ಡಾರ್ಕ್ ನೈಟ್ ಎಡಿಷನ್ ಸ್ಕೂಟರ್ ಮತ್ತು ಬೈಕ್ ಬಿಡುಗಡೆ ಮಾಡಲಿದೆ ಯಮಹಾ

Written By:

ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡಾರ್ಕ್ ನೈಟ್ ಎಡಿಷನ್ ಸ್ಕೂಟರ್ ಮತ್ತು ಬೈಕ್ ಆವೃತ್ತಿಗಳನ್ನು ಯಮಹಾ ಬಿಡುಗಡೆ ಮಾಡುತ್ತಿದ್ದು, ಹೊಸದಾಗಿ ಪರಿಚಯಿಸಲಾಗುತ್ತಿರುವ ಸ್ಕೂಟರ್ ಮತ್ತು ಬೈಕ್‌ಗಳ ಮಾಹಿತಿ ಇಲ್ಲಿದೆ.

ಡಾರ್ಕ್ ನೈಟ್ ಎಡಿಷನ್ ಸ್ಕೂಟರ್ ಮತ್ತು ಬೈಕ್ ಬಿಡುಗಡೆ ಮಾಡಲಿದೆ ಯಮಹಾ

ಯಮಹಾ ಜನಪ್ರಿಯ ಬೈಕ್ ಮಾದರಿಯಾದ ಎಫ್‌ಝಡ್-ಎಸ್ ಎಫ್ಐ ಮತ್ತು ಸ್ಕೂಟರ್ ವಿಭಾಗದಲ್ಲಿ ಸಾಲ್ಯೂಟೊ ಆರ್‌ಎಕ್ಸ್ ಹಾಗೂ ಸಯಂಗ್ಸ್ ರೇ ಝಡ್ ಆರ್ ಡಿಸ್ಕ್ ಬ್ರೇಕ್ ಆವೃತ್ತಿಗಳನ್ನು ಬಿಡುಗಡೆಗೆ ಸಜ್ಜುಗೊಂಡಿದ್ದು, ಡಾರ್ಕ್ ನೈಟ್ ಬಣ್ಣದೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಡಾರ್ಕ್ ನೈಟ್ ಎಡಿಷನ್ ಸ್ಕೂಟರ್ ಮತ್ತು ಬೈಕ್ ಬಿಡುಗಡೆ ಮಾಡಲಿದೆ ಯಮಹಾ

ದೆಹಲಿ ಎಕ್ಸ್‌ಶೋರಂ ಪ್ರಕಾರ ಎಫ್‌ಝಡ್-ಎಸ್ ಎಫ್ಐ ಬೆಲೆಯು ರೂ.84,012 ಮತ್ತು ಸ್ಕೂಟರ್ ಮಾದರಿಗಳಾದ ಸಾಲ್ಯೂಟೊ ಆರ್‌ಎಕ್ಸ್ ಬೆಲೆಯು ರೂ. 48,721 ಹಾಗೂ ಸಯಂಗ್ಸ್ ರೇ ಝಡ್ ಆರ್ ಡಿಸ್ಕ್ ಬ್ರೇಕ್ ಆವೃತ್ತಿಯ ಬೆಲೆಯನ್ನು ರೂ.56,898ಕ್ಕೆ ನಿಗದಿಗೊಳಿಸಲಾಗಿದೆ.

Recommended Video - Watch Now!
Royal Enfield Himalayan Launch, Specs, Features - DriveSpark
ಡಾರ್ಕ್ ನೈಟ್ ಎಡಿಷನ್ ಸ್ಕೂಟರ್ ಮತ್ತು ಬೈಕ್ ಬಿಡುಗಡೆ ಮಾಡಲಿದೆ ಯಮಹಾ

ಯಮಹಾ ಬಿಡುಗಡೆ ಮಾಡುತ್ತಿರುವ ಹೊಸ ಬೈಕ್ ಮತ್ತು ಸ್ಕೂಟರ್‌ಗಳು ವಿಶೇಷ ಹೊರವಿನ್ಯಾಸವನ್ನು ಹೊಂದಿದ್ದು, ಮ್ಯಾಟೆ ಬ್ಲ್ಯಾಕ್ ಫಿನಿಶಿಂಗ್ ಪಡೆದುಕೊಂಡಿವೆ. ಹೀಗಾಗಿ ಯುವ ಜನತೆಯನ್ನು ಸೆಳೆಯಲು ಸಹಕಾರಿಯಾಗಲಿದ್ದು, ಉತ್ತಮ ಇಂಧನ ಕ್ಷಮತೆಯನ್ನು ಒದಗಿಸಲಾಗಿದೆ.

ಡಾರ್ಕ್ ನೈಟ್ ಎಡಿಷನ್ ಸ್ಕೂಟರ್ ಮತ್ತು ಬೈಕ್ ಬಿಡುಗಡೆ ಮಾಡಲಿದೆ ಯಮಹಾ

ಎಂಜಿನ್ ಸಾಮರ್ಥ್ಯ

ಎಫ್‌ಝಡ್-ಎಸ್ ಎಫ್ಐ ಆವೃತ್ತಿಯು 149 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‍‌ಬಾಕ್ಸ್ ಹಾಗೂ ಫ್ಯೂಲ್ ಇಂಜೆಕ್ಟೆಡ್ ಎಂಜಿನ್ ಮೂಲಕ 13-ಬಿಎಚ್‌ಪಿ ಮತ್ತು 12.8ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಶಕ್ತಿ ಹೊಂದಿದೆ.

ಡಾರ್ಕ್ ನೈಟ್ ಎಡಿಷನ್ ಸ್ಕೂಟರ್ ಮತ್ತು ಬೈಕ್ ಬಿಡುಗಡೆ ಮಾಡಲಿದೆ ಯಮಹಾ

ಹಾಗಿಯೇ ಸಾಲ್ಯೂಟೊ ಆರ್‌ಎಕ್ಸ್ ಮಾದರಿಯು 110 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 7.37-ಬಿಎಚ್‌ಪಿ ಮತ್ತು 8.5ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಸಾಮರ್ಥ್ಯ ಒದಗಿಸಲಾಗಿದೆ.

ಡಾರ್ಕ್ ನೈಟ್ ಎಡಿಷನ್ ಸ್ಕೂಟರ್ ಮತ್ತು ಬೈಕ್ ಬಿಡುಗಡೆ ಮಾಡಲಿದೆ ಯಮಹಾ

ಇನ್ನು ಸಯಂಗ್ಸ್ ರೇ ಝಡ್ ಆರ್ ಡಿಸ್ಕ್ ಬ್ರೇಕ್ ಆವೃತ್ತಿಯು 113 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, ವಿ ಬೆಲ್ಟ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 7.10-ಬಿಎಚ್‌ಪಿ ಮತ್ತು 8.1-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತವೆ.

ಡಾರ್ಕ್ ನೈಟ್ ಎಡಿಷನ್ ಸ್ಕೂಟರ್ ಮತ್ತು ಬೈಕ್ ಬಿಡುಗಡೆ ಮಾಡಲಿದೆ ಯಮಹಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಗ್ರಾಹಕರ ಬೇಡಿಕೆಯಂತೆ ಡಾರ್ಕ್ ನೈಟ್ ಎಡಿಷನ್‌ನಲ್ಲಿ ಹೊಸ ವಿನ್ಯಾಸದ ಸ್ಕೂಟರ್ ಮತ್ತು ಬೈಕ್ ಬಿಡುಗಡೆ ಮಾಡುತ್ತಿರುವ ಯಮಹಾ ಸಂಸ್ಥೆಯು ಮುಂಬರುವ ದೀಪಾವಳಿ ಅಥವಾ ದಸರಾ ಸಂಭ್ರಮಾಚರಣೆ ವೇಳೆ ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಸುಳಿವು ನೀಡಿದೆ.

Read more on ಯಮಹಾ yamaha
English summary
Read in Kannada about Yamaha Launches Dark Night Variants Of Its Motorcycles And Scooter.
Story first published: Friday, September 1, 2017, 11:53 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark