Subscribe to DriveSpark

ಬಿಡುಗಡೆಗೆ ಸಜ್ಜುಗೊಂಡ 2017ರ ಕವಾಸಕಿ ನಿಂಜಾ 1000 ಬೈಕ್

Written By:

ಸೂಪರ್ ಬೈಕ್‌ಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕವಾಸಕಿಯು ನಿಂಜಾ 1000 ಬೈಕ್ ಬಿಡುಗಡೆಗೆ ಸಜ್ಜುಗೊಂಡಿದ್ದು, ಬಿಡುಗಡೆಯಾಗಲಿರುವ ಬೈಕ್ ಮಾಹಿತಿ ಇಲ್ಲಿದೆ.

ಜಪಾನ್ ಮೂಲದ ದ್ಪಿಚಕ್ರ ವಾಹನ ಉತ್ಪಾದನಾ ಸಂಸ್ಥೆಯಾಗಿರುವ ಕವಾಸಕಿಯು ಕಳೆದ 3 ದಶಕಗಳಿಂದ ಸ್ಪೋರ್ಟ್ ಹಾಗೂ ಸೂಪರ್ ಬೈಕ್‌ಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ತನ್ನದೇ ಪ್ರಾಬಲ್ಯ ಹೊಂದಿದ್ದು, ಇದೀಗ ನಿಂಜಾ 1000 ಬಿಡುಗಡೆ ಮಾಡುತ್ತಿದೆ.

ಇದೇ ತಿಂಗಳು 7ರಂದು ನಿಂಜಾ 1000 ಬಿಡುಗಡೆಯಾಗಲಿದ್ದು, ಬಿಎಸ್ 4 ಸೇರಿದಂತೆ ಹೊಸ ವೈಶಿಷ್ಟ್ಯತೆಗಳೊಂದಿಗೆ ನಿಂಜಾ 1000 ಗ್ರಾಹಕರ ಕೈಸೇರಲಿದೆ.

1043 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿರುವ ನಿಂಜಾ 1000 ಬೈಕ್ ಮಾದರಿಯೂ 140ಬಿಎಚ್‌ಪಿ ಮತ್ತು 111ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಹಿಂದಿನ ಮಾದರಿಗಿಂತಲೂ ಅತ್ಯುತ್ತಮ ಹೊರವಿನ್ಯಾಸ ಮತ್ತು ಸುರಕ್ಷಾ ವಿಧಾನಗಳು ನಿಂಜಾ 1000 ಮಾದರಿಯಲ್ಲಿದ್ದು, ಎಬಿಎಸ್ ಸೇರಿದಂತೆ ಹಲವು ಸುರಕ್ಷಾ ತಂತ್ರಜ್ಞಾನಗಳೊಂದಿಗೆ ಅಭಿವೃದ್ದಿ ಹೊಂದಿದೆ.

ಹೀಗಾಗಿ ಹೊಸ ಬೈಕ್ ಬೆಲೆಯು ರೂ.18 ಲಕ್ಷ ದಿಂದ ರೂ.21 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಮುಂಬರುವ ದಿನಗಳಲ್ಲಿ 1000 ಸಿಸಿ ಸಾಮರ್ಥ್ಯದ ಸುಜುಕಿ ಜಿಎಸ್‌ಎಕ್ಸ್ 1000ಎಫ್ ಮತ್ತು ಬಿಎಂಡಬ್ಲ್ಯು ಆರ್1200ಆರ್‌ಎಸ್ ಬೈಕ್‌ಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ನೀರಿಕ್ಷೆಯಿದೆ.

English summary
Read in Kannada about 2017 Kawasaki Ninja 1000 India Launch Details Revealed.
Story first published: Thursday, July 6, 2017, 11:25 [IST]
Please Wait while comments are loading...

Latest Photos