ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಎಫ್ಐ ಖರೀದಿಗೆ ಬುಕ್ಕಿಂಗ್ ಶುರು..!!

Written By:

ರಾಯಲ್ ಎನ್‌ಫೀಲ್ಡ್ ಬಹುನೀರಿಕ್ಷಿತ ಹಿಮಾಲಯನ್ ಎಫ್ಐ ಬೈಕ್ ಆವೃತ್ತಿ ಬಿಡುಗಡೆಗೆ ಸಜ್ಜುಗೊಂಡಿದ್ದು, ದೇಶದ ಪ್ರಮುಖ ನಗರಗಳಲ್ಲಿ ಹೊಸ ಬೈಕ್ ಖರೀದಿಗಾಗಿ ಬುಕ್ಕಿಂಗ್ ಶುರುವಾಗಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಎಫ್ಐ ಖರೀದಿಗೆ ಬುಕ್ಕಿಂಗ್ ಶುರು..!!

ಅಕ್ಟೋಬರ್ 15ರ ನಂತರ ರಾಯಲ್ ಎನ್‌ಫೀಲ್ಡ್ ಹಿಮಾಯಲನ್ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಹೊಸ ಬೈಕ್ ಖರೀದಿಗೆ ಸಾವಿರಾರು ಗ್ರಾಹಕರು ಮುಂಗಡ ಹಣ ಪಾವತಿಸಿ ತಮ್ಮ ನೆಚ್ಚಿನ ಬೈಕ್ ಮಾದರಿಯನ್ನು ಕಾಯ್ದಿರಿಸುತ್ತಿದ್ದಾರೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಎಫ್ಐ ಖರೀದಿಗೆ ಬುಕ್ಕಿಂಗ್ ಶುರು..!!

ಹೀಗಾಗಿ ರಾಯಲ್ ಎನ್‌ಫೀಲ್ಡ್ ಪ್ರಿಯರ ಮೆಚ್ಚುಗೆಗೆ ಕಾರಣವಾಗಿರೋ ಹಿಮಾಲಯನ್ ಎಫ್ಐ ಆವೃತ್ತಿಯು ಸಾಕಷ್ಟು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶ ಮಾಡುತ್ತಿದ್ದು, ಸದ್ಯಕ್ಕೆ ರೂ.5,500 ಮುಂಗಡದೊಂದಿಗೆ ಬುಕ್ಕಿಂಗ್ ಮಾಡಬಹುದಾಗಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಎಫ್ಐ ಖರೀದಿಗೆ ಬುಕ್ಕಿಂಗ್ ಶುರು..!!

ಇದಲ್ಲದೇ ಮುಂಗಡ ಹಣ ವಾಪಸ್ ಪಡೆಯುವ ಅವಕಾಶ ಕೂಡಾ ನೀಡಲಾಗಿದ್ದು, ಹೊಸ ಬೈಕ್ ಬೆಲೆಗಳನ್ನು ಎಕ್ಸ್ ಶೋರಂಗಳ ಪ್ರಕಾರ ರೂ.1,70 ಲಕ್ಷಕ್ಕೆ ನಿಗದಿಗೊಳಿಸುವ ಸಾಧ್ಯತೆಗಳಿವೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಎಫ್ಐ ಖರೀದಿಗೆ ಬುಕ್ಕಿಂಗ್ ಶುರು..!!

ಇನ್ನು ಈ ಹಿಂದಿನ ಮಾದರಿಯಲ್ಲಿದ್ದಂತೆ ಹೊಸ ಮಾದರಿಯಲ್ಲೂ 411 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಾಗಿದ್ದು, ಬೈಕ್ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಜೊತೆಗೆ 24.5-ಬಿಎಚ್‌ಪಿ ಮತ್ತು 32 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

Recommended Video - Watch Now!
Royal Enfield Himalayan Launch, Specs, Features - DriveSpark
ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಎಫ್ಐ ಖರೀದಿಗೆ ಬುಕ್ಕಿಂಗ್ ಶುರು..!!

5-ಸ್ಪೀಡ್ ಗೇರ್‌ಬಾಕ್ಸ್, ಮುಂಭಾಗದಲ್ಲಿ 21-ಇಂಚಿನ ಚಕ್ರಗಳು ಮತ್ತು ಹಿಂಭಾಗದಲ್ಲಿ 17-ಇಂಚಿನ್ ಚಕ್ರಗಳನ್ನು ಜೊಡಿಸಲಾಗಿದ್ದು, ಸಿಇಎಟಿ ಟೈರ್‌ಗಳನ್ನು ಬಳಕೆ ಮಾಡಿರುವುದು ಆಪ್ ರೋಡಿಂಗ್ ಕೌಶಲ್ಯಕ್ಕೆ ಸಹಕಾರಿಯಾಗಿವೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಎಫ್ಐ ಖರೀದಿಗೆ ಬುಕ್ಕಿಂಗ್ ಶುರು..!!

ಇನ್ನೊಂದು ಮುಖ್ಯ ವಿಚಾರ ಎಂದರೇ ಸದ್ಯಕ್ಕೆ ಹಿಮಾಲಯನ್ ಬೈಕ್ ಖರೀದಿಗೆ ಮುಂಬೈ ಮತ್ತು ದೆಹಲಿಯಲ್ಲಿ ಮಾತ್ರ ಬುಕ್ಕಿಂಗ್ ಸ್ವಿಕರಿಸಲಾಗುತ್ತಿದ್ದು, ಬಿಡುಗಡೆ ನಂತರವೇ ಎಲ್ಲ ನಗರಗಳಲ್ಲೂ ಬುಕ್ಕಿಂಗ್ ಮತ್ತು ಖರೀದಿಗೆ ಲಭ್ಯವಾಗಲಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಎಫ್ಐ ಖರೀದಿಗೆ ಬುಕ್ಕಿಂಗ್ ಶುರು..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಆಪ್ ರೋಡಿಂಗ್ ಪ್ರಿಯರಿಗಾಗಿ ಹಿಮಾಲಯನ್ ಎಫ್ಐ ಆವೃತ್ತಿಯನ್ನು ಹೊರತಂದಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು, ಉತ್ತಮ ಇಂಧನ ಕಾರ್ಯಕ್ಷಮತೆಯನ್ನು ಕೂಡಾ ಒದಗಿಸಿದೆ ಎನ್ನಲಾಗಿದೆ.

English summary
Read in Kannada about Royal Enfield Himalayan FI BS-4 Price in India, Launch Date, Booking Details Revealed.
Story first published: Saturday, August 12, 2017, 19:05 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark