ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನಗಳು ಯಾವವು ಗೊತ್ತಾ..?

Written By:
Recommended Video - Watch Now!
India Car Stunts Caught On Camera

ಆಕಾಶದಲ್ಲಿ ಹಾರುವಾಗ ಚಿಕ್ಕದಾಗಿ ಕಾಣಿಸುವ ವಿಮಾನಗಳ ನಿಜವಾದ ಗಾತ್ರ ಅವುಗಳು ನೆಲದ ಮೇಲಿರುವಾಗ ನೋಡಿದಾಗಲೇ ನಮಗೆ ತಿಳಿಯುತ್ತವೆ. ಅಲ್ಲದೇ ಜಗತ್ತಿನಾದ್ಯಂತ ಪ್ರತಿದಿನ ಸಾವಿರಾರು ಪ್ರಯಾಣಿಕ ವಿಮಾನಗಳು ಒಂದು ದೇಶದಿಂದ ಮತ್ತೊಂದು ದೇಶವನ್ನು ಸಂಪರ್ಕಿಸಲು ಸಾಧ್ಯವಾಗಿದ್ದು, ಸಾರಿಗೆ ಸಂವಹನದಲ್ಲಿ ಇವುಗಳ ಪಾತ್ರ ಅಗ್ರಗಣ್ಯವಾಗಿದೆ.

ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನಗಳು ಯಾವವು ಗೊತ್ತಾ..?

ಹೀಗಾಗಿಯೇ ನಾವಿಂದು ನಿಮಗೆ ವಿಶ್ವದ 10 ಅತಿ ದೊಡ್ಡ ಪ್ರಯಾಣಿಕ ವಿಮಾನಗಳ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದು, ಈ ಕೆಳಗೆ ನೀಡಲಾಗಿರುವ ಟಾಪ್ 10 ವಿಮಾನಗಳಿಂದಲೇ ಪ್ರತಿ ದಿನ ಲಕ್ಷಾಂತರ ಜನರು ಜಗತ್ತಿನ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತೆರಳು ಸಾಧ್ಯವಾಗಿದೆ.

ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನಗಳು ಯಾವವು ಗೊತ್ತಾ..?

10. ಏರ್ ಬಸ್ A333-300

ಏರ್‌ಬಸ್ A330-300(333) ಸುಮಾರು 293 ಮಂದಿ ಪ್ರಯಾಣಿಕರು ಪ್ರಯಾಣಿಸಬಹುದಾಗಿದ್ದು, ಈ ವಿಶೇಷ ವಿಮಾನವು ಪ್ರಾಥಮಿಕವಾಗಿ ಅಂತರಾಷ್ಟ್ರೀಯ ಮಾರ್ಗಗಳ ಪ್ರಮುಖ ಕೊಂಡಿಯಾಗಿದೆ.

ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನಗಳು ಯಾವವು ಗೊತ್ತಾ..?

9. ಏರ್ ಬಸ್ A340-300

ಏರ್‌ಬಸ್ A340-300 ವಿಮಾನವು ಫ್ರಾನ್ಸ್ ನಲ್ಲಿ 1993ರಲ್ಲಿ ನಿರ್ಮಾಣಗೊಂಡಿದ್ದು, ಐಷಾರಾಮಿ ಸೌಲಭ್ಯಗಳೊಂದಿಗೆ ಸುಮಾರು 277 ಮಂದಿ ಪ್ರಾಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ.

ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನಗಳು ಯಾವವು ಗೊತ್ತಾ..?

8. ಏರ್ ಬಸ್ A340-500

ಏರ್ ಬಸ್ A340-500 ವಿಮಾನವು ಕೂಡ 2002 ಇಸವಿಯಲ್ಲಿ ಫ್ರಾನ್ಸ್ ನಲ್ಲೇ ನಿರ್ಮಾಣಗೊಂಡಿದ್ದು, ಅಂತಾರಾಷ್ಟ್ರೀಯ ವಿಮಾನಗಳಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸುವ ಈ ವಿಮಾನದಲ್ಲಿ ಸುಮಾರು 293 ಮಂದಿ ಪ್ರಾಯಾಣಿಕರು ಪ್ರಯಾಣಿಸಬಹುದಾಗಿದೆ.

ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನಗಳು ಯಾವವು ಗೊತ್ತಾ..?

7. ಏರ್ ಬಸ್ A350-900

ಏರ್ ಬಸ್ A350-900 ವಿಮಾನದಲ್ಲಿ 325 ಮಂದಿ ಪ್ರಾಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸಬಹುದಾಗಿದ್ದು, ವಿಶ್ವದರ್ಜೆಯ ಸೌವಲತ್ತುಗಳು ಈ ವಿಮಾನದಲ್ಲಿ ಒದಗಿಸಲಾಗಿದೆ.

ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನಗಳು ಯಾವವು ಗೊತ್ತಾ..?

6. ಬೋಯಿಂಗ್ 777-200

ಈ ಬೋಯಿಂಗ್ 777-200 ವಿಮಾನವು ಯುನೈಟೆಡ್ ಸ್ಟೇಟ್ಸ್ ನಲ್ಲಿ ನಿರ್ಮಾಣಗೊಂಡ ಅತಿ ದೊಡ್ಡ ಪ್ರಯಾಣಿಕ ವಿಮಾನವಾಗಿದ್ದು, ಈ ವಿಮಾನದಲ್ಲಿ ಬರೋಬ್ಬರಿ 400 ಮಂದಿ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ.

ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನಗಳು ಯಾವವು ಗೊತ್ತಾ..?

5. ಏರ್ ಬಸ್ A340-600

ಈ ಏರ್ ಬಸ್ A340-600 ವಿಮಾನದಲ್ಲಿ ಸುಮಾರು 460ರಿಂದ 475 ಮಂದಿ ಪ್ರಯಾಣಿಕರು ಪ್ರಾಯಾಣಿಸಬಹುದಾಗಿದ್ದು, 63 ಮೀಟರ್ ಉದ್ದವಾಗಿರುವ ಈ ವಿಮಾನವು ಗಂಟೆಗೆ 930 ಕಿಮಿ ಸಾಗಬಲ್ಲ ವೇಗ ಹೊಂದಿದೆ.

ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನಗಳು ಯಾವವು ಗೊತ್ತಾ..?

4. ಬೋಯಿಂಗ್ 777-300

ಬೋಯಿಂಗ್ 777-300 ಪ್ರಯಾಣಿಕ ವಿಮಾನವು ದೇಶದ ವಿಮಾನಯಾನ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದು, ಇದರಲ್ಲಿ ಸುಮಾರು 550 ಮಂದಿ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ.

ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನಗಳು ಯಾವವು ಗೊತ್ತಾ..?

3.ಬೋಯಿಂಗ್ 747-400

ಬ್ರಿಟಿಷ್ ಏರ್‌ವೆಸ್ ಅಧೀನದಲ್ಲಿರುವ ಬೋಯಿಂಗ್ 747-400 ಪ್ರಯಾಣಿಕ ವಿಮಾನದಲ್ಲಿ 624 ಮಂದಿ ಪ್ರಯಾಣಿಕರು ಪ್ರಯಾಣಿಸಬಹುದಾಗಿದ್ದು, 71 ಮೀಟರ್ ಉದ್ದದೊಂದಿಗೆ ಗಂಟೆಗೆ 988ಕಿಮಿ ದೂರ ಕ್ರಮಿಸಬಲ್ಲವು.

ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನಗಳು ಯಾವವು ಗೊತ್ತಾ..?

2. ಬೋಯಿಂಗ್ 747-8

2005ರಿಂದ ವಾಣಿಜ್ಯ ಸೇವೆಗಳಿಗೆ ಲಭ್ಯವಿರುವ ಬೋಯಿಂಗ್ 747-8 ಪ್ರಯಾಣಿಕ ವಿಮಾನದಲ್ಲಿ ಸುಮಾರು 700 ಮಂದಿ ಪ್ರಯಾಣಿಕರು ಪ್ರಯಾಣಿಸಬಹುದಾದ ವಿಸ್ತಾರವನ್ನು ಹೊಂದಿದ್ದು, ಅಮೆರಿಕ ಸಂಯುಕ್ತ ಸಂಸ್ಥಾನ ರಾಷ್ಟ್ರಗಳಲ್ಲಿ ಪ್ರಮುಖ ರಾಷ್ಟ್ರಗಳ ಮಧ್ಯೆ ಸೇವೆ ಒದಗಿಸುತ್ತಿದೆ.

ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನಗಳು ಯಾವವು ಗೊತ್ತಾ..?

1. ಏರ್ ಬಸ್ A380-800

ಜಗತ್ತಿನಲ್ಲೇ ಅತಿ ದೊಡ್ಡ ಏರ್ ಬಸ್ ಎಂದೇ ಖ್ಯಾತಿಯಾಗಿರುವ A380-800 ವಿಮಾನದಲ್ಲಿ ಬರೋಬ್ಬರಿ 850 ಮಂದಿ ಪ್ರಯಾಣಿಸಬಹುದಾದ ವಿಸ್ತಾರವನ್ನು ಹೊಂದಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಪಡೆದಿರುವುದು ಈ ವಿಮಾನದ ವಿಶೇಷ.

Read more on plane off beat
English summary
TOP 10 LARGEST PASSENGER AIRCRAFT IN THE WORLD.
Story first published: Thursday, February 1, 2018, 19:06 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark