ಕೇವಲ 9 ನಿಮಿಷದಲ್ಲಿ 100 ಲೀಟರ್ ಇಂಧನ ಖಾಲಿ ಮಾಡುತ್ತೆ ಈ ಬುಗಾಟಿ ಕಾರು !!
ಅಮೇರಿಕಾದ ಪರಿಸರ ರಕ್ಷಣಾ ಏಜೆನ್ಸಿಯೊಂದು ಕೈರನ್ ಕಾರಿನ ಮೈಲೇಜ್ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಅಮೇರಿಕಾದ ಪರಿಸರ ರಕ್ಷಣಾ ಏಜೆನ್ಸಿಯೊಂದು ಕೈರನ್ ಕಾರಿನ ಮೈಲೇಜ್ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಈ ಮಾಹಿತಿಯಂತೆ ಈ ಕೈರನ್ ಕಾರು ಹೆದ್ದಾರಿಯಲ್ಲಿ ಲಿಟರಿಗೆ 5.95 ಕಿಲೋಮೀಟರ್ ಮೈಲೇಜ್ ನೀಡಲಿದೆ ಹಾಗು ನಗರದಲ್ಲಿ ಲಿಟರಿಗೆ 4.67 ಕಿಲೋಮೀಟರ್ ಮೈಲೇಜ್ ನೀಡಲಿದೆ. ಆದರೆ ವಾಹನತಜ್ಞರ ಪ್ರಕಾರ ಈ ಕಾರು ಸರಾಸರಿ 3.82 ಕಿಲೋಮೀಟರ್ ಮೈಲೇಜ್ ನೀಡಲಿದೆ ಎನ್ನಲಾಗಿದೆ.

100 ಲೀಟರ್ ಇಂಧನದ ಟ್ಯಾಂಕ್ ಈ ಕಾರಿನಲ್ಲಿ ಇರಿಸಲಾಗಿದ್ದು, ಗರಿಷ್ಠ ಗಂಟೆಗೆ 420 ಕಿ.ಮೀ ವೇಗದಲ್ಲಿ ಚಲಿಸಿದರೆ ಕೇವಲ 9 ನಿಮಿಷಗಳಲ್ಲೇ ಟ್ಯಾಂಕ್ ಖಾಲಿ ಮಾಡಬಹುದಾಗಿದೆ.

ಹೈ ಆಕ್ಟೇನ್ ಇಂಧನವನ್ನು ಈ ಕೈರನ್ ಕಾರು ಬಳಸಲಿದ್ದು,(98 ಆಕ್ಟೇನ್) ಇದು ಸುತ್ತಮುತ್ತಲೂ ಎಲ್ಲಾ ಇಂಧನ ಕೇಂದ್ರಗಳನ್ನು ಡಾರ್ಲಿಂಗ್ ಮಾಡಿಕೊಳ್ಳುವ ಅನಿವಾರ್ಯತೆ ಖಂಡಿತ ಇದೆ.

ಬುಗಾಟಿ ಕಿರಾನ್ ವಾಹನ ಮಾರುಕಟ್ಟೆಯಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಉತ್ಪಾದನೆಯಾಗುತ್ತಿರುವ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಕಾರು, 8.0 ಲೀಟರ್ ಕ್ವಾಡ್-ಟರ್ಬೊ ಡಬ್ಲ್ಯೂ16 ಇಂಜಿನ್ ಹೊಂದಿದ್ದು, 1,600 ಏನ್‌ಎಂ ತಿರುಗುಬಲದಲ್ಲಿ 1479ರಷ್ಟು ಬಿಎಚ್‍ಪಿ ಉತ್ಪಾದನೆ ಮಾಡಲಿದೆ.

ಕೈರನ್ ಕಾರು ಕೇವಲ 2.5 ಸೆಕೆಂಡುಗಳಲ್ಲಿ ನೂರು ಕಿಲೋಮೀಟರ್ ವೇಗ ಪಡೆದುಕೊಳ್ಳುವಷ್ಟು ಸಾಮರ್ಥ್ಯ ಹೊಂದಿದೆ ಮತ್ತು ಈ ಕಾರಿನಲ್ಲಿ ಗಂಟೆಗೆ ಗರಿಷ್ಠ 420 ಕಿಲೋಮೀಟರ್ ದೂರ ಕ್ರಮಿಸಬಹುದಾಗಿದೆ.

ವಿವಿಧ ಮಾರುಕಟ್ಟೆಗಳಲ್ಲಿ ಈಗಾಗಲೇ ತನ್ನ ಪ್ರಖ್ಯಾತಿಯನ್ನು ತೋರ್ಪಡಿಸಿರುವ ಈ ಕಾರಿನ ಮೈಲೇಜ್ ನೋಡಿದ್ರೆ ಖಂಡಿತ ಸಾಮಾನ್ಯ ಜನರ ತಲೆ ಸುತ್ತೋದು ಗ್ಯಾರಂಟಿ. ಈ ಕಾರು ಏನಿದ್ದರೂ ಶ್ರೀಮಂತರಿಗೆ ಎನ್ನವುದು ಈ ಕಾರಿನ ಮೈಲೇಜ್ ಗಮನಿಸಿದರೆ ತಿಳಿದು ಬರುತ್ತೆ.


Click it and Unblock the Notifications








