ಜಿಎಸ್‌ಟಿ ಎಫೆಕ್ಟ್- ಜೂನ್ ತಿಂಗಳಲ್ಲಿ ಬೈಕ್ ಮಾರಾಟ ಇಳಿಮುಖ

ಜಿಎಸ್‌ಟಿ ಜಾರಿಗೂ ಮುನ್ನ ದ್ವಿಚಕ್ರ ವಾಹನಗಳ ಮೇಲಿನ ತೆರಿಗೆ ಕಡಿತಗೊಳ್ಳುವ ನೀರಿಕ್ಷೆಯಿಂದಾಗಿ ಖರೀದಿ ಪ್ರಕ್ರಿಯೆ ಮೇಲೆ ಪರಿಣಾಮ ಬೀರಿದ್ದು, ಗ್ರಾಹಕರ ನೀರಿಕ್ಷೆಯಂತೆ 350 ಸಿಸಿಗಿಂತ ಕೆಳಮಟ್ಟದ ಬೈಕ್ ಮಾದರಿಗಳ ಬೆಲೆಗಳಲ್ಲಿ ಕಡಿತಗೊಂಡಿದೆ.

By Praveen

ಜಿಎಸ್‌ಟಿ ಜಾರಿಗೂ ಮುನ್ನ ದ್ವಿಚಕ್ರ ವಾಹನಗಳ ಮೇಲಿನ ತೆರಿಗೆ ಕಡಿತಗೊಳ್ಳುವ ನೀರಿಕ್ಷೆಯಿಂದಾಗಿ ಖರೀದಿ ಪ್ರಕ್ರಿಯೆ ಮೇಲೆ ಪರಿಣಾಮ ಬೀರಿದ್ದು, ಗ್ರಾಹಕರ ನೀರಿಕ್ಷೆಯಂತೆ 350 ಸಿಸಿಗಿಂತ ಕೆಳಮಟ್ಟದ ಬೈಕ್ ಮಾದರಿಗಳ ಬೆಲೆಗಳಲ್ಲಿ ಕಡಿತಗೊಂಡಿದೆ.

ಆದರೂ ಜೂನ್ ತಿಂಗಳ ಅವಧಿಯಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಪ್ರಕ್ರಿಯೆ ನಿರಾಶದಾಯಕವಾಗಿದ್ದು, ಪ್ರಮುಖ ಸಂಸ್ಥೆಗಳ ಕೆಲವು ದ್ವಿಚಕ್ರಗಳ ಮಾರಾಟದಲ್ಲಿ ಹಿನ್ನಡೆ ಅನುಭವಿಸಿವೆ. ಯಾವ ಸಂಸ್ಥೆಗಳು ಎಷ್ಟು ಪ್ರಮಾಣದಲ್ಲಿ ಬೈಕ್ ಮಾರಾಟ ಮಾಡಿವೆ ಎಂಬ ಮಾಹಿತಿ ಇಲ್ಲಿದೆ.

ಜಿಎಸ್‌ಟಿ ಎಫೆಕ್ಟ್- ಜೂನ್ ತಿಂಗಳಲ್ಲಿ ಬೈಕ್ ಮಾರಾಟ ಇಳಿಮುಖ

ಹೀರೊ ಸ್ಲ್ಪೆಂಡರ್

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೊಸ ತಂತ್ರ ರೂಪಿಸಿರುವ ಹೀರೋ ಮೋಟಾರ್ ಕಾರ್ಪ್ ಸಂಸ್ಥೆಯು, ಜೂನ್ ಅವಧಿಯಲ್ಲಿ 2,19,103 ಸ್ಲ್ಪೆಂಡರ್ ಯುನಿಟ್‌ಗಳನ್ನು ಮಾರಾಟ ಮಾಡಿ ಪ್ರಥಮ ಸ್ಥಾನದಲ್ಲಿ ಮುನ್ನಡೆ ಕಾಯ್ದು ಕೊಂಡಿದೆ.

