ಜುಲೈನಲ್ಲಿ ಬಿಡುಗಡೆಯಾಗಲಿವೆ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್...

ಜಿ 310 ಆರ್ ಸ್ಟ್ರೀಟ್ ಫೈಟರ್ ಮತ್ತು ಜಿ 310 ಜಿಎಸ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದ್ದು, ಇದೀಗ ಬಿಡುಗಡೆಗಾಗಿ ಹೊಸ ಬೈಕ್ ಮಾದರಿಗಳನ್ನು ಡೀಲರ್ಸ್ ಯಾರ್ಡ್‌ಗಳಿಗೆ ರವಾನೆ ಮಾಡಲಾಗುತ್ತಿದೆ.

By Praveen Sannamani

ಬಿಎಂಡಬ್ಲ್ಯು ಮೊಟೊರಾಡ್ ತನ್ನ ಹೊಚ್ಚ ಹೊಸ ಅಡ್ವೆಂಚರ್ ಮಾದರಿಗಳಾದ ಜಿ 310 ಆರ್ ಸ್ಟ್ರೀಟ್ ಫೈಟರ್ ಮತ್ತು ಜಿ 310 ಜಿಎಸ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದ್ದು, ಇದೀಗ ಬಿಡುಗಡೆಗಾಗಿ ಹೊಸ ಬೈಕ್ ಮಾದರಿಗಳನ್ನು ಡೀಲರ್ಸ್ ಯಾರ್ಡ್‌ಗಳಿಗೆ ರವಾನೆ ಮಾಡಲಾಗುತ್ತಿದೆ.

ಜುಲೈನಲ್ಲಿ ಬಿಡುಗಡೆಯಾಗಲಿವೆ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್...

ಫೆಬ್ರುವರಿಯಲ್ಲಿ ನಡೆದ 2018ರ ದೆಹಲಿ ಆಟೋ ಮೇಳದಲ್ಲಿ ಜಿ 310 ಆರ್ ಸ್ಟ್ರೀಟ್ ಫೈಟರ್ ಮತ್ತು ಜಿ 310 ಜಿಎಸ್ ಬೈಕಿನ ಉತ್ಪಾದನಾ ಮಾದರಿಗಳನ್ನು ಅನಾವರಣಗೊಳಿಸಿದ್ದ ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ದೇಶದ ಜನಪ್ರಿಯ ಟಿವಿಎಸ್ ಮೋಟಾರ್ಸ್ ಜೊತೆಗೂಡಿ ತನ್ನ ಹೊಸ ಬೈಕ್‌ಗಳನ್ನು ಉತ್ಪಾದನೆ ಮಾಡುತ್ತಿದೆ. ಹೀಗಾಗಿ ಸ್ಥಳೀಯ ಉತ್ಪನ್ನಗಳ ಬಳಕೆ ಮಾಡುವ ಮೂಲಕ ಉತ್ಪಾದನಾ ವೆಚ್ಚವನ್ನು ಪರಿಣಾಮಕಾರಿಯಾಗಿ ತಗ್ಗಿಸಲಾಗಿದ್ದು, ಬೈಕಿನ ಬೆಲೆ ವಿಚಾರದಲ್ಲೂ ಬಿಎಂಡಬ್ಲ್ಯು ಸಂಸ್ಥೆಯು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ.

ಜುಲೈನಲ್ಲಿ ಬಿಡುಗಡೆಯಾಗಲಿವೆ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್...

ಮಾಹಿತಿಗಳ ಪ್ರಕಾರ ಬಿಎಂಡಬ್ಲ್ಯು ಸಂಸ್ಥೆಯು ಹೊಸ ಬೈಕ್‌ಗಳನ್ನು ಮುಂದಿನ ಜೂನ್ ಅಂತ್ಯಕ್ಕೆ ಇಲ್ಲವೇ ಜುಲೈ ಮೊದಲ ವಾರದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದ್ದು, ಭಾರತೀಯ ಮಾರುಕಟ್ಟೆ ಹೊಸ ಬೈಕ್ ಉತ್ಪನ್ನಗಳು ಭಾರೀ ಸದ್ದು ಮಾಡುವ ನೀರಿಕ್ಷೆಯಿದೆ.

