ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್ ಖರೀದಿಗಾಗಿ ಬುಕ್ಕಿಂಗ್ ಆರಂಭ..
ಕಳೆದ ತಿಂಗಳು ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಅನಾವರಣಗೊಂಡಿದ್ದ ಹೊಸ ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್ ಇದೀಗ ಬಿಡುಗಡೆಗೆ ಸಜ್ಜಾಗುತ್ತಿದ್ದು, ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಆರಂಭ ಮಾಡಲಾಗಿದೆ.
ಕಳೆದ ತಿಂಗಳು ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಅನಾವರಣಗೊಂಡಿದ್ದ ಹೊಸ ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್ ಇದೀಗ ಬಿಡುಗಡೆಗೆ ಸಜ್ಜಾಗುತ್ತಿದ್ದು, ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಆರಂಭ ಮಾಡಲಾಗಿದೆ.

ಸ್ಟೈಲಿಷ್ ಸ್ಕೂಟರ್ ಮಾದರಿಯಾದ ಟಿವಿಎಸ್ ಎನ್ ಟಾರ್ಕ್ 125 ಮತ್ತು ಹೋಂಡಾ ಗ್ರಾಜಿಯಾ ಸ್ಕೂಟರ್ ಗಳಿಗೆ ಪೈಪೋಟಿ ನೀಡಲಿರುವ ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್ ಹತ್ತು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಹೊಸ ಸ್ಕೂಟರ್ ಬೆಲೆಯನ್ನು ಪುಣೆ ಎಕ್ಸ್ ಶೋರಂ ಪ್ರಕಾರ ರೂ.65.310ಕ್ಕೆ ನಿಗದಿಪಡಿಸಲಾಗಿದೆ.

ಹೊಸ ಸ್ಕೂಟರ್ ಅನ್ನು ಪೇಟಿಯಂ ಮೊಬೈಲ್ ಆ್ಯಪ್ ನಿಂದಲೂ ಕೂಡಾ ಬುಕ್ಕಿಂಗ್ ಮಾಡಬಹುದಾಗಿದ್ದು, www.apriliasr.in ವೆಬ್ ಸೈಟ್ ನಿಂದ ಬುಕ್ಕಿಂಗ್ ಮಾಡುವ ಮೊದಲ 5000 ಗ್ರಾಹಕರಿಗೆ ವಿಶೇಷ ಕ್ಯಾಶ್ ಬ್ಯಾಕ್ ಆಫರ್ ಅನ್ನು ಕೂಡಾ ಘೋಷಿಸಿದೆ.

ಬುಕ್ಕಿಂಗ್ ಮಾಡಿದ ಗ್ರಾಹಕರು ಬುಕ್ಕಿಂಗ್ ಮಾಡುವ ಸಮಯದಲ್ಲಿ ತಮ್ಮ ಹೆಸರು, ನೋಂದಾಯಿತ ನಂಬರ್, ಇ ಮೇಲ್ ಐಡಿ ಮತ್ತು ತಾವು ವಾಸವಿರುವ ನಿಖರ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ. ನಂತರ ನೀವು ಪೇಟಿಯಂ ಮಾಲ್ ವೆಬ್ ಸೈಟ್‌ಗೆ ಭೇಟಿ ಮಾಡಬೇಕಿದ್ದು, ಅಲ್ಲಿ ನಿಮ್ಮ ಹತ್ತಿರದ ಎಪ್ರಿಲಿಯಾ ಡೀಲರ್ ಗಳನ್ನು ಗುರುತಿಸಿ ಬುಕ್ಕಿಂಗ್ ಅನ್ನು ಕನ್ಫರ್ಮ್ ಮಾಡಬಹುದಾಗಿದೆ.

