ಒಂದು ಬಾರಿ ಚಾರ್ಜ್‌ ಮಾಡಿದ್ರೆ 110 ಕಿಮಿ ಮೈಲೇಜ್ ನೀಡುತ್ತೆ ಈ ಹೀರೋ ಎಲೆಕ್ಟ್ರಿಕ್ ಸ್ಕೂಟರ್

ಪ್ರಮುಖ ವಾಹನ ಉತ್ಪಾದಕರು ಕೂಡಾ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟದ ಮೇಲೆ ವಿಶೇಷ ಆಸಕ್ತಿ ತೊರುತ್ತಿದ್ದು, ಸದ್ಯ ಹೀರೋ ಮೋಟೋಕಾರ್ಪ್ ಸಂಸ್ಥೆಯು ಹೊಸ ನಮೂನೆಯ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಸಿಕಲ್‌ಗಳನ್ನು ಅಭಿವೃದ್ಧಿ ಮಾಡಿದೆ.

By Praveen

Recommended Video

Auto Rickshaw Explodes In Broad Daylight

ದೇಶದಲ್ಲಿ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳಗೆ ವಿಶೇಷ ಬೇಡಿಕೆ ಸೃಷ್ಟಿಯಾಗುತ್ತಿದೆ. ಇದೇ ಕಾರಣಕ್ಕೆ ಪ್ರಮುಖ ವಾಹನ ಉತ್ಪಾದಕರು ಕೂಡಾ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟದ ಮೇಲೆ ವಿಶೇಷ ಆಸಕ್ತಿ ತೊರುತ್ತಿದ್ದು, ಸದ್ಯ ಹೀರೋ ಮೋಟೋಕಾರ್ಪ್ ಸಂಸ್ಥೆಯು ಹೊಸ ನಮೂನೆಯ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಸಿಕಲ್‌ಗಳನ್ನು ಅಭಿವೃದ್ಧಿ ಮಾಡಿದೆ.

ಒಂದು ಬಾರಿ ಚಾರ್ಜ್‌ ಮಾಡಿದ್ರೆ 110 ಕಿಮಿ ಮೈಲೇಜ್ ನೀಡುತ್ತೆ ಈ ಹೀರೋ ಎಲೆಕ್ಟ್ರಿಕ್ ಸ್ಕೂಟರ್

ಈ ಹಿಂದೆಯೇ ವಿವಿಧ ಮಾದರಿಯ ಎಲೆಕ್ಟ್ರಿಕಲ್ ವಾಹನಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದ್ದ ಭಾರತದ ಅತಿ ದೊಡ್ಡ ದ್ವಿಚಕ್ರವಾಹನ ಉತ್ಪಾದನಾ ಸಂಸ್ಥೆಯಾಗಿರುವ ಹೀರೋ ಮೋಟೋಕಾರ್ಪ್ ಇದೀಗ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ ಮಾಡುತ್ತಿದ್ದು, ಇದೇ ತಿಂಗಳು 7ರಿಂದ ಆರಂಭವಾಗಲಿರುವ 2018ರ ಆಟೋ ಎಕ್ಸ್ ಪೋ ದಲ್ಲಿ ಪ್ರದರ್ಶನಗೊಳಿಸಲಿದೆ.

ಒಂದು ಬಾರಿ ಚಾರ್ಜ್‌ ಮಾಡಿದ್ರೆ 110 ಕಿಮಿ ಮೈಲೇಜ್ ನೀಡುತ್ತೆ ಈ ಹೀರೋ ಎಲೆಕ್ಟ್ರಿಕ್ ಸ್ಕೂಟರ್

ಹೀರೋ ಪರಿಚಯಿಸುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯ ಹೆಸರು ಇದುವರೆಗೂ ಬಹಿರಂಗಗೊಂಡಿಲ್ಲವಾದರೂ ಎಎಕ್ಸ್ಎಲ್ ಹೆಚ್ಇ-20 ಕೋಡ್ ವರ್ಡ್ ಆಧಾರ ಮೇಲೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪ್ರದರ್ಶನ ಮಾಡಲಿದ್ದು, ಆಟೋ ಎಕ್ಸ್ ಪೋ ದಲ್ಲಿ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.

ಒಂದು ಬಾರಿ ಚಾರ್ಜ್‌ ಮಾಡಿದ್ರೆ 110 ಕಿಮಿ ಮೈಲೇಜ್ ನೀಡುತ್ತೆ ಈ ಹೀರೋ ಎಲೆಕ್ಟ್ರಿಕ್ ಸ್ಕೂಟರ್

ಬ್ಯಾಟರಿ ಸಾಮರ್ಥ್ಯ

ಸುಧಾರಿತ ತಂತ್ರಜ್ಞಾನ ಹೊಂದಿರುವ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳು 4 ಸಾವಿರ ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, ಒಂದು ಬಾರಿ ಚಾರ್ಜ್‌ ಮಾಡಿದ್ದಲ್ಲಿ ಬರೋಬ್ಬರಿ 110 ಕಿಮಿ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿವೆ.

ಒಂದು ಬಾರಿ ಚಾರ್ಜ್‌ ಮಾಡಿದ್ರೆ 110 ಕಿಮಿ ಮೈಲೇಜ್ ನೀಡುತ್ತೆ ಈ ಹೀರೋ ಎಲೆಕ್ಟ್ರಿಕ್ ಸ್ಕೂಟರ್

ಟಾಪ್ ಸ್ಪೀಡ್

ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳಲ್ಲೇ ಅತಿ ಹೆಚ್ಚಿನ ವೇಗ ಸಾಮರ್ಥ್ಯ ಹೊಂದಿರುವ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಪ್ರತಿ ಗಂಟೆಗೆ 85 ಕಿಮಿ ವೇಗ ಹೊಂದಿದ್ದು, ಲಿಥಿಯಂ ಅಯಾನ್ ಬ್ಯಾಟರಿ ಬಳಕೆ ಹಿನ್ನೆಲೆ ಕೇವಲ 1 ಗಂಟೆಯಲ್ಲಿ ಪೂರ್ಣ ಪ್ರಮಾಣದ ಚಾರ್ಜಿಂಗ್ ಮಾಡಬಹುದಾಗಿದೆ.

ಒಂದು ಬಾರಿ ಚಾರ್ಜ್‌ ಮಾಡಿದ್ರೆ 110 ಕಿಮಿ ಮೈಲೇಜ್ ನೀಡುತ್ತೆ ಈ ಹೀರೋ ಎಲೆಕ್ಟ್ರಿಕ್ ಸ್ಕೂಟರ್

ಎ2ಬಿ ಎಲೆಕ್ಟ್ರಿಕ್ ಸೈಕಲ್

ಕೇವಲ ಎಲೆಕ್ಟ್ರಿಕ್ ಸ್ಕೂಟರ್ ಅಲ್ಲದೇ ಎಲೆಕ್ಟ್ರಿಕ್ ಸೈಕಲ್ ಮಾದರಿಯೊಂದನ್ನು ಕೂಡಾ ಹೊರತರುತ್ತಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು ಎ2ಬಿ ಬೈಸಿಕಲ್ ಅಭಿವೃದ್ಧಿಪಡಿಸಿದ್ದು, 350 ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಬಳಕೆ ಮಾಡಲಾಗಿದೆ.

ಒಂದು ಬಾರಿ ಚಾರ್ಜ್‌ ಮಾಡಿದ್ರೆ 110 ಕಿಮಿ ಮೈಲೇಜ್ ನೀಡುತ್ತೆ ಈ ಹೀರೋ ಎಲೆಕ್ಟ್ರಿಕ್ ಸ್ಕೂಟರ್

ಈ ಮೂಲಕ ಪ್ರತಿ ಚಾರ್ಜಿಂಗ್‌ನಿಂದ 60 ಕಿಮಿ ಮೈಲೇಜ್ ನೀಡುವ ಗುಣ ಹೊಂದಿರುವ ಎ2ಬಿ ಸೈಕಲ್‌ಗಳು 20ಕೆಜಿ ತೂಕ ಹೊಂದಿವೆ. ಜೊತೆಗೆ ಅನಕೂಲಕ್ಕೆ ತಕ್ಕಂತೆ ಫೋರ್ಡ್ ಮಾಡಬಹುದಾಗಿದ್ದು, ಪ್ರತಿ ಗಂಟೆ 32ಕಿಮಿ ವೇಗ ಸಾಧಿಸಬಹುದಾಗಿದೆ.

Trending On DriveSpark Kannada:

100 ಸಿಸಿ ಬೈಕ್ ಎಂಜಿನ್‌ನಲ್ಲಿ ದುಬಾರಿ ಬೆಲೆಯ ಲಂಬೋರ್ಗಿನಿ ಕಾರು ನಿರ್ಮಾಣ ಮಾಡಿದ ರೈತ...!!

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡು ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!

ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನಗಳು ಯಾವವು ಗೊತ್ತಾ..?

ಒಂದು ಬಾರಿ ಚಾರ್ಜ್‌ ಮಾಡಿದ್ರೆ 110 ಕಿಮಿ ಮೈಲೇಜ್ ನೀಡುತ್ತೆ ಈ ಹೀರೋ ಎಲೆಕ್ಟ್ರಿಕ್ ಸ್ಕೂಟರ್

ಬೆಲೆಗಳು ಮತ್ತು ಬಿಡುಗಡೆ (ಅಂದಾಜು)

ಹೀರೋ ನಿರ್ಮಾಣದ ಮಾಡಿರುವ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಸೈಕಲ್ ಬಿಡುಗಡೆ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ ಆಟೋ ಎಕ್ಸ್ ಪೋ ನಂತರ ಬಿಡುಗಡೆಯಾಗಲಿದ್ದು, ಸ್ಕೂಟರ್ ಮಾದರಿಯು 80 ಸಾವಿರ ಮತ್ತು ಸೈಕಲ್ ಮಾದರಿಯು 25 ರಿಂದ 30 ಸಾವಿರ ಬೆಲೆ ಅಂದಾಜಿಸಲಾಗಿದೆ.

ಒಂದು ಬಾರಿ ಚಾರ್ಜ್‌ ಮಾಡಿದ್ರೆ 110 ಕಿಮಿ ಮೈಲೇಜ್ ನೀಡುತ್ತೆ ಈ ಹೀರೋ ಎಲೆಕ್ಟ್ರಿಕ್ ಸ್ಕೂಟರ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ದೇಶದ ಹಲವು ವಾಹನ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಮೇಲೆ ವಿಶೇಷ ಆಸಕ್ತಿ ತೊರುತ್ತಿದ್ದು, 2018ರ ಆಟೋ ಎಕ್ಸ್ ಪೋದಲ್ಲಿ ಹೀರೋ ಮೋಟೋಕಾರ್ಪ್ ಸೇರಿದಂತೆ ಪ್ರಮುಖ ಸಂಸ್ಥೆಗಳು ತಮ್ಮ ಎಲೆಕ್ಟ್ರಿಕ್ ಮಾದರಿಗಳನ್ನು ಪ್ರದರ್ಶನ ಮಾಡಲಿವೆ.

More from DriveSpark

Article Published On: Monday, February 5, 2018, 11:27 [IST]
English summary
Hero Electric Unveils Two New Bicycles And Scooter In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+