ಆಗಸ್ಟ್ 24ಕ್ಕೆ ಬಿಡುಗಡೆಯಾಗಲಿದೆ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್
ಐಷಾರಾಮಿ ಬೈಕ್ ಮಾದರಿಗಳಲ್ಲಿ ಒಂದಾಗಿರುವ ಟ್ರಯಂಫ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಆವೃತ್ತಿಯನ್ನು ಇದೇ ತಿಂಗಳು 24ಕ್ಕೆ ಬಿಡುಗಡೆ ಮಾಡುತ್ತಿದ್ದು, ಹೊಸ ಬೈಕ್ ಬಗೆಗಿನ ತಾಂತ್ರಿಕ ಮಾಹಿತಿ ಇಲ್ಲಿದೆ.
ಐಷಾರಾಮಿ ಬೈಕ್ ಮಾದರಿಗಳಲ್ಲಿ ಒಂದಾಗಿರುವ ಟ್ರಯಂಫ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಆವೃತ್ತಿಯನ್ನು ಇದೇ ತಿಂಗಳು 24ಕ್ಕೆ ಬಿಡುಗಡೆ ಮಾಡುತ್ತಿದ್ದು, ಹೊಸ ಬೈಕ್ ಬಗೆಗಿನ ತಾಂತ್ರಿಕ ಮಾಹಿತಿ ಇಲ್ಲಿದೆ.

ಮಾರ್ಡನ್ ಕ್ಲಾಸಿಕ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ಧಗೊಂಡಿರುವ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಆವೃತ್ತಿಯು ಇದೇ ತಿಂಗಳು 24ಕ್ಕೆ ಮಾರುಕಟ್ಟೆ ಪ್ರವೇಶ ಪಡೆಯಲಿದ್ದು, ಈ ಹಿಂದಿನ ಬೋನೆವಿಲ್ಲೇ ಮಾದರಿಯ ಎಂಜಿನ್ ಗುಣಗಳನ್ನು ಹೊಂದಿದೆ ಎನ್ನಲಾಗಿದೆ.

ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಸೈಡ್ ಮೌಂಟೆಡ್ ಎಕ್ಸಾಸ್ಟ್‌ಗಳು ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಖದರ್ ಅನ್ನು ಹೆಚ್ಚಿಸಿದ್ದು, ಹಿಂಬದಿ ಸವಾರನ ಸೀಟುಗಳನ್ನು ನಿಮ್ಮ ಅನುಕೂಲಕ್ಕೆ ಬದಲಾಯಿಸುವ ಅವಕಾಶ ನೀಡಲಾಗಿದೆ.

ಜೊತೆಗೆ ಅಲ್ಯುಮಿನಿಯಂ ರಾಕ್ ನೀಡಲಾಗಿದ್ದು, ಆಪ್ ರೋಡಿಂಗ್ ಪ್ರಿಯರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲವು ವಿಶೇಷ ಹೊರರಚನೆಗಳನ್ನು ನೀಡಲಾಗಿದೆ.

ಎಂಜಿನ್
900-ಸಿಸಿ ಪ್ಯಾರಾಲೆಲ್ ಟ್ವಿನ್ ಎಂಜಿನ್ ಪಡೆದುಕೊಂಡಿರುವ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್, 54-ಬಿಎಚ್‌ಪಿ ಮತ್ತು 80-ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಹೊಂದಿದೆ.

ರೈಡ್ ಬೈ ವೈರ್ ತಂತ್ರಜ್ಞಾನ ಪಡೆದುಕೊಂಡಿರುವ ಸ್ಟ್ರೀಟ್ ಸ್ಕ್ರ್ಯಾಂಬ್ಲರ್, ಹೆಚ್‌ಡಿ ಹೆಡ್‌ಲ್ಯಾಂಪ್, ಡಿಜಿಟಲ್ ಅನಲಾಗ್, ಎಬಿಎಸ್, 310ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು 255ಎಂಎಂ ರಿರ್ ಡಿಸ್ಕ್ ಬ್ರೇಕಿಂಗ್ ವ್ಯವಸ್ಥೆಯನ್ನು ಪಡೆದುಕೊಂಡಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಕ್ಲಾಸಿಕಲ್ ಮೋಟಾರ್ ಸ್ಪೋರ್ಟ್ ಮತ್ತು ಸಣ್ಣ ಪ್ರಮಾಣದ ಆಪ್ ರೋಡಿಂಗ್ ಕೌಶಲ್ಯ ಪ್ರದರ್ಶನಗಳಿಗಾಗಿ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಆವೃತ್ತಿಯನ್ನು ಟ್ರಯಂಫ್ ಸಂಸ್ಥೆ ಬಿಡುಗಡೆ ಮಾಡುತ್ತಿದ್ದು, ಬಿಡುಗಡೆ ನಂತರವಷ್ಟೇ ಬೆಲೆ ಮತ್ತು ಇನ್ನಿತರ ತಾಂತ್ರಿಕ ಅಂಶಗಳ ಮಾಹಿತಿಗಳ ಲಭ್ಯವಾಗಲಿವೆ.


Click it and Unblock the Notifications








