ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಆರಂಭಿಸಲಿದೆ ಹಾರ್ಲೆ ಡೇವಿಡ್ಸನ್..

ನೀವು ಐಷಾರಾಮಿ ಬೈಕ್ ಪ್ರಿಯರಾಗಿದ್ದರೂ ಹಣಕಾಸಿನ ವಿಚಾರಕ್ಕೆ ಬಂದ್ರೆ ಅವುಗಳನ್ನು ಖರೀದಿಸುವುದು ಬಹುತೇಕರಿಗೆ ಕಷ್ಟ ಸಾಧ್ಯ. ಹಾಗಾಂತ ನೀವು ಚಿಂತಿಸಲೂ ಬೇಕಿಲ್ಲ.

By Praveen Sannamani

ನೀವು ಐಷಾರಾಮಿ ಬೈಕ್ ಪ್ರಿಯರಾಗಿದ್ದರೂ ಹಣಕಾಸಿನ ವಿಚಾರಕ್ಕೆ ಬಂದ್ರೆ ಅವುಗಳನ್ನು ಖರೀದಿಸುವುದು ಬಹುತೇಕರಿಗೆ ಕಷ್ಟ ಸಾಧ್ಯ. ಹೀಗಿರುವಾಗ ದುಬಾರಿಯ ಬೆಲೆ ಹಾರ್ಲೆ ಡೇವಿಡ್ಸನ್ ಬೈಕ್‌ಗಳನ್ನು ಖರೀದಿ ಮಾಡಿ ಅವುಗಳನ್ನು ನಿರ್ವಹಣೆ ಮಾಡುವುದು ಅಷ್ಟು ಸುಲಭ ಮಾತಲ್ಲ. ಹಾಗಾಂತ ನೀವು ಚಿಂತಿಸಲೂ ಬೇಕಿಲ್ಲ.

ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಆರಂಭಿಸಲಿದೆ ಹಾರ್ಲೆ ಡೇವಿಡ್ಸನ್..

ಹೌದು.. ಭಾರತೀಯ ಗ್ರಾಹಕರಿಗಾಗಿಯೇ ವಿಶೇಷ ಯೋಜನೆ ರೂಪಿಸಿರುವ ಹಾರ್ಲೆ ಡೆೇವಿಡ್ಸನ್ ಸಂಸ್ಥೆಯು ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಸದ್ಯದಲ್ಲೇ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದು, ವಿಶ್ವದರ್ಜೆಯ ಗುಣಮಟ್ಟದೊಂದಿಗೆ ತನ್ನ ನೆಚ್ಚಿನ ಉತ್ಪನ್ನಗಳನ್ನು ಮರುಮಾರಾಟ ಮಾಡುವ ಯೋಜನೆಗೆ ಸಿದ್ದವಾಗಿದೆ.

ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಆರಂಭಿಸಲಿದೆ ಹಾರ್ಲೆ ಡೇವಿಡ್ಸನ್..

ಹೊಸ ಬೈಕ್ ಮಾದರಿಗಳನ್ನು ಮಾರಾಟ ಮಾಡುವಾಗ ಅನುಸರಿಸುವ ಮಾರಾಟ ತಂತ್ರಗಳನ್ನೇ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಪ್ರಕ್ರಿಯೆಯಲ್ಲೂ ಬಳಕೆ ಮಾಡಲು ಮುಂದಾಗಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಮತ್ತಷ್ಟು ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ.

ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಆರಂಭಿಸಲಿದೆ ಹಾರ್ಲೆ ಡೇವಿಡ್ಸನ್..

ಈ ಬಗ್ಗೆ ಮಾತನಾಡಿರುವ ಹಾರ್ಲೆ ಡೇವಿಡ್ಸನ್ ಇಂಡಿಯಾ ವಿಭಾಗದ ಎಂಡಿ ಪೀಟರ್ ಮ್ಯಾಕೆಂಜಿ ಅವರು, ಭಾರತದಲ್ಲಿ ದುಬಾರಿ ಬೆಲೆಯ ಬೈಕ್‌ ಸರಣಿಗಳ ಮಾರಾಟ ಪ್ರಮಾಣವು ಏರಿಕೆಯಿದ್ದು, ಹೊಸ ಬೈಕಿಗಿಂತ ಸೆಕೆಂಡ್ ಹ್ಯಾಂಡ್ ಮಾದರಿಗಳಿಗೆ ಗ್ರಾಹಕರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ' ಎಂದಿದ್ದಾರೆ.

ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಆರಂಭಿಸಲಿದೆ ಹಾರ್ಲೆ ಡೇವಿಡ್ಸನ್..

ಹೀಗಾಗಿ ಹಾರ್ಲೆ ಡೇವಿಡ್ಸನ್ ಫಸ್ಟ್ ಹ್ಯಾಂಡ್ ಖರೀದಿ ಮಾಡಲು ಸಾಧ್ಯವಾದ ಗ್ರಾಹಕರು ಸೇಕೆಂಡ್ ಹ್ಯಾಂಡ್ ಬೈಕ್‌ಗಳನ್ನು ಖರೀದಿ ಮಾಡುವ ಅವಕಾಶ ಒದಗಿಸುತ್ತಿದ್ದು, ಭಾರತದಲ್ಲಿ ನಮ್ಮ ಹೊಸ ಯೋಜನೆ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಆರಂಭಿಸಲಿದೆ ಹಾರ್ಲೆ ಡೇವಿಡ್ಸನ್..