'BIKE5000' ಎಂಬ ಪ್ರೋಮೊ ಕೋಡ್ ಅನ್ನು ಪೇಟಿಯಂ ಮಾಲ್ ನ ಆಫರ್ ಕೋಡ್ ನಲ್ಲಿ ನೀಡಬೇಕಾಗಿದ್ದು, ಇನ್ನು ಈ ಆಪ್ ನಲ್ಲಿಯೇ ಸ್ಕೂಟರಿನ ಡಿಲವರಿಗೆ ತಕ್ಕ ಮಾಹಿತಿಗಳನ್ನು ನೀಡಬಹುದಾಗಿದ್ದು, ನೀವು ಬುಕ್ಕಿಂಗ್ ಮಾಡಿದ 15 ರಿಂದ 20 ದಿನಗೊಳಗೆ ಸ್ಕೂಟರ್ ಪಡೆಯಬಹುದು.

ಎಂಜಿನ್ ಸಾಮರ್ಥ್ಯ
ಎಸ್ಆರ್ 125 ಮಾದರಿಗಳು 124-ಸಿಸಿ 3-ವಾಲ್ವೆ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 9.27-ಬಿಹೆಚ್‌ಪಿ ಮತ್ತು 10.4 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಎಂಜಿನ್ ಸಿವಿಟಿ ಗೇರ್-ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, 7 ಲೀಟರ್ ಫ್ಯುಲ್ ಟ್ಯಾಂಕ್ ಹೊಂದಿದೆ.

ಸ್ಕೂಟರ್ ವಿನ್ಯಾಸಗಳು
ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್‌ಗಳು ಟೆಲಿಸ್ಕೊಪಿಕ್ ಹೈಡ್ರಾಲಿಕ್ ಫೋರ್ಕ್ಸ್ ಮತ್ತು ಮೊನೊಶಾರ್ಕ್ ರಿರ್ ಅನ್ನು ಹೊಂದಿದ್ದು, 200-ಎಂಎಂ ಡಿಸ್ಕ್ ಬ್ರೇಕ್ ಮತ್ತು 140-ಎಂಎಂ ಡ್ರಮ್ ಬ್ರೇಕ್ ಪಡೆದಿದೆ. ಜೊತೆಗೆ 14 ಇಂಚಿನ ಅಲಾಯ್ ಚಕ್ರಗಳನ್ನು ಪಡೆದುಕೊಂಡಿವೆ.

ಹೊಸ ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್‌ಗಳು ತನ್ನದೆಯಾದ ವಿಶಿಷ್ಟ ಗ್ರಾಫಿಕ್ಸ್ ಮತ್ತು ನೀಲಿ ಹಾಗು ಸಿಲ್ವರ್ ಎರಡು ಬಣ್ಣಗಳನ್ನು ಪದೆದುಕೊಂಡಿದ್ದು, ಮುಂಭಾಗದ ಟ್ವಿನ್ ಪೊಡ್, ಫ್ರಂಟ್ ಎಪ್ರಾನ್ ಇಂಡಿಕೇಟರ್‌ರ್ಸ್ ಹೊಸ ಲುಕ್ ನೀಡಿವೆ.

ಎಪ್ರಿಲಿಯಾ ಸಂಸ್ಥೆಯು ಯುವಸಮುಧಾಯವನ್ನು ಗುರಿಯಾಗಿಸಿಕ್ಕೊಂಡು ಮಾರುಕಟ್ಟೆಯಲ್ಲಿ ಸದ್ದುಮಾಡಲು ಮುಂದಾಗಿದೆ. ಇದಲ್ಲದೆ ದೇಶದೆಲ್ಲೆಡೆ ಡಿಜಿಟಲ್ ಬಳಕೆಯು ಹೆಚ್ಚಾಗುತ್ತಿದ್ದು, ಗ್ರಾಹಕರಿಗೆ ಸುಲಭವಾಗಿಸಲು ಸ್ಕೂಟರಿನ ಬುಕ್ಕಿಂಗ್ ಅನ್ನು ಆ್ಯಪ್ ಮೂಲಕವೇ ಖರೀದಿಸುವ ಅವಕಾಶ ನೀಡಿದ್ದು, ಡಿಲರ್ಸ್ ಬಳಿ ಸ್ಕೂಟರ್ ಖರೀದಿಗಾಗಿ ಅಲೆದಾಡುವ ಸಮಸ್ಯೆಯನ್ನು ತಪ್ಪಿಸುತ್ತಿದೆ.


Click it and Unblock the Notifications