ಜಿಎಸ್‌ಟಿ ಎಫೆಕ್ಟ್- ಜೂನ್ ತಿಂಗಳಲ್ಲಿ ಬೈಕ್ ಮಾರಾಟ ಇಳಿಮುಖ

ಹೀರೊ ಹೆಚ್‌ಎಫ್ ಡಿಲಕ್ಸ್

ದ್ವಿಚಕ್ರ ವಾಹನ ಮಾರಾಟದಲ್ಲಿ ಈ ವರ್ಷ ಅತ್ಯತ್ತಮ ದಾಖಲೆ ನಿರ್ಮಿಸಿರುವ ಹಿರೋ ಸಂಸ್ಥೆಯು, ಜೂನ್ ಅವಧಿಯಲ್ಲಿ 1,54,655 ಹೆಚ್‌ಎಫ್ ಡಿಲಕ್ಸ್ ಬೈಕ್ ಆವೃತ್ತಿಗಳನ್ನು ಮಾರಾಟ ಮಾಡಿದೆ.

ಜಿಎಸ್‌ಟಿ ಎಫೆಕ್ಟ್- ಜೂನ್ ತಿಂಗಳಲ್ಲಿ ಬೈಕ್ ಮಾರಾಟ ಇಳಿಮುಖ

ಹೀರೊ ಗ್ಲ್ಯಾಮರ್

ಮಧ್ಯಮ ವರ್ಗಗಳನ್ನು ಸೆಳೆಯಲು ಯಶಸ್ವಿಯಾಗಿರುವ ಹೀರೊ ಮೋಟಾರ್ ಕಾರ್ಪ್ ಸಂಸ್ಥೆಯು ತನ್ನ ಗ್ಲ್ಯಾಮರ್ ಬೈಕ್ ಆವೃತ್ತಿಯನ್ನು ಹೆಚ್ಚು ನವೀಕರಿಸಿದ್ದು, ಮಾರಾಟ ವಿಭಾಗದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದೆ. ಇದೇ ಕಾರಣಕ್ಕೆ ಜೂನ್ ಅವಧಿಯಲ್ಲಿ 78,889 ಯುನಿಟ್‌ಗಳನ್ನು ಮಾರಾಟಗೊಳಿಸಲು ಶಕ್ತವಾಗಿದೆ.

ಜಿಎಸ್‌ಟಿ ಎಫೆಕ್ಟ್- ಜೂನ್ ತಿಂಗಳಲ್ಲಿ ಬೈಕ್ ಮಾರಾಟ ಇಳಿಮುಖ

ಹೀರೊ ಫ್ಯಾಶನ್

ದ್ಪಿಚಕ್ರ ವಾಹನಗಳ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿರುವ ಹೀರೊಫ್ಯಾಶನ್ ಬೈಕ್ ಆವೃತ್ತಿಯು, ಜೂನ್ ಅವಧಿಯಲ್ಲಿ 76,605 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಜಿಎಸ್‌ಟಿ ಎಫೆಕ್ಟ್- ಜೂನ್ ತಿಂಗಳಲ್ಲಿ ಬೈಕ್ ಮಾರಾಟ ಇಳಿಮುಖ

ಹೋಂಡಾ ಸಿಬಿ ಶೈನ್

ಬೈಕ್ ಪ್ರಿಯರನ್ನು ಸೆಳೆಯಲು ಶಕ್ತವಾಗಿರುವ ಹೋಂಡಾ ಸಂಸ್ಥೆಯು ತನ್ನ ಸಿಬಿ ಶೈನ್ ಬೈಕ್ ಆವೃತ್ತಿ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, ಜೂನ್ ಅವಧಿಯಲ್ಲಿ 69,108 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಜಿಎಸ್‌ಟಿ ಎಫೆಕ್ಟ್- ಜೂನ್ ತಿಂಗಳಲ್ಲಿ ಬೈಕ್ ಮಾರಾಟ ಇಳಿಮುಖ

ರಾಯಲ್ ಎನ್‌ಫೀಲ್ಡ್

ಕ್ಲಾಸಿಕ್ 350 ಮಾರಾಟದಲ್ಲಿ ಹೊಸ ಭರವಸೆ ಕಂಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು, ಜೂನ್ ಅವಧಿಯಲ್ಲಿ 42,149 ಬೈಕ್‌ಗಳನ್ನು ಮಾರಾಟ ಮಾಡಿದೆ.

