ಹೊಸ ಮೈಲಿಗಳನ್ನು ತಲುಪಿದೆ ಯಮಹಾ ಚನ್ನೈ ಉತ್ಪಾದಕ ಘಟಕ

Written By:

ಯುವಕರ ನೆಚ್ಚಿನ ಬೈಕ್ ಉತ್ಪಾದಕ ಕಂಪೆನಿಯಾದ ಯಮಹಾ ತನ್ನ ಚನ್ನೈ ಘಟಕದಲ್ಲಿ ಒಂದು ದಶಲಕ್ಷ ವಾಹನಗಳನ್ನು ಉತ್ಪಾದನೆ ಮಾಡುವ ಮೂಲಕ ಹೊಸ ಮೈಲಿಗಲ್ಲನ್ನು ತಲುಪಿದೆ.

ಹೊಸ ಮೈಲಿಗಳನ್ನು ತಲುಪಿದೆ ಯಮಹಾ ಚನ್ನೈ ಉತ್ಪಾದಕ ಘಟಕ

ಯಮಹಾ ಫ್ಯಾಸಿನೊ ಚೆನ್ನೈ ಕಾರ್ಖಾನೆಯಿಂದ ಹೊರಬಂದ ಒಂದು ದಶಲಕ್ಷದ ಮಾದರಿಯಾಗಿದೆ. ಈ ಮೈಲಿಗಲ್ಲು ತಲುಪುವಲ್ಲಿ ಸ್ಕೂಟರ್ ಮತ್ತು ಮೋಟಾರ್ ಸೈಕಲ್ ಮಾದರಿಗಳಾದ ರೇ ಝಡ್, ರೇ ಝಡ್ಆರ್, ಆಲ್ಫಾ, ಸಾಲುಟೋ ಮತ್ತು ಸಾಲುಟೊ ಆರ್‌ಎಕ್ಸ್ ದ್ವಿಚಕ್ರ ವಾಹನಗಳು ಹೆಚ್ಚಿನ ಕೊಡುಗೆ ನೀಡಿವೆ ಎನ್ನಬಹುದು.

ಹೊಸ ಮೈಲಿಗಳನ್ನು ತಲುಪಿದೆ ಯಮಹಾ ಚನ್ನೈ ಉತ್ಪಾದಕ ಘಟಕ

2015ರಲ್ಲಿ ಚನ್ನೈನಲ್ಲಿರುವ ಉತ್ಪಾದಕ ಘಟಕದಲ್ಲಿ 4.5 ಲಕ್ಷ ಆರಂಭಿಕ ಸಾಮರ್ಥ್ಯದೊಂದಿಗೆ ಕಾರ್ಯಾಚರಣೆಯನ್ನು ದ್ವಿಚಕ್ರ ವಾಹನ ತಯಾರಕ ಕಂಪೆನಿಯಾದ ಯಮಹಾ ಪ್ರಾರಂಭಿಸಿದ್ದನ್ನು ನಾವು ಸ್ಮರಿಸಬಹುದಾಗಿದೆ.

ಹೊಸ ಮೈಲಿಗಳನ್ನು ತಲುಪಿದೆ ಯಮಹಾ ಚನ್ನೈ ಉತ್ಪಾದಕ ಘಟಕ

ಕೇವಲ ಎರಡೇ ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಂಡ ಯಮಹಾ ಚೆನ್ನೈ ಘಟಕ ಇಂದು ವರ್ಷಕ್ಕೆ 6 ಲಕ್ಷ ವಾಹನಗಳನ್ನು ಉತ್ಪಾದಿಸುತ್ತಿದ್ದು, 2019ರ ಹೊತ್ತಿಗೆ 9 ಲಕ್ಷ ಯೂನಿಟ್ ತಲುಪಲಿದೆ ಎಂದು ಅಂದಾಜಿಸಲಾಗಿದೆ.

ಹೊಸ ಮೈಲಿಗಳನ್ನು ತಲುಪಿದೆ ಯಮಹಾ ಚನ್ನೈ ಉತ್ಪಾದಕ ಘಟಕ

1 ದಶಲಕ್ಷ ವಾಹನಗಳಲ್ಲಿ, ಚೆನ್ನೈ ಕಾರ್ಖಾನೆ ಇಂದ ದೇಶೀಯ ಮಾರುಕಟ್ಟೆಗೆ 8.5 ಲಕ್ಷ ವಾಹನಗಳನ್ನು ಬಿಡುಗಡೆಗೊಳಿಸಿದ್ದು, ಇನ್ನುಳಿದಂತೆ 1.5 ಲಕ್ಷ ದ್ವಿಚಕ್ರಗಳನ್ನು ವಿದೇಶಿ ಮಾರುಕಟ್ಟೆಗೆ ರಫ್ತು ಮಾಡಿದೆ.

ಹೊಸ ಮೈಲಿಗಳನ್ನು ತಲುಪಿದೆ ಯಮಹಾ ಚನ್ನೈ ಉತ್ಪಾದಕ ಘಟಕ

ಯಮಹಾ ಕಂಪನಿಯು ಚೆನ್ನೈ ಕಾರ್ಖಾನೆಯಲ್ಲಿ ರೂ.1300 ಕೋಟಿಗಳನ್ನು ಹೂಡಿಕೆ ಮಾಡಿದೆ ಮತ್ತು 2018ರ ಹೊತ್ತಿಗೆ ಮತ್ತೆ 200 ಕೋಟಿ ರೂಪಾಯಿಗಳನ್ನು ಹೂಡಲು ಯೋಜನೆ ರೂಪಿಸಿದೆ ಹಾಗು ಸಮೀಪವೇ "ವೆಂಡರ್ ಪಾರ್ಕ್" ಹೊಂದಿರುವ ಮೊದಲ ಯಮಹಾ ಘಟಕ ಎಂಬ ಖ್ಯಾತಿಗೆ ಚೆನ್ನೈ ಕಾರ್ಖಾನೆ ಪಾತ್ರವಾಗಿದೆ.

ಹೊಸ ಮೈಲಿಗಳನ್ನು ತಲುಪಿದೆ ಯಮಹಾ ಚನ್ನೈ ಉತ್ಪಾದಕ ಘಟಕ

ಈ ಕೊಡುಗೆಯಲ್ಲಿ ಯಮಾಹಾ ಕಂಪನಿಯ ಫ್ಯಾಸಿನೊ ದ್ವಿಚಕ್ರ ವಾಹನದ ಪಾಲು ಹೆಚ್ಚಿಗೆ ಇದ್ದು, ಇಲ್ಲಿಯವರೆಗೆ 3.7 ಲಕ್ಷ ಫ್ಯಾಸಿನೊ ವಾಹನಗಳು ಮಾರಾಟಗೊಂಡಿವೆ. ನಂತರದ ಸ್ಥಾನದಲ್ಲಿ ರೇ ಝಡ್ಆರ್ ಮತ್ತು ಎಫ್‌ಝೆಡ್ ವಾಹನಗಳ ಕೊಡುಗೆ ಹೆಚ್ಚಿನ ಮಟ್ಟದಲ್ಲಿದೆ.

ಹೊಸ ಮೈಲಿಗಳನ್ನು ತಲುಪಿದೆ ಯಮಹಾ ಚನ್ನೈ ಉತ್ಪಾದಕ ಘಟಕ

ಭಾರತೀಯ ಮಾರುಕಟ್ಟೆಯನ್ನು ಪೂರೈಸುವುದರ ಜೊತೆಗೆ, ಕಂಪನಿಯು ಪ್ರಧಾನವಾಗಿ ಆಫ್ರಿಕನ್ ಮಾರುಕಟ್ಟೆಗೆ ಮತ್ತು ASEAN ಮತ್ತು ಲ್ಯಾಟಿನ್ ಅಮೆರಿಕಾದ ಮಾರುಕಟ್ಟೆಗಳಿಗೆ ಉತ್ಪಾದನಾ ನೆಲೆಯಲ್ಲಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದೆ.

Read more on ಯಮಹಾ yamaha
English summary
Yamaha's Chennai plant reached a significant milestone of producing its one-millionth unit. The Yamaha Fascino was the 1 millionth model which rolled out from the Chennai factory.
Story first published: Saturday, September 23, 2017, 14:20 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark