2018ರ ಆಕ್ಟಿವಾ 125 ಸ್ಕೂಟರ್ ವಿತರಣೆ ಪ್ರಾರಂಭಿಸಿದ ಹೋಂಡಾ..

ದೇಶಿಯ ಮಾರುಕಟ್ಟೆಯಲ್ಲಿ ತನ್ನ ವಾಹನಗಳಿಂತ ಜನಪ್ರಿಯತೆಯನ್ನು ಪಡೆದ ಹೋಂಡಾ, ಈ ಭಾರಿ ತನ್ನ ಆಕ್ಟಿವಾ 125 ಸ್ಕೂಟರ್ ಅನ್ನು ಸುಜುಕಿ ಬರ್ಗ್‍‍ಮನ್ ಸ್ಕೂಟರ್‍‍‍ಗೆ ಪೈಪೋಟಿಯಾಗಿ ಮಾರುಕಟ್ಟೆಗೆ ಮತ್ತೆ ಬಿಡುಗಡೆಗೊಳಿಸಿತ್ತು.

By Rahul Ts

ದೇಶಿಯ ಮಾರುಕಟ್ಟೆಯಲ್ಲಿ ತನ್ನ ವಾಹನಗಳಿಂತ ಜನಪ್ರಿಯತೆಯನ್ನು ಪಡೆದ ಹೋಂಡಾ, ಈ ಭಾರಿ ತನ್ನ ಆಕ್ಟಿವಾ 125 ಸ್ಕೂಟರ್ ಅನ್ನು ಸುಜುಕಿ ಬರ್ಗ್‍‍ಮನ್ ಸ್ಕೂಟರ್‍‍‍ಗೆ ಪೈಪೋಟಿಯಾಗಿ ಮಾರುಕಟ್ಟೆಗೆ ಮತ್ತೆ ಬಿಡುಗಡೆಗೊಳಿಸಿತ್ತು. ಇದೀಗ ಹೋಂಡಾ ಅಧಿಕೃತ ಡೀಲರ್‍‍ಗಳು ಈ ಸ್ಕೂಟರ್‍‍ನ ಬುಕ್ಕಿಂಗ್ ಅನ್ನು ಶುರುಮಾಡಿದ್ದಲ್ಲದೆ ವಿತರಣೆಯನ್ನು ಕೂಡಾ ಪ್ರಾರಂಭಿಸಿದ್ದಾರೆ.

2018ರ ಆಕ್ಟಿವಾ 125 ಸ್ಕೂಟರ್ ವಿತರಣೆ ಪ್ರಾರಂಭಿಸಿದ ಹೋಂಡಾ..

2018ರ ಹೊಸ ಆಕ್ಟಿವಾ 125 ಸ್ಕೂಟರ್ ಮೂರು ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ಡ್ರಮ್ ಬ್ರೇಕ್ ವೇರಿಯಂಟ್‍‍ನ ಬೆಲೆ ರೂ. 59,621, ಅಲಾಯ್ ವ್ಹೀಲ್ಸ್ ನೊಂದಿಗೆ ಡ್ರಮ್ ಬ್ರೇಕ್ ವೇರಿಯಂಟ್ ರೂ. 61,558 ಸಾವಿರ ಮತ್ತು ಡಿಸ್ಕ್ ಬ್ರೇಕ್ ವೇರಿಯಂಟ್‍ನ ಬೆಲೆಯನ್ನು ರೂ. 64,007 ಸಾವಿರಕ್ಕೆ ನಿಗಧಿಪಡಿಸಲಾಗಿದೆ.

2018ರ ಆಕ್ಟಿವಾ 125 ಸ್ಕೂಟರ್ ವಿತರಣೆ ಪ್ರಾರಂಭಿಸಿದ ಹೋಂಡಾ..

ಹೊಸ ಹೋಂಡಾ ಆಕ್ಟಿವಾ 5ಜಿ ಸ್ಕೂಟರ್‍‍ನಂತೆಯೆ ಎಲ್ಇಡಿ ಹೆಡ್‍‍ಲೈಟ್, ಮತ್ತು ಮರುವಿನ್ಯಾಸಗೊಳಿಸಲಾದ ಇಕೊ ಮೋಡ್ ಹಾಗು ಸರ್ವಿಸ್ ಡ್ಯೂ ಇಂಡಿಕೇಟರ್ ಹೊಂದಿರುವ ಡಿಜಿಟಲ್ ಅನಾಲಾಗ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು 4 ಇನ್ 1 ಹಾಗು ಸೀಟ್ ಓಪೆನಿಂಗ್ ಸ್ವಿಚ್ ಎಂಬ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

2018ರ ಆಕ್ಟಿವಾ 125 ಸ್ಕೂಟರ್ ವಿತರಣೆ ಪ್ರಾರಂಭಿಸಿದ ಹೋಂಡಾ..

ಇನ್ನು ಹೊಸ ಹೋಂಡಾ ಆಕ್ಟಿವಾ ವಿನ್ಯಾಸದಲ್ಲಿ ಕೂಡಾ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಟಾಪ್ ಸ್ಪೆಕ್ ಮಾಡಲ್ ಗಾಡಿಯ ಮೇಲೆ ಕ್ರೋಮ್ ಮಫ್ಲರ್ ಕವರ್ ಮತ್ತು ಮಿಡ್ ಹಾಗು ಟಾಪ್ ಸ್ಪೆಕ್ ಮಾಡಲ್‍‍ಗಳು ಗ್ರೇ ಬಣ್ಣದ ಅಲಾಯ್ ವ್ಹೀಲ್‍‍ಗಳನ್ನು ಪಡೆದಿದೆ.

2018ರ ಆಕ್ಟಿವಾ 125 ಸ್ಕೂಟರ್ ವಿತರಣೆ ಪ್ರಾರಂಭಿಸಿದ ಹೋಂಡಾ..

ಹೊಸ ಆಕ್ಟಿವಾ 125 ಸ್ಕೂಟರ್ ಮೇಟ್ ಕ್ರಸ್ಟ್ ಮೆಟಾಲಿಕ್, ಮೇಟ್ ಸೆಲೆನ್ ಸಿಲ್ವರ್ ಎಂಬ ಎರಡು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಮೊಬೈಲ್ ಚಾರ್ಜಿಂಗ್ ಸಾಕೆಟ್ ಅನ್ನು ಆಯ್ಕೆಯಾಗಿ ಗ್ರಾಹಕರು ಪಡೆಯಬಹುದಾಗಿದೆ.

2018ರ ಆಕ್ಟಿವಾ 125 ಸ್ಕೂಟರ್ ವಿತರಣೆ ಪ್ರಾರಂಭಿಸಿದ ಹೋಂಡಾ..

ಎಂಜಿನ್ ಸಾಮರ್ಥ್ಯ

ಬಿಡುಗಡೆಗೊಂಡ ಆಕ್ಟಿವಾ 125 ಸ್ಕೂಟರ್ 124.9ಸಿಸಿ, ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 8.52ಬಿಹೆಚ್‍‍ಪಿ ಮತ್ತು 10.54ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

2018ರ ಆಕ್ಟಿವಾ 125 ಸ್ಕೂಟರ್ ವಿತರಣೆ ಪ್ರಾರಂಭಿಸಿದ ಹೋಂಡಾ..

ಹೊಸ ಆಕ್ಟಿವಾ 125 ಸ್ಕೂಟರ್‍ ಮುಂಭಾಗದಲ್ಲಿ ಅಪ್‍‍ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 3 ಸ್ಟೆಪ್ ಅಡ್ಜಸ್ಟಬಲ್ ಮೋನೋಶಾಕ್ ಯೂನಿಟ್ ಅನ್ನು ಪಡೆದಿದೆ.

2018ರ ಆಕ್ಟಿವಾ 125 ಸ್ಕೂಟರ್ ವಿತರಣೆ ಪ್ರಾರಂಭಿಸಿದ ಹೋಂಡಾ..

ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಬೇಸ್ ವೇರಿಯಂಟ್‍ ಮತ್ತು ಮಿಡ್ ವೇರಿಯಂಟ್ ಆಕ್ಟಿವಾ 125 ಸ್ಕೂಟರ್‍‍ನ ಎರಡು ಬದಿಗಳಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಇನ್ನು ಆಕ್ಟಿವಾ 125 ಸ್ಕೂಟರ್‍‍‍ನ ಟಾಪ್ ವೇರಿಯಂಟ್‍‍ನಲ್ಲಿ ಮುಂಭಾಗದ ಚಕ್ರಕ್ಕೆ 190ಎಮ್ಎಮ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಮತ್ತು ಈ ಸ್ಕೂಟಾರಿನ ಎಲ್ಲಾ ವೇರಿಯಂಟ್‍ಗಳಲ್ಲಿ ಸಿಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.

2018ರ ಆಕ್ಟಿವಾ 125 ಸ್ಕೂಟರ್ ವಿತರಣೆ ಪ್ರಾರಂಭಿಸಿದ ಹೋಂಡಾ..

ಬಿಡುಗಡೆಗೊಂಡ ಹೋಂಡಾ ಆಕ್ಟಿವಾ 125 ಹೊಸ ಫೀಚರ್ ಮತ್ತು ಗುರುತರ ಬದಲಾವಣೆಗಳನ್ನು ಪಡೆದಿದ್ದು, ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಆಕ್ಟಿವಾ 125 ಸ್ಕೂಟರ್‍‍ಗಳು ಸುಜುಕಿ ಆಕ್ಸಿಸ್ 125 ಮತ್ತು ಮೊನ್ನೆಯಷ್ಟೆ ಬಿಡುಗಡೆಗೊಂಡ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

Source : Rushlane

More from DriveSpark

Article Published On: Monday, July 23, 2018, 17:59 [IST]
English summary
2018 Honda Activa 125 delivery starts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+