ಜಿಎಸ್‌ಟಿ ಎಫೆಕ್ಟ್- ಜೂನ್ ತಿಂಗಳಲ್ಲಿ ಬೈಕ್ ಮಾರಾಟ ಇಳಿಮುಖ

ಬಜಾಜ್ ಪಲ್ಸರ್

ಭಾರತೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಾಟಗೊಳ್ಳುತ್ತಿರುವ ದ್ವಿಚಕ್ರಗಳ ವಿಭಾಗದಲ್ಲಿ ಬಜಾಜ್ ಪಲ್ಸರ್ ಕೂಡಾ ಒಂದು. ಆದ್ರೆ ಜೂನ್ ತಿಂಗಳಲ್ಲಿ 37,503 ಬೈಕ್‌ಗಳು ಮಾತ್ರ ಮಾರಾಟಗೊಂಡಿವೆ.

ಜಿಎಸ್‌ಟಿ ಎಫೆಕ್ಟ್- ಜೂನ್ ತಿಂಗಳಲ್ಲಿ ಬೈಕ್ ಮಾರಾಟ ಇಳಿಮುಖ

ಟಿವಿಎಸ್ ಅಪಾಚಿ

ದೇಶದ 2ನೇ ಅತಿದೊಡ್ಡ ವಾಹನ ತಯಾರಿಕಾ ಸಂಸ್ಥೆಯಾಗಿರುವ ಟಿವಿಎಸ್ ತನ್ನ ಜನಪ್ರಿಯ ಅಪಾಚಿ ಬೈಕ್ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ್ದು, ಜೂನ್‌ನಲ್ಲಿ 32,754 ಬೈಕ್‌ಗಳನ್ನು ಮಾರಾಟ ಮಾಡಿದೆ.

ಜಿಎಸ್‌ಟಿ ಎಫೆಕ್ಟ್- ಜೂನ್ ತಿಂಗಳಲ್ಲಿ ಬೈಕ್ ಮಾರಾಟ ಇಳಿಮುಖ

ಬಜಾಜ್ ಸಿಟಿ 100

ಮೈಲೇಜ್ ವಿಚಾರವಾಗಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಬಜಾಜ್ ಸಂಸ್ಥೆಯು, ತನ್ನ ಹೊಸ ಬೈಕ್ ಆವೃತ್ತಿ ಸಿಟಿ 100 ಮಾರಾಟದಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದರು ಜೂನ್ ಅವಧಿಯಲ್ಲಿ ಕೇವಲ 24,776 ಬೈಕ್‌ಗಳನ್ನು ಮಾರಾಟ ಮಾಡಲು ಶಕ್ತವಾಗಿದೆ.

ಜಿಎಸ್‌ಟಿ ಎಫೆಕ್ಟ್- ಜೂನ್ ತಿಂಗಳಲ್ಲಿ ಬೈಕ್ ಮಾರಾಟ ಇಳಿಮುಖ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಜುಲೈ 1ರಿಂದ ಜಿಎಸ್‌ಟಿ ಜಾರಿಯಾಗಿದ್ದು, ಈ ಹಿನ್ನೆಲೆ ಬೈಕ್ ಮಾರಾಟ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ. ಇದರ ಜೊತೆ 350ಸಿಸಿ ಕೆಳಮಟ್ಟದ ಎಂಜಿನ್ ಸಾಮರ್ಥ್ಯದ ಬೈಕ್‌ಗಳ ಬೆಲೆಗಳ ಕಡಿಮೆಯಾಗಿರುವುದು ಮಾರಾಟ ಹೆಚ್ಚಳವಾಗುವ ನೀರಿಕ್ಷೆಯಿದೆ.

More from DriveSpark

Article Published On: Tuesday, July 25, 2017, 20:59 [IST]
English summary
Read in Kannada about Top 10 Selling Bikes In India In June 2017.
Read more on ಟಾಪ್ 10 top 10
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+