ಸದ್ಯದಲ್ಲೇ ಬರಲಿದೆ 750ಸಿಸಿ ಸಾಮರ್ಥ್ಯದ ವಿನೂತನ ಹಿಮಾಲಯನ್ ಬೈಕ್
ಭಾರತೀಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗಣವಾಗಿ ಹೊಸ ಮಾದರಿಯ ಬೈಕ್ ಬಿಡುಗಡೆಗೊಳಿಸಲು ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಬೃಹತ್ ಯೋಜನೆ ರೂಪಿಸುತ್ತಿದೆ.
ಆಟೋ ಉದ್ಯಮದಲ್ಲಿ ಕಳೆ ಐದು ದಶಕಗಳಿಂದ ತನ್ನದೇ ಆದ ಬೇಡಿಕೆಯನ್ನು ಕಾಯ್ದುಕೊಂಡು ಬಂದಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು, ಸದ್ಯದಲ್ಲೇ ತನ್ನ ಮತ್ತೊಂದು ಹೊಸ ಮಾದರಿಯ ಬೈಕ್ ಬಿಡುಗಡೆಗೊಳಿಸುವ ನೀರಿಕ್ಷೆಯಲ್ಲಿದೆ.

ಹೊಸ ಮಾದರಿಯ ಬೈಕ್ ಬಿಡುಗಡೆ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರುವ ರಾಯಲ್ ಎನ್‌ಫೀಲ್ಡ್ ಭಾರತೀಯ ವಿಭಾಗದ ಸಿಇಒ ಸಿದ್ಧಾರ್ಥ್ ಲಾಲ್, ಆಪ್ ರೋಡಿಂಗ್ ಉತ್ಸಾಹಿಗಳಿಗೆ ಹೊಸ ಸುದ್ಧಿ ನೀಡಿದ್ದಾರೆ.

ಈಗಾಗಲೇ ಭಾರತೀಯ ಮಾರುಕಟ್ಟೆ ಮನೆಮಾತಾಗಿರುವ 350 ಸಿಸಿ, 500ಸಿಸಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಮಾದರಿಗಿಂತಲೂ ಉತ್ತಮ ಮಾದರಿಯನ್ನು ಬಿಡುಗಡೆ ಮಾಡುವ ಬಗ್ಗೆ ಸುಳಿವು ಕೊಟ್ಟಿದ್ದಾರೆ.

ಇತ್ತೀಚೆಗೆ ಖಾಸಗಿ ಮಾಧ್ಯಮದೊಂದಿಗೆ ಹೊಸ ಮಾದರಿ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಸಿಇಒ ಸಿದ್ಧಾರ್ಥ್ ಲಾಲ್, ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಿಮಾಲಯನ್ ಹೋಲುವ ಮತ್ತೊಂದು ಬೈಕ್ ಸಿದ್ಧಗೊಳಲಿದೆ ಎಂದಿದ್ದಾರೆ.

ಜೊತೆಗೆ ಮುಂಬುರುವ ದಿನಗಳಲ್ಲಿ 750 ಸಿಸಿ ಸಾಮರ್ಥ್ಯದ ಹಿಮಾಲಯನ್ ಮಾದರಿಯನ್ನು ಬಿಡುಗಡೆಗೊಳಿಸಲಾಗುತ್ತಿದ್ದು, ಸದ್ಯ ಲಭ್ಯವಿರುವ ಮಾದರಿಗಿಂತ ಹೆಚ್ಚು ಪರಿಷ್ಕೃತ ಶ್ರೇಣಿಯನ್ನು ಹೊರತರಲಿದ್ದಾರೆ.

ಈಗಾಗಲೇ ಹೊಸ ಮಾದರಿ ಉತ್ಪಾದನಾ ಕಾರ್ಯ ಶುರುವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಹೊಸ ಮಾದರಿ ಹಿಮಾಲಯನ್ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಿಮಾಲಯನ್ ಮಾದರಿಗಿಂತ ಉನ್ನತ ಮಟ್ಟದ ಮಾದರಿಗಾಗಿ ಭಾರೀ ಪ್ರಮಾಣದ ಬೇಡಿಕೆ ಬಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 750ಸಿಸಿ ಆವೃತ್ತಿ ಸಿದ್ಧಗೊಳ್ಳುತ್ತಿದೆ.

ಇನ್ನೊಂದು ಪ್ರಮುಖ ವಿಚಾರವೆಂದರೇ 250 ಸಿಸಿ ಸಾಮರ್ಥ್ಯಕ್ಕಿಂತ ಕಡಿಮೆ ಬೈಕ್ ಮಾದರಿಗಳ ಉತ್ಪಾದನೆಯನ್ನು ರಾಯಲ್ ಎನ್‌ಫೀಲ್ಡ್ ಸಂಪೂರ್ಣವಾಗಿ ಕೈಬಿಟ್ಟಿದೆ.

ಎಲ್ಲವೂ ಅಂದುಕೊಂಡತೆ ಆದಲ್ಲಿ ಮುಂಬರುವ ಜೂನ್ ಅಥವಾ ಜುಲೈ ಅಂತ್ಯಕ್ಕೆ ಹೊಸ ತಂತ್ರಜ್ಞಾನ ಆಧರಿತ ಹಿಮಾಲಯನ್ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಒಟ್ಟಿನಲ್ಲಿ ಈ ಹಿಂದಿನ ಮಾದರಿಗಳಿಂತಲೂ ಉತ್ನತ ಮಟ್ಟದ ಮಾದರಿಯನ್ನು ಹೊರ ತರುವ ಉದ್ದೇಶವಿದ್ದು, ಭಾರತೀಯ ಗ್ರಾಹಕರಿಗೆ ಹೊಸ ಅನುಭುತಿ ನೀಡುವ ನೀರಿಕ್ಷೆಯಲ್ಲಿವೆ.


Click it and Unblock the Notifications