ವಾಸ್ತವಾಂಶಕ್ಕೆ ಬಂದಲ್ಲಿ, ಭಾರತೀಯ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ವ್ಯಾಪಾರಕ್ಕೆ ಇರುವಷ್ಟೇ ಮ್ಯಾನತೆ ಸೆಕೆಂಡ್ ಹ್ಯಾಂಡ್ ವಾಹನಗಳಿಗೂ ಇದ್ದು, ದುಬಾರಿ ಹಣ ತೆತ್ತು ಹೊಸ ಬೈಕ್ ಖರೀದಿ ಮಾಡುವುದಕ್ಕಿಂತ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಸೇಕೆಂಡ್ ಬೈಕ್ ಖರೀದಿಸುವುದು ಒಂದು ಉತ್ತಮ ಮಾರ್ಗ ಎನ್ನಬಹುದು.

ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಆರಂಭಿಸಲಿದೆ ಹಾರ್ಲೆ ಡೇವಿಡ್ಸನ್..

ಇದರಿಂದಾಗಿ ಲಕ್ಷಾಂತರ ಬೆಲೆಯೊಂದಿಗೆ ಬೈಕ್ ಉತ್ಪನ್ನಗಳನ್ನು ಮಾರಾಟ ಮಾಡುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಸೆಕೆಂಡ್ ಹ್ಯಾಂಡ್ ಬೈಕ್ ಮಾದರಿಗಳನ್ನು ಮಾರಾಟ ಮಾಡಿದಲ್ಲಿ ಲಕ್ಷಾಂತರ ಗ್ರಾಹಕರಿಗೆ ಅದು ಸಹಕಾರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಆರಂಭಿಸಲಿದೆ ಹಾರ್ಲೆ ಡೇವಿಡ್ಸನ್..

ಜೊತೆಗೆ ಹಾರ್ಲೆ ಡೇವಿಡ್ಸನ್ ಬೈಕ್‌ಗಳನ್ನು ಈಗಾಗಲೇ ಖರೀದಿಸಿರುವ ಗ್ರಾಹಕರು ಕಾಲಕ್ಕೆ ತಕ್ಕಂತೆ ಅಪ್ ಗ್ರೇಡ್ ಹೊಂದಲು ಕೂಡಾ ಸಹಕಾರಿಯಾಗಲಿದ್ದು, ಬಳಸಿದ ಬೈಕ್‌ಗಳನ್ನು ಕೆಲವು ಖಾತ್ರಿ ಷರತ್ತುಗಳ ಆಧಾರ ಮೇಲೆ ಮಾರಾಟ ಮಾಡುವುದು ಕೂಡಾ ಸಂಸ್ಥೆಗೆ ಲಾಭ ತಂದುಕೊಡಲಿದೆ.

ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಆರಂಭಿಸಲಿದೆ ಹಾರ್ಲೆ ಡೇವಿಡ್ಸನ್..

ಸದ್ಯ ದೇಶಾದ್ಯಂತ 27 ಅಧಿಕೃತ ಬೈಕ್ ಮಾರಾಟ ಮಳಿಗೆಗಳನ್ನು ಹೊಂದಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಮುಂಬರುವ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲಿದ್ದು, ಇದರ ಜೊತೆಗೆ ಮೆಟ್ರೋ ಸಿಟಿಗಳಲ್ಲಿ ನ ಜನಪ್ರಿಯ ಶಾಪಿಂಗ್ ಮಾಲ್‌ಗಳನ್ನು ತನ್ನ ಉತ್ಪನ್ನಗಳನ್ನು ಪ್ರದರ್ಶನ ಮಾಡಲಿದೆ.

ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಆರಂಭಿಸಲಿದೆ ಹಾರ್ಲೆ ಡೇವಿಡ್ಸನ್..

ಒಟ್ಟಿನಲ್ಲಿ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಜಾರಿಗೆ ತರುತ್ತಿರುವ ಹೊಸ ಯೋಜನೆಯು ಹಲವರ ಕನಸನ್ನು ನನಸು ಮಾಡಲಿದ್ದು, ಈ ಮೂಲಕ ತನ್ನ ಗ್ರಾಹಕ ಸಮುದಾಯವನ್ನು ಹೆಚ್ಚಿಸುವುದರ ಜೊತೆ ಜೊತೆಗೆ ಭಾರೀ ಪ್ರಮಾಣದ ಆದಾಯವನ್ನು ನೀರಿಕ್ಷೆ ಮಾಡುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಕಳೆದ 20 ವರ್ಷಗಳ ಇತಿಹಾಸದಲ್ಲೇ ಅಪಘಾತದಲ್ಲಿನ ಸಂತ್ರಸ್ತರಿಗೆ ಭಾರೀ ಪ್ರಮಾಣದ ಪರಿಹಾರ ಘೋಷಣೆ ಮಾಡಿದ ಕೇಂದ್ರ ಸರ್ಕಾರ..

ಕೇವಲ 9 ನಿಮಿಷದಲ್ಲಿ 100 ಲೀಟರ್ ಇಂಧನ ಖಾಲಿ ಮಾಡುತ್ತೆ ಈ ಬುಗಾಟಿ ಕಾರು !!

ಟ್ಯೂಬ್‌ಲೆಸ್ ಟೈರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ?

ಡ್ರೈವಿಂಗ್ ಲೈಸೆನ್ಸ್ ವಿಚಾರದಲ್ಲಿ ಯುವ ಸಮುದಾಯಕ್ಕೊಂದು ಸಿಹಿ ಸುದ್ದಿ...

ಮಿನಿ ಫಾರ್ಚೂನರ್ ಖ್ಯಾತಿಯ ಟೊಯೊಟಾ ರಷ್ ಸುರಕ್ಷಾ ರೇಟಿಂಗ್ ಎಷ್ಟು ಗೊತ್ತಾ?

More from DriveSpark

Article Published On: Monday, May 14, 2018, 18:56 [IST]
English summary
Harley Davidson To Enter Used Bike Business In India.
Read more on harley davidson
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+