ಯುಎಸ್‌ಎ ಮಾರುಕಟ್ಟೆಯಲ್ಲೂ ಕಮಾಲ್ ಮಾಡಲಿದೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್

Written By:

ಭಾರತೀಯ ಮಾರುಕಟ್ಟೆಯಲ್ಲಿ ಆಪ್ ರೋಡಿಂಗ್ ವೈಶಿಷ್ಟ್ಯತೆಗಳ ಮೂಲಕ ಸೂಪರ್ ಬೈಕ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಹಿಮಾಲಯನ್ ಆವೃತ್ತಿಯು ವಿದೇಶಿ ಮಾರುಕಟ್ಟೆಯಲ್ಲೂ ಭಾರೀ ಬೇಡಿಕೆ ಹೊಂದಿದ್ದು, ಈ ಹಿನ್ನೆಲೆ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹಿಮಾಲಯನ್ ಆವೃತ್ತಿಯನ್ನು ಯುಎಸ್ಎ ಮಾರುಕಟ್ಟೆಗೂ ಪರಿಚಯಿಸುತ್ತಿದೆ.

ಯುಎಸ್‌ಎ ಮಾರುಕಟ್ಟೆಯಲ್ಲೂ ಕಮಾಲ್ ಮಾಡಲಿದೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ದೇಶಿಯ ಮಾರುಕಟ್ಟೆಯಲ್ಲಿ ಉತ್ಪಾದನೆಯಾದ ಹಿಮಾಯನ್ ಮಾದರಿಗಳನ್ನೇ ಯುಎಸ್ಎ ಮಾರುಕಟ್ಟೆಗೂ ರಫ್ತು ಮಾಡುವ ಉದ್ದೇಶ ಹೊಂದಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಈಗಾಗಲೇ ಬಿಡುಗಡೆ ಕೈಗೊಳ್ಳುವ ನಿಟ್ಟಿನಲ್ಲಿ ಅಗತ್ಯ ತಯಾರಿ ನಡೆಸಿದೆ.

ಯುಎಸ್‌ಎ ಮಾರುಕಟ್ಟೆಯಲ್ಲೂ ಕಮಾಲ್ ಮಾಡಲಿದೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಯುಎಸ್ಎ ಮಾರುಕಟ್ಟೆಯಲ್ಲಿ ಸೂಪರ್ ಬೈಕ್ ಮಾದರಿಗಳಿಗೆ ಭಾರೀ ಬೇಡಿಕೆ ಇದ್ದು, ಈ ಹಿನ್ನೆಲೆ ಹಿಮಾಲಯನ್ ಆವೃತ್ತಿಯನ್ನೇ ಮತ್ತಷ್ಟು ಹೊಸ ರೂಪದೊಂದಿಗೆ ಸಿದ್ಧಗೊಳಿಸಲು ರಾಯಲ್ ಎನ್‌‌ಫೀಲ್ಡ್ ನಿರ್ಧರಿಸಿದೆ.

ಯುಎಸ್‌ಎ ಮಾರುಕಟ್ಟೆಯಲ್ಲೂ ಕಮಾಲ್ ಮಾಡಲಿದೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಈಗಾಗಲೇ ಯುಎಸ್ಎಯಲ್ಲಿ ಹಿಮಾಲಯನ್ ಆವೃತ್ತಿಗಳಿಂದ ಒಂದು ಸುತ್ತಿನ ಪರೀಕ್ಷಾರ್ಥ ಚಾಲನೆ ಕೈಗೊಳ್ಳಲಾಗಿದ್ದು, ಅತ್ಯುತ್ತಮ ಆಪ್ ರೋಡಿಂಗ್ ಪ್ರದರ್ಶನ ಹಿನ್ನೆಲೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಯುಎಸ್‌ಎ ಮಾರುಕಟ್ಟೆಯಲ್ಲೂ ಕಮಾಲ್ ಮಾಡಲಿದೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಆದರೂ ಅಮೆರಿಕನ್ ಮಾರುಕಟ್ಟೆಯಲ್ಲಿನ ಇತರೆ ಬೈಕ್ ಮಾದರಿಗಳಿಗೆ ಹೊಲಿಕೆ ಮಾಡಿದಲ್ಲಿ ಹಿಮಾಲಯನ್ ಆವೃತ್ತಿಯಲ್ಲಿ ಸಾಕಷ್ಟು ಸುಧಾರಣೆ ಅವಶ್ಯಕತೆಯಿದ್ದು, ಎಬಿಎಸ್ ಸೇರಿದಂತೆ ಕೆಲವು ಕಡ್ಡಾಯ ಸುರಕ್ಷಾ ತಂತ್ರಜ್ಞಾನಗಳ ಅಳವಡಿಕೆ ಮಾಡಬೇಕಿರುವುದು ಅನಿವಾರ್ಯತೆಯಿದೆ.

ಯುಎಸ್‌ಎ ಮಾರುಕಟ್ಟೆಯಲ್ಲೂ ಕಮಾಲ್ ಮಾಡಲಿದೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಈ ಹಿನ್ನೆಲೆ ಯುಎಸ್ಎ ಮಾರುಕಟ್ಟೆಯಲ್ಲಿನ ಸೂಪರ್ ಬೈಕ್ ಮಾದರಿಗಳ ಅವಶ್ಯಕ ತಂತ್ರಜ್ಞಾನಗಳನ್ನು ಅಳವಡಿಸಲು ತುರ್ತು ಕ್ರಮ ಕೈಗೊಂಡಿರುವ ರಾಯಲ್ ಎನ್‌ಫೀಲ್ಡ್, ಅಕ್ಟೋಬರ್ ಅಥವಾ ನವೆಂಬರ್‌ನಿಂದ ಬೇಡಿಕೆಗೆ ಅನುಗುಣವಾಗಿ ಹೊಸ ಬೈಕ್ ಮಾದರಿಗಳನ್ನು ರಫ್ತು ಕೈಗೊಳ್ಳಲಿದೆ.

ಯುಎಸ್‌ಎ ಮಾರುಕಟ್ಟೆಯಲ್ಲೂ ಕಮಾಲ್ ಮಾಡಲಿದೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

411 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ ಅತ್ಯುತ್ತಮ ಬಿಎಚ್‌ಪಿ ಉತ್ಪಾದನಾ ಶಕ್ತಿ ಹೊಂದಿರುವ ಹಿಮಾಲಯನ್, ಇದೀಗ ವಿದೇಶಿ ಮಾರುಕಟ್ಟೆಗಳಲ್ಲೂ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆ ಬೃಹತ್ ಯೋಜನೆ ರೂಪಿಸಿರುವ ರಾಯಲ್ ಎನ್‌ಫೀಲ್ಡ್ ಅಮೆರಿಕದಲ್ಲಿ ವಾರ್ಷಿಕವಾಗಿ 5 ಸಾವಿರ ಬೈಕ್‌ಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಿದೆ.

English summary
Read in Kannada about Royal Enfield To Introduce Himalayan In The US Market.
Story first published: Tuesday, September 19, 2017, 18:35 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark