2018ರ ಆಗಸ್ಟ್ ತಿಂಗಳಿನಲ್ಲಿ ಯಾವ ಬೈಕ್ ಎಷ್ಟು ಮಾರಾಟಗೊಂಡಿದೆ ಗೊತ್ತಾ.?
2018 ಆಗಸ್ಟ್ ತಿಂಗಳಿನಲ್ಲಿ ದ್ವಿಚಕ್ರ ವಾಹನಗಳ ಮಾರಾಟದ ಅಂಕಿ ಅಂಶಗಳು ಇದೀಗ ಬಹಿರಂಗಗೊಂಡಿದೆ. ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ಆಗಸ್ಟ್ ತಿಂಗಳಿನಲ್ಲಿ ಸುಧಾರಿತ ಮೊತ್ತದಲ್ಲಿ ಮಾರಾಟವನ್ನು ಕಂಡಿದೆ.
2018 ಆಗಸ್ಟ್ ತಿಂಗಳಿನಲ್ಲಿ ದ್ವಿಚಕ್ರ ವಾಹನಗಳ ಮಾರಾಟದ ಅಂಕಿ ಅಂಶಗಳು ಇದೀಗ ಬಹಿರಂಗಗೊಂಡಿದೆ. ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ಆಗಸ್ಟ್ ತಿಂಗಳಿನಲ್ಲಿ ಸುಧಾರಿತ ಮೊತ್ತದಲ್ಲಿ ಮಾರಾಟವನ್ನು ಕಂಡಿದೆ. ಸುಜುಕಿ ಮತ್ತು ಬಜಾಜ್ ಆಟೋ ಸಂಸ್ಥೆಗಳು ಮಾತ್ರ ಆಗಸ್ಟ್ ತಿಂಗಳಿನಲ್ಲಿ ಅತ್ಯುತ್ತಮವಾದ ಮಾರಾಟದ ಮೊತ್ತವನ್ನು ಕಂಡಿದೆ.

ಈ ನಿಟ್ಟಿನಲ್ಲಿ 2018ರ ಆಗಸ್ಟ್ ತಿಂಗಳಿನಲ್ಲಿ ನಿಮ್ಮ ನೆಚ್ಚಿನ ದ್ವಿಚಕ್ರ ವಾಹನದ ಬ್ರ್ಯಾಂಡ್‍ಗಳು ಎಷ್ಟು ಬೈಕ್‍ಗಳನ್ನು ಮಾರಾಟ ಮಾಡಿದೆ ಎಂಬುದನ್ನು ಕೆಳಗಿನ ಸ್ಲೈಡರ್‍ಗಳಲ್ಲಿ ತಿಳಿಯಿರಿ.
MOST READ: ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪೆಗೆ ಎಸೆದ ಬೈಕ್ ಮಾಲೀಕ

ಬಜಾಜ್ ಆಟೋ
ದೇಶಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ 2017ರ ಆಗಸ್ಟ್ ತಿಂಗಳಿನಲ್ಲಿ 2,83,861 ವಾಹನಗಳನ್ನು ಮಾರಾಟ ಮಾಡಿದ್ದರೆ, 2018ರ ಆಗಸ್ಟ್ ತಿಂಗಳಿನಲ್ಲಿ 3,62,923 ವಾಹನಗಳನ್ನು ಮಾರಾಟ ಮಾಡಿದೆ. ಅಂದರೆ ಕಳೆದ ಆಗಸ್ಟ್ ತಿಂಗಳಿಗಿಂತಾ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಶೇಕಡ 38ರಷ್ಟು ಅಧಿಕ ಮಾರಾಟವನ್ನು ಕಂಡಿದೆ.

ಬಜಾಜ್ ಆಟೋ ಸಂಸ್ಥೆಯು ಮಾರಾಟ ಮಾಡಿದ 3,62,923 ವಾಹನಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 2,18,437 ಬೈಕ್‍ಗಳನ್ನು ಮಾರಾಟ ಮಾಡಿದ್ದರೆ, ಇನ್ನುಳಿದ 1,44,486 ಬೈಕ್‍ಗಳನ್ನು ಇನ್ನಿತರೆ ದೇಶದ ಮಾರುಕಟ್ಟೆಗೆ ರಫ್ತು ಮಾಡಿದೆ.

ರಾಯಲ್ ಎನ್‍ಫೀಲ್ಡ್
ಕ್ಲಾಸಿಕ್ ಬೈಕ್‍ಗಳ ತಯಾರಿಕೆಯಲ್ಲಿ ರಾರಾಜಿಸುತ್ತಿರುವ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು 2017ರ ಆಗಸ್ಟ್ ತಿಂಗಳಿನಲ್ಲಿ 67,977 ಬೈಕ್‍ಗಳನ್ನು ಮಾರಾಟ ಮಾಡಿದ್ದರೆ, 2018ರ ಆಗಸ್ಟ್ ತಿಂಗಳಿನಲ್ಲಿ 69,377 ಬೈಕ್‍ಗಳನ್ನು ಮಾರಾಟ ಮಾಡಿದೆ. ಅಂದರೆ ಕಳೆದ ವರ್ಷದ ಆಗಸ್ಟ್ ತಿಂಗಳಿಗಿಂತಾ ಈ ವರ್ಷದಲ್ಲಿ ಶೇಕಡ ಕೇವಲ 2ರಷ್ಟು ಬೈಕ್‍ಗಳನ್ನು ಅಧಿಕವಾಗಿ ಮಾರಾಟಗೊಳಿಸಿದೆ.

ರಾಯಲ್ ಎನ್‍ಫೀಲ್ಡ್ ಸಂಸ್ಥೆಯು 2017ರ ಜನವರಿ ಇಂದ ಆಗಸ್ಟ್ ನ ವರೆಗು ಸುಮಾರು 3,08,911 ಬೈಕ್‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರೆ, ಇನ್ನು 2018ರ ಜನವರಿ ಇಂದ ಆಗಸ್ಟ್ ತಿಂಗಳಿನಲ್ಲಿ 3,54,740 ಬೈಕ್‍ಗಳನ್ನು ಮಾರಾಟ ಮಾಡಿದೆ.

ಹೀರೋ ಮೋಟೊಕಾರ್ಪ್
ಭಾರತ ದೇಶದ ಅತಿ ದೊಡ್ದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೊಕಾರ್ಪ್ ಸಂಸ್ಥೆಯು 2017ರ ಆಗಸ್ಟ್ ತಿಂಗಳಿನಲ್ಲಿ 6,78,979 ಬೈಕ್‍ಗಳನ್ನು ಮಾರಾಟ ಮಾಡಿದ್ದರೆ, ಇನ್ನು 2018ರ ಆಗಸ್ಟ್ ತಿಂಗಳಿನಲ್ಲಿ 6,85,047 ದ್ವಿಚಕ್ರ ವಾಹನಗಳನ್ನು ಮಾರಾಟಗೊಳಿಸಿದೆ. ಅಂದರೇ ಕಳೆದ ವರ್ಷದ ಮಾರಾಟಕ್ಕಿಂತಾ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಕೇವಲ ಶೇಕಡ ಒಂದರಷ್ಟು ಅಧಿಕ ಮಾರಾಟ ಮಾಡಿದೆ.

ಹೀರೋ ಮೋಟೊಕಾರ್ಪ್ ಸಂಸ್ಥೆಯು ಬಿಡುಗಡೆಗೊಳಿಸಿದ ಎಕ್ಸ್ಟ್ರೀಮ್ 200ಆರ್ ಮತ್ತು ಬಿಡುಗಡೆಗೊಳ್ಳಲಿರುವ 125ಸಿಸಿ ಸ್ಕೂಟರ್‍ಗಳಾದ ಹೀರೋ ಮಾಯೆಸ್ಟ್ರೋ ಎಡ್ಜ್ ಮತ್ತು ಡ್ಯುಯೆಟ್ ವಾಹನಗಳಿಂದ ಮಾರಾಟವನ್ನು ಹೆಚ್ಚಿಸಬೇಕೆಂಬ ತವಕದಲ್ಲಿದೆ.
MOST READ: ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಮಾರುತಿ ಸುಜುಕಿ ಎರ್ಟಿಗಾ ಫೇಸ್‍ಲಿಫ್ಟ್ ಕಾರಿನ ವಿಶೇಷತೆ ಏನು.?

ಟಿವಿಎಸ್ ಮೋಟರ್ಸ್
ತಮಿಳು ನಾಡಿನ ಚೆನ್ನೈ ನಗರ ಮೂಲದ ಪ್ರಸಿದ್ಧ ವಾಹನ ತಯಾರಕ ಸಂಸ್ಥೆಯಾದ ಟಿವಿಎಸ್ ಮೋಟರ್ಸ್ 2017ರ ಆಗಸ್ಟ್ ತಿಂಗಳಿನಲ್ಲಿ 3,17,563 ವಾಹನಗಳನ್ನು ಮಾರಾಟ ಮಾಡಿದರೆ ಇನ್ನು 2018ರ ಆಗಸ್ಟ್ ತಿಂಗಳಿನಲ್ಲಿ 3,43,217 ವಾಹನಗಳನ್ನು ಮಾರಾಟ ಮಾಡಿದೆ. ಅಂದರೆ ಕಳೆದ ವರ್ಷದ ಆಗಸ್ಟ್ ತಿಂಗಳಿಗಿಂತಾ ಈ ಆಗಸ್ಟ್ ತಿಂಗಳಿನಲ್ಲಿ ಶೇಕಡ 8ರಷ್ಟು ಅಧಿಕವಾಗಿ ಮಾರಾಟ ಮಾಡಿದೆ.

ಟಿವಿಎಸ್ ಮೋಟರ್ಸ್ ಮಾರಾಟ ಮಾಡಿರುವ 3,43,217 ದ್ವಿಚಕ್ರ ವಾಹನಗಳಲ್ಲಿ 2,75,688 ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಇನ್ನುಳಿದ 1,31,743 ವಾಹನಗಳನ್ನು ಇತರೇ ದೇಶದ ಮಾರುಕಟ್ಟೆಗೆ ರಫ್ತು ಮಾಡಲಾಗಿದೆ.

ಸುಜುಕಿ ಮೋಟರ್‍ಸೈಕಲ್ಸ್ ಇಂಡಿಯಾ
ಸುಜುಕಿ ಮೋಟರ್‍ಸೈಕಲ್ಸ್ ಇಂಡಿಯಾ ಸಂಸ್ಥೆಯು 2017ರ ಆಗಸ್ಟ್ ತಿಂಗಳಿನಲ್ಲಿ 55,000 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದರೆ, 2018ರ ಆಗಸ್ಟ್ ತಿಂಗಳಿನಲ್ಲಿ 62,446 ವಾಹನಗಳನ್ನು ಮಾರಾಟ ಮಾಡಿದೆ. ಅಂದರೆ ಕಳೆದ ವರ್ಷದ ಆಗಸ್ಟ್ ಗಿಂತಾ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಶೇಕಡ 31ರಷ್ಟು ಅಧಿಕವಾಗಿ ಮಾರಾಟಗೊಳಿಸಿದೆ.

ಸುಜುಕಿ ಮೋಟರ್‍ಸೈಕಲ್ಸ್ ಇಂಡಿಯಾ ಅಧಿಕವಾದ ಮಾರಾಟವನ್ನು ಕಾಣಲು ತಾವು ಹೊಸದಾಗಿ ಬಿಡುಗಡೆಗೊಳಿಸಿದ ಸುಜುಕಿ ಆಕ್ಸಿಸ್ 125 ಮತ್ತು ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್‍ಗಳು ಸಹಕರಿಸಿದೆ. ಒಟ್ಟಾರೆಯಾಗಿ ಸಂಸ್ಥೆಯು ಮರಾಟ ಈ ವರ್ಷದ ಏಪ್ರಿಲ್‍ನಿಂದ ಆಗಸ್ಟ್ ತಿಂಗಳ ವರೆಗು 2,67,888 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.


Click it and Unblock the Notifications