ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..

ಕಾರು ಅಥವಾ ಬೈಕ್‌ನಲ್ಲಿ ಹೋಗುವಾಗ ಮಾರ್ಗ ಮಧ್ಯದಲ್ಲಿ ಕೆಲವೊಮ್ಮೆ ನಿಮಗೆ ಗೊತ್ತಿದ್ದವರೋ ಇಲ್ಲವೋ ಗೊತ್ತಿಲ್ಲದವರೋ ಲಿಫ್ಟ್ ಕೇಳಿದ್ರೆ ಸಾಮಾನ್ಯವಾಗಿ ಯಾರು ಇಲ್ಲ ಅಂತಾ ಹೇಳೋದಿಲ್ಲ.

ಕಾರು ಅಥವಾ ಬೈಕ್‌ನಲ್ಲಿ ಹೋಗುವಾಗ ಮಾರ್ಗ ಮಧ್ಯದಲ್ಲಿ ಕೆಲವೊಮ್ಮೆ ನಿಮಗೆ ಗೊತ್ತಿದ್ದವರೋ ಇಲ್ಲವೋ ಗೊತ್ತಿಲ್ಲದವರೋ ಲಿಫ್ಟ್ ಕೇಳಿದ್ರೆ ಸಾಮಾನ್ಯವಾಗಿ ಯಾರು ಇಲ್ಲ ಅಂತಾ ಹೇಳೋದಿಲ್ಲ. ಆದ್ರೆ ಹಾಗೆ ಮಾಡಿದ್ದರಿಂದಲೇ ಇಲ್ಲೊಬ್ಬ ಕಾರು ಮಾಲೀಕನು ಕೋರ್ಟ್ ಮೆಟ್ಟಿಲು ಹತ್ತಿಲ್ಲದ್ದಲದೇ ದಂಡ ಪಾವತಿಸಿರುವ ಘಟನೆ ನಡೆದಿದೆ.

ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..

ಹೌದು, ಇದು ನಂಬಲು ಸಾಧ್ಯವಾಗುತ್ತಿಲ್ಲ ಅಂದ್ರು, ಇದು ಮುಂಬೈನಲ್ಲಿ ನಡೆದ ಸತ್ಯ ಘಟನೆ. ಕಾರು ಮಾಲೀಕರೊಬ್ಬರು ತಮ್ಮ ವೈಟ್ ಬೋರ್ಡ್ ಕಾರಿನಲ್ಲಿ ಅಪರಿಚಿತರಿಗೆ ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್ ಮೆಟ್ಟಿಲು ಹತ್ತಿಲ್ಲದ್ದಲ್ಲದೇ ದಂಡ ಪಾವತಿಸಿ ಬಂದಿದ್ದಾರೆ. ಈ ಬಗ್ಗೆ ಸ್ವತಃ ಕಾರು ಮಾಲೀಕನೇ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ನಡೆದ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಲ್ಲದೇ ಸಾರಿಗೆ ನಿಯಮಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..

ಘಟನೆಯ ವಿವರ

ವೃತ್ತಿಯಲ್ಲಿ ಖಾಸಗಿ ಸಂಸ್ಥೆಯೊಂದರ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ನಿತಿನ್ ನಾಯರ್ ಎನ್ನುವರು ಕಳೆದ 2 ದಿನಗಳ ಹಿಂದಷ್ಟೇ ತಮ್ಮ ಕಾರಿನಲ್ಲಿ ಆಫೀಸ್‌ನತ್ತ ಕೆಲಸಕ್ಕೆ ಹೊರಟಿದ್ದರು. ಇದೇ ವೇಳೆ ವೃದ್ಧರೊಬ್ಬರು ಲಿಫ್ಟ್ ಕೇಳಿದ್ದಾರೆ. ಇದಕ್ಕೆ ಸಮ್ಮತಿ ಸೂಚಿಸಿದ ನಿತಿನ್ ನಾಯರ್ ತಮ್ಮ ಕಾರಿನಲ್ಲಿ ಹತ್ತಿಸಿಕೊಂಡಿದ್ದು, ಇದೇ ಅವರು ಮಾಡಿದ ಅಪರಾಧವಾಗಿದೆ.

ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..

ವೃದ್ಧನನ್ನು ಹತ್ತಿಸಿಕೊಂಡು ಸ್ವಲ್ಪ ಮುಂದೆ ಬಂದಿದ್ದೆ ತಡ ಟ್ರಾಫಿಕ್ ಪೊಲೀಸರೊಬ್ಬರು ಕಾರಿನ ದಾಖಲೆಗಳ ಪರಿಶೀಲನೆಗಾಗಿ ಸೂಚಿಸಿದ್ದು, ಸರಿ ಅಂತಾ ಡಿಎಲ್ ಮತ್ತು ಕಾರಿನ ದಾಖಲೆಗಳನ್ನು ತೋರಿಸಿದ್ದಾರೆ. ಆದ್ರೆ ಡಿಎಲ್ ವಶಕ್ಕೆ ತೆಗೆದುಕೊಂಡ ಟ್ರಾಫಿಕ್ ಪೊಲೀಸ್ ಅಪರಿಚಿತ ವ್ಯಕ್ತಿಗಳಿಗೆ ಲಿಫ್ಟ್ ಕೊಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ಬರೋಬ್ಬರಿ ರೂ. 2 ಸಾವಿರ ದಂಡ ಪಾವತಿಸಿರುವಂತೆ ವಾರ್ನ್ ಮಾಡಿದ್ದಾರೆ.

ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾರು ಮಾಲೀಕ ನಿತಿನ್ ನಾಯರ್ ಅವರು ತಾನು ಕೋರ್ಟ್‌ನಲ್ಲೇ ಕಟ್ಟುವೆ ಎಂದು ಮರುದಿನ ಕೋರ್ಟ್‌ಗೆ ಹಾಜರಾಗಿದ್ದಾರೆ. ಅಲ್ಲೂ ಕೂಡಾ ನಿತಿನ್ ನಾಯರ್ ಮಾಡಿದ್ದು ತಪ್ಪು ಎಂಬುವುದು ಸಾಬೀತಾಗಿದ್ದು, ರೂ. 2 ಸಾವಿರ ಬದಲಾಗಿ ರೂ.1500 ದಂಡ ಪಾವತಿಸುವಂತೆ ಸೂಚನೆ ನೀಡಿದೆ.

ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..

ಸರಿ, ಅಂತಿಮವಾಗಿ ಕೋರ್ಟ್ ಸೂಚನೆಯೆಂತೆ ರೂ.1500 ದಂಡ ಪಾವತಿಸಿ ಟ್ರಾಫಿಕ್ ಪೊಲೀಸರಿಂದ ಡಿಎಲ್ ವಾಪಸ್ ಪಡೆದುಕೊಂಡಿದ್ದು, ನಡೆದ ಘಟನೆ ಬಗ್ಗೆ ಫೇಸ್‌ಬುಕ್‌ನಲ್ಲಿ ವಿಸ್ತಾರವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..

ನಿತಿನ್ ನಾಯರ್ ಅವರ ಫೇಸ್‌ಬುಕ್ ಪೋಸ್ಟ್ ಅನ್ನು ಸುಮಾರು 16,795 ಜನ ಹಂಚಿಕೊಂಡಿದ್ದು, 5 ಸಾವಿರ ಜನ ಈ ಬಗ್ಗೆ ತಮ್ಮ ವ್ಯಯಕ್ತಿಕ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ನಿತಿನ್ ನಾಯರ್ ಮಾಡಿದ ಮಾನವಿಯ ಕೆಲಸಕ್ಕೆ ಈ ರೀತಿ ದಂಡ ವಿಧಿಸುವುದು ಯಾವ ನ್ಯಾಯ ಎನ್ನುವ ಬಗ್ಗೆ ಹಲವರು ಪ್ರಶ್ನೆ ಮಾಡಿದ್ದಾರೆ.

ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..

ಇನ್ನೊಂದು ಅಂಶವನ್ನು ನಾವಿಲ್ಲಿ ಗಮನಿಸುವುದಾದರೇ, ವೈಟ್ ಬೋರ್ಡ್ ಹೊಂದಿರುವ ಕಾರು ಮಾಲೀಕರು ಯಾವುದೇ ಕಾರಣಕ್ಕೂ ಪ್ಯಾಸೆಂಜರ್ ಹಾಕಿಕೊಳ್ಳುವಂತಿಲ್ಲ ಎಂಬ ನಿಯಮವಿದ್ದು, ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಮಾತ್ರ ಈ ರೀತಿಯಾಗಿ ಲಿಫ್ಟ್ ಕೊಡುವ ಅವಕಾಶವಿದೆ ಎಂದು ಕೆಲವು ನಿಯಮಗಳು ಹೇಳುತ್ತವೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..

ಇದೇ ಕಾರಣಕ್ಕೆ ನಿತಿನ್ ನಾಯರ್ ಮೇಲೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು ವೈಟ್ ಬೋರ್ಡ್ ಮೂಲಕ ಪ್ಯಾಸೆಂಜರ್ ತುಂಬಿಸಿಕೊಳ್ಳುತ್ತಿದ್ದಾರೆ ಎಂದು ಆಪಾದನೆ ಮಾಡಿ ದಂಡ ವಿಧಿಸಿದ್ದಾರೆ. ಆದ್ರೆ ನಿತಿನ್ ನಾಯರ್ ಮಾಡಿದ್ದು ಅಂತಹ ಪ್ರಮಾದ ಅಲ್ಲವೇ ಅಲ್ಲ. ಹೀಗಿದ್ದರೂ ವೃದ್ದನನ್ನು ಹತ್ತಿಸಿಕೊಂಡ ತಪ್ಪಿಗೆ ರೂ.1500 ದಂಡ ತೆತ್ತುವಂತಾಯಿತು.

ನಿತಿನ್ ನಾಯರ್ ಅವರು ಮಾಡಿರುವ ಫೇಸ್‌ಬುಕ್ ಪೋಸ್ಟ್ ಇಲ್ಲಿದೆ ನೋಡಿ...

Most Read Articles

Kannada
Read more on traffic rules
English summary
You Can Be Fined For ‘Giving A Lift’ To Strangers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X