ಬಿಡುಗಡೆಗಾಗಿ ಡೀಲರ್ ಯಾರ್ಡ್ ತಲುಪಿದ ಯಮಹಾ ವೈಝಡ್ಎಫ್ ಆರ್ 15 ವಿ3

ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊತ್ತು ಬಿಡುಗಡೆಗೊಳ್ಳುತ್ತಿರುವ ಯಮಹಾ ವೈಝಡ್ಎಫ್ ಆರ್ 15 ವರ್ಷನ್ 3.0 ಬೈಕ್ ಸದ್ಯ ಡೀಲರ್ ಯಾರ್ಡ್‌ಗಳಿಗೆ ಲಗ್ಗೆಯಿಟ್ಟಿದ್ದು, ಕೆಲವೇ ದಿನಗಳಲ್ಲಿ ಮಾರಾಟಕ್ಕೆ ಲಭ್ಯವಾಗುವ ಸುಳಿವು ನೀಡಿವೆ.

By Praveen

ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಂಡು ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಯಮಹಾ ವೈಝಡ್ಎಫ್ ಆರ್ 15 ವಿ3 ಬೈಕ್ ಸದ್ಯ ಭಾರತದಲ್ಲೂ ಬಿಡುಗಡೆಯಾಗುತ್ತಿದ್ದು, ಹಲವು ವಿಶೇಷತೆಗಳಿಂದಾಗಿ ಸೂಪರ್ ಬೈಕ್ ಪ್ರಿಯರ ಗಮನಸೆಳೆಯುತ್ತಿದೆ.

ಬಿಡುಗಡೆಗಾಗಿ ಡೀಲರ್ ಯಾರ್ಡ್ ತಲುಪಿದ ಯಮಹಾ ವೈಝಡ್ಎಫ್ ಆರ್ 15 ವಿ3

ವರದಿಗಳ ಪ್ರಕಾರ 2018ರ ಜನವರಿ ಮೊದಲ ವಾರವೇ ಯಮಹಾ ವೈಝಡ್ಎಫ್ ಆರ್ 15 ವಿ3 ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದು, ವಿದೇಶಿಯಲ್ಲಿ ಮಾರಾಟಗೊಳ್ಳುತ್ತಿರುವ ವೈಝಡ್ಎಫ್ ಆರ್ 15 ವಿ3 ವೈಶಿಷ್ಟ್ಯತೆಗಳನ್ನೇ ಇಂಡಿಯಾ ಆವೃತ್ತಿಯಲ್ಲೂ ಮುಂದುವರಿಸಲಾಗಿದೆ.

Recommended Video

TVS Apache RR 310 Launched In India
ಬಿಡುಗಡೆಗಾಗಿ ಡೀಲರ್ ಯಾರ್ಡ್ ತಲುಪಿದ ಯಮಹಾ ವೈಝಡ್ಎಫ್ ಆರ್ 15 ವಿ3

ಹೀಗಾಗಿ ಅಂತರ್‌ರಾಷ್ಟ್ರೀಯ ಮಟ್ಟದ ಗುಣವಿಶೇಷಗಳನ್ನು ಹೊಂದಿರುವ ವೈಝಡ್ಎಫ್ ಆರ್ 15 ವಿ3 ಮಾದರಿಯು ಈ ಹಿಂದಿನ ವಿ2 ಮಾದರಿಯಲ್ಲೇ ಮುಂಭಾಗದ ವಿನ್ಯಾಸವನ್ನು ಪಡೆದುಕೊಂಡಿದೆ. ಜೊತೆಗೆ ಎಬಿಎಸ್, ಎಂಆರ್‌ಎಫ್ ಟೈರ್ ಸೇರಿದಂತೆ ಹಲವು ಸುಧಾರಿತ ಸುರಕ್ಷಾ ವಿಧಾನಗಳನ್ನು ಪಡೆದುಕೊಂಡಿದೆ.

ಬಿಡುಗಡೆಗಾಗಿ ಡೀಲರ್ ಯಾರ್ಡ್ ತಲುಪಿದ ಯಮಹಾ ವೈಝಡ್ಎಫ್ ಆರ್ 15 ವಿ3

ಎಂಜಿನ್ ಸಾಮರ್ಥ್ಯ

155ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೊತೆ ಫ್ಯೂಲ್ ಇಂಜೆಕ್ಷನ್ ಹೊಂದಿರುವ ವೈಝಡ್ಎಫ್ ಆರ್ 15 ವಿ3 ಮಾದರಿಯು 19.7-ಬಿಎಚ್‌ಪಿ ಮತ್ತು 14.7-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಬಿಡುಗಡೆಗಾಗಿ ಡೀಲರ್ ಯಾರ್ಡ್ ತಲುಪಿದ ಯಮಹಾ ವೈಝಡ್ಎಫ್ ಆರ್ 15 ವಿ3

ಇದಲ್ಲದೇ 6-ಸ್ಪೀಡ್ ಗೇರ್‌ಬಾಕ್ಸ್ ಸೇರಿದಂತೆ ಎಲ್ಇಡಿ ಹೆಡ್‌ಲ್ಯಾಂಪ್, ಸ್ಲಿಪರ್ ಕ್ಲಚ್ ಹೊಂದಿರುವ ವೈಝಡ್ಎಫ್ ಆರ್ 15 ವಿ3 ಬೈಕ್ ಆವೃತ್ತಿಯು ಸದ್ಯ ಮಾರುಕಟ್ಟೆಯಲ್ಲಿರುವ ಸುಜುಕಿ ಜಿಕ್ಸರ್ ಎಸ್ಎಫ್, ಹೋಂಡಾ ಹಾರ್ನೆಟ್, ಬಜಾಜ್ ಪಲ್ಸರ್ ಬೈಕ್‌ಗಳಿಗೆ ತೀವ್ರ ಸ್ಪರ್ಧೆ ಒಡ್ಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಿಡುಗಡೆಗಾಗಿ ಡೀಲರ್ ಯಾರ್ಡ್ ತಲುಪಿದ ಯಮಹಾ ವೈಝಡ್ಎಫ್ ಆರ್ 15 ವಿ3

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸೂಪರ್ ಬೈಕ್ ವಿಭಾಗದಲ್ಲಿ ತನ್ನದೇ ಛಾಪು ಮೂಡಿಸಿರುವ ಯಮಹಾ ಸಂಸ್ಥೆಯು ಈ ಹಿಂದಿನ ವೈಝಡ್ಎಫ್ ಆರ್ 15 ಆವೃತ್ತಿಯ ವರ್ಷನ್ 3.0 ಮೂಲಕ ಬೈಕ್ ಪ್ರಿಯರಿಗೆ ಹೊಸ ಆಯ್ಕೆಯನ್ನು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ವಿ3 ಆವೃತ್ತಿಯು ಯುವ ಸಮುದಾಯವನ್ನು ಯಾವ ರೀತಿ ಮೋಡಿ ಮಾಡುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

Article Published On: Wednesday, December 13, 2017, 11:30 [IST]
English summary
New Yamaha YZF R15 Version 3.0 Starts Arriving At India Dealership.
Read more on yamaha ಯಮಹಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+