ಇದೇ 22ಕ್ಕೆ ಬಿಡುಗಡೆಯಾಗಲಿದೆ ಹೀರೋ ಹೊಚ್ಚ ಹೊಸ ಡೆಸ್ಟಿನಿ 125 ಸ್ಕೂಟರ್..!
ಜನಪ್ರಿಯ ಆಟೋ ಉತ್ಪಾದನಾ ಸಂಸ್ಥೆಯು ಹೀರೋ ಮೋಟೋಕಾರ್ಪ್ ಮುಂಬರುವ ಉತ್ಸವ ದಿನಗಳಲ್ಲಿ ತನ್ನ ಬಹುನೀರಿಕ್ಷಿತ ಡ್ಯುಯೆಟ್ 125 ಸ್ಕೂಟರ್ ಮಾದರಿಯನ್ನೇ ಡೆಸ್ಟಿನಿ 125 ಹೆಸರಿನೊಂದಿಗೆ ಬಿಡುಗಡೆಗೊಳಿಸುತ್ತಿದ್ದು, ಇದೇ ತಿಂಗಳು 22ಕ್ಕೆ ಮಾರುಕಟ್ಟೆಗೆ ಲಗ್ಗೆಯಿಡುವುದು ಖಚಿತವಾಗಿದೆ.

ಹೀರೋ ಸಂಸ್ಥೆಯು ಈ ಹಿಂದೆ 110ಸಿಸಿ ಸಾಮರ್ಥ್ಯದ ಡ್ಯುಯೆಟ್ ಸ್ಕೂಟರ್‌ಗಳನ್ನು ಪರಿಚಯಿಸಿದ್ದಲ್ಲದೇ ಅದೇ ಹೆಸರಿನೊಂದಿಗೆ 125ಸಿಸಿ ಸಾಮರ್ಥ್ಯದ ಸ್ಕೂಟರ್ ಅನ್ನು ಸಹ ಬಿಡುಗೊಳಿಸುವ ಸಂಬಂಧ 2018ರ ಆಟೋ ಎಕ್ಸ್‌ಪೋದಲ್ಲಿ ಡ್ಯುಯೆಟ್ 125 ಸ್ಕೂಟರ್ ಪ್ರದರ್ಶನ ಮಾಡಿತ್ತು. ಆದ್ರೆ ಹೊಸ ಸ್ಕೂಟರ್ ಮಾದರಿಗೆ ಡ್ಯುಯೆಟ್ ಹೆಸರನ್ನು ಮುಂದುವರಿಸುವ ಬಗ್ಗೆ ಮಹತ್ವದ ನಿರ್ಣಯ ಕೈಗೊಂಡಿದ್ದ ಹೀರೋ ಸಂಸ್ಥೆಯು ಕೊನೆಯ ಗಳಿಗೆಯಲ್ಲಿ ಡ್ಯುಯೆಟ್ 125 ಹೆಸರು ಬದಲಿಸಿ ಡೆಸ್ಟಿನಿ 125 ಎಂದು ಮರುನಾಮಕರಣ ಮಾಡಿ ಮಾರಾಟಕ್ಕೆ ಸಿದ್ದಗೊಳಿಸಿದೆ.

ಡ್ಯುಯೆಟ್ 110 ಸ್ಕೂಟರ್‌ಗಳಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳೊಂದಿಗೆ ಪ್ರೀಮಿಯಂ ವಿನ್ಯಾಸಗಳನ್ನು ಹೊಂದಿರಲಿದ್ದು, 125ಸಿಸಿ ಎಂಜಿನ್ ಮಾದರಿಗಳಲ್ಲೇ ವಿಶೇಷ ಎನ್ನಿಸಲಿದೆ.

ಡೆಸ್ಟಿನಿ 125 ಬ್ಯಾಡ್ಜ್ ಪಡೆದುಕೊಂಡಿರುವ ಡೆಸ್ಟಿನಿ 125 ಸ್ಕೂಟರ್‌ಗಳನ್ನು ಹೀರೋ ಸಂಸ್ಥೆಯು ಈಗಾಗಲೇ ದೇಶದ ಪ್ರಮುಖ ಡೀಲರ್ಸ್ ಯಾರ್ಡ್‌ಗಳಿಗೆ ರವಾನೆ ಮಾಡುತ್ತಿದ್ದು, ಹೊಸ ಸ್ಕೂಟರ್‌ಗಳಲ್ಲಿ ಗ್ರಾಹಕರ ಬೇಡಿಕೆಯ ಹಲವು ಹೊಸ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಹೊಸ ಸ್ಕೂಟರ್ ಎಂಜಿನ್ ವೈಶಿಷ್ಟ್ಯತೆ:
ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್‌ಗಳು 124.6 ಸಿಸಿ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಎಂಜಿನ್ ಸಹಾಯದಿಂದ 8.7 ಬಿಹೆಚ್‍ಪಿ ಮತ್ತು 10.2 ಎನ್ಎಮ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು ವೇರಿಯೊಮೇಟಿಕ್ ಡ್ರೈವ್ ಆಟೋಮ್ಯಾಟಿಕ್ ಸಿವಿಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇದಲ್ಲದೆ ಹೊಸ ಸ್ಕೂಟರ್‌ನಲ್ಲಿ ವಿಶೇಷವಾದ ಹೀರೋ ಸಂಸ್ಥೆಯ ಐ3ಎಸ್ ಐಡಲ್ ಸ್ಟಾರ್ಟ್-ಸ್ಟಾಪ್ ಟೆಕ್ನಾಲಜಿಯನ್ನು ಪಡೆದಿದ್ದು, ಕೆಲವು ಸೆಕೆಂಡುಗಳಿಗಿಂತ ಹೆಚ್ಚು ಕಾಲ ವಾಹನ ನಿಷ್ಕ್ರಿಯವಾಗಿದ್ದಾಗ ಐ3ಎಸ್ ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್ ಸ್ವಯಂಚಾಲಿತವಾಗಿ ಎಂಜಿನ್ ಅನ್ನು ಬದಲಿಸುತ್ತದೆ.

ಬೈಕಿನ ವೈಶಿಷ್ಟ್ಯತೆಗಳು
ಡಿಜಿಟಲ್ ಅನಲಾಗ್ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್, ಎಲ್ಇಡಿ ಟೈಲ್ ಲೈಟ್, ಹೊರ ಭಾಗದಲ್ಲಿ ಇರುವ ಫ್ಯೂಲ್ ಟ್ಯಾಂಕ್ ಕ್ಯಾಪ್, ಬಾಡಿ ಕಲರ್ ಮಾದರಿಯಲ್ಲೇ ರಿಯರ್ ವ್ಯೂ ಮಿರರ್ ಬಣ್ಣದ ಆಯ್ಕೆ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಬೂಟ್ ಲೈಟ್ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನ ಇದರಲ್ಲಿ ನೀಡಲಾಗಿದೆ.

ಇನ್ನು ಬಿಡುಗಡೆಗೊಳ್ಳಲಿರುವ ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್‌ಗಳು 1,830ಎಂಎಂ ಉದ್ದ, 726ಎಂಎಂ ಅಗಲ ಮತ್ತು 1,155ಎಂಎಂ ಎತ್ತರ ಹೊಂದಿದ್ದು, 1245ಎಂಎಂ ವ್ಹೀಲ್ ಬೇಸ್ ಹಾಗು 155ಎಂಎಂ ನಷ್ಟು ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿರಲಿದೆ.
MOST READ: ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ಹಾಗೆಯೇ ಈ ಸ್ಕೂಟರ್‍ನ ಸಸ್ಷೆಷನ್ ವಿಚಾರಕ್ಕೆ ಬಗ್ಗೆ ಹೇಳುವುದಾದರೇ, ಮುಂಭಾಗದಲ್ಲಿ ಅಪ್‍ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್ ಹಿಂಭಾಗದಲ್ಲಿ ಸ್ಪ್ರಿಂಗ್ ಮಾದರಿಯ ಹೈಡ್ರಾಲಿಕ್ ಶಾಕ್ಬರ್ಜರ್ ಅನ್ನು ಪಡೆದುಕೊಂಡಿರಲಿದೆ.

ಸುರಕ್ಷಾ ಸಾಧನಗಳು
ಹೀರೋ ಡೆಸ್ಟಿನಿ 125 ಸ್ಕೂಟರ್‍ಗಳಲ್ಲಿ 130-ಎಂಎಂ ಮುಂಭಾಗದ ಡ್ರಮ್ ಬ್ರೇಕ್ಸ್ ಮತ್ತು ಹಿಂಭಾಗದಲ್ಲಿ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಲಾಗಿದ್ದು, ಆಯ್ಕೆ ರೂಪದಲ್ಲಿ ಮುಂಭಾಗದ ಚಕ್ರಗಳಿಗೆ ಡಿಸ್ಕ್ ಬ್ರೇಕ್ ಸೌಲಭ್ಯ ನೀಡಲಾಗುತ್ತದೆ.
MOST READ: ಶೋರಂನವರು ಮಾಡಿದ ಮಹಾ ಮೋಸಕ್ಕೆ ನೊಂದ ಬೈಕ್ ಸವಾರ ಮಾಡಿದ್ದೇನು ಗೊತ್ತಾ.?

ಒಟ್ಟಿನಲ್ಲಿ 125ಸಿಸಿ ಸೆಗ್ಮೆಂಟ್‌ನಲ್ಲಿರುವ ಇತರೆ ಸ್ಕೂಟರ್‌ಗಳಿಂತಲೂ ವಿಭಿನ್ನವಾಗಿರುವ ಡೆಸ್ಟಿನಿ 125 ಸ್ಕೂಟರ್‌ಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.63 ಸಾವಿರದಿಂದ ರೂ. 67 ಸಾವಿರ ತನಕ ಇರಬಹುದೆಂದು ಅಂದಾಜಿಸಲಾಗಿದ್ದು, ಹೋಂಡಾ ಗ್ರಾಜಿಯಾ, ಟಿವಿಎಸ್ ಎನ್‌ಟಾರ್ಕ್ 125, ಸುಜುಕಿ ಬರ್ಗಮನ್ ಸ್ಟ್ರೀಟ್ ಮತ್ತು ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್‌ಗಳಿಗೆ ತ್ರೀವ ಪೈಪೋಟಿ ನೀಡಬಹುದಾದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ ಎನ್ನಬಹುದು.


Click it and Unblock the Notifications








