ಎರಡು ವರ್ಷಗಳ ನಂತರ ಹೆಚ್ಚು ಸೇಲ್ ಆದ ಬಜಾಜ್ ಪಲ್ಸರ್ ಬೈಕ್‍ಗಳು..
ದೇಶಿಯ ವಾಹನ ತಯಾರಕ ಬಜಾಜ್ ಆಟೋ ಸಂಸ್ಥೆಯ ಭಾರತದಲ್ಲಿನ ಯುವಸಮುದಾಯವನ್ನು ಸೆಳೆದ ಬಜಾಜ್ ಪಲ್ಸರ್ ಬೈಕ್ 2018 ಮೇ ತಿಂಗಳಿನಲ್ಲಿ 70,000 ಯೂನಿಟ್ ಮಾರಾಟಗೊಂಡಿದೆ.
ದೇಶಿಯ ವಾಹನ ತಯಾರಕ ಬಜಾಜ್ ಆಟೋ ಸಂಸ್ಥೆಯ ಭಾರತದಲ್ಲಿನ ಯುವಸಮುದಾಯವನ್ನು ಸೆಳೆದ ಬಜಾಜ್ ಪಲ್ಸರ್ ಬೈಕ್ 2018 ಮೇ ತಿಂಗಳಿನಲ್ಲಿ 70,000 ಯೂನಿಟ್ ಮಾರಾಟಗೊಂಡಿದ್ದು, ಎರಡು ವರ್ಷಗಳಿಂದ ಕಡಿಮೆ ಮಾರಾಟವಾಗುತ್ತಿದ್ದ ಪಲ್ಸರ್ ಬೈಕ್‍ಗಳು ಕಳೆದ ತಿಂಗಳು ಹೆಚ್ಚು ಮಾರಾಟಗೊಂಡಿದೆ ಎನ್ನಲಾಗಿದೆ.

ಇದಕ್ಕೆ ಕಾರಣ ಬಜಾಜ್ ಆಟೋ ಸಂಸ್ಥೆಯು ಹೊಸದಾಗಿ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳಿಸಿದ ಪಲ್ಸರ್ ಕ್ಲಾಸಿಕ್ 150 ಬೈಕ್. 2018ರ ಮಾರ್ಚ್ ತಿಂಗಳಿನಲ್ಲಿ 52,759 ಯೂನಿಟ್ ಬೈಕ್‍ಗಳು ಮಾರಾಟಗೊಂಡಿದೆ ಅಂದರೆ 2017ರ ಮೇ ತಿಂಗಳಿಗಿಂತ ಶೇಕಡ 6 ರಷ್ಟು ಅಧಿಕವಾಗಿ ಮಾರಾಟಗೊಂಡಿದೆ.

ಬಜಾಜ್ ಆಟೋ ಅನೇಕ ಬಜಾರುಗಳಿಗೆ ಸರಿಹೊಂದುವಂತೆ ಪಲ್ಸರ್ ಮೋಟಾರ್ ಸೈಕಲ್‍ಗಳನ್ನು ಮಾರಾಟ ಮಾಡುತ್ತಿದೆ. ಸ್ಪೆಕ್ಟ್ರಮ್‍ನ ಕೆಳಭಾಗದಲ್ಲಿ ಪಲ್ಸರ್ 150 ಕ್ಲಾಸಿಕ್ ಮೋಟಾರ್‍ಸೈಕಲ್ ಅನ್ನು ಮುಂಬೈನ ಎಕ್ಸ್ ಶೋರಂ ಪ್ರಕಾರ ರೂ. 67,437 ಸಾವಿರಕ್ಕೆ ಮಾರಾಟ ಮಾಡುತ್ತಿದೆ.

ಪ್ರಸ್ಥುತ ಬಜಾಜ್ ಪಲ್ಸರ್ ಕ್ಲಾಸಿಕ್ 150 ಬೈಕ್‍ಗಳು ದೇಶದಲ್ಲಿನ ಕೆಲಭಾಗದಲ್ಲಿ ಮಾತ್ರ ದೊರೆಯುತ್ತಿದ್ದು, ಶೀಘ್ರದಲ್ಲೆ ಇನ್ನಿತರೆ ಪ್ರದೇಶಗಳಲ್ಲಿಯು ಸಹ ದೊರೆಯಲಿದೆ. 150 ಕ್ಲಾಸಿಕ್ ಬೈಕ್‍ಗಿಂತ ಬೆಲೆಯಲ್ಲಿ 6,000 ಹೆಚ್ಚಿರುವ ಸ್ಟ್ಯಾಂಡರ್ಡ್ 150 ಬೈಕ್ ಕೂಡಾ ಹೆಚ್ಚು ಮಾರಾಟಗೊಂಡಿದ್ದು ಸಿಂಗಲ್ ಡಿಸ್ಕ್ ಮತ್ತು ಟ್ವಿನ್ ಡಿಸ್ಕ್ ಬ್ರೇಕ್ ಎಂಬ ಎರಡು ವೇರಿಯಂಟ್‍ಗಳಲ್ಲಿ ಲಭ್ಯವಿದೆ.

