ಭಾರತದಲ್ಲಿ ಪ್ರದರ್ಶನಗೊಂಡ ರಾಯಲ್ ಎನ್‌ಫೀಲ್ಡ್ 650 ಅವಳಿ ವಾಹನಗಳು
ರಾಯಲ್ ಎನ್‌ಫೀಲ್ಡ್ ತನ್ನ ಹೊಸ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಮೋಟರ್ ಸೈಕಲ್‌ಗಳನ್ನು ಮೊದಲ ಬಾರಿಗೆ ಭಾರತದಲ್ಲಿ ಪ್ರದರ್ಶನ ಮಾಡಿದೆ. ಈ ವಿಶೇಷ ಬೈಕುಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ರಾಯಲ್ ಎನ್‌ಫೀಲ್ಡ್ ತನ್ನ ಹೊಸ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಮೋಟರ್ ಸೈಕಲ್‌ಗಳನ್ನು ಮೊದಲ ಬಾರಿಗೆ ಭಾರತದಲ್ಲಿ ಪ್ರದರ್ಶನ ಮಾಡಿದೆ. ಈ ವಿಶೇಷ ಬೈಕುಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಈ ಬೈಕ್ ಪ್ರದರ್ಶನ ಮಾಡಲು ಸಾಂಪ್ರದಾಯಿಕ ಬೈಕ್ ತಯಾರಕ ಕಂಪನಿಯು, ಭಾರತದಲ್ಲಿ ನೆಡೆಯುವ ಅತಿ ದೊಡ್ಡ ಬೈಕರ್ ಉತ್ಸವಗಳಲ್ಲಿ ಈ ಕಾರ್ಯಕ್ರಮ ಕೂಡ ಒಂದಾಗಿರುವ '2017ರ ರೈಡರ್ ಮೆನಿಯಾ' ಕಾರ್ಯಕ್ರಮವನ್ನು ಉಪಯೋಗಿಸಿಕೊಂಡಿರುವುದು ಮೆಚ್ಚುವ ಸಂಗತಿಯಾಗಿದೆ.

ಈ ಕಾರ್ಯಕ್ರಮದಲ್ಲಿ ಅನಾವರಣಗೊಂಡ ಎರಡೂ ಮೋಟಾರ್ ಸೈಕಲ್‌ಗಳೂ ಕೂಡ ಕ್ರೋಮ್ ಬಣ್ಣದ ಯೋಜನೆಗಳನ್ನು ಹೊಂದಿದ್ದು, ರೆಟ್ರೊ ಕ್ಲಾಸಿಕ್ ಯುಗದ ಬೈಕುಗಳನ್ನು ನೆನಪಿಸುತ್ತವೆ.

ಕೈಗೆಟುಕುವ ಬೆಲೆಯಲ್ಲಿ ಮಧ್ಯಮ ಗಾತ್ರದ ಎಂಜಿನ್ ಹೊಂದಿರುವ ಮೋಟಾರ್‌ಸೈಕಲ್ ಬಿಡುಗಡೆಗೊಳಿಸುವ ಮುಖ್ಯ ಕಲ್ಪನೆಯನ್ನು ಕಂಪನಿ ಹೊಂದಿದ್ದು, ಸಾಮಾನ್ಯ ಜನರೂ ಸಹ ಈ ಬೈಕಿನ ಕಡೆ ಕಣ್ಣು ಆಡಿಸಬಹುದು.

'2017ರ ರೈಡರ್ ಮೆನಿಯಾ' ಕಾರ್ಯಕ್ರಮದಲ್ಲಿ ಸಂಸ್ಥೆಯ ಎರಡು ಎರಡು ದ್ವಿಚಕ್ರ ವಾಹನಗಳನ್ನು ಅನಾವರಣಗೊಳಿಸಿ ಮಾತನಾಡಿದ ರಾಯಲ್ ಎನ್‌ಫೀಲ್ಡ್ ಸಿಇಒ ಸಿಡ್ ಲಾಲ್ ಅವರು "ಜಗತ್ತಿನಾದ್ಯಂತ ಇರುವಂತಹ ಹೊರಸೂಸುವಿಕೆಯ ಮಾನದಂಡಗಳ ಗುಣಮಟ್ಟ ಮತ್ತು ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಬೈಕುಗಳನ್ನು ಅಭಿವೃದ್ಧಿಪಡಿಸಲಾಗಿದೆ" ಎಂದರು.

ರಾಯಲ್ ಎನ್‌ಫೀಲ್ಡ್ ಎರಡು ವಾಹನಗಳು ಹೊಸದಾಗಿ ಅನಾವರಣಗೊಳಿಸಿದ 650 ಸಿಸಿ ಪ್ಯಾರಲಲ್ ಏರ್/ ಆಯಿಲ್ ಎಂಜಿನ್ ಆಯ್ಕೆ ಪಡೆಯಲಿವೆ. ಈ ಎಂಜಿನ್, 46.3 ಬಿಎಚ್‌ಪಿ ಮತ್ತು 52 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ ಹಾಗು 6-ಸ್ಪೀಡ್ ಗೇರ್‌ಬಾಕ್ಸ್ ಸಂಯೋಜಿತವಾಗಿದೆ.

ಈ ವಾಹನಗಳ ಬಿಡುಗಡೆಗೆ ಸಂಬಂಧಿಸಿದಂತೆ, ಮೊದಲು ಯುರೋಪಿಯನ್ ಮಾರುಕಟ್ಟೆಯಲ್ಲಿ ಈ ದ್ವಿಚರ ವಾಹನಗಳನ್ನು ನೋಡಬಹುದಾಗಿದ್ದು, ನಂತರದ ದಿನಗಳಲ್ಲಿ ಭಾರತಕ್ಕೆ ಪ್ರವೇಶಿಸಲಿದೆ.

ರಾಯಲ್ ಎನ್‌ಫೀಲ್ಡ್ ಕಾಮಪಿಣಿಯ ಎರಡು ಅವಳಿ ವಾಹನಗಳು ಭರವಸೆ ಹುಟ್ಟಿಸಿದ್ದು, ಒಟ್ಟಾರೆಯಾಗಿ ಕಂಪೆನಿಗೆ ಭವಿಷ್ಯದಲ್ಲಿ ಒಂದು ಹಂತವನ್ನು ತಲುಪಲು ಹೆಚ್ಚು ಸಹಾಯ ಮಾಡಲಿದೆಯೇ ಕಾದು ನೋಡ ಬೇಕಾಗಿದೆ.


Click it and Unblock the Notifications