ಬಿಡುಗಡೆಗೆ ಸಜ್ಜುಗೊಳ್ಳುತ್ತಿರುವ ಎಬಿಎಸ್ ಪ್ರೇರಿತ ಬಜಾಜ್ ಪಲ್ಸರ್ 150 ಬೈಕ್

ಕಳೆದ 2 ದಶಕಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ತನ್ನದೆಯಾದ ಜನಪ್ರಿಯತೆ ಪಡೆದಿರುವ ಬಜಾಜ್ ಸಂಸ್ಥೆಯು ಮಾರುಕಟ್ಟೆಯಲ್ಲಿ ಹಲವಾರು ಬೈಕ್‍ಗಳನ್ನು ಬಿಡುಗಡೆಗೊಳಿಸಿದ್ದು, ಇದೀಗ ತಮ್ಮ ಪಲ್ಸರ್ 150 ಬೈಕ್ ರೈಡರ್‍‍ಗಳ ಸರಕ್ಷತೆಯ ಸಲುವಾಗಿ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಿ 2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳಿಸಲಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಎಬಿಎಸ್ ಪ್ರೇರಿತ ಬಜಾಜ್ ಪಲ್ಸರ್ 150 ಬೈಕ್

ಸುಮಾರು 7 ವರ್ಷಗಳ ನಂತರ ಪಲ್ಸರ್ ಸರಣಿಯ ಪಲ್ಸರ್ 150 ಬೈಕ್‌ಗಳು ಮಾರುಕಟ್ಟೆಗೆ ಕಾಲಿಡುತ್ತಿದೆ. ನಾಲ್ಕನೇ ತಲೆಮಾರಿನ ಹೊಸ ಲುಕ್ ಮತ್ತು ಇನ್ನಿತರೆ ನವಿಕರಿಸಲಾಗಿರುವ ವೈಶಿಷ್ಟ್ಯತೆಗಳೊಂದಿಗೆ ಹೊಸ ಬೈಕ್‌ಗಳು ಗ್ರಾಹಕರ ಕೈ ಸೇರಲು ಸಜ್ಜುಗೊಳ್ಳುತ್ತಿದ್ದು, ಇದೀಗ ಬಿಡುಗಡೆಗು ಮುನ್ನ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಎಬಿಎಸ್ ಪ್ರೇರಿತ ಬಜಾಜ್ ಪಲ್ಸರ್ 150 ಬೈಕ್

ಹೊಸ ಪಲ್ಸರ್ 150 ಬೈಕ್‍ ಬಗೆಗೆ ಹೇಳುವುದಾದರೇ, ಹೊಸ ಮಾದರಿಗಳಲ್ಲಿ 230 ಎಂಎಂ ರಿಯರ್ ಡಿಸ್ಕ್ ಬ್ರೇಕ್‍‍ಗಳನ್ನು ಒದಗಸಿಲಾಗಿದ್ದು, ಮುಂಭಾಗದ ಚಕ್ರಗಳಲ್ಲಿ 260 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್‍‍ಗಳನ್ನುಪಡೆದಿರುವುದಲ್ಲದೆ. ಈ ಬಾರಿ ಹೆಚ್ಚಿನ ಸುರಕ್ಷತೆಯನ್ನು ನೀಡುವುದರ ಸಲುವಾಗಿ ಎಬಿಎಸ್ ಟೆಕ್ನಾಲಜಿಯನ್ನು ಸಹ ನೀಡಲಾಗುತ್ತಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಎಬಿಎಸ್ ಪ್ರೇರಿತ ಬಜಾಜ್ ಪಲ್ಸರ್ 150 ಬೈಕ್

ರಷ್‍‍ಲೇನ್ ಮಾಹಿತಿಗಳ ಪ್ರಕಾರ ಡ್ಯುಯಲ್ ಡಿಸ್ಕ್ ಬ್ರೇಕ್ ವೇರಿಯಂಟ್ ಬಜಾಜ್ ಪಲ್ಸರ್ 150 ಬೈಕ್‍‍ಗಳಿಗಿಂತಲೂ, ಎಬಿಎಸ್ ಪ್ರೇರಿತ ಪಲ್ಸರ್ 150 ಬೈಕ್‍ಗಳು ಬೆಲೆಯಲ್ಲಿ ಸುಮಾರು 7000 ಹೆಚ್ಚಿರಲಿದೆ ಎನ್ನಲಾಗಿದ್ದು, ರೂ. 85,000 ಸಾವಿರದ ಮಾರಾಟದ ಬೆಲೆಯನ್ನು ಪಡೆಯಬಹುದೆಂದು ಅಂದಾಜಿಸಲಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಎಬಿಎಸ್ ಪ್ರೇರಿತ ಬಜಾಜ್ ಪಲ್ಸರ್ 150 ಬೈಕ್

ಜೊತೆಗೆ ವಿನ್ಯಾಸದಲ್ಲಿ ಗುರುತರ ಬದಲಾವಣೆಗಳಾದ ಹೊಸ ಗ್ರಾಫಿಕ್ ಲುಕ್, ಸ್ಪ್ಲಿಟ್ ಸೀಟ್ಸ್, ಸ್ಪ್ಲಿಟ್ ಗ್ರಾಬ್‍ರೈಲ್, ಎಕ್ಸಾಸ್ಟ್ ಮಫ್ಲರ್, ಮೆಟಲ್ ಹೀಟ್ ಶೀಲ್ಡ್ ಉಪಕರಣಗಳನ್ನು ತನ್ನದೇ ಆದ ಪಲ್ಸರ್ 180 ಬೈಕ್‍ನಿಂದ ಎರವಲು ಪಡೆದಿದ್ದು, ಫುಟ್ ಪೆಗ್ಸ್, ಅಪ್‍ಫ್ರಂಟ್ 37ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಟ್ವಿನ್ ಶಾಕ್ ಅಬ್ಸಾರ್ಬರ್ಸ್ ಅನ್ನು ಕೂಡ ಪಡೆದಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಎಬಿಎಸ್ ಪ್ರೇರಿತ ಬಜಾಜ್ ಪಲ್ಸರ್ 150 ಬೈಕ್

ಎಂಜಿನ್ ಸಾಮರ್ಥ್ಯ

ಹೊಸ ಪಲ್ಸರ್ 150 ಎಬಿಎಸ್ ಬೈಕ್ 149ಸಿಸಿ ಎಂಜಿನ್, ಸಿಂಗಲ್ ಸಿಲಿಂಡರ್, 2 ವಾಲ್ವೆ, ಟ್ವಿನ್ ಸ್ಪಾರ್ಕ್ ಮೋಟಾರ್ ಹೊಂದಿದ್ದು, 14 -ಬಿಹೆಚ್‍ಪಿ ಮತ್ತು 13.4-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದೆ. ಇದಲ್ಲದೇ ಇದನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಎಬಿಎಸ್ ಪ್ರೇರಿತ ಬಜಾಜ್ ಪಲ್ಸರ್ 150 ಬೈಕ್

ಎಬಿಎಸ್ ಪ್ರೇರಿತ ಬಜಾಜ್ ಪಲ್ಸರ್ 150 ಬಿಡುಗಡೆಗೊಂಡಲ್ಲಿ ಮಾರುಕಟ್ಟೆಯಲ್ಲಿರುವ ಹೋಂಡಾ ಸಿಬಿ ಹಾರ್ನೆಟ್ ಎಬಿಎಸ್, ಸುಜುಕಿ ಜಿಕ್ಸರ್ 160 ಎಬಿಎಸ್ ಮತ್ತು ಇನ್ನಿತರೆ ಪಲ್ಸರ್ ಬೈಕ್‍ಗಳ ಮಾರಾಟವು ಕಡಿಮೆಯಾಗಬಹುದು ಎಂಬ ನಿರೀಕ್ಷೆಗಳಿವೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಎಬಿಎಸ್ ಪ್ರೇರಿತ ಬಜಾಜ್ ಪಲ್ಸರ್ 150 ಬೈಕ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಪ್ರಸ್ತುತ ಮಾರುಕಟ್ಟೆಯಲ್ಲಿ ಎಬಿಎಸ್ ಪ್ರೇರಿತ ಬಜಾಜ್ ಪಲ್ಸರ್ ಬಹು ನಿರೀಕ್ಷಿತವಾಗಿದ್ದು, ಮಾರುಕಟ್ಟೆಯಲ್ಲಿ ಎಬಿಎಸ್ ಹೊಂದಿರುವ ಬೈಕ್‍ಗಳ ಬೇಡಿಕೆಯು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಬಜಾಜ್ ಆಟೋ ಸಂಸ್ಥೆಯು ತಮ್ಮ ಲೈನ್ ಅಪ್‍ನಲ್ಲಿರುವ ಎಲ್ಲಾ ಪ್ರಮುಖ ಬೈಕ್‍ಗಳಿಗೆ ಎಬಿಎಸ್ ಟೆಕ್ನಾಲಜಿಯನ್ನು ಅಳವಡಿಸುವ ಕಾರ್ಯದಲ್ಲಿದ್ದು, ಇನ್ನಿತರೆ ದ್ವಿಚಕ್ರ ವಾಹನ ತಯಾರಕರು ಸಹ ಇದೇ ಕಾರ್ಯದಲ್ಲಿದ್ದಾರೆ.

Most Read Articles

Kannada
English summary
Bajaj Pulsar 150 ABS Spy Pics — Launch Soon; High Sales Figures Expected. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X