ಬಿಡುಗಡೆಯಾದ ಬಿಎಂಡಬ್ಲ್ಯು ಹೆಚ್‌ಪಿ4 ರೇಸ್ ಬೈಕ್ ಬೆಲೆ 85 ಲಕ್ಷ ಅಷ್ಟೇ...

ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ತನ್ನ ರೇಸ್ ಎಡಿಷನ್ ಮಾದರಿಯಾದ ಹೆಚ್‌ಪಿ4 ರೇಸ್ ಬೈಕ್ ಅನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ.

By Praveen Sannamani

ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ತನ್ನ ರೇಸ್ ಎಡಿಷನ್ ಮಾದರಿಯಾದ ಹೆಚ್‌ಪಿ4 ರೇಸ್ ಬೈಕ್ ಅನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಈ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 85 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.

ಬಿಡುಗಡೆಯಾದ ಬಿಎಂಡಬ್ಲ್ಯು ಹೆಚ್‌ಪಿ4 ರೇಸ್ ಬೈಕ್ ಬೆಲೆ 85 ಲಕ್ಷ ಅಷ್ಟೇ...

ಟ್ರ್ಯಾಕ್ ಪರ್ಫಾಮೆನ್ಸ್ ಉದ್ದೇಶಕ್ಕಾಗಿಯೇ ಹೆಚ್‌ಪಿ4 ರೇಸ್ ಬೈಕ್ ಆವೃತ್ತಿಯನ್ನು ಅಭಿವೃದ್ಧಿಗೊಳಿಸಲಾಗಿದ್ದು, ವಿಶ್ವಾದ್ಯಂತ ಕೇವಲ 750 ಬೈಕ್‌ಗಳು ಮಾತ್ರವೇ ಮಾರಾಟಕ್ಕಿರಲಿವೆ. ಹೀಗಾಗಿ ಇದು ಲಿಮಿಟೆಡ್ ಎಡಿಷನ್ ಮಾದರಿಯಾಗಿದ್ದು, ಕಾರ್ಬನ್ ಫೈಬರ್ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಯಾದ ಮೊದಲ ಸೂಪರ್ ಬೈಕ್ ಇದಾಗಿದೆ.

ಬಿಡುಗಡೆಯಾದ ಬಿಎಂಡಬ್ಲ್ಯು ಹೆಚ್‌ಪಿ4 ರೇಸ್ ಬೈಕ್ ಬೆಲೆ 85 ಲಕ್ಷ ಅಷ್ಟೇ...

ಸಾಮಾನ್ಯ ರಸ್ತೆಗಳಲ್ಲಿ ಈ ಬೈಕಿಗಿಲ್ಲ ಪ್ರವೇಶವಿಲ್ಲ..!

ಹೌದು, ಇದೊಂದು ಸಂಪೂರ್ಣ ಟ್ರ್ಯಾಕ್ ಬೈಕ್ ಮಾದರಿಯಾಗಿರುವುದರಿಂದ ಸಾಮಾನ್ಯ ರಸ್ತೆಗಳಲ್ಲಿ ಈ ಬೈಕಿಗೆ ಪ್ರವೇಶವಿಲ್ಲ. ಟ್ರ್ಯಾಕ್ ಪರ್ಫಾಮೆನ್ಸ್ ಉದ್ದೇಶಕ್ಕಾಗಿ ಮಾತ್ರವೇ ಈ ಬೈಕ್ ಅನ್ನು ಬಳಕೆಮಾಡಬೇಕಷ್ಟೇ.

ಬಿಡುಗಡೆಯಾದ ಬಿಎಂಡಬ್ಲ್ಯು ಹೆಚ್‌ಪಿ4 ರೇಸ್ ಬೈಕ್ ಬೆಲೆ 85 ಲಕ್ಷ ಅಷ್ಟೇ...

ಹೆಚ್‌ಪಿ4 ರೇಸ್ ಬೈಕ್ ತೂಕ ಕಡಿತಗೊಳಿಸುವ ಸಲುವಾಗಿ ಕಾರ್ಬನ್ ಫೈಬರ್ ತಂತ್ರಜ್ಞಾನ ಬಳಕೆ ಮಾಡಲಾಗಿದ್ದು, ಇದರಿಂದ ಇತರೆ ರೇಸ್ ಬೈಕ್‌ಗಳಿಂತಲೂ ಈ ಬೈಕಿನ ತೂಕವು ಬರೋಬ್ಬರಿ 35 ಕೆ.ಜಿ ಕಡಿಮೆ ಭಾರ ಹೊಂದಿದೆ.

ಬಿಡುಗಡೆಯಾದ ಬಿಎಂಡಬ್ಲ್ಯು ಹೆಚ್‌ಪಿ4 ರೇಸ್ ಬೈಕ್ ಬೆಲೆ 85 ಲಕ್ಷ ಅಷ್ಟೇ...

ಇದೇ ಕಾರಣಕ್ಕಾಗಿಯೇ ಬೈಕಿನ ಬೆಲೆಯು ಹೆಚ್ಚಳವಾಗಿರಲು ಕಾರಣವಾಗಿದ್ದು, 171 ಕೆಜಿ ತೂಕ ಹೊಂದಿರುವ ಈ ಬೈಕ್ ಟ್ರ್ಯಾಕ್‌ನಲ್ಲಿ ಅದ್ಬುತ ಪ್ರದರ್ಶನ ತೊರಬಲ್ಲವು. ಜೊತೆಗೆ ರೇಸ್ ಪ್ರಿಯರಿಗೆ ಅನುಕೂಲಕರವಾಗುವಂತ ಹಲವು ಅತ್ಯಾಧುನಿಕ ರೈಡಿಂಗ್ ಸೌಲಭ್ಯಗಳು ಈ ಬೈಕಿನಲ್ಲಿವೆ.

ಬಿಡುಗಡೆಯಾದ ಬಿಎಂಡಬ್ಲ್ಯು ಹೆಚ್‌ಪಿ4 ರೇಸ್ ಬೈಕ್ ಬೆಲೆ 85 ಲಕ್ಷ ಅಷ್ಟೇ...

ಎಂಜಿನ್ ಸಾಮರ್ಥ್ಯ

999-ಸಿಸಿ ಇನ್ ಲೈನ್, ಫೌರ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ರೇಸ್ ಎಂಜಿನ್ ಸೌಲಭ್ಯವನ್ನ ಹೊಂದಿರುವ ಹೆಚ್‌ಪಿ4 ರೇಸ್ ಬೈಕ್‌ಗಳು 6-ಸ್ಪೀಡ್ ರೇಸಿಂಗ್ ಟ್ರಾನ್ಸ್‌ಮಿಷನ್‌ನೊಂದಿಗೆ 215-ಬಿಎಚ್‌ಪಿ ಮತ್ತು 120-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಬಿಡುಗಡೆಯಾದ ಬಿಎಂಡಬ್ಲ್ಯು ಹೆಚ್‌ಪಿ4 ರೇಸ್ ಬೈಕ್ ಬೆಲೆ 85 ಲಕ್ಷ ಅಷ್ಟೇ...

ಜೊತೆಗೆ ಸ್ಟ್ರೇಟ್ ಕಟ್ ಗೇರ್‌ಬಾಕ್ಸ್ ಹೊಂದಿರುವ ಈ ಬೈಕ್‌ಗಳು ಟ್ರ್ಯಾಕ್‌ನಲ್ಲಿ ಸಹಕಾರಿಯಾಗಲಿದ್ದು, ಮುಂಭಾಗದಲ್ಲಿ ಒಹೊ ಲೈನ್ ಎಫ್‌ಜಿಆರ್ 300 ಫ್ರೊಕ್ಸ್ ಮತ್ತು ಹಿಂಭಾಗದಲ್ಲಿ ಒಹೊ ಲೈನ್ ಟಿಟಿಎಕ್ಸ್ 36 ಜಿಪಿ ಮೊನೊಶಾರ್ಕ್ ಪಡೆದುಕೊಂಡಿದೆ.

ಬಿಡುಗಡೆಯಾದ ಬಿಎಂಡಬ್ಲ್ಯು ಹೆಚ್‌ಪಿ4 ರೇಸ್ ಬೈಕ್ ಬೆಲೆ 85 ಲಕ್ಷ ಅಷ್ಟೇ...

ಇದರೊಂದಿಗೆ 320ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 220ಎಂಎಂ ರಿಯರ್ ಡಿಸ್ಕ್ ಬ್ರೇಕ್ ಮತ್ತು ಟೈಟಾನಿಯಂ ಅಕ್ರೊಪ್ರೊವಿಕ್ ಎಕ್ಸಾಸ್ಟ್ ಹೊಂದಿರುವ ಹೆಚ್‌ಪಿ4 ರೇಸ್ ಬೈಕ್ ಮಾದರಿಯು ದುಬಾರಿ ಬೆಲೆಯ ಟೈರ್ ಮಾದರಿಯಾದ 17-ಇಂಚಿನ ಪಿರೆಲ್ಲಿ ಡೈಯಾಬ್ಲೊ ಸ್ಲಿಕ್ ಎಸ್‌ಸಿ2 ಟೈರ್ ಸೌಲಭ್ಯ ಹೊಂದಿದೆ.

ಬಿಡುಗಡೆಯಾದ ಬಿಎಂಡಬ್ಲ್ಯು ಹೆಚ್‌ಪಿ4 ರೇಸ್ ಬೈಕ್ ಬೆಲೆ 85 ಲಕ್ಷ ಅಷ್ಟೇ...

ಇನ್ನು ಸುರಕ್ಷೆತೆಗಾಗಿ ಹೆಚ್‌ಪಿ4 ರೇಸ್ ಬೈಕ್‌ಗಳಲ್ಲಿ ಅಲ್ಯುನಿಯಂ WSBK ಸ್ವಿಂಗ್‌ಗಾರ್ಮ್, ಡೈನಾಮಿಕ್ ಟ್ರಾಕ್ಷನ್ ಕಂಟ್ರೊಲರ್, ಎಂಜಿನ್ ಬ್ರೇಕಿಂಗ್, ವೀಲ್ಲಿ ಕಂಟ್ರೋಲರ್, ಪಿಟ್ ಲೆನ್ ಲಿಮಿಟರ್ ಮತ್ತು ಆ್ಯಂಟಿ ಹೊಪಿಂಗ್ ಕ್ಲಚ್ ಜೋಡಣೆಯಿದೆ.

ಬಿಡುಗಡೆಯಾದ ಬಿಎಂಡಬ್ಲ್ಯು ಹೆಚ್‌ಪಿ4 ರೇಸ್ ಬೈಕ್ ಬೆಲೆ 85 ಲಕ್ಷ ಅಷ್ಟೇ...

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸದ್ಯ ಭಾರತದಲ್ಲಿ ಲಭ್ಯವಿರುವ 1.12 ಕೋಟಿ ಮೌಲ್ಯದ ಡುಕಾಟಿ 1299 ಸೂಪರ್ ಲೆಗ್ಗರ್ ಸೂಪರ್ ಬೈಕಿಗಿಂತಲೂ ಹೆಚ್ಚಿನ ಗುಣಮಟ್ಟ ಹೊಂದಿರುವ ಹೆಚ್‌4 ರೇಸ್ ಬೈಕ್‌ಗಳು ರೇಸಿಂಗ್ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸಲಿದ್ದು, ಲಿಮಿಟೆಡ್ ಎಡಿಷನ್ ಆಗಿರುವುದರಿಂದ ಕೇವಲ 750 ಬೈಕ್‌ಗಳು ಮಾತ್ರವೇ ಖರೀದಿಗೆ ಲಭ್ಯವಿರಲಿವೆ.

Article Published On: Saturday, July 21, 2018, 14:17 [IST]
English summary
BMW HP4 Race Launched In India At Rs 85 Lakh — Limited To Just 750 Units Worldwide.
Read more on bmw motorrad super bikes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+