2017 ಟೊಕಿಯೊ ಮೋಟಾರ್ ಶೋ- ತ್ರಿ ವ್ಹೀಲರ್ ಮೋಟಾರ್ ಸೈಕಲ್ ಅನಾವರಣಗೊಳಿಸಿದ ಯಮಹಾ

ತಂತ್ರಜ್ಞಾನ ಬೆಳೆದಂತೆಲ್ಲಾ ಆಟೋ ಉದ್ಯಮವು ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿದ್ದು, ಇದೀಗ ಪ್ರತಿಷ್ಠಿತ ಯಮಹಾ ಸಂಸ್ಥೆಯು ಹೊಸ ಪರಿಕಲ್ಪನೆಯ ಮೂರು ಚಕ್ರದ ವಿನೂತನ ಮೋಟಾರ್ ಸೈಕಲ್ ಮಾದರಿಯೊಂದನ್ನು ಟೊಕಿಯೊ ಮೋಟಾರ್ ಶೋನಲ್ಲಿ ಪ್ರದರ್ಶನಗೊಳಿಸಿದೆ.

By Praveen

ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ವಿವಿಧ ನಮೂನೆಯ ಬೈಕ್ ಮಾದರಿಗಳನ್ನು ಪರಿಚಯಿಸಲು ಹವಣಿಸುತ್ತಿರುವ ಪ್ರಮುಖ ಆಟೋ ಉತ್ಪಾದಕರು ಸುಧಾರಿತ ತಂತ್ರಜ್ಞಾನ ಪ್ರೇರಿತ ವಾಹನಗಳನ್ನು ಬಿಡುಗಡೆಗೊಳಿಸುತ್ತಿದ್ದು, ಯಮಹಾ ನಿರ್ಮಾಣ ಮಾಡಿರುವ ಮೂರು ಚಕ್ರದ ಮೋಟಾರ್ ಸೈಕಲ್ ಅತಿ ಹೆಚ್ಚು ಸದ್ದು ಮಾಡುತ್ತಿದೆ.

2017 ಟೊಕಿಯೊ ಮೋಟಾರ್ ಶೋ- ತ್ರಿ ವ್ಹೀಲರ್ ಮೋಟಾರ್ ಸೈಕಲ್ ಅನಾವರಣಗೊಳಿಸಿದ ಯಮಹಾ

ಯಮಹಾ ನಿರ್ಮಾಣ ಮಾಡಿರುವ ಮೂರು ಚಕ್ರದ ಮೋಟಾರ್ ಸೈಕಲ್‌ಗೆ 'ನಿಕೇನ್' ಎಂದು ನಾಮಕರಣ ಮಾಡಲಾಗಿದ್ದು, ಯಮಹಾ ನಿರ್ಮಾಣ ಮತ್ತೊಂದು ಬೈಕ್ ಮಾದರಿಯಾದ ಎಂಟಿ-09 ಬೈಕ್ ಮಾದರಿಯ ವಿನ್ಯಾಸವನ್ನು ಹೊಂದಿದೆ.

Recommended Video

[Kannada] Triumph Street Triple RS Launched In India - DriveSpark
2017 ಟೊಕಿಯೊ ಮೋಟಾರ್ ಶೋ- ತ್ರಿ ವ್ಹೀಲರ್ ಮೋಟಾರ್ ಸೈಕಲ್ ಅನಾವರಣಗೊಳಿಸಿದ ಯಮಹಾ

ಜೊತೆಗೆ ಮುಂಭಾಗದಲ್ಲಿ 15-ಇಂಚಿನ ಡ್ಯುಯಲ್ ಚಕ್ರಗಳನ್ನು ಹೊಂದಿದ್ದು, ಡ್ಯುಯಲ್ ಹೆಡ್‌ಲ್ಯಾಂಪ್, ಡ್ಯಯಲ್ ಬಂಪರ್ ಹಾಗೂ ಅಗಲವಾದ ಸೀಟುಗಳು ಹೊಸ ಮೋಟಾರ್ ಸೈಕಲ್‌ನ ಲುಕ್ ಅನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ.

2017 ಟೊಕಿಯೊ ಮೋಟಾರ್ ಶೋ- ತ್ರಿ ವ್ಹೀಲರ್ ಮೋಟಾರ್ ಸೈಕಲ್ ಅನಾವರಣಗೊಳಿಸಿದ ಯಮಹಾ

ಎಂಜಿನ್ ಸಾಮರ್ಥ್ಯ

ಯಮಹಾ ಸಂಸ್ಥೆಯು ಹೊಸ ಮೋಟಾರ್ ಸೈಕಲ್‌ನ ಎಂಜಿನ್ ಎಷ್ಟು ಸಿಸಿ ಪಡೆದುಕೊಂಡಿದೆ ಎಂಬುವುದನ್ನು ಅಧಿಕೃತ ಮಾಹಿತಿ ಹೊರಹಾಕಿಲ್ಲವಾದರೂ 650 ಸಿಸಿ ಇರಬಹುದೆಂದು ಅಂದಾಜಿಸಲಾಗಿದ್ದು, ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಡೆಡ್, ಇನ್‌ಲೈನ್ ತ್ರಿ-ಸಿಲಿಂಡರ್ ಎಂಜಿನ್ ಪಡೆದುಕೊಳ್ಳಲಿದೆ.

