ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೇಜರ್ 250 ಬೈಕ್

Written By:

ಜಪಾನಿನ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಯಮಹಾ, ತನ್ನ ಫೇಜರ್ 250 ಬೈಕನ್ನು ಭಾರತೀಯ ರಸ್ತೆಗಳಲ್ಲಿ ಪರೀಕ್ಷೆ ನೆಡೆಸುತ್ತಿದ್ದು, ಹೊಸ ಚಿತ್ರಗಳನ್ನು ಅಂತರ್ಜಾಲದಲ್ಲಿ ಲಭ್ಯವಿದೆ.

To Follow DriveSpark On Facebook, Click The Like Button
ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೇಜರ್ 250 ಬೈಕ್

ಸಾಕಷ್ಟು ನಿರೀಕ್ಷೆ ಮೂಡಿಸಿರುವ ಯಮಹಾ ಸಂಸ್ಥೆಯ ಹೊಸ ಬೈಕ್ ಆವೃತ್ತಿ ಫೇಜರ್ 250 ಬಿಡುಗಡೆಗೆ ಸಜ್ಜುಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆಯಲ್ಲಿ ವಾಹನದ ಸ್ಪೈ ಚಿತ್ರಗಳು ವಾಟ್ಸಾಪ್, ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೇಜರ್ 250 ಬೈಕ್

ಹೊಸ ಚಿತ್ರಗಳನ್ನು ಫೇಜರ್ ಬೈಕಿನ ಕ್ವಾರ್ಟರ್ ಲೀಟರ್ ಅವತಾರವನ್ನು ಬಹಿರಂಗಪಡಿಸಿವೆ. ಫೇಜರ್ 250 ಬೈಕು ಹೆಚ್ಚು ವಿನ್ಯಾಸ ಪಡೆದುಕೊಂಡಿದ್ದು, ಯುವ ಜನತೆಗೆ ಹತ್ತಿರವಾಗಲಿದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೇಜರ್ 250 ಬೈಕ್

ಈಗಾಗಲೇ ಗ್ಲೋಬಲ್ ಮಾರ್ಕೆಟ್‌ನಲ್ಲಿ ಮಾರಾಟಗೊಳ್ಳುತ್ತಿರುವ ಫೇಜರ್ 1000 ಮತ್ತು ಫೇಜರ್ 650 ಆಧಾರವಾಗಿಟ್ಟುಕೊಂಡು ಈ ವಾಹನ ಅಭಿವೃದ್ಧಿ ಮಾಡಲಾಗಿದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೇಜರ್ 250 ಬೈಕ್

ಸುಂದರವಾಗಿರುವ ಈ ಬೈಕಿನ ಹೆಡ್‌ಲೈಟ್‌ನ ಎರಡೂ ಬದಿಯಲ್ಲಿ ಹೊಸ ಏರ್ ಇನ್‌ಟೇಕ್ ನೀಡಲಾಗಿದೆ ಮತ್ತು ಸ್ನಾಯುವಿನ ರೀತಿಯ ವಿನ್ಯಾಸ ಪಡೆದುಕೊಂಡಿದೆ. ಇದಲ್ಲದೆ, ಬೇರ್ಪಟ್ಟಿರುವಂತಹ ಸೀಟ್, ಟೈಲ್ ಲೈಟ್, ಟ್ಯೂಬ್ ಲೆಸ್ ಟೈರ್, ಎಲ್ಇಡಿ ದೀಪ ಗುಣಲಕ್ಷಣಗಳನ್ನು ಒಳಗೊಂಡಿದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೇಜರ್ 250 ಬೈಕ್

ದ್ವಿಚಕ್ರವಾಹನವು ಮ್ಯಾಟ್ ಕೆಂಪು ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ಕಪ್ಪು ಮತ್ತು ಚಿನ್ನದ ಬಿಟ್‌ಗಳನ್ನು ಪಡೆದುಕೊಂಡಿದೆ. ಸರಳವಾಗಿರುವ ಗ್ರಾಫಿಕ್ಸ್ ಜೊತೆ ಫೇಜರ್ 250 ಬಿಡುಗಡೆಯಾಗಲಿದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೇಜರ್ 250 ಬೈಕ್

ಫೇಜರ್ 250 ಅಸ್ತಿತ್ವದಲ್ಲಿರುವ 249 ಸಿಸಿ ಗಾಳಿಯಿಂದ ತಂಪಾಗುವ ಎಂಜಿನ್ ಹೊಂದಿದೆ ಹಾಗು 20.9 ಅಶ್ವಶಕ್ತಿ ಮತ್ತು 20 ಏನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 5 ಸ್ಪೀಡ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ.

Read more on ಯಮಹಾ yamaha
English summary
Japanese two-wheeler manufacturer Yamaha has been testing the Fazer 250 on the Indian roads for quite some time.
Story first published: Monday, July 31, 2017, 14:22 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark