ಅಬ್ಬಾ! ಅಳಿದುಳಿದ ಗುಜುರಿ ವಸ್ತುಗಳಿಂದಲೇ ಸಿದ್ದವಾಯ್ತು 10 ಮೀಟರ್ ಉದ್ದದ ಬೈಕ್

ಸಾಧನೆ ಮಾಡುವ ಮನಸ್ಸು ಒಂದಿದ್ರೆ ನಮ್ಮಿಂದ ಯಾವುದೂ ಕೂಡಾ ಅಸಾಧ್ಯವೇ ಅಲ್ಲ. ಹೀಗಾಗಿ ಅವಕಾಶ ಸಿಕ್ಕಾಗ ಅದನ್ನು ಬಳಸಿಕೊಳ್ಳುವುದು ಮುಖ್ಯ. ಸಾಧನೆಯ ಹಾದಿಯಲ್ಲಿರುವಾಗ ಇಲ್ಲದಿರುವ ವಿಚಾರಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಕ್ಕಿಂತ ಇರುವುದರಲ್ಲೇ ನಾವು ಏನೂ ಸಾಧನೆ ಮಾಡಬಹುದು ಎಂದು ಯೋಚಿಸಿದ್ದಲ್ಲಿ ಖಂಡಿತ ಯಶಸ್ಸು ನಮ್ಮ ಬಳಿ ಬಂದೇ ಬರುತ್ತೆ ಎನ್ನುವುದಕ್ಕೆ ಎಂಜನಿಯರಿಂಗ್ ವಿದ್ಯಾರ್ಥಿಯೊಬ್ಬ ಮಾಡಿರುವ ಈ ಹೊಸ ಆವಿಷ್ಕಾರವೇ ಉತ್ತಮ ಉದಾಹರಣೆ.

ಅಬ್ಬಾ! ಅಳಿದುಳಿದ ಗುಜುರಿ ವಸ್ತುಗಳಿಂದಲೇ ಸಿದ್ದವಾಯ್ತು 10 ಮೀಟರ್ ಉದ್ದದ ಬೈಕ್

ಹೌದು, ಅಳಿದುಳಿದ ಗುಜುರಿ ವಸ್ತುಗಳನ್ನೇ ಬಳಸಿಕೊಂಡು ವಿಶೇಷ ಡಿಸೈನ್ ಹೊಂದಿರುವ ಬೈಕ್ ಮಾದರಿಯೊಂದನ್ನು ಸಿದ್ದಪಡಿಸಿರುವ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಜನಸಾಮಾನ್ಯರಿಗೆ ಅಷ್ಟೇ ಅಲ್ಲದೇ ಆಟೋ ಮೊಬೈಲ್ ಕ್ಷೇತ್ರದ ದಿಗ್ಗಜರಲ್ಲೂ ಕುತೂಹಲ ಹುಟ್ಟುಹಾಕಿದ್ದಾನೆ.

ಅಬ್ಬಾ! ಅಳಿದುಳಿದ ಗುಜುರಿ ವಸ್ತುಗಳಿಂದಲೇ ಸಿದ್ದವಾಯ್ತು 10 ಮೀಟರ್ ಉದ್ದದ ಬೈಕ್

ಅಂದಹಾಗೆ ಈ ವಿಶೇಷ ಕಸ್ಟಮ್ ಮೇಡ್ ಬೈಕ್ ಮಾದರಿಯನ್ನು ತಯಾರಿಸಿದ್ದು ಔರಂಗಾಬಾದ್ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿ ಪಾರ್ಥ್ ಕೊಟಕ್. ತನ್ನದೇ ಆದ ವಿಶಿಷ್ಟ್ಯ ಆಲೋಚನೆ ಮತ್ತು ಸ್ನೇಹಿತರ ಸಲಹೆ ಸಹಕಾರದೊಂದಿಗೆ ಬರೋಬ್ಬರಿ 10 ಮೀಟರ್ ಉದ್ದದ ಕಸ್ಟಮ್ ಬೈಕ್ ಸಿದ್ದಗೊಳಿಸಿದ್ದಾನೆ.

ಅಬ್ಬಾ! ಅಳಿದುಳಿದ ಗುಜುರಿ ವಸ್ತುಗಳಿಂದಲೇ ಸಿದ್ದವಾಯ್ತು 10 ಮೀಟರ್ ಉದ್ದದ ಬೈಕ್

ಔರಂಗಾಬಾದ್‌ನಲ್ಲಿರುವ ಸಿಇಡಿಪಿ ಎನ್ನುವ ಎಂಜಿನಿಯರಿಂಗ್ ಕೌಶಲ್ಯ ಅಭಿವೃದ್ದಿ ಕೇಂದ್ರದಲ್ಲಿ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ ಮಾತ್ರ ಮುಗಿಸಿರುವ ಪಾರ್ಥ್ ಕೊಟಕ್, ಕೋರ್ಸ್ ಮುಗಿಯುವ ಮುನ್ನವೇ ಹೊಸ ಬೈಕ್ ಮಾದರಿಯೊಂದನ್ನು ಸಿದ್ದಗೊಳಿಸಲು ಯೋಜನೆ ರೂಪಿಸಿದ್ದ.

ಅಬ್ಬಾ! ಅಳಿದುಳಿದ ಗುಜುರಿ ವಸ್ತುಗಳಿಂದಲೇ ಸಿದ್ದವಾಯ್ತು 10 ಮೀಟರ್ ಉದ್ದದ ಬೈಕ್

ಅಂದುಕೊಂಡತೆ ಕೋರ್ಸ್ ಮುಗಿದ ಬಳಿಕ ಪೂರ್ಣ ಪ್ರಮಾಣದಲ್ಲಿ ಬೈಕ್ ನಿರ್ಮಾಣದತ್ತ ತನ್ನ ಗಮನ ಹರಿಸಿದ್ದಲ್ಲದೇ ಸುಮಾರು 10 ವಿವಿಧ ಮಾಡೆಲ್‌ಗಳನ್ನು ಸಿದ್ದಗೊಳಿಸಿ ಕೊನೆಯದಾಗಿ ಆಡ್ಲೆರ್ ರೈಡರ್ ಎನ್ನುವ ಕಸ್ಟಮ್ ಬೈಕ್ ಅನ್ನು ಹೊರತಂದಿದ್ದಾನೆ.

ಅಬ್ಬಾ! ಅಳಿದುಳಿದ ಗುಜುರಿ ವಸ್ತುಗಳಿಂದಲೇ ಸಿದ್ದವಾಯ್ತು 10 ಮೀಟರ್ ಉದ್ದದ ಬೈಕ್

ಕೋರ್ಸ್ ಮುಗಿದ ಬಳಿಕವೇ ಈ ಮೋಟಾರ್ ಸೈಕಲ್ ನಿರ್ಮಾಣಕ್ಕಾಗಿ ಬರೋಬ್ಬರಿ 18 ತಿಂಗಳು ಕಾಲ ಸಮಯಾವಕಾಶ ತೆಗೆದುಕೊಂಡಿರುವ ಪಾರ್ಥ್ ಕೊಟಕ್, ಬೈಕ್ ನಿರ್ಮಾಣಕ್ಕೆ ಗುಜುರಿ ವಸ್ತುಗಳನ್ನು ಸಹ ಹೇಗೆಲ್ಲಾ ಬಳಕೆ ಮಾಡಬಹುದು ಎನ್ನುವುದನ್ನು ತೊರಿಸಿಕೊಟ್ಟಿದ್ದಾನೆ.

ಅಬ್ಬಾ! ಅಳಿದುಳಿದ ಗುಜುರಿ ವಸ್ತುಗಳಿಂದಲೇ ಸಿದ್ದವಾಯ್ತು 10 ಮೀಟರ್ ಉದ್ದದ ಬೈಕ್

ಮೊದಮೊದಲು ಈ ಬೈಕ್ ನಿರ್ಮಾಣಕ್ಕೆ ಮುಂದಾದ ಹಲವು ಕಷ್ಟಗಳನ್ನುಅನುಭವಿಸಿರುವ ಪಾರ್ಥ್ ಕೊಟಕ್ ಬರೋಬ್ಬರಿ 3 ತಿಂಗಳು ಕಾಲ ಬೈಕ್ ಬೀಡಿಭಾಗಗಳ ಹೊಂದಾಣಿಕೆಗಾಗಿ ಶ್ರಮವಹಿಸಿದ್ದಾರೆ. ಹೀಗಿರುವಾಗ ಬೈಕ್ ನಿರ್ಮಾಣಕ್ಕೂ ಸೂಕ್ತ ಸ್ಥಳಾವಕಾಶ ಇಲ್ಲದೇ ಪರದಾಡಿದ್ದ.

ಅಬ್ಬಾ! ಅಳಿದುಳಿದ ಗುಜುರಿ ವಸ್ತುಗಳಿಂದಲೇ ಸಿದ್ದವಾಯ್ತು 10 ಮೀಟರ್ ಉದ್ದದ ಬೈಕ್

ಆಗ ಸಹಾಯಕ್ಕೆ ಪಾರ್ಥ್ ಸ್ನೇಹಿತನೊಬ್ಬ ತಮ್ಮ ತಂದೆಯ ಗ್ಯಾರೇಜ್‌ನಲ್ಲೇ ಬೈಕ್ ನಿರ್ಮಾಣಕ್ಕಾಗಿ ಸ್ಥಳಾವಕಾಶ ಕಲ್ಪಿಸಿಕೊಟ್ಟಿದ್ದ. ಸುಮಾರು 8 ತಿಂಗಳು ಕಾಲ ಇದೇ ಗ್ಯಾರೇಜ್‌ನಲ್ಲಿ ಬೈಕ್ ಸಿದ್ದಗೊಳಿಸಲಾಗಿದ್ದು, ಬೈಕಿನ ಪ್ರತಿಯೊಂದು ಬಿಡಿಭಾಗಗಳನ್ನು ಸಹ ಮರು ವಿನ್ಯಾಸಗೊಳಿಸಲಾಗಿದೆ.

ಅಬ್ಬಾ! ಅಳಿದುಳಿದ ಗುಜುರಿ ವಸ್ತುಗಳಿಂದಲೇ ಸಿದ್ದವಾಯ್ತು 10 ಮೀಟರ್ ಉದ್ದದ ಬೈಕ್

ಸಾಮಾನ್ಯ ಬೈಕಿನಲ್ಲಿ ಯಾವೆಲ್ಲಾ ತಾಂತ್ರಿಕ ಅಂಶಗಳನ್ನು ಅಳವಡಿಕೆ ಮಾಡಲಾಗುತ್ತೋ ಅದೇ ರೀತಿಯಾಗಿ ಈ ಕಸ್ಟಮ್ ಬೈಕಿನಲ್ಲೂ ಜೋಡಣೆ ಮಾಡಲಾಗಿದ್ದು, ವಿಶೇಷ ಅಂದ್ರೆ ಬೈಕ್ ಉದ್ದವಾಗಿರುವುದು ಮತ್ತು ಬಿಡಿಭಾಗಗಳು ಎಲ್ಲವೂ ಗುಜುರಿ ವಸ್ತುಗಳಿಂದಲೇ ಸಿದ್ದಗೊಳಿಸಿದ್ದು ಎನ್ನುವುದೇ ಒಂದೇ ವಿಶೇಷ.

ಅಬ್ಬಾ! ಅಳಿದುಳಿದ ಗುಜುರಿ ವಸ್ತುಗಳಿಂದಲೇ ಸಿದ್ದವಾಯ್ತು 10 ಮೀಟರ್ ಉದ್ದದ ಬೈಕ್

ಬೈಕಿನ ಹ್ಯಾಂಡಲ್, ಸಸ್ಷೆಷನ್, ಎಂಜಿನ್ ಗಾರ್ಡ್, ಫ್ಯೂಲ್ ಟ್ಯಾಂಕ್ ವಿನ್ಯಾಸ, ಆಸನ ಸೌಲಭ್ಯ, ಬೈಕಿನ ಚಕ್ರಗಳು, ಹಿಂಭಾಗದ ಸಸ್ಪೆಷನ್, ಲೆಗ್ ಪೆಡಲ್‌ ಬಳಿಯೇ ಇರುವ ಬ್ರೇಕಿಂಗ್ ಸಿಸ್ಟಂ ಮತ್ತು ಸಣ್ಣ ಬ್ಯಾಟರಿ ವಿನ್ಯಾಸದ ಹೆಡ್‌ಲ್ಯಾಂಪ್ ಸೌಲಭ್ಯ ಗಮನ ಸೆಳೆಯುತ್ತೆ.

MOST READ: ಇದು ಆರ್‌ಇ ಬುಲೆಟ್‌ ಅಲ್ಲಾ ಕಣ್ರೀ 100ಸಿಸಿ ರಾಯಲ್ ಇಂಡಿಯನ್ ಬೈಕ್...

ಅಬ್ಬಾ! ಅಳಿದುಳಿದ ಗುಜುರಿ ವಸ್ತುಗಳಿಂದಲೇ ಸಿದ್ದವಾಯ್ತು 10 ಮೀಟರ್ ಉದ್ದದ ಬೈಕ್

ಬೈಕ್ ನಿರ್ಮಾಣಕ್ಕೆ 2 ಲಕ್ಷ ಖರ್ಚು

ಅರೇ ಏನಿದು! ಗುಜುರಿ ವಸ್ತುಗಳನ್ನು ಬಳಕೆ ಮಾಡಿ ಸಿದ್ದಗೊಳಿಸಿರುವ ಬೈಕಿಗೆ 2 ಲಕ್ಷ ಖರ್ಚು ಅಂದ್ರೆ ಹೇಗೆ ಅಂತಾ ಕೇಳಬಹುದು. ಯಾಕೆಂದ್ರೆ ಗುಜುರಿ ವಸ್ತುಗಳನ್ನು ಬಿಡಿಭಾಗಗಳಾಗಿ ಪರಿವರ್ತನೆ ಮಾಡುವುದು ಅಷ್ಟು ಸುಲಭವಲ್ಲ.

ಅಬ್ಬಾ! ಅಳಿದುಳಿದ ಗುಜುರಿ ವಸ್ತುಗಳಿಂದಲೇ ಸಿದ್ದವಾಯ್ತು 10 ಮೀಟರ್ ಉದ್ದದ ಬೈಕ್

ಅಲ್ಲದೇ ಕೇವಲ ಒಂದು ಬೈಕಿಗಾಗಿ ಮಾತ್ರ ಬೀಡಿಭಾಗಗಳನ್ನು ಸಿದ್ದಗೊಳಿಸಿದ್ದು ಹೆಚ್ಚಿನ ಖರ್ಚಿಗೆ ಕಾರಣವಾಗಿದ್ದು, ಒಂದು ವೇಳೆ ಸಾಮೂಹಿಕವಾಗಿ ನಿರ್ಮಾಣ ಮಾಡುವುದಾದರೇ ಅರ್ಧಷ್ಟು ಖರ್ಚು ತಗ್ಗಲಿದೆ. ಒಟ್ಟಿನಲ್ಲಿ ಗುಜುರಿ ವಸ್ತುಗಳ ಮರು ಬಳಕೆಯ ಮೂಲಕ ಬೈಕ್ ಸಿದ್ದಗೊಳಿಸಿರುವುದು ಭಾರೀ ಆಕರ್ಷಣೆಯಾಗಿದೆ. ಆದ್ರೆ ಈ ಬೈಕ್ ಕೇವಲ ಪ್ರದರ್ಶನಕ್ಕೆ ಮಾತ್ರ ಬಳಸಲು ನಿರ್ಧರಿಸಲಾಗಿದ್ದು, ಇದನ್ನು ಆಧರಿಸಿ ಮತ್ತಷ್ಟು ಹೊಸ ಬೈಕ್ ಸಿದ್ದಗೊಳಿಸಲು ನಿರ್ಧರಿಸಲಾಗಿದೆ.

More from DriveSpark

Article Published On: Thursday, December 27, 2018, 15:00 [IST]
English summary
This 10-Feet-Long Bike Made Out Of Junk Parts Is A Good Example Of Creative Engineering.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+