ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪೆಗೆ ಎಸೆದ ಬೈಕ್ ಮಾಲೀಕ

By Praveen Sannamani

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕ್ಲಾಸಿಕ್ 500 ಪೆಗಾಸಸ್ ಲಿಮಿಟೆಡ್ ಎಡಿಷನ್ ಬೈಕ್ ಮಾರಾಟದಲ್ಲಿ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿರುವ ಬಗ್ಗೆ ನಾವು ನಿನ್ನೆಯಷ್ಟೇ ಒಂದು ವರದಿ ಮಾಡಿದ್ದೆವು. ಇದರ ಬೆನ್ನಲ್ಲೇ ಪೆಗಾಸಸ್ ಬೈಕ್ ಮಾಲೀಕನೊಬ್ಬ ರಾಯಲ್ ಎನ್‌ಫೀಲ್ಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದಲ್ಲದೇ ಹೊಸ ಬೈಕ್ ಅನ್ನು ಕಸದ ರಾಶಿಯಲ್ಲಿ ಎಸೆದಿರುವ ಘಟನೆ ನಡೆದಿದೆ.

ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪಿಗೆ ಎಸೆದ ಬೈಕ್ ಮಾಲೀಕ

ಕಳೆದ ತಿಂಗಳ ಹಿಂದಷ್ಟೇ ಕ್ಲಾಸಿಕ್ 500 ಪೆಗಾಸಸ್ ಲಿಮಿಟೆಡ್ ಬೈಕ್ ಮಾದರಿಗಳು ಮಾರಾಟಕ್ಕಿವೆ ಎಂದಿದ್ದೆ ತಡ, ಮುಗಿಬಿದ್ದು ಹೊಸ ಬೈಕ್ ಖರೀದಿ ಮಾಡಿದ ಗ್ರಾಹಕರು ಇದೀಗ ಯಾಕಾದ್ರು ಆ ಹೊಸ ಬೈಕ್ ಅನ್ನು ಖರೀದಿ ಮಾಡಿದೆವೋ ಎನ್ನುವಂತಹ ಪರಿಸ್ಥಿತಿಗೆ ಸಿಲುಕಿದ್ದಾರೆ. ಇದಕ್ಕೆ ಕಾರಣ, ಕಳೆದ ವಾರ ಬಿಡುಗಡೆಯಾಗಿರುವ ಮತ್ತೊಂದು ಹೊಸ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್ ಅಂದ್ರೆ ನೀವು ನಂಬಲೇಬೇಕು.

ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪಿಗೆ ಎಸೆದ ಬೈಕ್ ಮಾಲೀಕ

ಹೌದು, ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ನಡೆ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕುತ್ತಿರುವ ಕ್ಲಾಸಿಕ್ 500 ಪೆಗಾಸಸ್ ಬೈಕ್ ಮಾಲೀಕರು ಹೊಸ ಬೈಕ್ ವಿಚಾರದಲ್ಲಿ ಮೋಸದ ವ್ಯಾಪಾರ ನಡೆದಿದೆ ಅಂತಾ ಪ್ರತಿಭಟನೆ ನಡೆಸುತ್ತಿದ್ದು, ದುಬಾರಿ ಬೆಲೆ ತೆತ್ತು ಹೊಸ ಬೈಕ್ ಖರೀದಿ ಮಾಡಿದ್ರು ಬೈಕಿನಲ್ಲಿರುವ ಸುರಕ್ಷಾ ಸೌಲಭ್ಯಗಳ ವಿಚಾರದಲ್ಲಿ ಆರ್‌ಇ ವರ್ತನೆಯು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪಿಗೆ ಎಸೆದ ಬೈಕ್ ಮಾಲೀಕ

ಲಿಮಿಟೆಡ್ ಎಡಿಷನ್ ಮಾದರಿಯಾಗಿರುವ ಕ್ಲಾಸಿಕ್ 500 ಪೆಗಾಸಸ್ ಬೈಕ್‌ಗಳು ಜುಲೈ 30ರಂದು ಬಿಡುಗಡೆಯಾಗಿತ್ತು. ದೇಶಾದ್ಯಂತ ಕೇವಲ 250 ಬೈಕ್‌ಗಳನ್ನು ಮಾತ್ರವೇ ಮಾರಾಟ ಮಾಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಬೈಕಿನಲ್ಲಿ ನೀಡಲಾಗುವ ಕೆಲವು ಸುರಕ್ಷಾ ಸೌಲಭ್ಯಗಳನ್ನು ಒದಗಿಸುವಲ್ಲಿ ಅಸಡ್ಡೆ ತೊರಿದೆ ಎನ್ನುವುದು ಗ್ರಾಹಕರ ಅಳಲು.

ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪಿಗೆ ಎಸೆದ ಬೈಕ್ ಮಾಲೀಕ

ಇದಕ್ಕೆ ಕಾರಣ, ಕಳೆದ ವಾರವಷ್ಟೇ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್ ಬಿಡುಗಡೆ ಮಾಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಬೈಕಿನಲ್ಲಿ ಎಬಿಎಸ್ ಸೇರಿದಂತೆ ಕೆಲವು ಹೊಸ ಸೌಲಭ್ಯಗಳನ್ನು ನೀಡಿದ್ದು, ಅದೇ ದುಬಾರಿ ಬೆಲೆಯ ಕ್ಲಾಸಿಕ್ 500 ಪೆಗಾಸಸ್ ಬೈಕ್‌ಗಳಲ್ಲಿ ಈ ಸೌಲಭ್ಯವನ್ನು ನೀಡಿಲ್ಲ ಎನ್ನವುದೇ ಪೆಗಾಸಸ್ ಮಾಲೀಕರ ಆಕ್ರೋಶವನ್ನು ಹೆಚ್ಚಿಸುವಂತೆ ಮಾಡಿದೆ.

ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪಿಗೆ ಎಸೆದ ಬೈಕ್ ಮಾಲೀಕ

ಇದರಿಂದ ಕೆರಳಿದ ಪೆಗಾಸಸ್ ಬೈಕ್ ಮಾಲೀಕರು ಕ್ಲಾಸಿಕ್ ಸಿಗ್ನಲ್ಸ್ 350 ಬೈಕಿನಲ್ಲಿರುವ ಸೌಲಭ್ಯಗಳು ನಮಗೆ ಯಾಕಿಲ್ಲ ಅಂತಾ ಲಿಖಿತ ದೂರು ನೀಡಿದ್ದು, ಎಬಿಎಸ್ ಸೌಲಭ್ಯವನ್ನು ನೀಡಿ ಇಲ್ಲವಾದ್ರೆ ನಿಮ್ಮ ಹೊಸ ಬೈಕ್ ವಾಪಸ್ ಪಡೆದು ಹಣ ಮರಳಿಸಿ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

MOST READ: ಕಾರು ರಿಪೇರಿಗೆ ಹೋದ ಸ್ಕೋಡಾ ಮಾಲಕಿಗೆ ಡೀಲರ್ಸ್ ಹೀಗಾ ಮಾಡೋದು?

ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪಿಗೆ ಎಸೆದ ಬೈಕ್ ಮಾಲೀಕ

ಮುಂಬೈ ಮೂಲದ ಧೀರಜ್ ಜರುವಾ ಎನ್ನುವವರು ರಾಯಲ್ ಎನ್‌ಫೀಲ್ಡ್ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪೆಗಾಸಸ್ ಬೈಕ್ ವಿಚಾರದಲ್ಲಿ ಆರ್‌ಇ ಅಸಡ್ಡೆ ಉತ್ತರಕ್ಕೆ ಬೇಸತ್ತು ಹೊಸ ಬೈಕ್ ಅನ್ನು ಕಸದ ರಾಶಿಗೆ ಹಾಕಿರುವ ಬಗ್ಗೆ ರಷ್‌ಲೆನ್ಸುದ್ದಿಸಂಸ್ಥೆಯು ಇದೀಗ ವರದಿ ಮಾಡಿದೆ.

ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪಿಗೆ ಎಸೆದ ಬೈಕ್ ಮಾಲೀಕ

ವಾಸ್ತವವಾಗಿ ಹೇಳುವುದಾದರೆ, ಪುಣೆ ಎಕ್ಸ್‌ಶೋರಂ ಪ್ರಕಾರ ರೂ. 2.49 ಲಕ್ಷ ಬೆಲೆ ಹೊಂದಿರುವ ಪೆಗಾಸಸ್ ಬೈಕ್‌ಗಳಲ್ಲಿ ಎಬಿಎಸ್ ಸೌಲಭ್ಯವೇ ಇಲ್ಲ. ಅದೇ ಕಳೆದ ವಾರ ಬಿಡುಗಡೆಯಾಗಿರುವ ಕ್ಲಾಸಿಕ್ ಸಿಗ್ನಲ್ಸ್ ಬೈಕ್‌ಗಳು ಪುಣೆ ಎಕ್ಸ್‌ಶೋರಂ ಪ್ರಕಾರ ರೂ. 1.62 ಲಕ್ಷ ಬೆಲೆ ಹೊಂದಿದ್ದರೂ ಅವುಗಳಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಒದಗಿಸಿರುವುದು ಪೆಗಾಸಸ್ ಮಾಲೀಕರಿಗೆ ಅಸಮಾಧಾನ ಉಂಟುಮಾಡಿದೆ.

ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪಿಗೆ ಎಸೆದ ಬೈಕ್ ಮಾಲೀಕ

ಹೀಗಾಗಿಯೇ ನಮ್ಮ ಬೈಕಿಗೂ ಕಡ್ಡಾಯವಾಗಿ ಎಬಿಎಸ್ ಸೌಲಭ್ಯವನ್ನು ಅಳವಡಿಕೆ ಮಾಡಿಕೊಡಿ ಎಂದು ದುಂಬಾಲು ಬಿದ್ದಿರುವ ಗ್ರಾಹಕರು, ಎಬಿಎಸ್ ಸೌಲಭ್ಯ ಒದಗಿಸಿಕೊಡಲು ಸಾಧ್ಯವಿಲ್ಲವಾದ್ರೆ ನಮ್ಮ ಹಣ ವಾಪಸ್ ನೀಡಿ ಎಂದು ದೂರು ಸಲ್ಲಿಸಿದ್ದಾರೆ.

ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪಿಗೆ ಎಸೆದ ಬೈಕ್ ಮಾಲೀಕ

ಇನ್ನು ಕೆಲವು ಪೆಗಾಸಸ್ ಬೈಕ್ ಮಾಲೀಕರು ದುಬಾರಿ ಬೈಕಿನಲ್ಲಿ ಎಬಿಎಸ್ ಸೌಲಭ್ಯ ಅಳವಡಿಸದ ಹಿನ್ನೆಲೆಯಲ್ಲಿ ವಿನೂತನ ಪ್ರತಿಭಟನೆಗೆ ಮುಂದಾಗಿದ್ದು, ನಿಗದಿತ ಅವಧಿಯಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಹೊಸ ಬೈಕ್‌ಗಳನ್ನು ಮುನ್ಸಿಪಲ್ ಕಾರ್ಪೋರೇಷನ್‌ನಲ್ಲಿ ಕಸ ತುಂಬಿಸಲು ಕೊಡುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ.

ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪಿಗೆ ಎಸೆದ ಬೈಕ್ ಮಾಲೀಕ

ವಿವಾದದ ಬಗ್ಗೆ ಆರ್‌ಇ ಸ್ಪಷ್ಟನೆ

ಪೆಗಾಸಸ್ ಬೈಕ್ ಮಾಲೀಕರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಉತ್ಪನ್ನಗಳ ಗುಣಮಟ್ಟ ಆಧಾರದ ಮೇಲೆ ಬೆಲೆ ನಿಗದಿಪಡಿಸಿ ಸೌಲಭ್ಯವನ್ನು ನೀಡಲಾಗಿದ್ದು, ಪೆಗಾಸಸ್ ಬೈಕ್ ಮಾಲೀಕರ ಪ್ರತಿಭಟನೆಯಲ್ಲಿ ಅರ್ಥವೇ ಇಲ್ಲ ಎನ್ನುತ್ತಿದೆ.

ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪಿಗೆ ಎಸೆದ ಬೈಕ್ ಮಾಲೀಕ

ಹಾಗಾದ್ರೆ ರೂ. 2.49 ಲಕ್ಷ ಬೆಲೆ ಕೊಟ್ಟು ಪೆಗಾಸಸ್ ಖರೀದಿ ಮಾಡಿದ ಗ್ರಾಹಕರಿಗೂ ರೂ. 1.62 ಲಕ್ಷ ಕೊಟ್ಟು ಕ್ಲಾಸಿಕ್ ಸಿಗ್ನಲ್ 350 ಖರೀದಿ ಮಾಡುವ ಗ್ರಾಹಕರಿಗೂ ಏನು ವ್ಯತ್ಯಾಸ ಎಂದು ಪ್ರಶ್ನೆ ಉದ್ಭವವಾಗಿದ್ದು, ಮುಂಬರುವ ದಿನಗಳಲ್ಲಿ ಈ ವಿವಾದಕ್ಕೆ ಯಾವ ರೀತಿ ಸ್ಪಂದನೆ ಸಿಗುತ್ತೊ ಗೊತ್ತಿಲ್ಲ.

MOST READ: ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳು ಕ್ಷಣಮಾತ್ರದಲ್ಲೇ ಪುಡಿ ಪುಡಿ.!

ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪಿಗೆ ಎಸೆದ ಬೈಕ್ ಮಾಲೀಕ

ಒಟ್ಟಿನಲ್ಲಿ ವಿವಾದದ ಬಗ್ಗೆ ಅಸಡ್ಡೆ ತೋರುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಪೆಗಾಸಸ್ ಮಾಲೀಕರ ಬೇಡಿಕೆ ಈಡೇರಿಕೆ ಸಾಧ್ಯವೇ ಇಲ್ಲ ಎನ್ನುವಂತೆ ಹೇಳಿಕೆ ನೀಡುತ್ತಿದೆ. ಜೊತೆಗೆ ಅವಶ್ಯಕತೆ ಇದ್ದಲ್ಲಿ ಹೆಚ್ಚುವರಿ ಹಣ ಪಾವತಿ ಮಾಡಿ ಎಬಿಎಸ್ ಪಡೆದುಕೊಳ್ಳಿ ಎನ್ನುವಂತಹ ದುರಹಂಕಾರಿ ವರ್ತನೆಯನ್ನು ಪ್ರದರ್ಶನ ಮಾಡುತ್ತಿದ್ದು, ಪೆಗಾಸಸ್ ಬೈಕ್ ಮಾಲೀಕರ ಪ್ರತಿಭಟನೆ ಮತ್ತಷ್ಟು ತೀವ್ರತೆ ಪಡೆದುಕೊಳ್ಳುವ ಲಕ್ಷಣಗಳು ಗೋಚರವಾಗುತ್ತಿವೆ.

ಹಾಗಾದ್ರೆ ಈ ವಿವಾದದ ಬಗ್ಗೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ..

Most Read Articles

ಅಷ್ಟಕ್ಕೂ ವಿವಾದಕ್ಕೆ ಕಾರಣವಾಗಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಪೆಗಾಸಸ್ ಬೈಕ್ ಹೇಗಿದೆ? ಹೊಸ ಬೈಕ್ ವಿರುದ್ಧ ಗ್ರಾಹಕರ ಅಸಮಾಧಾನ ಏಕೆ? ಇಲ್ಲಿದೆ ನೋಡಿ ಪೆಗಾಸಸ್ ಬೈಕ್ ಫೋಟೋ ಗ್ಯಾಲರಿ....

Kannada
English summary
Royal Enfield 500 Pegasus thrown into garbage by owner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X