ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳು ಕ್ಷಣಮಾತ್ರದಲ್ಲೇ ಪುಡಿ ಪುಡಿ.!

By Praveen Sannamani

ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಸಿಕ್ಕಿಬಿಳುವ ವಾಹನಗಳನ್ನು ವಶಪಡಿಸಿಕೊಳ್ಳುವ ಪೊಲೀಸರು ಸಾಮಾನ್ಯವಾಗಿ ಅವುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡ ನಂತರ ಹಾರಾಜು ಹಾಕುವುದನ್ನು ನಾವೆಲ್ಲಾ ನೋಡಿದ್ದೇವೆ. ಆದ್ರೆ ಫಿಲಿಫೈನ್ಸ್ ಸರ್ಕಾರ ಮಾತ್ರ ಅದೆಷ್ಟೇ ದುಬಾರಿ ವಾಹನವಾದ್ರು ಸರಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದ್ದೇ ಆದಲ್ಲಿ ಅದರ ಕಥೆ ಅಷ್ಟೇ..

ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳು ಕ್ಷಣಮಾತ್ರದಲ್ಲೇ ಪುಡಿ ಪುಡಿ.!

ಹೌದು, ಫಿಲಿಫೈನ್ಸ್‌ನಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ಅಷ್ಟೇ ಅಲ್ಲ, ಕೃತ್ಯಕ್ಕೆ ಬಳಸಲಾದ ವಾಹನಗಳಿಗೂ ಕಠಿಣ ಶಿಕ್ಷೆ ತಪ್ಪಿದ್ದಲ್ಲ. ಇದಕ್ಕೆ ನಿದರ್ಶನ ಎನ್ನುವಂತೆ ಸ್ಮಂಗ್ಲಿಂಗ್ ಕೇಸ್ ಒಂದರಲ್ಲಿ ವಶಪಡಿಸಿಕೊಳ್ಳಲಾದ ಬರೋಬ್ಬರಿ 68 ಲಕ್ಸುರಿ ಕಾರುಗಳು ಮತ್ತು 8 ಸೂಪರ್ ಬೈಕ್‌ಗಳನ್ನು ಜೆಸಿಬಿ ಮೂಲಕ ಪೀಸ್ ಪೀಸ್ ಮಾಡಲಾಗಿದ್ದು, ಕಾನೂನು ಬಾಹಿರವಾಗಿರುವ ಈ ವಾಹನಗಳನ್ನು ಮರುಬಳಕೆಗೂ ಬಾರದಂತೆ ಮಾಡಲಾಗಿದೆ.

ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳು ಕ್ಷಣಮಾತ್ರದಲ್ಲೇ ಪುಡಿ ಪುಡಿ.!

ಜೆಬಿಬಿ ಮೂಲಕ ಬರೋಬ್ಬರಿ 68 ಲಕ್ಸುರಿ ಕಾರುಗಳು ಮತ್ತು 8 ಸೂಪರ್ ಬೈಕ್‌ಗಳನ್ನ ಜೆಪಿಬಿ ಮೂಲಕ ಕ್ರಷಿಂಗ್ ಮಾಡಿರುವ ಫಿಲಿಫೀನ್ಸ್ ಸರ್ಕಾರವು ಮತ್ತೆ ಇಂತಹ ಪ್ರಕರಣಗಳು ನಡೆಯದಂತೆ ಅಲ್ಲಿನ ಜನತೆಗೆ ಸಂದೇಶ ರವಾನಿಸಿದ್ದು, ಫಿಲಿಫೀನ್ಸ್ ಸರ್ಕಾರ ಕ್ರಮ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳು ಕ್ಷಣಮಾತ್ರದಲ್ಲೇ ಪುಡಿ ಪುಡಿ.!

ಜೆಸಿಬಿಯಿಂದ ಕ್ರಷಿಂಗ್ ಮಾಡಲಾದ 68 ಲಕ್ಸುರಿ ಕಾರುಗಳು ಮತ್ತು 8 ಸೂಪರ್ ಬೈಕ್‌ಗಳು ಸುಮಾರು 46 ಕೋಟಿ ಮೌಲ್ಯ ಹೊಂದಿದ್ದವು ಎಂದು ಹೇಳಲಾಗಿದ್ದು, ದುಬಾರಿ ಬೆಲೆಯ ಲಂಬೋರ್ಗಿನಿ, ಪೊರ್ಷೇ, ಆಡಿ, ಮೆಕ್ಲೆರನ್, ಬಿಎಂಡಬ್ಲ್ಯು ಸೂಪರ್ ಕಾರುಗಳಲ್ಲದೇ ಹಾರ್ಲೆ ಡೇವಿಡ್‌ಸನ್, ಟ್ರಯಂಫ್ ನಿರ್ಮಾಣದ ಐಷಾರಾಮಿ ಬೈಕ್‌ಗಳು ಸಹ ಇವುಗಳಲ್ಲಿದ್ದವು.

ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳು ಕ್ಷಣಮಾತ್ರದಲ್ಲೇ ಪುಡಿ ಪುಡಿ.!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಇದು ಕೇವಲ ಫಿಲಿಫೀನ್ಸ್ ಪೊಲೀಸ್ ಇಲಾಖೆಯು ತೆಗೆದುಕೊಂಡ ನಿರ್ಧಾರವಲ್ಲ. ಬದಲಿಗೆ ಅಧ್ಯಕ್ಷ ರೋಡ್ರಿಗೊ ಡ್ಯುಟೆರ್ಟ್ ಅವರೇ ಮುಂದೆ ನಿಂತು ಕಾನೂನು ಬಾಹಿರ ಚಟುವಟಿಕೆಯಲ್ಲಿ ವಶಪಡಿಸಿಕೊಳ್ಳಲಾದ ಬೈಕ್‌ಗಳನ್ನು ನಾಶಪಡಿಸುವಂತೆ ಸೂಚನೆ ನೀಡಿದ್ದಾರೆ.

ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳು ಕ್ಷಣಮಾತ್ರದಲ್ಲೇ ಪುಡಿ ಪುಡಿ.!

ಕಠಿಣ ನಿರ್ಧಾರದ ಪ್ರಕಾರ, 68 ಲಕ್ಸುರಿ ಕಾರುಗಳು ಹಾಗೂ 8 ಸೂಪರ್ ಬೈಕ್‌ಗಳ ಮೇಲೆ ಬುಲ್ಡೋಜರ್ ಹತ್ತಿಸಿ ಪುಡಿ ಪುಡಿ ಮಾಡಲಾಯಿತು. ಈ ಕ್ಷಣಕ್ಕೆ ಫಿಲಿಪ್ಪೀನ್ಸ್ ಅಧ್ಯಕ್ಷ, ಪೊಲೀಸ್ ಇಲಾಖೆ ಹಾಗೂ ಹಲವು ಗಣ್ಯರು ಸಾಕ್ಷಿಯಾದರು.

ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳು ಕ್ಷಣಮಾತ್ರದಲ್ಲೇ ಪುಡಿ ಪುಡಿ.!

ಕ್ರಷಿಂಗ್ ಮಾಡಲಾದ ಒಟ್ಟು 76 ವಾಹನಗಳಲ್ಲಿ ಬಹುತೇಕ ವಾಹನಗಳು ಪ್ರಿಮಿಯಂ ಮಾದರಿಗಳಾಗಿದ್ದು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವ ಅಲ್ಲಿನ ಸಾರ್ವಜನಿಕರಿಗೆ ಇದೊಂದು ಖಡಕ್ ಸಂದೇಶ ಎಂದು ಹೇಳಬಹುದು.

ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳು ಕ್ಷಣಮಾತ್ರದಲ್ಲೇ ಪುಡಿ ಪುಡಿ.!

ಫಿಲಿಫೈನ್ಸ್ ಸರ್ಕಾರವು ಇದೇ ಮೊದಲು ಈ ರೀತಿಯ ಕ್ರಮ ಕೈಗೊಂಡಿರುವುದಲ್ಲ. ಕಳೆದ 2 ತಿಂಗಳು ಹಿಂದಷ್ಟೇ ರಸ್ತೆ ನಿಯಮಗಳಿಗೆ ವಿರುದ್ದವಾಗಿ ಓಡಾಡುತ್ತಿದ್ದ 20ಕ್ಕೂ ಹೆಚ್ಚು ಸೂಪರ್ ಕಾರುಗಳನ್ನು ಜೆಸಿಬಿಯಿಂದ ಕ್ರಷಿಂಗ್ ಮಾಡಿದ್ದಲ್ಲದೇ ಕಾರು ಮಾಲೀಕರಿಗೆ ಭಾರೀ ಪ್ರಮಾಣದ ದಂಡವನ್ನು ಸಹ ವಿಧಿಸಿತ್ತು.

ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳು ಕ್ಷಣಮಾತ್ರದಲ್ಲೇ ಪುಡಿ ಪುಡಿ.!

ಸದಾ ಒಂದಿಲ್ಲೊಂದು ವಿವಾದಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಫಿಲಿಫೈನ್ಸ್ ಸರ್ಕಾರವು ಅಪರಾಧ ಕೃತ್ಯಗಳನ್ನು ತಡೆಯವ ಉದ್ದೇಶದೊಂದಿಗೆ ಕೆಲವು ಕಠಿಣ ನಿಯಮಾವಳಿ ಜಾರಿಗೆ ಮಾಡಿದ್ದು, ಜಗತ್ತಿನ ಇತರೆ ದೇಶಗಳಲ್ಲಿ ಇಂತಹ ವಿಲಕ್ಷಣ ಕಾನೂನುಗಳು ಎಲ್ಲಿಯೂ ಇಲ್ಲ ಎನ್ನಬಹುದು.

ಜೆಸಿಬಿ ಮೂಲಕ ಕಾರು ಮತ್ತು ಬೈಕ್‌ಗಳನ್ನು ಕ್ರಷಿಂಗ್ ಮಾಡುತ್ತಿರುವ ವಿಡಿಯೋ ಇಲ್ಲಿದೆ ವೀಕ್ಷಿಸಿ.

ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳು ಕ್ಷಣಮಾತ್ರದಲ್ಲೇ ಪುಡಿ ಪುಡಿ.!

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..

More from DriveSpark

Article Published On: Thursday, August 2, 2018, 12:16 [IST]
English summary
Philippines President Destroys Supercar and Bikes.
Read more on crime off beat luxury cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+