ವಿಯೆಟ್ನಾಂನಲ್ಲಿ ಮೊದಲ ಮಾರಾಟ ಮಳಿಗೆ ಆರಂಭಿಸಿದ ರಾಯಲ್ ಎನ್‌ಫೀಲ್ಡ್

ಜಗತ್ತಿನ ಪ್ರಮುಖ ಬೈಕ್ ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಉತ್ಪನ್ನಗಳ ಮಾರಾಟ ವಿಸ್ತರಣೆಯನ್ನು ಕೈಗೊಂಡಿದ್ದು, ಇದೀಗ ಪ್ರವಾಸಿ ತಾಣವಾದ ವಿಯೆಟ್ನಾಂನಲ್ಲಿ ತನ್ನ ಮೊದಲ ಮಾರಾಟ ಮಳಿಗೆ ಆರಂಭಗೊಳಿಸಿದೆ.

By Praveen

ಕ್ಲಾಸಿಕಲ್ ಮಾದರಿಯ ಬೈಕ್‌ಗಳನ್ನು ಉತ್ಪಾದಿಸುವಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಈಗಾಗಲೇ ಭಾರತೀಯ ಮಾರುಕಟ್ಟೆ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲೂ ಸಾಕಷ್ಟು ಸದ್ದು ಮಾಡುತ್ತಿದ್ದು, ಇದೀಗ ವಿಯೆಟ್ನಾಂನಲ್ಲೂ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.

ವಿಯೆಟ್ನಾಂನಲ್ಲಿ ಮೊದಲ ಮಾರಾಟ ಮಳಿಗೆ ಆರಂಭಿಸಿದ ರಾಯಲ್ ಎನ್‌ಫೀಲ್ಡ್

ವಿಯೆಟ್ನಾಂನಲ್ಲಿ ಇತ್ತೀಚೆಗೆ ಪ್ರತಿ ವರ್ಷ ಲಕ್ಷಾಂತರ ಜನ ಪ್ರವಾಸಿಗರು ಹರಿದು ಬರುತ್ತಿದ್ದು, ಈ ಹಿನ್ನೆಲೆ ವಾಣಿಜ್ಯ ಚಟುವಟಿಕೆಗಳು ಗದಿಗೆದರಿವೆ. ಇದೇ ಉದ್ದೇಶದಿಂದಲೇ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕೂಡಾ ಪ್ರವಾಸಿಗರ ಜೊತೆ ಜೊತೆಗೆ ಸ್ಥಳೀಯ ಗ್ರಾಹಕರನ್ನು ಸೆಳೆಯುವ ತಂತ್ರ ರೂಪಿಸಿದೆ.

Recommended Video

Royal Enfield Himalayan Launch, Specs, Features - DriveSpark
ವಿಯೆಟ್ನಾಂನಲ್ಲಿ ಮೊದಲ ಮಾರಾಟ ಮಳಿಗೆ ಆರಂಭಿಸಿದ ರಾಯಲ್ ಎನ್‌ಫೀಲ್ಡ್

ಹೀಗಾಗಿ ಆರಂಭಿಕ ಅವಧಿಗೆ ಪ್ರಮುಖ ಮೂರು ಬೈಕ್ ಆವೃತ್ತಿಗಳನ್ನು ಪರಿಚಯಿಸುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು, ಹೋ ಚಿ ಮಿನ್ ಸಿಟಿಯಲ್ಲಿ ಅಲ್ ನಬುದಹ್ ಇಂಟರ್ ನ್ಯಾಷನಲ್ ಸಂಸ್ಧೆಯ ಪಾಲುದಾರಿಕೆಯೊಂದಿಗೆ ಬೈಕ್‌ಗಳ ಮಾರಾಟಕ್ಕೆ ಹಸಿರು ನಿಶಾನೆ ತೊರಿದೆ.

ವಿಯೆಟ್ನಾಂನಲ್ಲಿ ಮೊದಲ ಮಾರಾಟ ಮಳಿಗೆ ಆರಂಭಿಸಿದ ರಾಯಲ್ ಎನ್‌ಫೀಲ್ಡ್

ಜೊತೆಗೆ ವಿಯೆಟ್ನಾಂನಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಈ ಹಿಂದಿನಿಂದಲೇ ಸಾಕಷ್ಟು ಬೇಡಿಕೆಯಿದ್ದು, ಇದಕ್ಕಾಗಿಯೇ 250 ಸಿಸಿ ಯಿಂದ 750 ಸಿಸಿ ಎಂಜಿನ್ ಸಾಮರ್ಥ್ಯದ ವಿವಿಧ ಬೈಕ್ ಮಾದರಿಗಳನ್ನು ಹೊಸ ಮಾರಾಟ ಮಳಿಗೆಯಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

ವಿಯೆಟ್ನಾಂನಲ್ಲಿ ಮೊದಲ ಮಾರಾಟ ಮಳಿಗೆ ಆರಂಭಿಸಿದ ರಾಯಲ್ ಎನ್‌ಫೀಲ್ಡ್

ಇದಕ್ಕೂ ಮುನ್ನ ಬ್ಯಾಂಕಾಂಕ್, ಜಕಾರ್ತ್‌ನಲ್ಲೂ ಮತ್ತೆರಡು ಹೊಸ ಮಾರಾಟ ಮಳಿಗೆಗಳಿಗೆ ಚಾಲನೆ ಕೂಡಾ ನೀಡಲಾಗಿದ್ದು, ಈ ಬಗ್ಗೆ ಮಾತನಾಡಿರುವ ರಾಯಲ್ ಎನ್‌ಫೀಲ್ಡ್ ಮಾರ್ಕೆಟಿಂಗ್ ಹೆಡ್ ರುದ್ರಜೀತ್ ಸಿಂಗ್ ಅವರು ವಿಯೆಟ್ನಾಂನಲ್ಲಿನ ಮೊದಲ ವಾಣಿಜ್ಯ ಚಟುವಟಿಕೆಯ ಆರಂಭಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಯೆಟ್ನಾಂನಲ್ಲಿ ಮೊದಲ ಮಾರಾಟ ಮಳಿಗೆ ಆರಂಭಿಸಿದ ರಾಯಲ್ ಎನ್‌ಫೀಲ್ಡ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಳೆದ 2 ವರ್ಷಗಳಿಂದ ಸಾಗರೋತ್ತರ ಬೈಕ್ ಮಾರಾಟ ಮಳಿಗೆ ತೆರೆಯಲು ಹೆಚ್ಚಿನ ಒತ್ತು ನೀಡುತ್ತಿರುವ ರಾಯಲ್ ಎನ್‌ಫೀಲ್ಡ್, ಮಧ್ಯಮ ಗಾತ್ರದ ಕ್ಲಾಸಿಕ್ ಬೈಕ್ ಆವೃತ್ತಿಗಳನ್ನು ತನ್ನ ನೆಚ್ಚಿನ ಗ್ರಾಹಕರಿಗೆ ಲಭ್ಯವಾಗುವಂತೆ ಯೋಜನೆ ರೂಪಿಸುತ್ತಿದೆ.

Most Read Articles

Kannada
English summary
Read in Kannada about Royal Enfield Rides Into Vietnam. To Offer Three Motorcycles.
Story first published: Saturday, October 14, 2017, 13:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X