ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

By Praveen Sannamani

ಸದ್ಯ ಏಷ್ಯಾದ ನಂಬರ್ 1 ಶ್ರೀಮಂತ ಎಂಬ ಖ್ಯಾತಿ ಪಡೆದಿರುವ ಅನಿಲ್ ಅಂಬಾನಿಯ ಬಳಿ ಲಗ್ಷುರಿ ಕಾರುಗಳ ಭರ್ಜರಿ ಕಲೆಕ್ಷನ್ ಬಗ್ಗೆ ಈಗಾಗಲೇ ಬಹುತೇಕರಿಗೆ ಗೊತ್ತಿರುವ ವಿಚಾರ. ಆದ್ರೆ ಮುಖೇಶ್ ಅಂಬಾನಿಯ ಹಿರಿಯ ಪುತ್ರ ಆಕಾಶ್ ಅಂಬಾನಿ ಬಳಿಯು ಸಹ ದೊಡ್ಡ ಮಟ್ಟದ ಐಷಾರಾಮಿ ಕಾರಗಳ ಸಂಗ್ರಹವೇ ಇದ್ದು, ಮೊನ್ನೆಯಷ್ಟೇ ಆಕಾಶ್ ಗರ್ಲ್ ಫ್ರೆಂಡ್ ಶ್ಲೋಕಾ ಮೆಹ್ತಾ ಗಿಫ್ಟ್ ಆಗಿ ನೀಡಿರುವ ಐಷಾರಾಮಿ ಬೆಂಟ್ಲಿ ಕಾರು ಇದೀಗ ಸಖತ್ ಸುದ್ದಿಯಾಗುತ್ತಿದೆ.

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ಹೌದು, ಆಕಾಶ್ ಅಂಬಾನಿ ಭಾವಿ ಪತ್ನಿಯಾಗಿರುವ ಶ್ಲೋಕಾ ಮೆಹ್ತಾ ಅವರು ಆಕಾಶ್ ಅಂಬಾನಿಗೆ ದುಬಾರಿ ಬೆಲೆಯ ಐಷಾರಾಮಿ ಬೆಂಟ್ಲಿ ಬೆನ್‌ಟೈಗಾ ವಿ12 ಕಾರನ್ನ ಗಿಫ್ಟ್ ಆಗಿ ನೀಡಿರುವ ಬಗ್ಗೆ ವರದಿಯಾಗಿದ್ದು, ನಿಶ್ಚಿತಾರ್ಥದ ದಿನದಂದೇ ಈ ಕಾರನ್ನ ಗಿಫ್ಟ್ ನೀಡಿದ್ದಾರೆ ಎನ್ನಲಾಗಿದೆ. ಆದ್ರೆ ಈ ಬಗ್ಗೆ ಗುಟ್ಟಬಿಟ್ಟುಕೊಡದ ಆಕಾಶ್ ಅಂಬಾನಿ ಮಾತ್ರ ತನ್ನ ಜೀವದ ಗೆಳತಿ ನೀಡಿರುವ ಕಾರಿನಲ್ಲೇ ಇದೀಗ ಎಲ್ಲಾ ಕಡೆಗೂ ಕಾಣಿಸಿಕೊಳ್ಳುತ್ತಿದ್ದಾರೆ.

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ಶ್ಲೋಕಾ ಮೆಹ್ತಾ ಅವರು ಆಕಾಶ್ ಅಂಬಾನಿಗೆ ಗಿಫ್ಟ್ ಆಗಿ ನೀಡಿರುವ ಬೆಂಟ್ಲಿ ಬೆನ್‌ಟೈಗಾ ವಿ12 ಕಾರು ಬರೋಬ್ಬರಿ ರೂ. 3.85 ಕೋಟಿ ಬೆಲೆ ಹೊಂದಿದ್ದು, ಮುಂಬೈ ನೋಂದಣಿ ಹೊಂದಿರುವ ಈ ಕಾರು ಐಷಾರಾಮಿ ಸೌಲಭ್ಯಗಳನ್ನಷ್ಟೇ ಅಲ್ಲದೇ ಅತ್ಯುತ್ತಮ ಎಂಜಿನ್ ಹೊಂದಿರುವುದು ಈ ಕಾರಿನ ಮತ್ತೊಂದು ವಿಶೇಷ.

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಶ್ರೀಮಂತ ಉದ್ಯಮಿಗಳ ಟಾಪ್ 10 ಕಾರುಗಳ ಆಯ್ಕೆಯಲ್ಲಿ ಸ್ಥಾನ ಪಡೆದಿರುವ ಬೆಂಟ್ಲಿ ಬೆನ್‌ಟೈಗಾ ಕಾರುಗಳು ವಿ12 ಎಂಜಿನ್ ಪ್ರೇರಣೆ ಹೊಂದಿದ್ದು, 6-ಲೀಟರ್(6 ಸಾವಿರ ಸಿಸಿ) ವಿ12 ಮೋಟಾರ್ ಸೌಲಭ್ಯದೊಂದಿದೆ 600-ಬಿಎಚ್‌ಪಿ ಮತ್ತು 900-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ಇನ್ನೊಂದು ವಿಶೇಷ ಅಂದ್ರೆ, ಬೆಂಟ್ಲಿ ಕಾರು ಖರೀದಿಗಿಂತ ಅದರಲ್ಲಿ ಹೆಚ್ಚುವರಿಯಾಗಿ ಖರೀದಿ ಮಾಡಬೇಕಾದ ಬೀಡಿಭಾಗಗಳ ಬಗೆಗೆ ನಿಮಗೆ ಶಾಕ್ ಆಗದೇ ಇರಲಾರದು. ಕಾರಣ, ಕಾರಿನ ಬೆಲೆಯು ರೂ.3.85 ಕೋಟಿ ಆದ್ರೆ ಅದರಲ್ಲಿ ಹೆಚ್ಚುವರಿಯಾಗಿ ಖರೀದಿ ಮಾಡಬೇಕಿರುವ ಬಿಡಿಭಾಗಗಳ ಬೆಲೆಯು ಎರಡೂವರೆ ಕೋಟಿ ಆಗುತ್ತೆ ಅಂದ್ರೆ ನೀವು ನಂಬಲೇಬೇಕು.

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ಬೆಂಟ್ಲಿ ಕಾರುಗಳಲ್ಲಿ ಮುಖ್ಯವಾದ ಆಕರ್ಷಣೆ ಅಂದ್ರೆ ಕಾರಿನ ಡ್ಯಾಶ್‌ಬೋರ್ಡ್ ಮಧ್ಯದಲ್ಲಿ ಹಾಕಲಾಗುವ ಬ್ರಿಟ್ಲಿಂಗ್ ಮ್ಯುಲಿನರ್ ಟೂರ್ ಬಿಲಿಯನ್ ವಾಚ್(Breitling Mulliner Tourbillon watch) ಬೆಲೆಯೇ ಬರೋಬ್ಬರಿ 2 ಕೋಟಿ ಆಗುತ್ತೆ.

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ಇನ್ನುಳಿದಂತೆ 21 ಇಂಚಿನ ಮಿಶ್ರಲೋಹದ ಚಕ್ರಗಳ ಸೇರಿದಂತೆ ಹಲವು ಮಾಡಿಫೈ ಡಿಸೈನ್‌ಗಳನ್ನು ಇದರಲ್ಲಿ ಸೇರಿಸಲಾಗಿದ್ದು, ಹೆಚ್ಚುವರಿ ಸೌಲಭ್ಯವನ್ನು ಬೇಡಿಕೆ ಆಧಾರದ ಮೇಲೆ ಸೇರಿಸಲಾಗುತ್ತದೆ. ಹೀಗಾಗಿ ಹೆಚ್ಚುವರಿ ಆಯ್ಕೆಗಳು ಸಹ ಆಕಾಶ್ ಅಂಬಾನಿ ಸಿಕ್ಕ ಕಾರಿನಲ್ಲೂ ಇವೆ ಎನ್ನಲಾಗಿದೆ.

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ಇನ್ನ ನೀವು ನಂಬುತ್ತಿರೋ ಇಲ್ಲವೋ ಗೊತ್ತಿಲ್ಲಾ. ಮುಖೇಶ್ ಅಂಬಾನಿ ಮತ್ತು ಅವರ ಮಕ್ಕಳ ಬಳಿ ಬರೋಬ್ಬರಿ 60ಕ್ಕೂ ದುಬಾರಿ ಬೆಲೆಯ ಕಾರುಗಳಿದ್ದು, ಇವುಗಳನ್ನು ನಿರ್ವಹಣೆ ಮಾಡಲು ಸರಿಸುಮಾರು 30 ಮಂದಿ ನುರಿತ ಕೆಲಸಗಾರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಹಾಗಾದ್ರೆ ಆ ದುಬಾರಿ ಕಾರುಗಳು ಯಾವವು ಎನ್ನುವ ಪಟ್ಟಿ ಇಲ್ಲಿದೆ ನೋಡಿ.

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ರೋಲ್ಸ್ ರಾಯ್ಸ್ ಫ್ಯಾಂಟಂ

ಮುಖೇಶ್ ಅಂಬಾನಿಯ ಕೊನೆಯ ಮಗನಾದ ಅನಂತ್ ಅಂಬಾನಿಯು ರೋಲ್ಸ್ ರಾಯ್ಸ್ ಫ್ಯಾಟಂ ಡ್ರಾಪ್ ಹೆಡ್ ಕೌಪ್ ಕಾರಿನಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿದ್ದಲ್ಲದೇ ಐಷಾರಾಮಿ ಕಾರು ಪ್ರಿಯರಲ್ಲೇ ಕುತೂಹಲ ಹುಟ್ಟುಹಾಕಿದ್ದರು.

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ಈ ಕಾರು ಎಕ್ಸ್ ಶೋರಂ ಬೆಲೆಗಳ ಪ್ರಕಾರ 8.84 ಕೋಟಿ ಮೌಲ್ಯ ಹೊಂದಿದ್ದು, 6.75-ಲೀಟರ್ ವಿ12 ಎಂಜಿನನ್ನು ಪದೆದಿದ್ದು, 454 ಬಿಹೆಚ್ ಪಿ ಮತ್ತು 720 ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಕೇವಲ 5.9 ಸೆಕೆಂಡುಗಳಲ್ಲಿ 0 ದಿಂದ 100 ಕಿಮಿ ವೇಗ ಪಡೆದುಕೊಳ್ಳುವಷ್ಟು ಬಲಿಷ್ಠ ವಿ-12 ಎಂಜಿನ್ ಹೊಂದಿದೆ.

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ಬೆಂಟ್ಲಿಬೆನ್‌ಟೈಗಾ

ಮುಖೇಶ್ ಅಂಬಾನಿಯ ಹಿರಿಯ ಮಗ ಆಕಾಶ್ ಅಂಬಾನಿ ಸ್ವಲ್ಪ ಸ್ಪೋರ್ಟ್ಸ್ ಕಾರುಗಳ ಮೇಲೆ ಹೆಚ್ಚಿನ ಆಸಕ್ತಿ ಇದ್ದು, ಗರ್ಲ್ ಫ್ರೆಂಡ್ ಶ್ಲೋಕಾ ಮೆಹ್ತಾ ಗಿಫ್ಟ್ ಕೊಡುವುದಕ್ಕೂ ಮುನ್ನವೇ ಮಗದೊಂದು ಬೆಂಟ್ಲಿ ಬೆನ್‌ಟೈಗಾ ಕಾರನ್ನು ಹೊಂದಿದ್ದಾರೆ. ಈ ಐಷಾರಾಮಿ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿ ಹೆಚ್ಚು ಸೇಲ್ ಆಗುತ್ತಿದ್ದು, ಇದರ ಬೆಲೆ ಎಕ್ಸ್ ಶೋರುಂ ಪ್ರಕಾರ 3.85 ಕೋಟಿ.

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ರೆಂಜ್ ರೋವರ್ ವೋಗ್

ರೆಂಜ್ ರೋವರ್ ವೋಗ್ ಕಾರಿನಲ್ಲಿ ಅಕಾಶ್ ಮತ್ತು ಅನಂತ್ ಅಂಬಾನಿ ಕಾಣಿಸಿಕೊಂಡಿದ್ದು, ಇಬ್ಬರು ಪ್ರತ್ಯೇಕವಾಗಿ ಒಂದೊಂದು ರೆಂಜ್ ರೋವರ್ ವೋಗ್ ಕಾರನ್ನು ಖರೀದಿಸಿದ್ದಾರೆ. ಕಾರಿನ ವೈವಿದ್ಯತೆಯ ಪೈಕಿ ಕಾರಿನ ಬೆಲೆ ನಿಗದಿಪಡಿಸಲಾಗಿದ್ದು, ಪ್ರಸ್ತುತ ಕಾರಿನ ಬೆಲೆಯು 2.15 ಕೋಟಿ ಬೆಲೆ ಹೊಂದಿದೆ. ಇನ್ನು ಈ ಕಾರು 3.0-ಲೀಟರ್ ವಿ6 ಮತ್ತು 4.4 ಲೀಟರ್ ವಿ 8 ಟರ್ಬೊ ಡೀಸೆಲ್ ಎಂಜಿನ್ ಹಾಗೆಯೆ 5-ಲೀಟರ್ ವಿ 8 ಸೀಪರ್ ಚಾರ್ಜ್ಡ್ ಪೆಟ್ರೋಲ್ ಎಂಜಿನನ್ನು ಪಡೆದಿದೆ.

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ಮರ್ಸಿಡಿಸ್ ಬೆಂಜ್ ಜಿ63 ಎಎಮ್ ಜಿ

ಆನ್/ಆಫ್ ರೋಡಿಂಗ್ ಎರಡಕ್ಕೂ ಬಳಕೆ ಆಗಬಲ್ಲ ವಾಹನವಾದ ಮರ್ಸಿಡಿಸ್ ಬೆಂಜ್ ಜಿ63 ಎಎಮ್ ಜಿ ಕಾರು ಆಕಾಶ್ ಕಾರ್ ಕಲೆಕ್ಷನ್‌ನಲ್ಲದ್ದು, ಈ ಕಾರು 5.5-ಲೀಟರ್ ವಿ8 543ಬಿಹೆಚ್ ಪಿ ಮತ್ತು 760ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಗ್ಯಾಂಗ್‌ಸ್ಟರ್ ಮಶಿನ್ ಕಾರ್ ಎಂಬ ಹೆಸರಿಗೆ ಪಾತ್ರವಾಗಿದೆ.

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

W221 ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್

ಇದು ಸಾಂಪ್ರದಾಯಿಕ ಅಂಬಾನಿ ಕುಟುಂಬದ ಕಾರು ಎಂದೇ ಹೇಳಬಹುದು. ಬುಲೆಟ್ ಪ್ರೂಫ್ ಹೊಂದಿರುವ ಈ ಕಾರು ಕೆಲವೊಮ್ಮೆ ಕುಟುಂಬ ಚಾಲಕ ಅಥವಾ ಕೆಲ ಸಂದರ್ಭಗಳಲ್ಲಿ ಅನಂತ್ ಬಾನಿಯೇ ಈ ಕಾರನ್ನು ಚಲಾಯಿಸುತ್ತಾರೆ.

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ಬಿಎಂಡಬ್ಲ್ಯು 5 ಸಿರೀಸ್

ಬೆಲೆಯಲ್ಲಿ 60 ಲಕ್ಷ ಮೌಲ್ಯ ಹೊಂದಿರುವ ಈ ಕಾರನ್ನು ಆಕಾಶ್ ಅಂಬಾನಿ ಬಳಿಯಿದೆ. ಇದರಲ್ಲಿ ತನ್ನ ಸಹೋದರಿ ಇಶಾ ಅವರೊಂದಿಗೆ ಅವರು ಕಾಣಿಸಿಕೊಂಡಿದ್ದಾರೆ ಮತ್ತು ಒಮ್ಮೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಕೂಡಾ ಹಿಂಭಾಗದ ಸೀಟ್‌ನಲ್ಲಿ ಸವಾರಿ ಮಾಡಿದ್ದಾರಂತೆ.

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ಬಿಎಂಡಬ್ಲ್ಯು ಐ8

ಮೊದಲೇ ಹೇಳಿದಂತೆ ಅನಂತ್ ಅಂಬಾನಿಗೆ ಸ್ಪೋರ್ಟ್ಸ್ ಕಾರುಗಳ ಬಗ್ಗೆ ಕ್ರೇಜ್ ಇದ್ದು ಹೈಬ್ರಿಡ್ ಸ್ಪೋರ್ಟ್ಸ್ ಕಾರ್ ಬಿಎಂಡಬ್ಲ್ಯು ಐ8 ಆತ ತನ್ನದಾಗಿಸಿಕ್ಕೊಂಡಿದ್ದಾರೆ. ಇದು 47 ಕಿಲೋಮೀಟರ್ ಮೈಲೇಜ್ ನೀಡಲಿದ್ದು, 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ಎಲೆಕ್ಟ್ರಿಕ್ ಮೋಟಾರ್ ನ ಸಹಾಯದಿಂದ 357-ಬಿಹೆಚ್ ಪಿ ಮತ್ತು 570-ಎನ್ಎಂ ಟಾರ್ಕ್‌ನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಹಾಗೆಯೇ ಕಾರಿನ ಬೆಲೆಯು ಎಕ್ಸ್ ಶೋರಂ ಪ್ರಕಾರ 2.14 ಕೋಟಿ ಎನ್ನಲಾಗಿದೆ.

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ಬಿಎಂಡಬ್ಲ್ಯೂ 760ಎಲ್ಐ

ಇದು ಕೊನೆಯ ತಲೆಮಾರಿನ ಬುಲೆಟ್ ಫ್ರೂಫ್ ಪ್ರೊಟೆಕ್ಷನ್ ಹೊಂದಿದ್ದು, ಮುಖೇಶ್ ಅಂಬಾನಿಯ ಕುಟುಂಬ ಹಲವಾರು ಬಾರಿ ಈ ಕಾರಿನಲ್ಲಿ ಕಾಣಿಸಿಕೊಂಡಿದೆ. 5.5-ಲೀಟರ್ ವಿ12 ಪೆಟ್ರೋಲ್ ಎಂಜಿನನ್ನು ಪಡೆದಿದ್ದು, 6 ಸೇಕೆಂಡುಗಳಲ್ಲಿ 0-100kmph ಚಲಿಸುವ ಶಕ್ತಿಯನ್ನು ಪಡೆದಿದೆ. ಇನ್ನು ಕಾರಿನ ಬೆಲೆಯು ಮಾರುಕಟ್ಟೆಯಲ್ಲಿ 2.27 ಕೋಟಿ ನಿಗದಿ ಪಡಿಸಲಾಗಿದೆ.

Kannada
English summary
Ambani Family Bought Bentley Bentayga SUV yet again.
Story first published: Friday, July 20, 2018, 11:53 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more