Royal Enfield: 150 ಕಿ.ಮೀ ಮೈಲೇಜ್.. ರಾಯಲ್ ಎನ್‌ಫೀಲ್ಡ್‌ನ ಹೊಸ ಇ-ಬೈಕ್ ಕುರಿತ ಪ್ರಮುಖಾಂಶಗಳು
ಗೋವಾದಲ್ಲಿ ಜರುಗಿದ ಮೋಟೋವರ್ಸ್ - 2025 (MotoVerse - 2025) ಕಾರ್ಯಕ್ರಮದಲ್ಲಿ, ನೂತನ ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲಿಯಾ ಎಸ್6 (Royal Enfield Flying Flea S6) ಮೋಟಾರ್‌ಸೈಕಲ್‌ನ್ನು ಪರಿಚಯಿಸಲಾಗಿದೆ. ಇದೊಂದು ಎಲೆಕ್ಟ್ರಿಕ್ ಚಾಲಿತ ಬೈಕ್ ಆಗಿದೆ. ಹೆಚ್ಚು ಅತ್ಯಾಧುನಿಕವಾಗಿದ್ದು, ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಬನ್ನಿ, ಈ ಮೋಟಾರ್‌ಸೈಕಲ್‌ನ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.
ಬೆಲೆ (Price):
ಇದು ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ. ರೂ.2.30 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರುವ ನಿರೀಕ್ಷೆಯಿದ್ದು, ಎಲ್ಲ ವರ್ಗದವರಿಗೂ ಸುಲಭವಾಗಿ ಕೈಗೆಟುಕುತ್ತದೆ. 2027ರ ಶುರುವಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ.

ವಿನ್ಯಾಸ (Design):
ಹೊಸ 'ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲಿಯಾ ಎಸ್6' ಎಲೆಕ್ಟ್ರಿಕ್ ಮೋಟಾರ್‌ಸೈಕಲ್, ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಸ್ಲಿಮ್ ಬಾಡಿ ಪ್ರೊಫೈಲ್ ಒಳಗೊಂಡಿದ್ದು, ಉತ್ತಮವಾದ ಎಲ್ಇಡಿ ಹೆಡ್‌ಲೈಟ್, 'ಟಿಯರ್ ಡ್ರಾಪ್' ಆಕಾರಕ್ಕೆ ಹೋಲಿಕೆಯಾಬಲ್ಲ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ. ಜೊತೆಗೆ ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಸುತ್ತಳತೆ (Dimension):
ಈ ಬೈಕ್‌ನ ಸುತ್ತಳತೆ ಕುರಿತಂತೆ ಖಚಿತ ವಿವರಗಳು ಲಭ್ಯವಾಗಿಲ್ಲ. ಮೂಲಗಳ ಪ್ರಕಾರ, 2,060 ಎಂಎಂ ಉದ್ದ, 867 ಎಂಎಂ ಅಗಲ ಮತ್ತು 1,220 ಎಂಎಂ ಎತ್ತರವಿರಲಿದೆ. ಜೊತೆಗಿದು 197 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,450 ಎಂಎಂ ವೀಲ್‌ಬೇಸ್‌ನ್ನು ಪಡೆದುಕೊಂಡಿರಲಿದೆ.

ಕಾರ್ಯಕ್ಷಮತೆ (Performance):
ನೂತನ 'ಫ್ಲೈಯಿಂಗ್ ಫ್ಲಿಯಾ ಎಸ್6' ಇ-ಮೋಟಾರ್‌ಸೈಕಲ್, ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿರಬಹುದು ಎಂದು ಹೇಳಲಾಗಿದೆ. 4.4 ಕಿಲೋವ್ಯಾಟ್ (ಕೆಡಬ್ಲ್ಯೂಡಬ್ಲ್ಯೂ) ಬ್ಯಾಟರಿ ಪ್ಯಾಕ್‌ನ್ನು ಹೊಂದಿರಲಿದೆ. ಭರ್ತಿ ಚಾರ್ಜ್‌ನಲ್ಲಿ ಸಾಮಾನ್ಯ ಎಲೆಕ್ಟ್ರಿಕ್ ಬೈಕ್‌ನಂತೆ 150 ಕಿ.ಮೀ ರೇಂಜ್ (ಮೈಲೇಜ್) ಕೊಡಬಹುದು ಎಂದು ಹೇಳಲಾಗಿದೆ.
ವೈಶಿಷ್ಟ್ಯಗಳು (Features):
ಇದು ಹಲವು ಆಕರ್ಷಕ ಒಳಗೊಂಡಿರುವ ನಿರೀಕ್ಷೆಯಿದೆ. ಬಹುಮುಖ್ಯವಾಗಿ ರೌಂಡ್ ಟಿಎಫ್‌ಟಿ ಸ್ಕ್ರೀನ್, ಬ್ಲೂಟೂತ್ ಕನೆಕ್ಟಿವಿಟಿ, ವೈ-ಫೈ ಕನೆಕ್ಟಿವಿಟಿ, ವಾಯ್ಸ್ ಅಸಿಸ್ಟ್, ಇನ್-ಹೌಸ್ ವಿಸಿಯು (ವೆಹಿಕಲ್ - ಕಂಟ್ರೋಲ್ ಯುನಿಟ್) ಹಾಗೂ ಎನ್ಎಕ್ಸ್‌ಪಿ ಮೈಕ್ರೋ ಕಂಟ್ರೋಲರ್‌ನ್ನು ಹೊಂದಿದೆ. ಫಾರ್ವರ್ಡ್ ಮತ್ತು ರಿವರ್ಸ್ ಕ್ರಾಲ್ ಸೇರಿದಂತೆ 6 ಆಕರ್ಷಕ ರೈಡಿಂಗ್ ಮೋಡ್‌ಗಳನ್ನು ಪಡೆದಿದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):
ಈ ಎಲೆಕ್ಟ್ರಿಕ್ ಬೈಕ್ ಸವಾರರಿಗೆ ಗರಿಷ್ಠ ರಕ್ಷಣೆಯನ್ನು ನೀಡುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) ಇನ್ವೆರ್ಟೆಡ್ ಫೋರ್ಕ್ ಮತ್ತು ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಡುಯಲ್ ಚಾನೆಲ್ ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.
ವೀಲ್ & ಟೈರ್‌ಗಳು (Wheels & Tires):
ನೂತನ 'ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲಿಯಾ ಎಸ್6' ಇ-ಮೋಟಾರ್‌ಸೈಕಲ್, ರಸ್ತೆಯ ಮೇಲೆ ಬಿಗಿಯಾದ ಹಿಡಿತ ಒದಗಿಸಬಲ್ಲದು. ಅದಕ್ಕಾಗಿ 18 - ಇಂಚಿನ ಅಲ್ಯೂಮಿನಿಯಂ ಸ್ಪೋಕ್ ವೀಲ್‌ಗಳು ಮತ್ತು ಬ್ಲ್ಯಾಕ್ ಪ್ಯಾಟರ್ನ್ ಟೈರ್‌ಗಳನ್ನು ಪಡೆದಿದೆ.
ಒಟ್ಟಾರೆಯಾಗಿ, 'ಫ್ಲೈಯಿಂಗ್ ಫ್ಲಿಯಾ ಎಸ್6' ಎಲೆಕ್ಟ್ರಿಕ್ ಬೈಕ್ ಅನಾವರಣಗೊಂಡಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಅತ್ಯುತ್ತಮವಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಈ ಮೋಟಾರ್‌ಸೈಕಲ್ ಬಿಡುಗಡೆಯಾದ ಮೇಲೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