ಜುಲೈನಲ್ಲಿ ಬಿಡುಗಡೆಯಾಗಲಿವೆ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್...

ಇದಲ್ಲದೇ ಚೆನ್ನೈನ ಹೊಸೂರುನಲ್ಲಿರುವ ಟಿವಿಎಸ್ ಮೋಟಾರು ಘಟಕದಲ್ಲಿ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳು ನಿರ್ಮಾಣವಾಗುತ್ತಿದ್ದು, ದೇಶಿಯ ಮಾರುಕಟ್ಟೆಗೆ ಅಷ್ಟೇ ಅಲ್ಲದೇ ಇಲ್ಲಿಂದಲೇ ವಿದೇಶಿ ಮಾರುಕಟ್ಟೆಗೂ ಬೃಹತ್ ಪ್ರಮಾಣದಲ್ಲಿ ಹೊಸ ಬೈಕ್ ಮಾದರಿಗಳನ್ನು ರಫ್ತುಗೊಳಿಸುವ ಯೋಜನೆ ಹೊಂದಿದೆ.

ಜುಲೈನಲ್ಲಿ ಬಿಡುಗಡೆಯಾಗಲಿವೆ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್...

ಹೊಸೂರು ಪ್ಲ್ಯಾಂಟ್‌ನಿಂದ ಬೆಂಗಳೂರಿನ ಪ್ರಮುಖ ಡೀಲರ್ಸ್ ಯಾರ್ಡ್‌ಗಳಲ್ಲಿ ಹೊಸ ಬೈಕ್‌ಗಳನ್ನು ಸ್ಟಾಕ್ ಮಾಡಲಾಗುತ್ತಿದ್ದು, ಈ ವೇಳೆ ಸಾರ್ವಜನಿಕ ಕಾಣಿಸಿಕೊಂಡ ಹೊಸ ಬೈಕ್‌ಗಳು ಗ್ರಾಹಕರ ಆಕರ್ಷಣೆ ಕಾರಣವಾಗಿವೆ.

ಜುಲೈನಲ್ಲಿ ಬಿಡುಗಡೆಯಾಗಲಿವೆ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್...

ಬಿಎಂಡಬ್ಲ್ಯು ಶಕ್ತಿಶಾಲಿ ಆರ್ 1200 ಜಿಎಸ್ ಬೈಕ್ ನಿಂದ ಪ್ರೇರಣೆ ಪಡೆದುಕೊಂಡಿರುವ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳು ಆಫ್ ರೋಡ್ ಸ್ನೇಹಿ ಚಕ್ರಗಳನ್ನು ಪಡೆದುಕೊಂಡಿದೆ. ಜೊತೆಗೆ ನೂತನ ಬೈಕ್‌ಗಳು ಬೆಲೆಯನ್ನು ಎರಡೂವರಿ ಲಕ್ಷದಿಂದ ಮೂರು ಲಕ್ಷದೊಳಗೆ ಬಿಡುಗಡೆಯಾಗುವುದಾಗಿ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಜುಲೈನಲ್ಲಿ ಬಿಡುಗಡೆಯಾಗಲಿವೆ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್...

ಇನ್ನು ಜಿ 310 ಜಿಎಸ್ ಬೈಕ್ ಮಾದರಿಯೂ ಅಡ್ವೆಂಚರ್ ವಿಭಾಗದಲ್ಲಿ ಅಭಿವೃದ್ದಿಗೊಂಡಿದ್ದು, 313 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಪಡೆದುಕೊಂಡಿದೆ. ಈ ಮೂಲಕ 34 ಬಿಎಚ್‌ಪಿ ಮತ್ತು 28 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, ಇದರ ಜೊತೆಗೆ ಅತ್ಯುತ್ತಮ ಹೊರ ವಿನ್ಯಾಸಗಳನ್ನು ತನ್ನದಾಗಿಸಿಕೊಂಡಿದೆ.

ಜುಲೈನಲ್ಲಿ ಬಿಡುಗಡೆಯಾಗಲಿವೆ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್...

ಜೊತೆಗೆ ಜಿ 310 ಜಿಎಸ್ ಬೈಕ್ ಮಾದರಿಯು ಶಾರ್ಪ್ ಹೆಡ್‌ಲ್ಯಾಂಪ್, ಮಸ್ಕ್ಯೂಲರ್ ಫ್ಯೂಲ್ ಟ್ಯಾಂಕ್ ಮತ್ತು ಡ್ಯುಯಲ್ ಸ್ಪೋರ್ಟ್ ಟೈರ್‌ನೊಂದಿಗೆ ಗಮನಸೆಳೆಯುತ್ತಿದ್ದು, ಲಗ್ಗೇಜ್ ಕ್ಯಾರಿಯರ್, ಟಾಪ್ ಬಾಕ್ಸ್, ಸೆಂಟರ್ ಸ್ಟ್ಯಾಂಡ್, ಎಲ್ ಇಡಿ ಇಂಡಿಕೇಟರ್, ಹೀಟಡ್ ಗ್ರಿಪ್, ಟ್ಯಾಂಕ್ ಬ್ಯಾಗ್, ಜಿಪಿಎಸ್ ಸಪೋರ್ಟ್, ಜಿಪಿಎಸ್ ನೇವಿಗೇಟರ್ ಮತ್ತು ಆಫ್ ರೋಡ್ ಚಾಲನೆಗಳನ್ನು ಗಿಟ್ಟಿಸಿಕೊಳ್ಳಲಿದೆ.

ಜುಲೈನಲ್ಲಿ ಬಿಡುಗಡೆಯಾಗಲಿವೆ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್...

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ(ಎಬಿಎಸ್) ಸ್ಟ್ಯಾಂಡರ್ಡ್ ಆಗಿ ದೊರಕಲಿದೆ. ಅಂದ ಹಾಗೆ, ನೂತನ ಜಿ310 ಜಿಎಸ್ ಬೈಕ್‌ಗಳು 2075 ಎಂಎಂ ಉದ್ದ, 880 ಎಂಎಂ ಅಗಲ 1230 ಎಂಎಂ ಎತ್ತರ ಮತ್ತು 1420 ಎಂಎಂ ಚಕ್ರಾಂತರವನ್ನು ಪಡೆದಿರುತ್ತದೆ. ಇನ್ನು 169.5 ಕೆ.ಜಿ ತೂಕವನ್ನು ಹೊಂದಿದೆ.

ಜುಲೈನಲ್ಲಿ ಬಿಡುಗಡೆಯಾಗಲಿವೆ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್...

ಡ್ರೈವ್ ಸಾರ್ಕ್ ಅಭಿಪ್ರಾಯ

ಐಷಾರಾಮಿ ಕಾರುಗಳಷ್ಟೇ ಅಲ್ಲದೇ ಸೂಪರ್ ಬೈಕ್ ಉತ್ಪಾದನೆಯಲ್ಲೂ ಮಹತ್ವದ ಹೆಜ್ಜೆ ಇಟ್ಟಿರುವ ಬಿಎಂಡಬ್ಲ್ಯು ಸಂಸ್ಥೆಯು ಕಳೆದ ಕೆಲ ವರ್ಷಗಳಿಂದ ವಿವಿಧ ಮಾದರಿಯ ಬೈಕ್‌ಗಳನ್ನು ಬಿಡುಗಡೆಗೊಳಿಸಿದ್ದು, ಸದ್ಯ ಹೊಸದಾಗಿ ಸಿದ್ಧಗೊಳಿಸಿರುವ ಜಿ 310 ಜಿಎಸ್ ಬೈಕ್‌ಗಳು ಕಡಿಮೆ ಬೆಲೆ ವಿಚಾರವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುವುದು ಖಚಿತವಾಗಿದೆ.

Article Published On: Tuesday, May 15, 2018, 14:24 [IST]
English summary
The New 2018 BMW G 310 R & G 310 GS India Launch In July.
Read more on bmw motorrad
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+