2017 ಟೊಕಿಯೊ ಮೋಟಾರ್ ಶೋ- ತ್ರಿ ವ್ಹೀಲರ್ ಮೋಟಾರ್ ಸೈಕಲ್ ಅನಾವರಣಗೊಳಿಸಿದ ಯಮಹಾ

ಇದಷ್ಟೆ ಅಲ್ಲದೇ ಹೊಸ ವಾಹನದಲ್ಲಿ ಮಲ್ಟಿ ವ್ಹೀಲ್ ಟೆಕ್ನಾಲಜಿ ಅನ್ನು ಬಳಕೆ ಮಾಡಲಾಗಿದ್ದು ಇದು ಮೋಟಾರ್ ಸೈಕಲ್ ಚಾಲನೆ ವೇಳೆ ಪ್ರದೇಶಗಳಿಗೆ ಅನುಗುಣವಾಗಿ ತಗ್ಗು ದಿಣ್ಣೆಗಳನ್ನು ದಾಟಲು ಅನುಕೂಲವಾಗಲಿವೆ ಎನ್ನಲಾಗಿದೆ. ಇದರಿಂದ ಸವಾರನು ತನ್ನ ಅನಕೂಲಕ್ಕೆ ತಕ್ಕಂತೆ ಪ್ರತಿ ಚಕ್ರವನ್ನು ಪ್ರತ್ಯೇಕವಾಗಿ ನಿಯಂತ್ರಣ ಮಾಡಬಹುದಾಗಿದೆ.

2017 ಟೊಕಿಯೊ ಮೋಟಾರ್ ಶೋ- ತ್ರಿ ವ್ಹೀಲರ್ ಮೋಟಾರ್ ಸೈಕಲ್ ಅನಾವರಣಗೊಳಿಸಿದ ಯಮಹಾ

ತ್ರಿ ಚಕ್ರದ ಮೋಟಾರ್ ಸೈಕಲ್‌ನಿಂದ ಉಪಯೋಗ

ಸಾಮಾನ್ಯವಾಗಿ ಇದು ಎಲ್ಲರಿಗೂ ಕಾಡುವ ಪ್ರಶ್ನೆ. ಯಾಕೇಂದ್ರೆ ಮೂರು ಚಕ್ರದ ಮೋಟಾರ್ ಸೈಕಲ್‌ನಿಂದ ಅಷ್ಟೇನು ಉಪಯೋಗವಿಲ್ಲವಾದರೂ ಆಪ್ ರೋಡ್ ಕಸರತ್ತು ಪ್ರದರ್ಶನಕ್ಕೆ ಹಾಗೂ ಗುಡ್ಡುಗಾಡು ಪ್ರದೇಶಗಳಲ್ಲಿ ಯಾವುದೇ ಅಡೆತಡೆಯಿಲ್ಲದೇ ಸವಾರಿ ಮಾಡಲು ಅನುಕೂಲಕರವಾಗಲಿವೆ.

2017 ಟೊಕಿಯೊ ಮೋಟಾರ್ ಶೋ- ತ್ರಿ ವ್ಹೀಲರ್ ಮೋಟಾರ್ ಸೈಕಲ್ ಅನಾವರಣಗೊಳಿಸಿದ ಯಮಹಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಆಟೋ ಉದ್ಯಮದಲ್ಲಿ ಹೊಸ ಹೊಸ ನಮೂನೆಯ ವಾಹನ ಮಾದರಿಗಳನ್ನು ಪರಿಚಯಿಸಲಾಗುತ್ತಿದ್ದು, ಸದ್ಯ ಯಮಹಾ ಸಂಸ್ಥೆಯು ಸಂಸ್ಥೆಯು ನಿರ್ಮಾಣ ಮಾಡಿರುವ ನೀಕೆನ್ ತ್ರಿ ವ್ಹೀಲರ್ ವಾಹನವು 2018ರ ಮೇ ಹೊತ್ತಿಗೆ ರಸ್ತೆಗಿಳಿಯುವ ನೀರಿಕ್ಷೆಯಲ್ಲಿವೆ.

Trending article in kannada drivespark

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

Article Published On: Thursday, October 26, 2017, 11:50 [IST]
English summary
Read in Kannada about Yamaha Reveals Niken Leaning Three Wheeler in 2017 Tokyo Motor Show.
Read more on yamaha ಯಮಹಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+