ಹೊಚ್ಚ ಹೊಸ ಬಣ್ಣ ಪಡೆದ ಕ್ಲಾಸಿಕ್ ಬೈಕುಗಳನ್ನು ಬಿಡುಗಡೆಗೊಳಿಸಿದ ರಾಯಲ್ ಎನ್‌ಫೀಲ್ಡ್

Written By:

ಉತ್ಸವದ ಋತುವಿನ ಮುಂಚಿತವಾಗಿ ರಾಯಲ್ ಎನ್‌ಫೀಲ್ಡ್ ತನ್ನ ಜನಪ್ರಿಯ ಕ್ಲಾಸಿಕ್ 350 ಮತ್ತು ಕ್ಲಾಸಿಕ್ 500 ಮೋಟಾರ್ ಸೈಕಲ್‌ಗಳ ಎರಡು ಹೊಸ ರೂಪಾಂತರಗಳನ್ನು ಭಾರತದಲ್ಲಿ ಪರಿಚಯಿಸಿದೆ.

To Follow DriveSpark On Facebook, Click The Like Button
ಹೊಚ್ಚ ಹೊಸ ಬಣ್ಣ ಪಡೆದ ಕ್ಲಾಸಿಕ್ ಬೈಕುಗಳನ್ನು ಬಿಡುಗಡೆಗೊಳಿಸಿದ ರಾಯಲ್ ಎನ್‌ಫೀಲ್ಡ್

ಈ ಎರಡು ಹೊಸ ರೂಪಾಂತರಗಳು ಹೊಸ ಗ್ರಾಹಕರನ್ನು ಆಕರ್ಷಿಸಲು ಹೊಸ ಬಣ್ಣ ಮತ್ತು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಕ್ಲಾಸಿಕ್ 350 ಮೋಟಾರ್ ಸೈಕಲ್‌ ಹೊಸ ಗನ್‌ಮೆಟಲ್ ಗ್ರೇ ಬಣ್ಣವನ್ನು ಪಡೆದರೆ, ಕ್ಲಾಸಿಕ್ 500 ಬೈಕ್ ಹೊಸ ಸ್ಟೆಲ್ತ್ ಬ್ಲಾಕ್ ಬಣ್ಣವನ್ನು ಪಡೆದುಕೊಂಡಿದೆ.

Recommended Video - Watch Now!
2017 Skoda Octavia RS Launched In India | In Kannada - DriveSpark ಕನ್ನಡ
ಹೊಚ್ಚ ಹೊಸ ಬಣ್ಣ ಪಡೆದ ಕ್ಲಾಸಿಕ್ ಬೈಕುಗಳನ್ನು ಬಿಡುಗಡೆಗೊಳಿಸಿದ ರಾಯಲ್ ಎನ್‌ಫೀಲ್ಡ್

ಹೊಸ ಬಣ್ಣಗಳೆರಡೂ ಮ್ಯಾಟ್ ಫಿನಿಷ್ ಹೊಂದಿದ್ದು, ರಾಯಲ್ ಎನ್‌ಫೀಲ್ಡ್ ಈ ಹೊಸ ಬಿಡುಗಡೆಯೊಂದಿಗೆ ಭಾರತೀಯ ಮಾರುಕಟ್ಟೆಗೆ ತನ್ನ ಬೈಕುಗಳಲ್ಲಿ ಹಿಂಬದಿಯ ಡಿಸ್ಕ್ ಬ್ರೇಕನ್ನು ಪರಿಚಯಿಸಿದೆ.

ಹೊಚ್ಚ ಹೊಸ ಬಣ್ಣ ಪಡೆದ ಕ್ಲಾಸಿಕ್ ಬೈಕುಗಳನ್ನು ಬಿಡುಗಡೆಗೊಳಿಸಿದ ರಾಯಲ್ ಎನ್‌ಫೀಲ್ಡ್

ಗನ್‌ಮೆಟಲ್ ಗ್ರೇ ಬಣ್ಣ ಪಡೆದ ಕ್ಲಾಸಿಕ್ 350 ಮೋಟಾರ್ ಸೈಕಲ್‌ ರೂ.1,59,677 ಲಕ್ಷ ಬೆಲೆ ಹೊಂದಿದ್ದು, ಕ್ಲಾಸಿಕ್ 500 ಬೈಕ್ ಹೊಸ ಸ್ಟೆಲ್ತ್ ಬ್ಲಾಕ್ ಬಣ್ಣ ಪಡೆದ ಬೈಕ್ ರೂ.2,05,213 ಲಕ್ಷ ಬೆಲೆ ಹೊಂದಿರಲಿದೆ.

ಹೊಚ್ಚ ಹೊಸ ಬಣ್ಣ ಪಡೆದ ಕ್ಲಾಸಿಕ್ ಬೈಕುಗಳನ್ನು ಬಿಡುಗಡೆಗೊಳಿಸಿದ ರಾಯಲ್ ಎನ್‌ಫೀಲ್ಡ್

ಕ್ಲಾಸಿಕ್ 350 ಮೋಟಾರ್ ಸೈಕಲ್ ಸದ್ಯ ಅತ್ಯುತ್ತಮವಾಗಿ ಮಾರಾಟವಾಗುತ್ತಿರುವ ದ್ವಿಚಕ್ರ ಎಂಬ ಖ್ಯಾತಿಗೆ ಪಾತ್ರವಾಗಿದ್ದು, ಈ ಎನ್‌ಫೀಲ್ಡ್ ಬೈಕ್ 346 ಸಿಸಿ ಸಿಂಗಲ್ ಸಿಲಿಂಡರ್ ಇಂಜಿನ್ ಹೊಂದಿದೆ ಹಾಗು 19.8ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ.

ಹೊಚ್ಚ ಹೊಸ ಬಣ್ಣ ಪಡೆದ ಕ್ಲಾಸಿಕ್ ಬೈಕುಗಳನ್ನು ಬಿಡುಗಡೆಗೊಳಿಸಿದ ರಾಯಲ್ ಎನ್‌ಫೀಲ್ಡ್

ಕ್ಲಾಸಿಕ್ 500 ಬೈಕ್ 499ಸಿಸಿ ಸಿಂಗಲ್ ಸಿಲಿಂಡರ್ ಇಂಜಿನ್ ಪಡೆದುಕೊಂಡಿದ್ದು, ಈ ಮೋಟಾರ್ ಸೈಕಲ್ 41.3 ಎನ್‌ಎಂ ತಿರುಗುಬಲದಲ್ಲಿ ಗರಿಷ್ಠ 27.2 ರಷ್ಟು ಟಾರ್ಕ್ ಉತ್ಪಾದನೆ ಮಾಡಲಿದೆ. ಇನ್ನು, ಈ ಎರಡೂ ಬೈಕುಗಳು 5-ಸ್ಪೀಡ್ ಗೇರ್ ಬಾಕ್ಸ್ ಟ್ರಾನ್ಸ್ಮಿಷನ್ ಆಯ್ಕೆ ಅಳವಡಿಕೆಗೊಂಡಿವೆ.

ಹೊಚ್ಚ ಹೊಸ ಬಣ್ಣ ಪಡೆದ ಕ್ಲಾಸಿಕ್ ಬೈಕುಗಳನ್ನು ಬಿಡುಗಡೆಗೊಳಿಸಿದ ರಾಯಲ್ ಎನ್‌ಫೀಲ್ಡ್

2018ರ ಎಪ್ರಿಲ್ ತಿಂಗಳಿನಿಂದ ಎಲ್ಲಾ ಮೋಟಾರ್ ಸೈಕಲ್‌ಗಳಲ್ಲಿ ಎಬಿಎಸ್ ವೈಶಿಷ್ಟ್ಯತೆಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸರ್ಕಾರ ತಿಳಿಸಿದ್ದರೂ ಸಹ ರಾಯಲ್ ಎನ್‌ಫೀಲ್ಡ್ ಸಂಸ್ಥೆ ಬಿಡುಗಡೆಗೊಳಿಸಿರುವ ಈ ಹೊಸ ಬೈಕುಗಳು ಎಬಿಎಸ್ ಅಳವಡಿಸಿಲ್ಲದೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ.

English summary
Just ahead of the festive season, Royal Enfield has introduced two new variants of its popular motorcycles Classic 350 and Classic 500. The two new variants will sport new colours and features to attract new customers. The Classic 350 gets a new Gunmetal Grey colour while the Classic 500 gets a new Stealth Black colour.
Story first published: Thursday, September 7, 2017, 18:37 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark