ಹೊಚ್ಚ ಹೊಸ ಇ ಮೋಷನ್ ಸರ್ಜ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನಾವರಣ
ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳ ಉತ್ಪಾದನೆ ಮತ್ತು ಮಾರಾಟ ಭರಾಟೆ ಜೋರಾಗಿದೆ. ಹೀಗಾಗಿ ಹೊಸ ಹೊಸ ಆಟೋ ಉತ್ಪಾದನಾ ಸಂಸ್ಥೆಗಳು ಸಹ ವಿನೂತನ ಮಾದರಿಯ ಎಲೆಕ್ಟ್ರಿಕ್ ಬೈಕ್ ಮತ್ತು ಕಾರು ಮಾದರಿಗಳನ್ನು ಅನಾವರಣಗೊಳಿಸುತ್ತಿದ್ದು, ಇದೀಗ ಇ ಮೋಷನ್ ಸರ್ಜ್ ಎನ್ನುವ ಮತ್ತೊಂದು ಹೊಸ ಇವಿ ಬೈಕ್ ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿದೆ.

ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಹಲವಾರು ಆಟೋ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಪರಿಚಯಿಸುತ್ತಿದ್ದು, ತಮಿಳುನಾಡಿನ ಕೊಯಮತ್ತೂರು ಮೂಲದ ಸರ್ಜ್ ಎನ್ನುವ ಸಂಸ್ಥೆಯು ಸಹ ಇ ಮೋಷನ್ ಎನ್ನುವ ಮೋಟಾರ್ ಸೈಕಲ್ ಮಾದರಿಯನ್ನು ಅನಾವರಣಗೊಳಿಸಿರುವುದು ಹಲವು ಕಾರಣಗಳಿಗೆ ವಿಶೇಷ ಎನ್ನಿಸಿದೆ. ಸರ್ಜ್ ಸಂಸ್ಥೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಗಳ ಪ್ರಕಾರ, ಹೊಸ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಮಾದರಿಯು ಶಾರ್ಪ್ ಲುಕ್‌ನೊಂದಿಗೆ ಸಿದ್ದವಾಗಿದ್ದು, ಸ್ಟೈಲಿಷ್ ಡಿಸೈನ್‌ಗಳು ಬೈಕಿನ ಲುಕ್ ಹೆಚ್ಚಿಸಿವೆ.

ಹೊಸ ಬೈಕಿನ ಕಾರ್ಯಕ್ಷಮತೆ ಕುರಿತಂತೆ ಸರ್ಜ್ ಸಂಸ್ಥೆಯು ಈಗಾಗಲೇ ಸ್ವಾಟ್ ಟೆಸ್ಟಿಂಗ್ ಕೂಡಾ ನಡೆಸಿದ್ದು, ಬರೋಬ್ಬರಿ 30 ಸಾವಿರ ಕಿ.ಮೀ ದೂರ ಕ್ರಮಿಸುವ ಮೂಲಕ ಬೈಕಿನ ಎಂಜಿನ್ ಮಾದರಿಯಲ್ಲಿ ಹತ್ತಾರು ಬದಲಾವಣೆ ತರಲಾಗಿದೆ.

ಸುಧಾರಿತ ಮಾದರಿಯ 40ಎಹೆಚ್ ಲಿಥೀಯಂ ಅಯಾನ್ ಬ್ಯಾಟರಿ ಬಳಕೆ ಮಾಡಲಾಗಿದ್ದು, ಕೇವಲ 30 ನಿಮಿಷಗಳಲ್ಲಿ ಪೂರ್ಣ ಪ್ರಮಾಣದ ಚಾರ್ಜಿಂಗ್ ಪಡೆದುಕೊಳ್ಳಲಿದೆ. ಹೀಗಾಗಿ ಸರ್ಜ್ ನಿರ್ಮಾಣ ಮಾಡಿರುವ ಇ ಮೋಷನ್ ಬೈಕ್‌ಗಳು ವಿಶ್ವದರ್ಜೆ ಗುಣಮಟ್ಟದೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆ ಇದೆ ಎನ್ನಬಹುದು.

ಅಧಿಕ ಮೈಲೇಜ್ ಅನುಭವ
ಸರ್ಜ್ ಸಂಸ್ಥೆಯ ಹೇಳಿಕೊಂಡಿರುವ ಪ್ರಕಾರ ಟೆಸ್ಟಿಂಗ್ ಸಂದರ್ಭದಲ್ಲಿ ಪ್ರತಿ ಚಾರ್ಜಿಂಗ್‌ಗೆ ಬರೋಬ್ಬರಿ 100ಕಿ.ಮೀ ಮೈಲೇಜ್ ನೀಡುತ್ತಿದ್ದು, ಇದು ಮುಂಬರುವ ದಿನಗಳಲ್ಲಿ ಇನ್ನಷ್ಟು ಬದಲಾವಣೆಗಳೊಂದಿಗೆ ಪ್ರತಿ ಚಾರ್ಜಿಂಗ್‌ಗೆ 200 ಕಿ.ಮೀ ಮೈಲೇಜ್ ಒದಗಿಸುವ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ.
ಇನ್ನು ಹೊಸ ಗುಣವಿಶೇಷತೆಗಳನ್ನು ಹೊಂದಿರುವ ಇ ಮೋಷನ್ ಬೈಕ್‌ಗಳು 120 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, 4-ಸ್ಪೀಡ್ ಗೇರ್‌ಬಾಕ್ಸ್, 28ಎನ್ಎಂ ಟಾರ್ಕ್‌ನೊಂದಿಗೆ ಪರ್ಫಾಮೆನ್ಸ್ ಪ್ರಿಯರಿಗೂ ಅತ್ಯುತ್ತಮ ಎಲೆಕ್ಟ್ರಿಕ್ ಬೈಕ್ ಆಗಿ ಹೊರಹೊಮ್ಮಲಿದೆ ಎನ್ನಬಹುದು.

ಬೈಕಿನಲ್ಲಿ ಇತರೆ ವಿನ್ಯಾಸಗಳಾದ 7-ಇಂಚಿನ ಬ್ಲ್ಯಾಕ್ ಲಿಟ್ ಡಿಸ್‌ಪೇ, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಜಿಪಿಎಸ್ ನ್ಯಾವಿಗೆಷನ್, ವೆಹಿಕಲ್ ಟ್ರ್ಯಾಕಿಂಗ್, ಆ್ಯಂಟಿ ಥೇಫ್ಟ್, ಕೌಡ್ ಕನೆಕ್ಟಿವಿಟಿ, ಏರ್ ಅಪ್ಡೆಟ್ ಮತ್ತು ಆಟೋಮ್ಯಾಟಿಕ್ ಎಸ್ಒಎಸ್ ಸೌಲಭ್ಯ ಇದರಲ್ಲಿದೆ.


Click it and Unblock the Notifications