ಇನ್ನು ಬೆಲೆ ಬ್ಯಾಂಡ್ ರೀತಿ ನೋಡಿದರೆ, ಪಲ್ಸರ್ ಎನ್ಎಸ್ 160, ಸ್ಪೋರ್ಟಿ, ಪಲ್ಸರ್‍ನ ಲಿಕ್ವಿಡ್ ಕೂಲ್ಡ್ ಆವೃತ್ತಿಯದಾಗಿದೆ. ಇದು 150 ಸಿಸಿ ರೂಪಾಂತರಗಳಿಗಿಂತ ಹೆಚ್ಚು ಶಕ್ತಿಯುತವಾಗಿ ವಿನ್ಯಾಸಗೊಂಡಿದೆ. ಈ ಬೈಕಿನ ಬೆಲೆಯನ್ನು ಮಾರುಕಟ್ಟೆಯಲ್ಲಿ 82,000 ಸಾವಿರಕ್ಕೆ ಮಾರಾಟಗೊಳ್ಳುತ್ತಿದೆ.

ಪಲ್ಸರ್ 150 ಶಕ್ತಿಶಾಲಿಯಾದ ಎಂಜಿನ್ ಅನ್ನು ಪಡೆದಿದ್ದು, ಏರ್ ಕೂಲ್ಡ್ ಆಧಾರಿತ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಬೈಕಿನ ಬೆಲೆಯು ಪಲ್ಸರ್ 160 ಎನ್‍ಎಸ್ ಬೈಕ್ ಗಿಂತ ಕೇವಲ ರೂ. 1,000 ಬೆಲೆಯಲ್ಲಿ ಹೆಚ್ಚಿದೆ.

ಇದಲ್ಲದೆ ಪಲ್ಸರ್ 220ಸಿಸಿ ಏರ್ ಕೂಲ್ಡ್ ಎಂಜಿನ್ ಅನ್ನು ಪಡೆದಿದ್ದು, ಪಲ್ಸರ್ ಬೈಕ್‍ಗಳ ಸರಣಿಯಲ್ಲಿ ಅಧಿಕ ಸಾಮರ್ಥ್ಯದ ಎಂಜಿನ್ ಅನ್ನು ಹೊಂದಿರುವ್ ಬೈಕ್ ಆಗಿದೆ. ಈ ಬೈಕ್ ಪ್ರಸ್ಥುತ ಮಾರುಕಟ್ಟೆಯಲ್ಲಿ ರೂ. 94,000 ಸಾವಿರಕ್ಕೆ ಮಾರಾಟಗೊಳ್ಳುತ್ತಿದೆ.

ಪಲ್ಸರ್ 200ಎನ್ಎಸ್ ಮತ್ತು 200 ಆರ್‍ಎಸ್ ಬೈಕ್‍ಗಳು ಪಲ್ಸರ್ ಬೈಕ್‍ಗಳ ಸರಣಿಯಲ್ಲಿ ಧುಬಾರಿ ಬೆಲೆಗೆ ಮಾರಾಟವಾಗುತ್ತಿರುವ ಬೈಕ್‍ಗಳಾಗಿದ್ದು, 200ಎನ್ಎಸ್ ನೇಕೆಡ್ ಸ್ಪೋರ್ಟ್ಸ್ ಬೈಕ್ ಆಗಿದ್ದು, ಮಾರುಕಟ್ಟೆಯಲ್ಲಿ ರೂ. 98,000 ಸಾವಿರಕ್ಕೆ ಮಾರಾಟಗೊಳ್ಳುತ್ತಿದೆ.

ಇನ್ನು ಪಲ್ಸರ್ 200ಆರ್‍ಎಸ್ ಬೈಕ್‍ಗಳು ಫುಲ್ಲಿ ಫೈರ್ಡ್ ಮಾಡಲ್ ಆಗಿದ್ದು ಎರಡು ಬೈಕ್‍ಘಳು ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಆಯ್ಕೆಯಾಗಿ ಪಡೆದುಕೊಂಡಿದೆ. ಪಲ್ಸರ್ 200ಆರ್‍ಎಸ್ ಬೈಕ್ ಪ್ರಸ್ಥುತ ಮಾರುಕಟ್ಟೆಯಲ್ಲಿ ರೂ. 1.24 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.


Click it and Unblock the Notifications








