯತೆಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಿಡುಗಡೆಯಾದ 2018ರ ಕವಾಸಕಿ ಕೆಎಕ್ಸ್250ಎಫ್ ಮೋಟಾರ್ ಸೈಕಲ್

ಈ ಹಿಂದೆ ಮೋಟಾರ್ ಸೈಕಲ್ ರೇಸ್ ವಿಭಾಗದಲ್ಲಿ ಹಲವು ಸಾಧನೆಗಳಿಗೆ ಕಾರಣವಾಗಿರುವ ಕವಾಸಕಿ ಕೆಎಕ್ಸ್250ಎಫ್ 2018ರ ಆವೃತ್ತಿಯು ಭಾರತದಲ್ಲಿ ಬಿಡುಗಡೆಯಾಗಿದ್ದು, ಬೈಕ್ ಬೆಲೆ ಎಕ್ಸ್‌ಶೋರಂ ಪ್ರಕಾರ ರೂ.7.55 ಲಕ್ಷಕ್ಕೆ ಬಿಡುಗಡೆಯಾಗಿದೆ.

ಬಿಡುಗಡೆಯಾದ 2018ರ ಕವಾಸಕಿ ಕೆಎಕ್ಸ್250ಎಫ್ ಮೋಟಾರ್ ಸೈಕಲ್

ಸುಧಾರಿತ ತಂತ್ರಜ್ಞಾನ ಅಳವಡಿಕೆ ಹಿನ್ನೆಲೆ 2017ರ ಮಾದರಿಗಿಂತ 2018ರ ಕವಾಸಕಿ ಕೆಎಕ್ಸ್250ಎಫ್ ಮಾದರಿ ಮೇಲೆ ರೂ.38 ಸಾವಿರ ದರ ಹೆಚ್ಚಳ ಮಾಡಲಾಗಿದ್ದು, 249 ಸಿಸಿ 4-ಸ್ಟೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ.

ಬಿಡುಗಡೆಯಾದ 2018ರ ಕವಾಸಕಿ ಕೆಎಕ್ಸ್250ಎಫ್ ಮೋಟಾರ್ ಸೈಕಲ್

ಜಿಎಸ್‌ಟಿ ಜಾರಿ ಹಿನ್ನೆಲೆ ಶೇ.1ರಷ್ಚು ಹೆಚ್ಚಳ ಹಿನ್ನೆಲೆ ದರ ಕೊಂಚ ದುಬಾರಿಯಾಗಿದ್ದರು ಪ್ರಸ್ತುತ ಮಾರುಕಟ್ಟೆಯಲ್ಲಿನ ಇತರೆ ಮಾದರಿಗಳ ಬೆಲೆಗಳಿಗೆ ಹೋಲಿಕೆ ಮಾಡಿದಲ್ಲಿ ಕವಾಸಕಿ ಬೆಲೆ ಕಡಿಮೆ ಎಂದು ಹೇಳಬಹುದು.

ಬಿಡುಗಡೆಯಾದ 2018ರ ಕವಾಸಕಿ ಕೆಎಕ್ಸ್250ಎಫ್ ಮೋಟಾರ್ ಸೈಕಲ್

ಇನ್ನೊಂದು ಪ್ರಮುಖ ವಿಚಾರವೆಂದರೆ ಯಾವುದೇ ಕಾರಣಕ್ಕೂ ಕವಾಸಕಿ ಕೆಎಕ್ಸ್250ಎಫ್ ಮಾದರಿಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಓಡಿಸುವಂತಿಲ್ಲ. ಬದಲಾಗಿ ರೇಸ್ ಟ್ರ್ಯಾಕ್‌ಗಳಲ್ಲಿ ಮಾತ್ರ ಚಾಲನೆಗೆ ಅವಕಾಶ ಇರುತ್ತದೆ.

ಬಿಡುಗಡೆಯಾದ 2018ರ ಕವಾಸಕಿ ಕೆಎಕ್ಸ್250ಎಫ್ ಮೋಟಾರ್ ಸೈಕಲ್

ಇನ್ನು ಸುರಕ್ಷಾ ತಂತ್ರಜ್ಞಾನ ಬಗ್ಗೆ ಮಾತಾನಾಡುವುದಾರರೇ ಫ್ಯೂಲ್ ಇಂಜೆಕ್ಷನ್, ಫ್ಯೂಲ್ ಪಂಪ್, ಇನ್‌ಟೆಕ್ ಬೂಟ್ ಮತ್ತು ಕ್ಯಾಮ್‌ಶಾಫ್ಟ್ ಪಡೆದುಕೊಂಡಿರುವ ಕವಾಸಕಿ ಕೆಎಕ್ಸ್250ಎಫ್, ಟ್ರ್ಯಾಕ್‌ಗೆ ಅನುಗುಣವಾಗಿ ಅತ್ಯುತ್ತಮ ಮಾದರಿ ಟೈರ್ ವ್ಯವಸ್ಥೆ ಇರಿಸಲಾಗಿದೆ.

ಬಿಡುಗಡೆಯಾದ 2018ರ ಕವಾಸಕಿ ಕೆಎಕ್ಸ್250ಎಫ್ ಮೋಟಾರ್ ಸೈಕಲ್

ಭಾರತೀಯ ಮಾರುಕಟ್ಟೆಯಷ್ಟೇ ಅಲ್ಲದೇ ಜಾಗತಿಕವಾಗಿ 2018 ಕವಾಸಕಿ ಕೆಎಕ್ಸ್250ಎಫ್ ಬಿಡುಗಡೆಯಾಗಿದ್ದು, ಮೋಟಾರ್ ರೇಸ್‌ಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಹೊಸ ಆವೃತ್ತಿಯು ಸಹಾಯಕವಾಗಲಿದೆ.

English summary
Read in Kannada about 2018 Kawasaki KX250F Launched In India.
Story first published: Tuesday, July 18, 2017, 20:08 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark