ಕಾರು ರಿಪೇರಿಗೆ ಹೋದ ಸ್ಕೋಡಾ ಮಾಲಕಿಗೆ ಡೀಲರ್ಸ್ ಹೀಗಾ ಮಾಡೋದು.?

By Rahul Ts

ಎಂಜಿನ್ ವೈಫಲ್ಯದ ಕಾರಣದಿಂದ ಸ್ಕೋಡಾ ಲೌರಾ ಸೆಡಾನ್ ಕಾರಿನ ಮಾಲಿಕರಿಗೆ ಅತಿಯಾದ ಸೇವೆಯ ವೆಚ್ಚವನ್ನು ಮುಂಬೈ ಮೂಲದ ಆಟೋಬಾನ್ ಸ್ಕೋಡಾ ರಶೀದಿ ನೀಡಿತ್ತು. ಅಧಿಕೃತ ಸ್ಕೋಡಾ ವಿತರಕರು 1.68 ಲಕ್ಷ ರೂ. ಕಾರನ್ನು ಸರಿಪಡಿಸಲು ವೆಚ್ಚವನ್ನು ನೀಡಿದರೆ, ಸ್ಥಳೀಯ ಗ್ಯಾರೇಜ್ ಒಂದು ಸ್ಕೋಡಾ ಲೌರಾರವರ ಸೆಡಾನ್ ಕಾರನ್ನು ಕೇವಲ 1,062 ರೂ.ಗೆ ಸರಿ ಪಡಿಸಿದ್ದಾರೆ.

ಕಾರು ರಿಪೇರಿಗೆ ಹೋದ ಸ್ಕೋಡಾ ಮಾಲಕಿಗೆ ಡೀಲರ್ಸ್ ಹೀಗಾ ಮಾಡೋದು.?

ಅಧಿಕೃತ ಸ್ಕೋಡಾ ಸರ್ವೀ‍‍ಸ್ ಸೇಂಟರ್ ಭಾರೀ ಮೊತ್ತದಲ್ಲಿ ನೀಡಿದ ರಿಪೇರಿಯ ರಶೀದಿಯನ್ನು, ಕೇವಲ 1062ರೂ ನಲ್ಲಿ ಸ್ಥಳಿಯ ಗ್ಯಾರೇಜ್ ಒಂದು ಸರಿಪಡಿಸಿದ ಘಟನೆಯ ಬಗ್ಗೆ ಈ ಸ್ಟೋರಿಯಲ್ಲಿ ತಿಳಿಯಿರಿ.

ಕಾರು ರಿಪೇರಿಗೆ ಹೋದ ಸ್ಕೋಡಾ ಮಾಲಕಿಗೆ ಡೀಲರ್ಸ್ ಹೀಗಾ ಮಾಡೋದು.?

ಆಗಸ್ಟ್ 16 ರಂದು 2012ರಲ್ಲಿ ಖರೀದಿಸಿದ ಸ್ಕೋಡಾ ಲೌರಾ ಸೆಡಾನ್ ಕಾರಿನಲ್ಲಿ ಮಾಲಿಕರು ಮುಂಬೈ ನಗರದ ರಸ್ತೆಗಳಲ್ಲಿ ಪ್ರಯಾಣಿಸುತ್ತಿದ್ದಾಗ, ಅವರ ಲೌರಾ ಸೆಡಾನ್ ಕಾರು ಹತಾಟನೆ ವಿಚಿತ್ರವಾಗಿ ವರ್ತಿಸಲು ಶುರು ಮಾಡಿತು. ಎಂಜಿನ್ ಇದ್ದಕ್ಕಿಂದಂತೆ ಸ್ವಾಭಿಕವಾಗಿ ವರ್ತಿಸಲು ಮುಂದಾಗಿ ಕಾರು ಸ್ಲೋ ಆಗಲು ಕಾರಣವಾಗಿತು.

ಕಾರು ರಿಪೇರಿಗೆ ಹೋದ ಸ್ಕೋಡಾ ಮಾಲಕಿಗೆ ಡೀಲರ್ಸ್ ಹೀಗಾ ಮಾಡೋದು.?

ನಂತರ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ತಮ್ಮ ಕಾರನ್ನು ರಸ್ತೆಯ ಪಕ್ಕದಲ್ಲಿ ಪಾರ್ಕ್ ಮಾಡಿ, ಅದು ರಾತ್ರಿಯ ಸಮಯವಾದುದರಿಂದ ಮತ್ತು ಆಗಲೇ ತಮ್ಮ ವಾಸ ಸ್ಥಳದಿಂದ ಬಹು ದೂರ ಪ್ರಯಾಣಿಸಿದರಿಂದ ಆ ಕಾರನ್ನು ಅಲ್ಲಿಯೆ ಪಾರ್ಕ್ ಮಾಡುವ ಪರಿಸ್ಥಿತಿ ಎದುರಾಯಿತು.

ಕಾರು ರಿಪೇರಿಗೆ ಹೋದ ಸ್ಕೋಡಾ ಮಾಲಕಿಗೆ ಡೀಲರ್ಸ್ ಹೀಗಾ ಮಾಡೋದು.?

ಮುಂದಿನ ದಿನ ಬೆಳಿಗ್ಗೆ ಲೌರಾ ಸೆಡಾನ್ ಮಾಲಿಕರು ಖರೀದಿ ಮಾಡಿದ ತಮ್ಮ ನಿವಾಸದ ಹತ್ತಿರವಿದ್ದ ಕುರ್ಲಾನಲ್ಲಿನ ಆಟೊಬನ್ ಡೀಲರ್‍‍ನ ಹತ್ತಿರ ಕಾರಿನ ತೊಂದರೆಯ ಬಗ್ಗೆ ಹೇಳಿ ಕೊಂಡೊಯ್ಯಲಾಯಿತು. ಆದರೇ ಅಲ್ಲಿ ನಡೆದ ಘಟನೆಯು ಲೌರಾರವರಿಗೆ ದೊಡ್ಡ ಶಾಕ್ ನೀಡಿತು.

MUST READ:ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪೆಗೆ ಎಸೆದ ಬೈಕ್ ಮಾಲೀಕ

ಕಾರು ರಿಪೇರಿಗೆ ಹೋದ ಸ್ಕೋಡಾ ಮಾಲಕಿಗೆ ಡೀಲರ್ಸ್ ಹೀಗಾ ಮಾಡೋದು.?

ಕಾರನ್ನು ಡೀಲ‍‍ರನತ್ತ ಕೊಂಡೊಯ್ದ ದಿನದ ಸಂಜೆ ಆಟೊಬಾನ್ ಡೀಲರ್ ಲೌರಾ ಕಾರಿನ ಮಾಲಿಕರಿಗೆ ಕರೆ ಮಾಡಿ ಕಾರಿನ ರಿಪೇರಿಗಾಗಿ ಸುಮಾರು ರೂ. 2.5 ಲಕ್ಷ ಖರ್ಚಾಗುತ್ತದೆ ಎಂದು ತಿಳಿಸಿದರು. ಕಾರುಗಳ ಬಗ್ಗೆ ಕೊಂಚ ತಿಳಿದಿದ್ದ ಮಾಲಿಕರು ಇದಕ್ಕೆ ಸಮ್ಮತಿಸದೆ, ಆಟೋಬಾನ್ ಸ್ಕೋಡಾದ ಸರ್ವೀಸ್ ಮ್ಯಾನೇಜರ್ ಆದ ಶ್ರೀ ಮುದಾಸ್ಸರ್ ಅವರ ಹತ್ತಿರ ರಶೀದಿಯ ಕುರಿತಾಗಿ ಏಕೆ ಇಷ್ಟು ಖರ್ಚಾಗುತ್ತದೆ ಎಂಬ ಮಾಹಿತಿಯನ್ನು ಕೇಳಿದಾಗ ಮ್ಯಾನೇಜರ್ ಹೇಳಿದ್ದು ಹೀಗೆ, ಕಾರಿನ ಬಿಡಿಭಾಗಗಳಿಗೆ ರೂ. 1.43 ಲಕ್ಷ ಮತ್ತು ಲೇಬರ್ ಚಾರ್ಜ್‍‍ಗಾಗಿ 25,000 ಸಾವಿರದ ಮೊತ್ತದಲ್ಲಿ ಚಾರ್ಚಾಗುತ್ತದೆ ಎಂದು ಹೇಳಿದರು.

ಕಾರು ರಿಪೇರಿಗೆ ಹೋದ ಸ್ಕೋಡಾ ಮಾಲಕಿಗೆ ಡೀಲರ್ಸ್ ಹೀಗಾ ಮಾಡೋದು.?

ಸ್ಕೋಡಾ ಲೌರಾ ಸೆಡಾನ್ ಕಾರಿನ ಮಾಲಿಕರು ಡೀಲರ್‍ ತಮ್ಮನು ಮೋಸ ಮಾಡುತ್ತಿರುವುದಾಗಿ ಅರಿತು, ಸ್ಕೋಟಾ ಆಟೋ ಸಂಸ್ಥೆಯ ತತ್ವಗಳನ್ನು ಪಾಲಿಸುತ್ತಿಲ್ಲವೆಂದು ಅರಿವಾಯಿತು.ಇದರಿಂದ ಬೇಸತ್ತ ಕಾರಿನ ಮಾಲಿಕರು ಮುಂಬೈಯಲ್ಲಿ ಪ್ರಸಿದ್ಧವಾದ ಲೋಕಲ್ ಕಾರ್ಯಾಗಾರವಾದ ಭಾರತ್ ಆಟೋ ಅಸೋಸಿಯೇಟ್ಸ್ನಿಂದ ನಿತಿನ್ ಅವರನ್ನು ಕರೆದರು.

ಕಾರು ರಿಪೇರಿಗೆ ಹೋದ ಸ್ಕೋಡಾ ಮಾಲಕಿಗೆ ಡೀಲರ್ಸ್ ಹೀಗಾ ಮಾಡೋದು.?

ಆಗಸ್ಟ್ 21 2018ರಂದು ಸ್ಕೋಡಾ ಲೌರಾ ಕಾರಿನ ಮಾಲಿಕರು ಸ್ಥಳಿಯ ಕಾರ್ಯಗಾರರ ಬಳಿಗೆ ತಮ್ಮ ಕಾರನ್ನು ಕೊಂಡೊಯ್ದರು. ಆದರೆ ಸುಮಾರು ನಾಲ್ಕು ದಿನಗಳ ಕಾಲ ಆಟೊಬಾನ್ ಸ್ಕೋಡಾ ಡೀಲರ್‍‍ನ ಹತ್ತಿರವಿದ್ದ ಕಾರನ್ನು ಹೊರ ತರಲು ಮಾಲಿಕರಿಗೆ ಕಷ್ಟವಾಯಿತು.

ಕಾರು ರಿಪೇರಿಗೆ ಹೋದ ಸ್ಕೋಡಾ ಮಾಲಕಿಗೆ ಡೀಲರ್ಸ್ ಹೀಗಾ ಮಾಡೋದು.?

ಏಕೆಂದರೆ ನಾಲ್ಕು ದಿನಗಳ ಕಾಲ ಡೀಲರ್‍‍ನ ಬಳಿ ಇರಬೇಕಾದ ಕಾರಿಗೆ ಸರ್ವೀಸ್ ಚಾರ್ಜ್ ಮತ್ತು ಜಿಎಸ್‍‍ಟಿಯನ್ನು ಸೇರಿಸಿ ರೂ. 3,000 ಸಾವಿರದ ಮೊತ್ತವನ್ನು ಪಾವತಿಸಿ ಕಾರನ್ನು ಕೊಂಡೊಯ್ಯಲು ಮ್ಯಾನೇಜರ್ ಆದೇಶಿಸಿದರು.

ಕಾರು ರಿಪೇರಿಗೆ ಹೋದ ಸ್ಕೋಡಾ ಮಾಲಕಿಗೆ ಡೀಲರ್ಸ್ ಹೀಗಾ ಮಾಡೋದು.?

ಅದೇ ದಿನದ ಸಂಜೆ ವೇಳೆ ಸ್ಕೋಡಾ ಕಾರು ಭಾರತ್ ಆಟೋ ಅಸೋಸಿಯೇಟ್ಸ್ ಅನ್ನು ತಲುಪಿದ್ದು, ಅಲ್ಲಿನ ಕಾರ್ಯಗಾರರು ಕಾರಿನಲ್ಲಿ ಉಂಟಾದ ಲೋಪವನ್ನು ಗುರುತಿಸಿ, ಕೇವಲ ಆ ಕಾರಿನಲ್ಲಿರುವ ಟೈಮಿಂಗ್ ಬೆಲ್ಟ್ ಅನ್ನು ಮಾತ್ರ ಬದಲಾಯಿಸಿದರೆ ಸಾಕು ಎಂದು ಮಾಲಿಕರಿಗೆ ತಿಳಿಸಿದರು. ಇದೇ ತೊಂದರೆಯನ್ನು ಆಟೊಬಾನ್ ಕೂಡಾ ನೀಡಿದ ರಶೀದಿಯಲ್ಲಿ ಉಲ್ಲೇಖಿಸಲಾಗಿತ್ತು.

ಕಾರು ರಿಪೇರಿಗೆ ಹೋದ ಸ್ಕೋಡಾ ಮಾಲಕಿಗೆ ಡೀಲರ್ಸ್ ಹೀಗಾ ಮಾಡೋದು.?

ಸ್ಥಳಿಯ ಕಾರ್ಯಗಾರರು ಸ್ಕೋಡಾ ಲೌರಾ ಕಾರಿನಲ್ಲಿರುವ ಲೋಪವನ್ನು ನಿವಾರಿಸಲು ಸುಮಾರು ಎರಡರಿಂದ ಮೂರು ತಾಸು ಸಮಯವನ್ನು ತೆಗೆದುಕೊಂಡು, ಕೇವಲ ರೂ. 1,062 ಸಾವಿರ ಮೊತ್ತದ ಬಿಲ್ ಅನ್ನು ಮಾಲಿಕರಿಗೆ ನೀಡಲಾಗಿತ್ತು.

Most Read: ಕ್ಲಾಸಿಕ್ 500 ಪೆಗಾಸಸ್ ಖರೀದಿಸಿದವರಿಗೆ ಪಂಗನಾಮ ಹಾಕ್ತಾ ರಾಯಲ್ ಎನ್‌ಫೀಲ್ಡ್?

ಕಾರು ರಿಪೇರಿಗೆ ಹೋದ ಸ್ಕೋಡಾ ಮಾಲಕಿಗೆ ಡೀಲರ್ಸ್ ಹೀಗಾ ಮಾಡೋದು.?

ಹೀಗೆ ಲೌರಾ ಸೆಡಾನ್ ಮಾಲಿಕರಿಗೆ ಕಾರಿನಲ್ಲಿದ ಲೋಪಕ್ಕಾಗಿ ಸ್ಕೋಡಾ ಅಧಿಕೃತ ಡೀಲರ್‍‍ಗಳಾದ ಆಟೋಬಾನ್ ಸ್ಕೋಡಾರವರು ರೂ. 1,68 ಲಕ್ಷದ ರಶೀದಿಯನ್ನು ನೀಡಿದರೆ, ಸ್ಥಳಿಯ ಭಾರತ್ ಆಟೋ ಅಸೋಸಿಯೇಟ್ಸ್ ಕೇವಲ 1,062 ರುಪಾಯಿಯಲ್ಲಿ ಕಾರಿನ ಲೋಪವನ್ನು ಸರಿಪಡಿಸಿದರು. ಇದೀಗ ಲೌರಾರವರು ಯಾವುದೇ ತೊಂದರೆ ಇಲ್ಲದೆ ಹೊಸ ಕಾರಿನಂತೆಯೆ ತಮ್ಮ ಕಾರನ್ನು ಚಲಾಯಿಸುತ್ತಿದ್ದಾರೆ.

ಕಾರು ರಿಪೇರಿಗೆ ಹೋದ ಸ್ಕೋಡಾ ಮಾಲಕಿಗೆ ಡೀಲರ್ಸ್ ಹೀಗಾ ಮಾಡೋದು.?

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಸ್ಕೋಡಾ ಆಟೋ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನಗೊಳ್ಳುತ್ತಿರುವ ಐಷಾರಾಮಿ ಸಂಸ್ಥೆಗಳಲ್ಲಿ ಒಂದಾಗಿದ್ದು, ಸ್ಕೋಡಾ ಆಟೋ ಕೆಲವು ಉತ್ತಮ ಗುಣಮಟ್ಟ ಮತ್ತು ಅನುಭವಗಳೊಂದಿಗೆ ಕಾರ್ಯ ನಿರ್ವಹಿಸುತ್ತದೆ, ಉತ್ತಮ ಗ್ರಾಹಕ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಕಾರು ರಿಪೇರಿಗೆ ಹೋದ ಸ್ಕೋಡಾ ಮಾಲಕಿಗೆ ಡೀಲರ್ಸ್ ಹೀಗಾ ಮಾಡೋದು.?

ಆದರೆ ಮುಂಬೈನಲ್ಲಿನ ಆಟೊಬಾನ್ ಡೀಲರ್‍‍ಗಳು ಸ್ಕೋಡಾ ಸಂಸ್ಥೆಯ ನಿಯಮಗಳನ್ನು ಪಾಲಿಸದೆ, ತಮ್ಮ ಗ್ರಾಹಕರಿಂದ ಮೋಸದಿಂದ ಹೆಚ್ಚಿನ ಹಣವನ್ನು ಘಳಿಸಲು ಮುಂದಾಗಿದ್ದರು. ಸ್ಕೋಡಾ ಇಂಡಿಯಾ ಈ ಸಮಸ್ಯೆಯನ್ನು ಪರಿಶೀಲಿಸಿ ಮತ್ತು ಅವರ ಇತರ ಮೌಲ್ಯಯುತ ಗ್ರಾಹಕರು ಇಂತಹ ಅಗ್ನಿಪರೀಕ್ಷೆಯನ್ನು ಎದುರಿಸುವ ಘಟನೆಯನ್ನು ಎರುರಾಗಲು ಮಾಡದಿರಲಿ ಎಂದು ನಾವು ಭಾವಿಸುತ್ತೇವೆ.

Kannada
Read more on skoda dealer price
English summary
Skoda Dealership Asks Rs 1.68 Lakh For Engine Failure; Local Workshop Fixes It For Rs 1000.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more